ಹೊಸ PAN 2.0 ಘೋಷಣೆ: ಈಗಿರುವ ಪ್ಯಾನ್ ಕಾರ್ಡ್ ಬದಲಾಯಿಸಬೇಕೆ?
ಪ್ಯಾನ್ ಕಾರ್ಡ್ ಕುರಿತಂತೆ ಹೊಸ ಅಪ್‌ಗೇಡ್ ಸುದ್ದಿ ಇಲ್ಲಿದೆ. ವಿಶಿಷ್ಟ ತೆರಿಗೆದಾರರ ಗುರುತಿನ ಸಂಖ್ಯೆಯಾಗಿ ಕಾರ್ಯನಿರ್ವಹಿಸುವ ಶಾಶ್ವತ ಖಾತೆ ಸಂಖ್ಯೆಗೆ (PAN) ಅಪ್‌ಗ್ರೇಡ್ ಆಗಿ ಕೇಂದ್ರವು ಪ್ಯಾನ್ 2.0 ಅನ್ನು ಪರಿಚಯಿಸಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಹೇಳಿದ್ದಾರೆ.
ಪ್ಯಾನ್ 2.0 (PAN 2.0) ದೇಶದ ಪ್ಯಾನ್ ವ್ಯವಸ್ಥೆಯ ಮುಂದುವರಿದ ಪುನರಾವರ್ತನೆ ಆಗಿದ್ದು, ಇದು ವ್ಯಾಪಾರ ಮತ್ತು ನಾಗರಿಕ-ಕೇಂದ್ರಿತ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸುವ ಉದ್ದೇಶವನ್ನು ಇದು ಹೊಂದಿದೆ.

ಪ್ಯಾನ್ 2.0 (PAN 2.0) ಯೋಜನೆಯು ಇ-ಆಡಳಿತ ಉಪಕ್ರಮವಾಗಿದ್ದು, PAN/TAN ಸೇವೆಗಳ ತಂತ್ರಜ್ಞಾನ-ಚಾಲಿತ ರೂಪಾಂತರದ ಮೂಲಕ ವ್ಯಾಪಾರ ಪ್ರಕ್ರಿಯೆಗಳನ್ನು ಮರು-ಎಂಜಿನಿಯರಿಂಗ್ ಮಾಡುವ ಮೂಲಕ ತೆರಿಗೆದಾರರ ನೋಂದಣಿ ಸೇವೆಗಳನ್ನು ದೃದ್ಧಿಸುವ ಉದ್ದೇಶವನ್ನು ಹೊಂದಿದೆ.
ಹಾಗೆಯೇ ಈ ಯೋಜನೆಯು ಈಗಾಗಲೇ ಚಾಲ್ತಿ ಇರುವ PAN/TAN 1.0 ಪರಿಸರ ವ್ಯವಸ್ಥೆಯಿಂದ ಒಂದು ಅಪ್‌ಗ್ರೇಡ್ ಅನ್ನು ಪ್ರತಿನಿಧಿಸುತ್ತದೆ. ಪ್ಯಾನ್ ಮೌಲ್ಯೀಕರಣ ಸೇವೆಯೊಂದಿಗೆ ಕೋರ್ ಮತ್ತು ನಾನ್-ಕೋರ್ PAN/TAN ಚಟುವಟಿಕೆಗಳನ್ನು ಏಕೀಕರಿಸುವ ಕೆಲಸ ಮಾಡುತ್ತದೆ. ತೆರಿಗೆದಾರರಿಗೆ ಸುಧಾರಿತ ಡಿಜಿಟಲ್ ಅನುಭವವನ್ನು ಒದಗಿಸುವುದು ಇದರ ಗುರಿ ಆಗಿದೆ.
ಏನಿದು ಹೊಸ ಪ್ಯಾನ್ 2.0?
