OTP bypass scam: ಹೆಚ್ಚುತ್ತಿದೆ ಓಟಿಪಿ ಬೈಪಾಸ್ ಹಗರಣ; ನೀವು ಬ್ಯಾಂಕ್ ಖಾತೆ ಹೊಂದಿದ್ರೆ ಮೊದಲು ಈ ಕೆಲಸ ಮಾಡಿ!
ಓಟಿಪಿ ಹಗರಣ (OTP scam) ಇಂದು ಎಲ್ಲೆಡೆ ವ್ಯಾಪಕವಾಗಿದೆ. ಅದರಲ್ಲೂ ಬ್ಯಾಂಕಿಂಗ್ ವ್ಯವಹಾರ ಹಾಗೂ ಇನ್ನಿತರ ವಿಭಾಗಗಳಲ್ಲಿ ಓಟಿಪಿ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಸ್ಕ್ಯಾಮರ್‌ಗಳು ಜನರ ಹಣವನ್ನು ದೋಚುವ ಕೆಲಸಕ್ಕೆ ಮುಂದಾಗಿದ್ದಾರೆ.
ಹೌದು, ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಇಂದು ಹೆಚ್ಚಾಗುತ್ತಿದೆ. ಈ ವೇಳೆ ಹೆಚ್ಚಿನ ಭದ್ರತೆಗಾಗಿ ಓಟಿಪಿಯನ್ನು ಬಳಕೆ ಮಾಡಲಾಗುತ್ತಿದ್ದು, ಇದನ್ನೇ ದಾಳವಾಗಿ ಮಾಡಿಕೊಂಡಿರುವ ಸ್ಕ್ಯಾಮರ್ಸ್ ಓಟಿಪಿ ಬೈಪಾಸ್ ವಂಚನೆ (OTP bypass scam) ಮಾಡುತ್ತಿದ್ದಾರೆ. ಇದು ಗಮನಾರ್ಹವಾದ ಭದ್ರತಾ ಅಪಾಯಗಳನ್ನು ಉಂಟುಮಾಡಲಿದೆ. ಹಾಗಿದ್ರೆ, ಏನಿದು ಓಟಿಪಿ ಬೈಪಾಸ್ ವಂಚನೆ?, ಇದರಿಂದ ಎಚ್ಚರಿಕೆ ವಹಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಏನಿದು ಓಟಿಪಿ ಬೈಪಾಸ್?: ಸೈಬರ್ ಅಪರಾಧಿಗಳು ಬಳಕೆದಾರರ ಒಪ್ಪಿಗೆಯಿಲ್ಲದೆ ಅವರ ಓಟಿಪಿಯನ್ನು ಪ್ರತಿಬಂಧಿಸಲು ಮತ್ತು ಬಳಸಲು ನಡೆಸುವ ಅಕ್ರಮ ಚಟುವಟಿಕೆಗಳಾಗಿವೆ. ಈ ಕೆಲಸಗಳು ಫಿಶಿಂಗ್‌ನಂತಹ ಸರಳ ಸಾಮಾಜಿಕ ಎಂಜಿನಿಯರಿಂಗ್ ತಂತ್ರಗಳಿಂದ ಹಿಡಿದು, ಬಳಕೆದಾರರ ಡಿವೈಸ್‌ಗೆ ಬರುವ ಓಟಿಪಿ ಗಳನ್ನು ಓದಲು ಮತ್ತು ಸಿಮ್ ಸ್ವಾಪಿಂಗ್ ಅಥವಾ ಮಾಲ್‌ವೇರ್‌ನಂತಹ ಹೆಚ್ಚು ಸಂಕೀರ್ಣವಾದ ತಾಂತ್ರಿಕ ಶೋಷಣೆಗಳವರೆಗೆ ವಿವಿಧ ವಿಭಾಗಗಳಲ್ಲಿ ಬಳಕೆ ಮಾಡಲಾಗುತ್ತದೆ. ಕೆಲವು ಭೂಗತ ಸೇವೆಗಳು ಓಟಿಪಿ ಬೈಪಾಸ್ ಅನ್ನು ಪಾವತಿಸಿದ ಸೇವೆಯಾಗಿ ನೀಡುತ್ತವೆ.
