Subscribe to Gizbot

ಪ್ಯಾನಸೋನಿಕ್‌ನಿಂದ ಬಜೆಟ್ ಫೋನ್ ಬರೇ 12,990 ಕ್ಕೆ

Written By:

ಪ್ಯಾನಸೋನಿಕ್ ತನ್ನ ಪ್ರಥಮ ಸ್ಮಾರ್ಟ್‌ಫೋನ್ ಎಲ್4ಜಿ ಯನ್ನು ಲಾಂಚ್ ಮಾಡಿದ್ದು ಬೆಲೆ ರೂ 12,990 ಆಗಿದೆ. ಇದು 4ಜಿ ಬೆಂಬಲವನ್ನು ಒದಗಿಸುತ್ತಿದ್ದು ಆನ್‌ಲೈನ್ ಮತ್ತು ಆಫ್‌ಲೈನ್ ರೀಟೈಲ್ ಸ್ಟೋರ್‌ಗಳಲ್ಲಿ ಇದು ಲಭ್ಯವಿದೆ.

ಪ್ಯಾನಸೋನಿಕ್‌ನಿಂದ ಬಜೆಟ್ ಫೋನ್ ಬರೇ 12,990 ಕ್ಕೆ

ಪ್ಯಾನಸೋನಿಕ್ ಎಲುಗಾ ಎಲ್4ಜಿನಲ್ಲಿ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಚಾಲನೆಯಾಗುತ್ತಿದ್ದು ಡ್ಯುಯಲ್ ಸಿಮ್‌ಗೆ ಬೆಂಬಲವನ್ನು ಈ ಡಿವೈಸ್‌ ನೀಡುತ್ತಿದೆ. 64 ಬಿಟ್ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಮತ್ತು 1ಜಿಬಿ RAM ಡಿವೈಸ್‌ನಲ್ಲಿದೆ. 5 ಇಂಚಿನ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ ಜೊತೆಗೆ ಓಜಿಎಸ್ ಡಿವೈಸ್‌ನಲ್ಲಿದೆ. ಸ್ಮಾರ್ಟ್‌ಫೋನ್‌ನಲ್ಲಿ ಗೋರಿಲ್ಲಾ ಗ್ಲಾಸ್ ಇದೆ.

ಓದಿರಿ: ಬಿಲಿಯಗಟ್ಟಲೆ ದುಡ್ಡಿದ್ದರೂ ಬಡವರಲ್ಲಿ ಅತಿಬಡವರು

ಫೋನ್ 8 ಎಮ್‌ಪಿ ರಿಯರ್ ಆಟೊಫೋಕಸ್ ಕ್ಯಾಮೆರಾದ ಜೊತೆಗೆ ಎಲ್‌ಇಡಿ ಫ್ಲ್ಯಾಶ್ ಇದ್ದು, ಮುಂಭಾಗದಲ್ಲಿ 5 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಫೋನ್‌ನಲ್ಲಿ 8 ಜಿಬಿ ಆಂತರಿಕ ಸಂಗ್ರಹ ಇದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32 ಜಿಬಿಗೆ ವಿಸ್ತರಿಸಬಹುದು.

ಓದಿರಿ: ಎಸ್‌ಎಮ್‌ಎಸ್ ಮಾಯಗಾರನ ಇಂಟ್ರೆಸ್ಟಿಂಗ್ ಕಹಾನಿ

ಫೋನ್ 4 ಜಿ ನೆಟ್‌ವರ್ಕ್‌ಗೆ ಬೆಂಬಲವನ್ನು ಒದಗಿಸುತ್ತಿದ್ದು, ಇದರಲ್ಲಿ ವೈಫೈ, ಬ್ಲ್ಯೂಟೂತ್, 3ಜಿ ಸಂಪರ್ಕವನ್ನು ಕಾಣಬಹುದಾಗಿದೆ. ಇದು 6.1 ಎಮ್‌ಎಮ್ ದಪ್ಪವಾಗಿದೆ. ರೇಡಿಯೇಂಟ್ ನೀಲಿ ಬಣ್ಣದಲ್ಲಿ ಎಲುಗಾ ಎಲ್4ಜಿ ಫೋನ್ ಲಭ್ಯವಿದೆ.

English summary
Panasonic has launched its first smartphone with 4G support in India, the Eluga L 4G, priced at Rs. 12,990. The smartphone will be available in India via both online and offline retail stores.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot