ಆಧಾರ್ ನೊಂದಿಗೆ ಪ್ಯಾನ್‌ ಕಾರ್ಡ್‌ ಲಿಂಕ್ ಗಡವು ಮತ್ತೆ ವಿಸ್ತರಣೆ!

|

ಕೇಂದ್ರ ಹಣಕಾಸು ಸಚಿವಾಲಯ ಮತ್ತೊಂದು ಮಹತ್ವದ ಘೋಷಣೆ ಹೊರಡಿಸಿದೆ. ಸದ್ಯ ದೇಶದಲ್ಲಿ ಕೊರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಪ್ಯಾನ್‌ಕಾರ್ಡ್‌- ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವ ದಿನಾಂಕವನ್ನು ಮತ್ತೇ ವಿಸ್ತರಣೆ ಮಾಡಿದೆ. ಈ ಹಿಂದೆ ಇದ್ದ ಆದೇಶದಂತೆ ಇದೇ ಜೂನ್‌ 30,2020 ಕ್ಕೆ ಆಧಾರ್‌ ಕಾರ್ಡ್‌ ( ಆಧಾರ್-ನಂಬರ್) ನೊಂದಿಗೆ ಪಾನ್‌ಕಾರ್ಡ್‌ ಜೋಡಣೆ ಮಾಡಲು ಹಣಕಾಸು ಸಚಿವಾಲಯವು ಗಡವು ನೀಡಿತ್ತು. ಆದರೆ ಇದೀಗ ಹಣಕಾಸು ಸಚಿವಾಲಯವು ಈ ಅವಧಿಯನ್ನು ವಿಸ್ತರಿಸಿದ್ದು, ಮಾರ್ಚ್ 31, 2021 ರವರೆಗೂ ಕಾಲಾವಕಾಶ ನೀಡಿದೆ.

ಆಧಾರ್

ಸದ್ಯ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಇದು ಮೂರನೇ ಬಾರಿ ಅವಧಿ ವಿಸ್ತರಣೆ ಆಗುತ್ತಿದ್ದು, ಈ ಮೊದಲು 2019 ಸೆಪ್ಟೆಂಬರ್ 30 ರ ಗಡುವನ್ನು ಡಿಸೆಂಬರ್ 31 2020 ರ ವರೆಗೆ ವಿಸ್ತರಿಸಿತ್ತು. ನಂತರ ಮಾರ್ಚ್ 31 2020ರ ವರೆಗೂ ವಿಸ್ತರಿಸಿತ್ತು. ಮತ್ತೆ ಇದನ್ನ ಜೂನ್‌ 30,2020 ಕ್ಕೆ ವಿಸ್ತರಣೆ ಮಾಡಿತ್ತು. ಇದೀಗ ಮತ್ತೇ ಮಾರ್ಚ್ 31, 2021 ರವರೆಗೂ ಗಡುವು ವಿಸ್ತರಣೆ ಮಾಡಿದೆ. ಹಾಗಾದ್ರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ್ನು ಲಿಂಕ್ ಮಾಡುವುದು ಹೇಗೆ? ಎನ್ನುವ ಕುರಿತು ತಿಳಿಯಲು ಮುಂದೆ ಓದಿರಿ.

ಪ್ಯಾನ್

ನೀವು ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿದ್ದರೆ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿದ್ದರೆ ಅಥವಾ ನೀವು ಈಗಾಗಲೇ ಒಂದನ್ನು ಪಡೆದುಕೊಂಡಿದ್ದರೆ, ನೀವು ಆಧಾರ್ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಗೆ ತಿಳಿಸಬೇಕಾಗುತ್ತದೆ. ನಿಮ್ಮ ಪ್ಯಾನ್ ಆಧಾರ್ ಲಿಂಕ್ ಪೂರ್ಣಗೊಳ್ಳಬೇಕು ಇಲ್ಲದಿದ್ದರೆ ಪ್ಯಾನ್ ‘ನಿಷ್ಕ್ರಿಯ' ಆಗುತ್ತದೆ. ಪ್ಯಾನ್ ನಿಷ್ಕ್ರಿಯಗೊಂಡ ನಂತರ, ಒಬ್ಬರು ಹಲವಾರು ವಹಿವಾಟುಗಳಿಗೆ ಒಳಗಾಗಲು ಸಾಧ್ಯವಾಗುವುದಿಲ್ಲ, ಅಲ್ಲಿ ಪ್ಯಾನ್ ಅನ್ನು ಕಡ್ಡಾಯವಾಗಿ ಉಲ್ಲೇಖಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು 18 ಹಣಕಾಸು ವಹಿವಾಟುಗಳನ್ನು ನಿರ್ದಿಷ್ಟಪಡಿಸಿದೆ, ಅಲ್ಲಿ ಪ್ಯಾನ್ ನಂಬರ್‌ ಉಲ್ಲೇಖಿಸುವುದು ಕಡ್ಡಾಯವಾಗಿದೆ. ಅಂತಹ ಸಂದರ್ಭಗಳಲ್ಲಿ, ಪ್ಯಾನ್ ಮತ್ತು ಆಧಾರ್ ಸಂಪರ್ಕಗೊಂಡಾಗ ಮಾತ್ರ ವಹಿವಾಟುಗಳನ್ನು ನಡೆಸಬಹುದಾಗಿದ್ದು, ಇದರಿಂದಾಗಿ ಪ್ಯಾನ್ ಪುನಃ ಸಕ್ರಿಯಗೊಳ್ಳುತ್ತದೆ. ಅದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇ-ಫೈಲಿಂಗ್ ಪೋರ್ಟಲ್

ಇ-ಫೈಲಿಂಗ್ ಪೋರ್ಟಲ್

1. ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಂಡಿರುವ ವ್ಯಕ್ತಿಗಳು: ಒಂದು ವೇಳೆ ನೀವು ಆದಾಯ ತೆರಿಗೆಯನ್ನು ಸಲ್ಲಿಸುತ್ತಿದ್ದು ಈಗಾಗಲೇ ಆಧಾರ್ ನಂಬರ್ ನ್ನು ಐಟಿಆರ್ ನಲ್ಲಿ ನೀಡಿದ್ದರೆ ಪಾನ್ ಮತ್ತು ಆಧಾರ್ ಈಗಾಗಲೇ ಲಿಂಕ್ ಆಗಿರುವ ಸಾಧ್ಯತೆ ದಟ್ಟವಾಗಿದೆ. ಯಾಕೆಂದರೆ ಆದಾಯ ತೆರಿಗೆ ಇಲಾಖೆಯು ಈ ಎರಡೂ ಐಡಿಗಳಲ್ಲಿರುವ ಮಾಹಿತಿಗಳು ಸಮವಾಗಿದ್ದಲ್ಲಿ ಈಗಾಗಲೇ ಅದನ್ನು ಲಿಂಕ್ ಮಾಡಿರುವ ಸಾಧ್ಯತೆ ಇದೆ. ಆಧಾರ್ ಮತ್ತು ಪಾನ್ ಲಿಂಕ್ ಆಗಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳುವುದಕ್ಕಾಗಿ ನೀವು ಇ-ಫೈಲಿಂಗ್ ವೆಬ್ ಸೈಟ್ www.incometaxindiaefiling.gov.in ಗೆ ಭೇಟಿ ನೀಡಿ.

