ಒಸಾಮಾ ವರದಿ ಬಹಿರಂಗ: ಪಾಕಿಸ್ತಾನದಲ್ಲಿ ಅಲ್‌ ಜಝೀರಾ ವೆಬ್‌ಸೈಟ್‌ಗೆ ನಿಷೇಧ

Posted By:

ಪಾಕಿಸ್ತಾನ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿದೆ ಎನ್ನುವ ವಾದಕ್ಕೆ ಮತ್ತೊಂದು ಸಾಕ್ಷ್ಯದ ವರದಿ ಬಹಿರಂಗಗೊಂಡಿದೆ. ಲಾಡೆನ್‌ ಪಾಕಿಸ್ತಾನದಲ್ಲಿ ಸುಮಾರು ಒಂದು ದಶಕ ಕಾಲ ಎಲ್ಲರ ಎದುರೇ ಓಡಾಡಿಕೊಂಡಿದ್ದ ಎನ್ನುವ ಪಾಕಿಸ್ತಾನ ಸರ್ಕಾರದ ಮಾಹಿತಿಯನ್ನೇ ಅಲ್‌ ಜಝೀರಾ ಟಿವಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಹತ ಉಗ್ರಗಾಮಿ ಒಸಾಮಾ ಬಿನ್‌ ಲಾಡೆನ್‌ ಬಗ್ಗೆ ವರದಿ ಬಹಿರಂಗ ಮಾಡಿದ್ದಕ್ಕಾಗಿ ಕತರ್‌ ಮೂಲದ ಆಲ್‌ ಜಝೀರಾ ಟಿವಿ ವಾಹಿನಿಯ ವೆಬ್‌ಸೈಟ್‌ ಮೇಲೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ. ದೇಶದಲ್ಲಿ ತಕ್ಷಣ ಈ ವೆಬ್‌ಸೈಟ್‌ನ್ನು ನಿರ್ಬಂಧಿಸುವಂತೆ ಪಾಕಿಸ್ತಾನ ಸರ್ಕಾರ ಎಲ್ಲಾ ಖಾಸಗಿ ಇಂಟರ್‌ನೆಟ್‌ ಸೇವಾ ಕಂಪೆನಿಗೆ ಸೂಚಿಸಿದೆ. ಸರ್ಕಾರದ ಅದೇಶದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಹಲವು ನಗರಗಳಲ್ಲಿ ಆಲ್‌ ಜಝೀರಾ ಟಿವಿ ವೆಬ್‌ಸೈಟ್‌ ಲಭ್ಯವಾಗುತ್ತಿಲ್ಲ.

ಒಸಾಮಾ ವರದಿ ಬಹಿರಂಗ: ಪಾಕಿಸ್ತಾನದಲ್ಲಿ ಅಲ್‌ ಜಝೀರಾ ವೆಬ್‌ಸೈಟ್‌ಗೆ ನಿಷೇಧ

ಯಾವ ವರದಿ ?
2011ರಲ್ಲಿ ಲಾಡೆನ್‌ ಅನ್ನು ಅಮೆರಿಕದ ವಿಶೇಷ ಪಡೆಗಳು ಹತ್ಯೆ ಮಾಡಿದ ನಂತರ ಪಾಕಿಸ್ತಾನ ಸರ್ಕಾರ ನ್ಯಾಯಾಧೀಶರೊಬ್ಬರ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಒಸಾಮಾ ಕುಟುಂಬದ ಸದಸ್ಯರು ಮತ್ತು ನಾನಾ ಅಧಿಕಾರಿಗಳು ಸೇರಿದಂತೆ 201 ಜನರನ್ನು ಸಂದರ್ಶಿಸಿ ತನ್ನ ವರದಿಯನ್ನು ಸಿದ್ದಪಡಿಸಿತ್ತು.

ಈ 336 ಪುಟಗಳ ವರದಿ ಪಾಕಿಸ್ತಾನ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊದಲೇ ಆಲ್‌ ಜಝೀರಾ ಟಿವಿ ವಾಹಿನಿ ತನ್ನ ವೆಬ್‌ಸೈಟ್‌ನಲ್ಲಿ ನಿನ್ನೆ ಈ ವರದಿಯ ಮಾಹಿತಿಯನ್ನು ಪಿಡಿಎಫ್‌ ಫೈಲ್‌ನಲ್ಲಿ ಆಪ್‌ಲೋಡ್‌ ಮಾಡಿತ್ತು. ಈ ಕಾರಣಕ್ಕೆ ಪಾಕಿಸ್ತಾನ ಸರ್ಕಾರ ಈ ವೆಬ್‌ಸೈಟ್‌ನ ಮೇಲೆ ನಿಷೇಧ ಹಾಕಿದೆ.

ಆಲ್‌ ಜಝೀರಾ ಟಿವಿ ವಾಹಿನಿಯ ವೆಬ್‌ಸೈಟ್‌ಗೆ ಪಾಕಿಸ್ತಾನದಲ್ಲಿ ಮಾತ್ರ ನಿಷೇಧ ಹಾಕಿದ್ದು ನೀವು ಈ ಲಿಂಕ್‌ ಕ್ಲಿಕ್‌ ಮಾಡಿ ವೆಬ್‌ಸೈಟ್‌ ಸೋರಿಕೆ ಮಾಡಿದ ಪಿಡಿಎಫ್‌ ಫೈಲ್‌ನ್ನು ನೋಡಬಹುದು: Al-Jazeera website

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot