Washing machine: ಈ ವಾಷಿಂಗ್ ಮೆಷಿನ್‌ಗಳಿಗೆ ಅಮೆಜಾನ್‌ನಲ್ಲಿ 30% ಕ್ಕಿಂತ ಹೆಚ್ಚು ರಿಯಾಯಿತಿ!
ವಾಷಿಂಗ್ ಮೆಷಿನ್ (Washing machine) ಅನ್ನು ಈಗಂತೂ ಬಹುಪಾಲು ಎಲ್ಲರೂ ಬಳಕೆ ಮಾಡುತ್ತಾರೆ. ಈ ಕಾರಣಕ್ಕೆ ಪ್ರಮುಖ ಕಂಪನಿಗಳು ಎಲ್ಲಾ ರೀತಿಯ ಗ್ರಾಹಕರಿಗೆ ಕೈಗೆ ಎಟಕುವ ದರದಲ್ಲಿ ಹೊಸ ಹೊಸ ವಾಷಿಂಗ್ ಮೆಷಿನ್ ಅನ್ನು ಲಾಂಚ್ ಮಾಡಿಕೊಂಡು ಬರುತ್ತಲೇ ಇದ್ದು, ಈ ನಡುವೆ ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಈ ವಿಶೇಷ ವಾಷಿಂಗ್ ಮೆಷಿನ್‌ಗಳಿಗೆ ಬಂಫರ್ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ದೀಪಾವಳಿಗೂ ಮುನ್ನ ಅಮೆಜಾನ್ ನಲ್ಲಿ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ (Amazon Great India Festival Sale) ಆಯೋಜನೆ ಮಾಡಲಾಗಿದ್ದು, ಈ ಸೇಲ್‌ನಲ್ಲಿ ವಾಷಿಂಗ್ ಮೆಷಿನ್‌ಗಳ ಮೇಲೆ 30 % ಗಿಂತ ಹೆಚ್ಚಿನ ರಿಯಾಯಿತಿಯಲ್ಲಿ ಖರೀದಿ ಮಾಡಬಹುದಾಗಿದೆ. ಈ ಮೂಲಕ ನೀವು ಹಣ ಉಳಿತಾಯ ಮಾಡಲು ಅನುಕೂಲ ಮಾಡಿಕೊಡಲಾಗಿದೆ. ಈ ವಿಭಾಗದಲ್ಲಿ ನೀವು ಸ್ಯಾಮ್‌ಸಂಗ್, ಗೋದ್ರೇಜ್ ಹಾಗೂ ಎಲ್‌ಜಿಯಂತಹ ಹಲವು ಬ್ರಾಂಡ್‌ಗಳ ಮೇಲೆ ಸೂಪರ್ ಆಫರ್ ನೀಡಲಾಗಿದೆ. ಹಾಗಿದ್ರೆ ಬನ್ನಿ ನೋಡೋಣ ಯಾವೆಲ್ಲಾ ವಾಷಿಂಗ್ ಮೆಷಿನ್ ಗಳಿಗೆ ಏನೆಲ್ಲಾ ಆಫರ್ ಇದೆ ಎಂದು.

ಸ್ಯಾಮ್‌ಸಂಗ್ 7Kg ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್: 7 ಕೆ.ಜಿ. ಸಾಮರ್ಥ್ಯದ ಸಂಪೂರ್ಣ ಆಟೋಮ್ಯಾಟಿಕ್ ಫೀಚರ್ಸ್ ಹೊಂದಿರುವ ಈ ಸ್ಯಾಮ್‌ಸಂಗ್‌ನ ವಾಷಿಂಗ್ ಮೆಷಿನ್ ಗೆ 26% ರಿಯಾಯಿತಿ ನೀಡಲಾಗಿದೆ. ಅಂದರೆ ಇದರ ಸಾಮಾನ್ಯ ದರ 21,000 ರೂ.ಗಳಾಗಿದ್ದು, ನೀವೀಗ ಇದನ್ನು 15,490ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ ನೀವು ಇಷ್ಟು ಬಜೆಟ್ ಹೊಂದಿಲ್ಲದಿದ್ದರೂ ಸಹ ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಅಂದರೆ 751 ರೂ.ಗಳ ಮಾಸಿಕ ಇಎಮ್ಐ ಆಯ್ಕೆ ನೀಡಲಾಗಿದೆ.
ಗೋದ್ರೇಜ್ ಟರ್ಬೊ 6 ಪಲ್ಸೇಟರ್ ವಾಷಿಂಗ್ ಮೆಷಿನ್: ಈ ವಾಷಿಂಗ್ ಮೆಷಿನ್ 6.5 ಕೆಜಿ ತೂಕದ ಸಾಮರ್ಥ್ಯದೊಂದಿಗೆ ಬರಲಿದ್ದು, ಆಟೋಮ್ಯಾಟಿಕ್ ಮೆಷಿನ್ ಆಗಿದೆ. ಕಂಪನಿಯು 2023 ರ ಮಾದರಿ ಮತ್ತು ಐ ವಾಶ್ ತಂತ್ರಜ್ಞಾನದೊಂದಿಗೆ ಇದನ್ನು ಸಿದ್ಧಪಡಿಸಿದ್ದು, ಇದರಲ್ಲಿ ನೀವು 6 ರಿಂದ 7 ಜನರ ಬಟ್ಟೆಗಳನ್ನು ಒಂದೇ ಬಾರಿಗೆ ಸುಲಭವಾಗಿ ಸ್ವಚ್ಛಗೊಳಿಸಬಹುದು. ಇದರ ಬೆಲೆ 17,900ರೂ.ಗಳಾಗಿದ್ದು, ಆಫರ್‌ನಲ್ಲಿ ನೀವು ಅದನ್ನು 30% ರಿಯಾಯಿತಿಯೊಂದಿಗೆ 12,490 ರೂ.ಗೆ ಖರೀದಿಸಬಹುದು. ಜೊತೆಗೆ 606 ರೂ.ಗಳ ಮಾಸಿಕ ಇಎಮ್ಐ ಆಯ್ಕೆ ಸಹ ಲಭ್ಯ.

