Nothing Phone: 60 ನಿಮಿಷದಲ್ಲಿ 60,000 ಕ್ಕೂ ಹೆಚ್ಚು ನಥಿಂಗ್ ಫೋನ್ (2a) ಸೇಲ್! ದೊಡ್ಡ ದಾಖಲೆ
ಸ್ಮಾರ್ಟ್‌ಫೋನ್‌ಗಳ (Smartphone) ವಿಭಾಗದಲ್ಲೇ ವಿಶೇಷ ಶೈಲಿಯ ಮೂಲಕ ಗುರುತಿಸಿಕೊಂಡಿದ್ದ ನಥಿಂಗ್ ಫೋನ್‌ಗಳ (Nothing phone) ವಿಭಾಗದಲ್ಲಿ ಈಗ ಮಗದೊಂದು ಫೋನ್ ಆದ ನಥಿಂಗ್ ಫೋನ್ (2a) (Nothing Phone 2a) ಸೇರಿಕೊಂಡಿದೆ. ಈ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಲಾಂಚ್ ಮಾಡುವ ಮುನ್ನವೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಅದರಂತೆ ಕಳೆದ ವಾರ ಈ ಫೋನ್ ಲಾಂಚ್ ಆಗಿದ್ದು, ಹೊಸ ದಾಖಲೆ ಬರೆದಿದೆ.
ಹೌದು, ನಥಿಂಗ್ ಫೋನ್ (2a) ಅನ್ನು ಜನರು ತಾಮುಂದು ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕೇವಲ 60 ನಿಮಿಷದಲ್ಲಿ 60,000 ಕ್ಕೂ ಹೆಚ್ಚು ನಥಿಂಗ್ ಫೋನ್ (2a) ಸೇಲ್ ಆಗಿವೆ. ಹಾಗಿದ್ರೆ, ಈ ಫೋನ್‌ನಲ್ಲಿ ಅಂತಹುದ್ದೇನಿದೆ ವಿಶೇಷತೆ?, ಯಾವೆಲ್ಲಾ ವೇರಿಯಂಟ್‌ನಲ್ಲಿ ಈ ಫೋನ್ ಲಭ್ಯ, ಇದರ ಫೀಚರ್ಸ್ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಥಿಂಗ್ ಫೋನ್ (2a): ಈ ವಿಶೇಷ ಸ್ಮಾರ್ಟ್‌ಫೋನ್ ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯ ಇದ್ದು, ಇದನ್ನು ನೀವು ಫ್ಲಿಪ್‌ಕಾರ್ಟ್, ಕ್ರೋಮಾ, ವಿಜಯ್ ಸೇಲ್ಸ್ ಸೇರಿದಂತೆ ಇತರ ಪ್ರಮುಖ ಔಟ್‌ಲೆಟ್‌ಗಳ ಮೂಲಕ ಖರೀದಿ ಮಾಡಬಹುದಾಗಿದೆ. ಈ ಫೋನ್ ಮೂರು ಸ್ಟೋರೇಜ್ ವೇರಿಯಂಟ್‌ನಲ್ಲಿ ಲಭ್ಯ ಇದ್ದು, 8GB/128GB, 8GB/256GB ಮತ್ತು 12GB/256GB ವೇರಿಯಂಟ್ ಆಯ್ಕೆ ಕಾಣಬಹುದು.
ಈ ಮೂರು ವೇರಿಯಂಟ್ ಗಳು ಆಕರ್ಷಕ ಬೆಲೆ ಹೊಂದಿವೆ. ಅಂದರೆ 8GB + 128GB ಸ್ಟೋರೇಜ್ ವೇರಿಯಂಟ್‌ಗೆ 23,999ರೂ. ಗಳ ಬೆಲೆ ನಿಗದಿ ಮಾಡಲಾದ್ದು, 8GB + 256GB ಸ್ಟೋರೇಜ್ ವೇರಿಯಂಟ್‌ಗೆ 25,999 ರೂ.ಗಳು ಹಾಗೂ ಟಾಪ್-ಎಂಡ್ ವೇರಿಯಂಟ್ ಆದ 12GB + 256GB ವೇರಿಯಂಟ್‌ಗೆ 27,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ವೇಳೆ ಲಾಂಚ್ ಆಫರ್ ಅನ್ನೂ ಸಹ ಘೋಷಣೆ ಮಾಡಲಾಗಿತ್ತು.
ಅಂದರೆ ಈ ಫೋನ್ ಅನ್ನು ಖರೀದಿ ಮಾಡುವಾದ ವಿನಿಮಯ ಆಫರ್ ಬಳಕೆ ಮಾಡಿದ್ರೆ 2000 ರೂ.ಗಳ ರಿಯಾಯಿತಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 2000ರೂ.ಗಳ ರಿಯಾಯಿತಿ, ಸೂಪರ್ ಕಾಯಿನ್ ಮೇಲೆ 1000 ರೂ.ಗಳ ರಿಯಾಯಿತಿ ಜೊತೆಗೆ 9 ತಿಂಗಳವರೆಗೆ ನೋ ಕಾಸ್ಟ್ ಇಎಮ್‌ಐ ಆಯ್ಕೆ ನೀಡಲಾಗಿದೆ. ಅಲ್ಲದೆ ವಿನಿಮಯ ಕೊಡುಗೆಯೊಂದಿಗೆ 8/128 GB ವೇರಿಯಂಟ್ ಅನ್ನು ನೀವು ಕೇವಲ 19,999 ರೂ.ಗಳಿಗೆ ಖರೀದಿ ಮಾಡಲು ಅವಕಾಶ ನೀಡಲಾಗಿತ್ತು.

ಈ ಎಲ್ಲಾ ಕಾರಣಕ್ಕಾಗಿಯೇ ಇದೀಗ ಈ ಫೋನ್ ಅನ್ನು ದಾಖಲೆ ಮಟ್ಟದಲ್ಲಿ ಖರೀದಿ ಮಾಡಲಾಗಿದೆ. ಈ ಮೂಲಕ ಇತರೆ ಸ್ಮಾರ್ಟ್‌ಫೋನ್‌ಗಳಿಗೆ ನಡುಕ ಹುಟ್ಟುವಂತೆ ಮಾಡಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ಫೋನ್ (2a) ಖರೀದಿದಾರರು 1,999 ರೂ. ಬಲೆಯ CMF ಬಡ್ಸ್ (ಪ್ರೊ) ಮತ್ತು 1,999ರೂ ಬೆಲೆಯ CMF GaN ಚಾರ್ಜರ್ ಅನ್ನು ಕೊಡುಗೆಯ ಭಾಗವಾಗಿ ಖರೀದಿ ಮಾಡಬಹುದಾಗಿದೆ.
ನಥಿಂಗ್ ಫೋನ್ (2a) ಫೀಚರ್ಸ್: ಈ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್‌ಹೆಚ್‌ಡಿ+ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್, 1300 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯಲ್ಲಿ ಕಾಣಿಸಿಕೊಂಡಿದೆ. ಇದರ ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7200 ಪ್ರೊ ಪ್ರೊಸೆಸರ್ ಬಲ ಹಾಗೂ ಮೂರು ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿದೆ.

ಈ ಫೋನ್ ಕ್ಯಾಮೆರಾ ವಿಚಾರಕ್ಕೆ ಬಂದರೆ OIS + EIS ನೊಂದಿಗೆ 50 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಕ್ಯಾಮೆರಾ, 50 ಮೆಗಾಪಿಕ್ಸೆಲ್‌ನ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್‌ನ ಕ್ಯಾಮೆರಾ ಹೊಂದಿದೆ. ಪ್ರಮುಖವಾಗಿ ಈ ಸ್ಮಾರ್ಟ್‌ಫೋನ್ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಆಯ್ಕೆ ಪಡೆದಿದ್ದು, ಬಳಕೆದಾರರಿಗೆ ದೀರ್ಘ ಬ್ಯಾಕಪ್ ನೀಡಲಿದೆ.


Click it and Unblock the Notifications








