Home
ಸುದ್ದಿಜಾಲ

Pan Card ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಇಂದೇ ಕಡೆಯ ದಿನ!

ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿದೆ. ಅಲ್ಲದೆ ಆಧಾರ್‌ನೊಂದಿಗೆ ಪ್ಯಾನ್‌ ಲಿಂಕ್‌ ಮಾಡುವುದಕ್ಕೆ ಇದೇ ಮಾರ್ಚ್ 31, 2021 ಅಂದರೇ ಇಂದು ಕಡೆಯ ದಿನವಾಗಿದೆ. ಈ ನಿಟ್ಟಿನಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿದೆಯೇ ಎಂಬುದನ್ನು ಆನ್‌ಲೈನ್ ಮೂಲಕ ಚೆಕ್ ಮಾಡಬಹುದು. ಒಂದು ವೇಳ ಲಿಂಕ್ ಆಗಿರದೇ ಇದ್ದಲ್ಲಿ ಆನ್‌ಲೈನ್‌ ಮೂಲಕ ಸುಲಭವಾಗಿ ಲಿಂಕ್ ಮಾಡಬಹುದಾಗಿದೆ.

Pan Card ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಇಂದೇ ಕಡೆಯ ದಿನ!

ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ ಜೋಡಣೆ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಹಾಗಾಗಿ ಮಾರ್ಚ್ 31ರ ಒಳಗೆ ಯಾವುದೇ ವ್ಯಕ್ತಿ ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ವಿಫಲವಾದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇದಲ್ಲದೆ, ಆದಾಯ ತೆರಿಗೆ ಕಾಯ್ದೆಯಡಿ ನೀವು 1000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.

Pan Card ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಇಂದೇ ಕಡೆಯ ದಿನ!

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಆಗಿರುವುದನ್ನು ಪರಿಶೀಲಿಸಲು ಈ ಕ್ರಮ ಅನುಸರಿಸಿ:
ಹಂತ 1: ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಆಧಾರ್ ಸ್ಟೇಟಸ್‌ಗೆ ಹೋಗಿ ಅಥವಾ incometaxindiaefiling.gov.in/aadhaarstatus ಕ್ಲಿಕ್‌ ಮಾಡಿ

ಹಂತ 2: ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ನಮೂದಿಸಿ

ಹಂತ 3: 'ವ್ಯೂ ಲಿಂಕ್ ಆಧಾರ್ ಸ್ಟೇಟಸ್‌' ಕ್ಲಿಕ್ ಮಾಡಿ

ಹಂತ 4: ಲಿಂಕ್ ಆಗಿದೆಯಾ ಇಲ್ಲವಾ ಅನ್ನುವ ಸ್ಟೇಟಸ್‌ ಡಿಸ್‌ಪ್ಲೇ ಆಗಲಿದೆ.

Pan Card ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಲು ಇಂದೇ ಕಡೆಯ ದಿನ!

ಇದಲ್ಲದೆ SMS ಮೂಲಕ ಆಧಾರ್-ಪ್ಯಾನ್ ಕಾರ್ಡ್ ಲಿಂಕ್ ಸ್ಟೇಟಸ್‌ ಚೆಕ್‌ ಮಡಬಹುದಾಗಿದೆ. ಇದಕ್ಕಾಗಿ ಬಳಕೆದಾರರು 567678 ಅಥವಾ 56161 ಗೆ SMS ಕಳುಹಿಸಬೇಕಾಗಿದೆ. ಯುಐಡಿಪಿಎನ್ ಲಿಂಕ್ ಯಶಸ್ವಿಯಾದರೆ, ಈ ಸಂದೇಶವನ್ನು "ಆಧಾರ್ ..ಈಗಾಗಲೇ ಪ್ಯಾನ್..ಇನ್ ಐಟಿಡಿ ಡೇಟಾಬೇಸ್‌ನೊಂದಿಗೆ ಸಂಯೋಜಿಸಲಾಗಿದೆ. ನಮ್ಮ ಸೇವೆಗಳನ್ನು ಬಳಸಿದ್ದಕ್ಕಾಗಿ ಧನ್ಯವಾದಗಳು." ಎಂದು ಸಂದೇಶ ಬರಲಿದೆ. ಲಿಂಕ್ ಮಾಡದಿದ್ದರೆ, ಬಳಕೆದಾರರು ಆದಾಯ ತೆರಿಗೆ (ಐ-ಟಿ) ವಿಭಾಗದ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ ಲಿಂಕ್‌ ಮಾಡಬಹುದು. ಆದಾಯ ತೆರಿಗೆ ಇಲಾಖೆಯು ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಲು ಸಾಧ್ಯವಾಗುವಂತೆ ಎಸ್‌ಎಂಎಸ್ ಆಧಾರಿತ ಸೌಲಭ್ಯವನ್ನು ಸಹ ಒದಗಿಸುತ್ತದೆ.

Best Mobiles in India

English summary
PAN-Aadhaar Card Linking Deadline Ends Today. How To Do It Online.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+