2. ಇ-ಫೈಲಿಂಗ್ ಪೋರ್ಟಲ್

2. ಇ-ಫೈಲಿಂಗ್ ಪೋರ್ಟಲ್ ನಲ್ಲಿ ನೊಂದಾಯಿಸಿಕೊಳ್ಳದ ವ್ಯಕ್ತಿಗಳು: ಒಂದು ವೇಳೆ ನೀವು ಇ-ಫೈಲಿಂಗ್ ಪೋರ್ಟಲ್ ನಲ್ಲಿ ರಿಜಿಸ್ಟರ್ ಮಾಡಿಕೊಳ್ಳದೇ ಇರುವ ವ್ಯಕ್ತಿಗಳಾಗಿದ್ದರೆ ಅಥವಾ ಮೇಲಿನ ವಿಧಾನದಲ್ಲಿ ಹೋಗಲು ಇಚ್ಛಿಸದೇ ಇದ್ದಲ್ಲಿ 'Link Aadhaar' ಟ್ಯಾಬ್ ನ್ನು ಕ್ಲಿಕ್ಕಿಸಬಹುದು. ಎಡಭಾಗದಲ್ಲಿ ಕ್ವಿಕ್ ಲೈನ್ಸ್ ನ ಅಡಿಯಲ್ಲಿರುವ ಮೊದಲ ಲಿಂಕ್ ಇದಾಗಿರುತ್ತದೆ. ಈ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ ನಿಮ್ಮನ್ನು ಹೊಸ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಅಲ್ಲಿ ನೀವು ಎಲ್ಲಾ ಅಗತ್ಯ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಪಾನ್ ನಂಬರ್, ಆಧಾರ್ ನಂಬರ್ , ಆಧಾರ್ ಕಾರ್ಡ್ ನಲ್ಲಿ ನಮೂದಿಸಿದಂತೆಯೇ ನಿಮ್ಮ ಹೆಸರು, ಒಂದು ವೇಳೆ ವರ್ಷವನ್ನು ಆಧಾರ್ ಕಾರ್ಡ್ ನಲ್ಲಿ ನಮೂದಿಸಿದ್ದರೆ ಅದನ್ನು ಕೂಡ ಲಿಂಕ್ ಮಾಡುವ ಮೂಲಕ ನೀವು ಎಂಟರ್ ಮಾಡಬೇಕಾಗುತ್ತದೆ. ನಂತರ ಇಮೇಜ್ ನಲ್ಲಿ ಕಾಣುವ ಕ್ಯಾಪ್ಚಾ ಎಂಟರ್ ಮಾಡಿ. ನೋಟದಲ್ಲಿ ಸಮಸ್ಯೆ ಇರುವವರು ಓಟಿಪಿ ಪಡೆದು ಕೂಡ ಮಾಡಬಹುದು. ಕೊನೆಯದಾಗಿ ಲಿಂಕ್ ಆಧಾರ್ ಆಯ್ಕೆಯನ್ನು ಕ್ಲಿಕ್ಕಿಸಿ. ಪಾನ್ ಮತ್ತು ಆಧಾರ್ ಕಾರ್ಡ್ ಯಶಸ್ವಿಯಾಗಿ ಲಿಂಕ್ ಆಗಿರುವ ಬಗ್ಗೆ ನಿಮಗೆ ಸಂದೇಶ ಲಭ್ಯವಾಗುತ್ತದೆ.

ಲಿಂಕ್ ಯಾಕೆ ಮಾಡಿಕೊಳ್ಳಬೇಕು?

ಲಿಂಕ್ ಯಾಕೆ ಮಾಡಿಕೊಳ್ಳಬೇಕು?