ಬರಲಿರುವ ನೂತನ ಪ್ಯಾನ್ 2.0 (PAN 2.0) ಈಗಾಗಲೇ ಚಾಲ್ತಿ ಇರುವ ಪ್ಯಾನ್ ವ್ಯವಸ್ಥೆಯ ಸಮಗ್ರ ಕೂಲಂಕುಷ ಪರೀಕ್ಷೆಯಾಗಿದೆ. PAN, TAN ಮತ್ತು TIN ಅನ್ನು ಒಂದೇ ಪ್ಲಾಟ್‌ಫಾರ್ಮ್ ನಲ್ಲಿ ಸಂಯೋಜನೆ ಮಾಡುತ್ತದೆ. ಈ ಕ್ರಮವು ಸರ್ಕಾರದ ಡಿಜಿಟಲ್ ಇಂಡಿಯಾ ಕಾರ್ಯಕ್ರಮ ಜೊತೆಗೆ ಹೋಲಿಕೆಯಾಗುತ್ತದೆ. ಅಲ್ಲದೇ ಇದು ದಕ್ಷತೆ, ವೇಗ ಮತ್ತು ನಿಖರತೆಯ ಮೇಲೆ ಕೇಂದ್ರೀಕರಿಸುತ್ತದೆ.
ಪ್ಯಾನ್ 2.0 ಸೇವೆಯ ಉಪಯೋಗ ಏನು?
- ಈ ನೂತನ ವ್ಯವಸ್ಥೆಯು ತೆರಿಗೆದಾರರಿಗೆ ಹಲವು ಉಪಯುಕ್ತ ಪ್ರಯೋಜನಗಳನ್ನು ನೀಡುತ್ತದೆ.
- ಆಪ್‌ಗಳು ಮತ್ತು ಅಪ್‌ಡೇಟ್‌ಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ. ಕಾಯುವ ಸಮಯವನ್ನು ಇಳಿಕೆ ಮಾಡಲು ನೆರವಾಗುತ್ತದೆ.
- ಏಕೀಕೃತ ಡೇಟಾಬೇಸ್ ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ. ಅಲ್ಲದೇ ಇದು ತೆರಿಗೆದಾರರ ಮಾಹಿತಿಯಲ್ಲಿ ದೋಷಗಳನ್ನು ಪ್ರಮಾಣವನ್ನು ಸಹ ಕಡಿಮೆ ಮಾಡುತ್ತದೆ.
- ಅಸ್ತಿತ್ವದಲ್ಲಿರುವ PAN ಹೊಂದಿರುವವರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ತಮ್ಮ ಕಾರ್ಡ್‌ಗಳನ್ನು ಅಪ್‌ಗ್ರೇಡ್ ಮಾಡಬಹುದು.
- ಬರಲಿರುವ ಈ ಸೇವೆಯು ಡಿಜಿಟಲ್ ಪ್ರಕ್ರಿಯೆಗಳು ದಾಖಲೆಗಳ ಅಗತ್ಯವನ್ನು ನಿವಾರಿಸುತ್ತದೆ, ಸುಸ್ಥಿರತೆಯನ್ನು ಉತ್ತೇಜನ ಮಾಡುತ್ತದೆ.
- ಅಲ್ಲದೇ ಈ ಸೇವೆಯು ಸೂಕ್ಷ್ಮ ತೆರಿಗೆದಾರರ ಡೇಟಾ ಮಾಹಿತಿಯನ್ನು ಸುರಕ್ಷಿತವಾಗಿ ಇಡಲು ಇದು ಉತ್ತಮ ತಂತ್ರಜ್ಞಾನವನ್ನು ಬಳಕೆ ಮಾಡುತ್ತದೆ.
ಹಳೆಯ ಪ್ಯಾನ್ ಸಂಖ್ಯೆ ಬದಲಾಯಿಸಬೇಕೆ?
ಜನರು ತಮ್ಮ ಪ್ಯಾನ್ ಸಂಖ್ಯೆಯನ್ನು ಮಾರ್ಪಡಿಸುವ ಅಗತ್ಯವಿಲ್ಲ. ಮುಂಬರುವ ಪ್ಯಾನ್ 2.0 ಅನ್ನು ಪ್ರಸ್ತುತ ಪ್ಯಾನ್ ವ್ಯವಸ್ಥೆಗೆ ಅಪ್‌ಗ್ರೇಡ್ ಆಗಿ ಪರಿಚಯಿಸಲಿದ್ದಾರೆ. ಹೊಸ ಕಾರ್ಡ್ ಸಮರ್ಥ ಸ್ಕ್ಯಾನಿಂಗ್‌ಗಾಗಿ ಕ್ಯೂಆರ್ ಕೋಡ್ (QR Code) ಅನ್ನು ಒಳಗೊಂಡಿರುತ್ತದೆ ಅಲ್ಲದೇ ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಇರುತ್ತದೆ ಎಂದು ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.


Click it and Unblock the Notifications