ಪ್ಯಾನಸೋನಿಕ್ 6Kg ಫುಲ್ ಆಟೋಮ್ಯಾಟಿಕ್ ವಾಷಿಂಗ್ ಮೆಷಿನ್: ಈ ವಾಷಿಂಗ್ ಮೆಷಿನ್ ಅನ್ನು 2022 ರ ಮಾದರಿಯಲ್ಲಿ ಸಿದ್ಧಪಡಿಸಲಾಗಿದ್ದು, ಇದರಲ್ಲಿ 8 ವಾಶ್ ಆಯ್ಕೆಗಳನ್ನು ನೀಡಲಾಗಿದೆ. ವಿಶೇಷವೆಂದರೆ ಈ ವಾಷಿಂಗ್ ಮೆಷಿನ್ ಕಡಿಮೆ ವಿದ್ಯುತ್ ಬಳಕೆ ಮಾಡಲಿದ್ದು, ಕಡಿಮೆ ಸಮಯದಲ್ಲಿ ಹೆಚ್ಚು ಕಲೆಗಳನ್ನು ಸುಲಭವಾಗಿ ಸ್ವಚ್ಛಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 20,000ರೂ.ಗಳಾಗಿದ್ದು, ಆಫರ್‌ನಲ್ಲಿ ನೀವು 35% ರಿಯಾಯಿತಿಯೊಂದಿಗೆ 12,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
ಎಲ್‌ಜಿ 7 Kg 5 ಸ್ಟಾರ್ ಇನ್ವರ್ಟರ್ ಟರ್ಬೋಡ್ರಮ್ ಆಟೋಮ್ಯಾಟಿಕ್ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್: ಈ ವಾಷಿಂಗ್ ಮೆಷಿನ್‌ಗೂ ಸಹ ಆಫರ್ ನೀಡಲಾಗಿದ್ದು, 39% ರಿಯಾಯಿತಿಯೊಂದಿಗೆ 16,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಸಾಮಾನ್ಯ ದರ 27,990 ರೂ.ಗಳಾಗಿದೆ. ಅಷ್ಟೇ ಅಲ್ಲದೆ ಗ್ರಾಹಕರು ತಿಂಗಳಿಗೆ 824 ರಿಂದ ಪ್ರಾರಂಭವಾಗುವ ಇಎಮ್‌ಐ ಆಯ್ಕೆ ಮೂಲಕವೂ ಖರೀದಿ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.

ಏಸರ್ 6.5 Kg ಕ್ವಾಡ್ ವಾಶ್ ಸೀರಿಸ್ ಫುಲ್ ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್: ಈ ಮೆಷಿನ್ ಅನ್ನು ನೀವು ಕೇವಲ 10,990 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಸಾಮಾನ್ಯ ದರ 26,999ರೂ.ಗಳಾಗಿದೆ. ಅಮೆಜಾನ್ ಈ ಮೆಷಿನ್ ಮೇಲೆ ಬರೋಬ್ಬರಿ 59% ರಿಯಾಯಿತಿ ಘೋಷಣೆ ಮಾಡಿದೆ. ಇಷ್ಟೇ ಅಲ್ಲದೆ ಇಎಮ್‌ಐ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಗ್ರಾಹಕರು ತಿಂಗಳಿಗೆ 533ರೂ.ಗಳನ್ನು ಪಾವತಿ ಮಾಡುವ ಮೂಲಕ ಈ ಮೆಷಿನ್ ಖರೀದಿ ಮಾಡಬಹುದಾಗಿದೆ.


Click it and Unblock the Notifications








