ಮಹಿಳೆಯರ ಸುರಕ್ಷತೆ: ಮೊಬೈಲ್-ಸ್ಮಾರ್ಟ್‌ಫೋನ್‌ನಲ್ಲಿ ಪ್ಯಾನಿಕ್ ಬಟನ್..!

|

ದೇಶದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೆಚ್ಚಿನ ಒತ್ತು ನೀಡುವ ಸಲುವಾಗಿ ಮೊಬೈಲ್‌ಗಳಲ್ಲಿ ತುರ್ತು ಸಹಾಯವನ್ನು ಪಡೆಯುವ ಸಲುವಾಗಿ ಪ್ಯಾನಿಕ್ ಬಟನ್ ಒಂದನ್ನು ಅಳವಡಿಸಲು ಸರಕಾರವೂ ಮುಂದಾಗಿದ್ದು, ಇದರ ಪ್ರಾಯೋಗಿಕ ಪರೀಕ್ಷೆ ಸಲುವಾಗಿ ಜನವರಿ 26ರಿಂದ ಉತ್ತರ ಪ್ರದೇಶದಲ್ಲಿ ಮೊಬೈಲ್‌ಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ.

ಮಹಿಳೆಯರ ಸುರಕ್ಷತೆ: ಮೊಬೈಲ್-ಸ್ಮಾರ್ಟ್‌ಫೋನ್‌ನಲ್ಲಿ ಪ್ಯಾನಿಕ್ ಬಟನ್..!

ಓದಿರಿ: ಅಮೆಜಾನ್-ಫ್ಲಿಪ್‌ಕಾರ್ಟ್‌ಗೆ ಸರ್ಕಾರದಿಂದ ನೋಟಿಸ್: ಆಫರ್ ಹೆಸರಿನಲ್ಲಿ ಮೋಸ ಮಾಡೋಕೆ ಆಗಲ್ಲ..!

ಮಹಿಳೆಯರ ತುರ್ತು ಸಹಾಯಕ್ಕೆ ಪ್ಯಾನಿಕ್ ಬಟನ್ ಅಳವಡಿಸುವ ಕಾರ್ಯ ಪ್ರಾಯೋಗಿಕವಾಗಿ ಆರಂಭವಾಗುತ್ತಿದ್ದು, ಉತ್ತರಪ್ರದೇಶದಲ್ಲಿ ಈ ಪ್ರಯೋಗವು ಯಶಸ್ವಿಯಾದರೆ ದೇಶದ ಎಲ್ಲೆಡೆ ಜಾರಿಗೆ ತರಲು ಮುಂದಾಗಲು ಕೇಂದ್ರ ಸರ್ಕಾರ ಯೋಜನೆಯನ್ನು ರೂಪಿಸಿದೆ. ಈ ಹಿಂದೆಯೇ ಇದರ ಪರೀಕ್ಷೆ ನಡೆದಿತ್ತಾರೂ ಯಶಸ್ವಿಯಾಗಿರಲಿಲ್ಲ.

How to Sharing a Mobile Data Connection with Your PC (KANNADA)
ಪ್ಯಾನಿಕ್ ಬಟನ್ ಪ್ರೆಸ್ ಮಾಡಿದ್ರೆ..?

ಪ್ಯಾನಿಕ್ ಬಟನ್ ಪ್ರೆಸ್ ಮಾಡಿದ್ರೆ..?

ತುರ್ತು ಸಂದರ್ಭದಲ್ಲಿ ಮಹಿಳೆಯರು ಸಹಾಯ ಪಡೆಯುವ ಸಲುವಾಗಿ ಮೊಬೈಲ್‌ನಲ್ಲಿ ಒಂದು ಪ್ಯಾನಿಕ್ ಬಟನ್ ನೀಡಲಾಗುವುದು. ಇದು ಫೋನಿನಲ್ಲಿರುವ ಯಾವ ಬಟನ್ ಎಂಬುದು ನಿರ್ಧಾರವಾಗಿಲ್ಲ. ತುರ್ತು ಸಂದರ್ಭದಲ್ಲಿ ಮಹಿಳೆಯರು ಈ ಬಟನ್ ಒತ್ತಿದ ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮತ್ತು SMS ಹೋಗಲಿದ್ದು, ಪೊಲೀಸರ ಜತೆ ಮತ್ತು ಕುಟುಂಬದೊಂದಿಗೆ ತಕ್ಷಣವೇ ಸಂಪರ್ಕ ದೊರೆಯಲಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ತಕ್ಷಣವೇ ಸಹಾಯಕ್ಕೆ ಧಾವಿಸಲಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಮಹಿಳೆಯರು ಮತ್ತಷ್ಟು ಸುರಕ್ಷಿತರಾಗಲಿದ್ದಾರೆ.

ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೂ..!

ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೂ..!

ಇನ್ನು ಭಾರತದಲ್ಲಿ ದೊರೆಯಲಿರುವ ಎಲ್ಲಾ ಫೋನ್‌ಗಳಲ್ಲೂ ತುರ್ತು ಸಹಾಯದ ಪ್ಯಾನಿಕ್ ಬಟನ್ ಇರಲಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆದಾರರು ಇದಕ್ಕಾಗಿ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಈ ಸೇವೆಯನ್ನು ನೀಡುವುದು ಮೊಬೈಲ್ ತಯಾರಕ ಕಂಪನಿಗಳಿಗೆ ಕಡ್ಡಾಯವಾಗಲಿದೆ. ಶೀಘ್ರವೇ ಈ ತುರ್ತು ಬಟನ್ ಯಾವುವು ಎನ್ನುವುದು ನಿರ್ಧಾರವಾಗಲಿದೆ.

ಈ ಹಿಂದೆಯೇ ಬರಬೇಕಿತ್ತು.

ಈ ಹಿಂದೆಯೇ ಬರಬೇಕಿತ್ತು.

ಕೇಂದ್ರ ಸರಕಾರವೂ ಈ ಹಿಂದೆಯೇ ಮೊಬೈಲ್‌ಗಳಲ್ಲಿ ತುರ್ತು ಸಹಾಯದ ಬಟನ್ ಅಳವಡಿಸಬೇಕು ಎಂದು ಸೂಚನೆ ನೀಡಿತ್ತು. ಮೊಬೈಲ್‌ ತಯಾರಕರು 2017ರ ಜನವರಿ ಒಳಗೆ ಕಡ್ಡಾಯವಾಗಿ ತುರ್ತು ಸಹಾಯಕ್ಕೆ ಬಟನ್‌ ಅಳವಡಿಸಬೇಕು ಎಂದು 2016ರ ಏಪ್ರಿಲ್‌ನಲ್ಲಿ ದೂರಸಂಪರ್ಕ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಆದರೆ ಇಂದಿನವರೆಗೂ ಕಾರಣಾಂತರಗಳಿಂದ ಅದು ಜಾರಿಯಾಗಿಲ್ಲ.

Best Mobiles in India

English summary
‘Panic button’ on mobile phones to be tested in UP from January 26. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X