ಹೆಚ್ಚಾದ ಓಟಿಪಿ ಬೈಪಾಸ್ ವಂಚನೆ: ಡಿಜಿಟಲ್ ವಹಿವಾಟುಗಳು ಮತ್ತು ಆನ್‌ಲೈನ್ ಬ್ಯಾಂಕಿಂಗ್ ಹೆಚ್ಚಾದಂತೆ ಮೋಸದ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಹಣಕಾಸಿನ ವ್ಯವಹಾರ ಕೇವಲ ಒಂದು ಟ್ಯಾಪ್‌ನಲ್ಲಿ ಜರುಗುತ್ತಿದೆ. ಆದರೂ ಸಹ ಇತ್ತೀಚಿನ ಘಟನೆಗಳು ಹಣಕಾಸಿನ ವಹಿವಾಟುಗಳ ಸುರಕ್ಷತೆಯ ಬಗ್ಗೆ ಆತಂಕ ಉಂಟು ಮಾಡಿದೆ. ಅದುವೇ ಓಟಿಪಿ ಬೈಪಾಸ್ ಹಗರಣ. ಡಿಜಿಟಲ್ ಬ್ಯಾಂಕಿಂಗ್ (Digital Banking) ಮೇಲೆ ಹೆಚ್ಚು ಅವಲಂಬಿತರಾಗಿರುವುದರಿಂದ ಈ ಹೊಸ ಮೋಸದ ಜಾಲ ಸಹ ಹೆಚ್ಚಾಗುತ್ತಿದೆ.
ಈ ಹಗರಣಗಳಿಗೆ ಬಲಿಯಾಗದಂತೆ ನಮ್ಮನ್ನು ಹೇಗೆ ರಕ್ಷಿಸಿಕೊಳ್ಳುವುದು ಈ ವೇಳೆ ಬಹಳ ಮುಖ್ಯವಾದ ವಿಷಯವಾಗಿದೆ. ಇದರಿಂದಾಗಿ ಹೆಚ್ಚುತ್ತಿರುವ ಓಟಿಪಿ ಬೈಪಾಸ್ ವಂಚನೆಗಳ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ಬ್ಯಾಂಕ್‌ಗಳು ಹಾಗೂ ಸಂಬಂಧಿಸಿದ ಇಲಾಖೆಗಳು ಹೊಂದಿವೆ. ಆದ್ದರಿಂದ ಡಿಜಿಟಲ್ ಬ್ಯಾಂಕಿಂಗ್‌ನ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ನಿಮ್ಮ ಆರ್ಥಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಅಗತ್ಯ ಕ್ರಮ ಅನುಸರಿಸಿ.
- ಎಸ್‌ಎಂಎಸ್ ಮತ್ತು ಇಮೇಲ್ ಬಗ್ಗೆ ಎಚ್ಚರ: ನಿಮ್ಮ ಡಿವೈಸ್‌ಗೆ ಎಸ್‌ಎಂಎಸ್ ಹಾಗೂ ಇಮೇಲ್ (SMS, email) ಮೂಲಕ ಬರುವ ಲಿಂಕ್ ಮೇಲೆ ನಿಗಾ ಇರಿಸಿ. ಅಪರಿಚಿತ ಮೂಲಗಳಿಂದ ಲಗತ್ತುಗಳನ್ನು ಡೌನ್‌ಲೋಡ್ ಮಾಡುವುದನ್ನು ಈ ವೇಳೆ ತಪ್ಪಿಸಬೇಕು. ವೈಯಕ್ತಿಕ ಮಾಹಿತಿ ಅಥವಾ ಓಟಿಪಿಗಳಿಗಾಗಿ ಎಸ್‌ಎಮ್‌ಎಸ್ ಅಥವಾ ಇಮೇಲ್ ವಿನಂತಿಗಳ ಬಗ್ಗೆ ಅನುಮಾನ ಇರಲಿ.
- ಬ್ಯಾಂಕ್ ಆಪ್‌ನ ನವೀಕೃತ ಆವೃತ್ತಿ ಬಗ್ಗೆ ಎಚ್ಚರ: ವರ್ಧಿತ ಭದ್ರತಾ ಫೀಚರ್ಸ್ ಪ್ರಯೋಜನ ಪಡೆಯಲು ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಸ್ಟೋರ್ (Google Play Store, Apple Store)ಮೂಲಕವಷ್ಟೇ ಅಪ್‌ಡೇಟ್ ಮಾಡಬೇಕು. ಅದರ ಬದಲಾಗಿ ಯಾರೋ ಅನಾಮಿಕರು ಕಳುಹಿಸಿದ ಲಿಂಕ್ ಕ್ಲಿಕ್ ಮಾಡಿ ನಿಮ್ಮ ಬ್ಯಾಂಕಿಂಗ್ ಆಪ್ ಅಪ್‌ಲೋಡ್ ಮಾಡಲು ಮುಂದಾದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿನ ಹಣ ಮಾಯವಾಗುತ್ತದೆ. ಜೊತೆಗೆ ಕಡ್ಡಾಯವಾಗಿ ಆಗಾಗ್ಗೆ ಆಪ್ ಅನ್ನು ನವೀಕರಣ ಮಾಡಿ.
