ಆಪಲ್ ಸ್ಟೋರ್ ತಲುಪಲಿಲ್ಲ ಐಫೋನ್ X: ಟ್ರಕ್‌ನಿಂದಲೇ 300 ಫೋನ್ ಎಗರಿಸಿದ ಕದಿಮರು..!
ಲಿಮಿಟೆಡ್ ಎಡಿಷನ್ ಆಗಿರುವ 300 ಐಫೋನ್ X ಗಳನ್ನು ಸ್ನಾನ್‌ಫ್ರಾನ್ಸಿಸ್ಕೋದಲ್ಲಿರುವ ಆಪಲ್ ಶೋ ರೂಮ್‌ಗೆ ತರಲಾಗುತ್ತಿತ್ತು, ಆದರೆ ಅದು ಶೋ ರೂಮ್ ತಲುಪುವ ಮುನ್ನವೇ UPS ಟ್ರಕ್ ನಿಂದಲೇ ಕಳ್ಳತನ ಮಾಡಲಾಗಿದೆ.
ಐಫೋನ್ X ಮಾರುಕಟ್ಟೆಗೆ ಬರುವ ಮುನ್ನವೇ ಸ್ನಾನ್‌ಫ್ರಾನ್ಸಿಸ್ಕೋದಲ್ಲಿ ಕಳ್ಳತನವಾದ ಪ್ರಕರಣ ವರದಿಯಾಗಿದೆ. ಸ್ನಾನ್‌ಫ್ರಾನ್ಸಿಸ್ಕೋದಲ್ಲಿರುವ ಪ್ರತಿಷ್ಠಿತ ಆಪಲ್ ಶೋ ರೂಮ್‌ನಲ್ಲಿ ಐಫೋನ್ X ಖರೀದಿಸುವ ಸಲುವಾಗಿ ಕ್ಯೂ ನಲ್ಲಿ ನಿಂತಿದ್ಧವರಿಗೆ ಆಚ್ಚರಿಯೊಂದು ಕಾದಿತ್ತು. ಐಫೋನ್ X ಶೋ ರೂಮ್ ಪ್ರವೇಶಿಸುವ ಮುನ್ನವೇ ಫೋನ್‌ಗಳನ್ನು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ.

ಓದಿರಿ: ಕೆಲವೇ ನಿಮಿಷಗಳ ಕಾಲ ವಾಟ್ಸ್‌ಆಪ್ ಸ್ಥಗಿತ: ಪರದಾಡಿದ ಬಳಕೆದಾರರು..!
ಲಿಮಿಟೆಡ್ ಎಡಿಷನ್ ಆಗಿರುವ 300 ಐಫೋನ್ X ಗಳನ್ನು ಸ್ನಾನ್‌ಫ್ರಾನ್ಸಿಸ್ಕೋದಲ್ಲಿರುವ ಆಪಲ್ ಶೋ ರೂಮ್‌ಗೆ ತರಲಾಗುತ್ತಿತ್ತು, ಆದರೆ ಅದು ಶೋ ರೂಮ್ ತಲುಪುವ ಮುನ್ನವೇ UPS ಟ್ರಕ್ ನಿಂದಲೇ ಕಳ್ಳತನ ಮಾಡಲಾಗಿದೆ.

ಆಪಲ್ ಸ್ಟೋರ್ ಮುಂದೆಯೇ ಕಳ್ಳತನ:
ಸ್ನಾನ್‌ಫ್ರಾನ್ಸಿಸ್ಕೋದಲ್ಲಿರುವ ಆಪಲ್ ಸ್ಟೋರ್ ಕ್ಯೂನಲ್ಲಿ ನಿಂತಿದ್ದವರಿಗೆ ವಿತರಿಸುವ ಸಲುವಾಗಿ ಬಂದಿದ್ದ ಐಫೋನ್ ಗಳನ್ನು ತುಂಬಿದ್ದ ಟ್ರಕ್ ಆಪಲ್ ಸ್ಟೋರ್ ಮುಂದೆ ನಿಂತಿತ್ತು. ಕಳ್ಳರು ಅಲ್ಲಿಂದಲೇ ಲಪಟಾಯಿಸಿದ್ದಾರೆ.

64GB ಆವೃತ್ತಿಯ ಫೋನ್‌ಗಳು:
ಐಫೋನ್ Xಗಳನ್ನು ಹೊತ್ತು ತರುತ್ತಿದ್ದ ಟ್ರಕ್ ನಲ್ಲಿ 64GB ಆವೃತ್ತಿಯ ಒಟ್ಟು 313 ಐಫೋನ್ X ಇದ್ದವು ಎನ್ನಲಾಗಿದೆ. ಇದರಲ್ಲಿ 300 ಫೋನ್‌ಗಳನ್ನು ದರೋಡೆ ಮಾಡಲಾಗಿದೆ ಎನ್ನಲಾಗಿದೆ.

$999 ಬೆಲೆಯ ಫೋನ್‌ಗಳು:
ಟ್ರಕಿನಲ್ಲಿ ಪ್ರತಿ ಐಫೋನ್ Xಗಳ ಬೆಲೆ $999 ಆಗಿತ್ತು ಎನ್ನಲಾಗಿದೆ. ಈಗಾಗಲೇ ಕಳ್ಳರನ್ನು ಬಂಧಿಸಲು ಸ್ಥಳೀಯ ಪೊಲೀಸರು ಬಂಧಿಸಲು ಕಾರ್ಯಪಡೆಯನ್ನು ರಚಿಸಿದ್ದಾರೆ ಎನ್ನಲಾಗಿದೆ.

ಟ್ರಾಕ್ ಮಾಡಲಾಗುತ್ತಿದೆ:
ಈಗಾಗಲೇ ಫೈಂಡ್ ಮೈ ಐಫೋನ್ ಎನ್ನುವ ಆಯ್ಕೆಯ ಮೂಲಕ ಕಳ್ಳತನವಾಗಿರುವ ಫೋನ್‌ಗಳನ್ನು ಕಂಡು ಹಿಡಿಯುವ ಕಾರ್ಯವನ್ನು ಮಾಡಲಾಗುತ್ತಿದೆ.


Click it and Unblock the Notifications