ಒಂದು ವೇಳೆ ನೀವು ಆದಾಯ ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸುವುದಾದರೆ ಎರಡೂ ಐಡಿಗಳು ಕೂಡ ಅಗತ್ಯವಾಗಿ ಬೇಕಾಗುತ್ತದೆ. ಅಂದರೆ ಪಾನ್ ಮತ್ತು ಆಧಾರ್ ಕಾರ್ಡ್ ಇಲ್ಲದೆ ಆದಾಯ ತೆರಿಗೆಯನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಕೆಲವು ನಿರ್ಧಿಷ್ಟ ಕೇಸ್ ಗಳನ್ನು ಹೊರತು ಪಡಿಸಿದರೆ 2019-20 ಹಣಕಾಸು ವರ್ಷದಿಂದ ಆದಾರ್ ಮತ್ತು ಪಾನ್ ಲಿಂಕ್ ಆಗಿದ್ದರೆ ಮಾತ್ರವೇ ತೆರಿಗೆ ಮರುಪಾವತಿ ಸಾಧ್ಯವಾಗುತ್ತದೆ. ಪಾನ್ ಕಡ್ಡಾಯವಾಗಿರುವ ಸ್ಥಳಗಳಲ್ಲಿ ಒಂದು ವೇಳೆ ಆಧಾರ್ ಉಲ್ಲೇಖಿಸುವುದನ್ನು ಪರಿಗಣಿಸಿದರೆ ಇವೆರಡರ ಲಿಂಕ್ ಅಗತ್ಯವಾಗಿರುತ್ತದೆ. ಲಿಂಕ್ ಆಗದೇ ಇದ್ದಾಗ ನೀವು ಸೆಕೆಂಡ್ ಪಾನ್ ನ್ನು ನೀಡಿದ್ದೇ ಆದಲ್ಲಿ ಅದು ಕಾನೂನು ಬಾಹಿರವಾಗುತ್ತದೆ.2019 ರ ಬಜೆಟ್ ನಲ್ಲಿ ಪಾನ್ ಕಡ್ಡಾಯವಾಗಿರುವ ಕಡೆಗಳಲ್ಲಿ ಆಧಾರ್ ಕಾರ್ಡ್ ನೀಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಅದು ಎರಡೂ ಐಡಿಗಳು ಲಿಂಕ್ ಆಗಿದ್ದಾಗ ಮಾತ್ರವೇ ಕಾನೂನು ರೀತಿಯಾಗಿರುತ್ತದೆ.

ಲಿಂಕ್ ಮಾಡಿ

ಲಿಂಕ್ ಮಾಡಿ

ಸದ್ಯ ಪಾನ್ ಇಲ್ಲದ ವ್ಯಕ್ತಿಗಳು ತಮ್ಮ ಹಣಕಾಸು ವ್ಯವಹಾರಕ್ಕಾಗಿ ಆಧಾರ್ ಕಾರ್ಡ್ ನೀಡಿದ್ದಲ್ಲಿ ಇಲಾಖೆಯು ಅದನ್ನು ಆಟೋ ಅಪ್ಲಿಕೇಷನ್ ಎಂದು ಪರಿಗಣಿಸುತ್ತದೆ ಮತ್ತು ವ್ಯಕ್ತಿಗೆ ಅದನ್ನು ಹಂಚಿಕೆ ಮಾಡಲಾಗುತ್ತದೆ. ಆದರೆ ವಿಸ್ತರಿಸಿದ ಅವಧಿಯಲ್ಲಿ ನೀವು ಆಧಾರ್ ಮತ್ತು ಪಾನ್ ನ್ನು ಲಿಂಕ್ ಮಾಡದೇ ಇದ್ದಲ್ಲಿ ಸದ್ಯ ಇರುವ ನಿಯಮದ ಪ್ರಕಾರ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ಇನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಕೂಡ ಪ್ಯಾನ್ ಮತ್ತು ಆಧಾರ್ ಅನ್ನು 567678 ಅಥವಾ 56161 ಗೆ ಎಸ್‌ಎಂಎಸ್ ಮೂಲಕ ಸಹ ಲಿಂಕ್ ಮಾಡಬಹುದು. SMS ನ ಸ್ವರೂಪ ಹೀಗಿದೆ: UIDPAN ಹಾಗಾಗಿ ಒಂದು ವೇಳೆ ಇದುವರೆಗೂ ನೀವು ಪಾನ್ ಮತ್ತು ಆಧಾರ್ ನ್ನು ಲಿಂಕ್ ಮಾಡಿಲ್ಲದೇ ಇದ್ದಲ್ಲಿ ಕೂಡಲೇ ಮಾರ್ಚ್‌ 31, 20201 ಒಳಗೆ ಲಿಂಕ್ ಮಾಡಿಕೊಳ್ಳುವುದನ್ನು ಮರೆಯಬೇಡಿ.

Best Mobiles in India

English summary
The PAN Card-Aadhaar Card linking last date has been extended till March 31, 2021. The previous deadline for linking PAN and Aadhaar was June 30, 2020.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X