- ಟು-ಫ್ಯಾಕ್ಟರ್ ಅಥೆಂಟಿಕೇಶನ್ ಇರಲಿ: ಬಳಕೆದಾರರು ತಮ್ಮ ಬ್ಯಾಂಕಿಂಗ್ ಖಾತೆಗಳಿಗೆ ಎರಡು ಹಂತದ ದೃಡೀಕರಣ (2FA) ವನ್ನು ಸಕ್ರಿಯಗೊಳಿಸಬೇಕು. ಈ ಹೆಚ್ಚುವರಿ ರಕ್ಷಣೆಯ ಲೇಯರ್‌ಗೆ ಹೆಚ್ಚುವರಿ ಪಾಸ್‌ವರ್ಡ್ ಅಗತ್ಯವಿರುತ್ತದೆ. ಇದನ್ನು ಮೂರನೇ ವ್ಯಕ್ತಿ ತಿಳಿದುಕೊಳ್ಳಲು ಸಾಧ್ಯವಿರುವುದಿಲ್ಲ. ಇದನ್ನು ನೀವು ಮಾತ್ರ ಬಳಕೆ ಮಾಡಬಹುದಾಗಿದೆ.
- ಅಪೇಕ್ಷಿಸದ ಕರೆಗಳ ಬಗ್ಗೆ ಜಾಗರೂಕರಾಗಿರಿ: ಯಾರಾದರೂ ನಿಮಗೆ ಕರೆ ಮಾಡಿ ಬ್ಯಾಂಕ್ ಕಡೆಯಿಂದ ಎಂದರೆ ನಂಬಬೇಡಿ. ಫೋನ್ ಮೂಲಕ ವೈಯಕ್ತಿಕ ಮಾಹಿತಿ, ಖಾತೆ ವಿವರಗಳು ಅಥವಾ ಓಟಿಪಿಗಳನ್ನು ಬ್ಯಾಂಕ್‌ನವರು ಕರೆ ಮೂಲಕ ಕೇಳುವುದಿಲ್ಲ. ಅಕಸ್ಮಾತ್ ಕೇಳಿದರೂ ಸಹ ಅದು ನ್ಯಾಯಯುತ ಕರೆಯೇ ಎಂದು ಖಚಿತಪಡಿಸಿಕೊಳ್ಳಿ. ಇದಕ್ಕಾಗಿ ಅಧಿಕೃತ ಗ್ರಾಹಕ ಸೇವಾ ಸಂಖ್ಯೆಗೆ ಡಯಲ್ ಮಾಡಿ.

- ಸುರಕ್ಷಿತ ವೈ-ಫೈ ನೆಟ್‌ವರ್ಕ್ ಬಳಕೆ ಮಾಡಿ: ಎಲ್ಲದಕ್ಕಿಂತ ಮಿಗಿಲಾಗಿ ನೀವು ಬಳಕೆ ಮಾಡುವ ವೈ-ಫೈ ನಿಂದಲೂ ಮೋಸ ಹೋಗುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳಲ್ಲಿ ಹಣಕಾಸಿನ ವಹಿವಾಟು ನಡೆಸುವುದನ್ನು ಆದಷ್ಟು ತಡೆಹಿಡಿಯಿರಿ ಮತ್ತು ನಿಮ್ಮ ಬ್ಯಾಂಕ್ ಖಾತೆಗಳನ್ನು ನಿರ್ವಹಿಸುವಾಗ ವಿಶ್ವಾಸಾರ್ಹ ಮತ್ತು ಎನ್‌ಕ್ರಿಪ್ಟ್ ಮಾಡಿದ ನೆಟ್‌ವರ್ಕ್ ಬಳಕೆ ಮಾಡಿ.


Click it and Unblock the Notifications








