ಅಮೆಜಾನ್-ಫ್ಲಿಪ್‌ಕಾರ್ಟ್‌ಗೆ ಸರ್ಕಾರದಿಂದ ನೋಟಿಸ್: ಆಫರ್ ಹೆಸರಿನಲ್ಲಿ ಮೋಸ ಮಾಡೋಕೆ ಆಗಲ್ಲ..!

|

ದೇಶಿಯ ಮಾರುಕಟ್ಟೆಯಲ್ಲಿ ಇ ಕಾಮರ್ಸ್ ಸೈಟುಗಳು ಆರ್ಭಟವು ಅಧಿಕವಾಗಿದ್ದು, ದಿನನಿತ್ಯದ ಆಹಾರ ಪದಾರ್ಥಗಳ ಬಳಕೆಯಿಂದ ಹಿಡಿದು, ಮನೆಕಟ್ಟುವ ಸಾಮಾಗ್ರಿಗಳು ಇಂದು ಆನ್‌ಲೈನಿನಲ್ಲಿ ದೊರೆಯುತ್ತಿದೆ. ಈ ಹಿನ್ನಲೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಜನರು ಮೋಸ ಹೋಗುವುದು ಸಾಮಾನ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಲು ಸರಕಾರ ಮುಂದಾಗಿದೆ ಎನ್ನಲಾಗಿದೆ.

ಅಮೆಜಾನ್-ಫ್ಲಿಪ್‌ಕಾರ್ಟ್‌ ಆಫರ್ ಹೆಸರಿನಲ್ಲಿ ಮೋಸ ಮಾಡೋಕೆ ಆಗಲ್ಲ..!

ಓದಿರಿ: ಹೊಸ ವರ್ಷಕ್ಕೆ ಸರ್ಪ್ರೈಸ್ ಕೊಟ್ಟ ಏರ್‌ಟೆಲ್: ಜಿಯೋ ಬಿಡಿ, ಪ್ರತಿ ನಿತ್ಯ 3.5GB 4G ಡೇಟಾ ಇಲ್ಲಿದೇ ನೋಡಿ..!

ಇನ್ನು ಮುಂದೆ ಎಲ್ಲಾ ಆನ್‌ಲೈನ್ ಶಾಪಿಂಗ್‌ ತಾಣಗಳು ಉದಾ: ಅಮೆಜಾನ್, ಫ್ಲಿಪ್‌ಕಾರ್ಟ್, ಮಿಂತ್ರಾ ಮತ್ತು ಈಬೇ ಇತರೆ ಸೈಟುಗಳು ತಾವು ಮಾರಾಟ ಮಾಡುವ ಪ್ರತಿ ಪದಾರ್ಥಗಳ MRP ಮ್ಯಾಕ್ಸಿಮಮ್ ರಿಟೇಲ್ ಪ್ರೈಸ್, ಪದಾರ್ಥಗಳ ಎಕ್ಸ್ ಪೈರಿ ಡೇಟ್ ಅನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದೆ.

ಓದಿರಿ: ಬಾಂಡ್ ತರ ನೀವು ಕಾರಿನಲ್ಲಿ ಹಾರಿ: ಬೆಲೆ ಕೇಳಿ ಶಾಕ್ ಆಗಬೇಡಿ ಅಷ್ಟೆ..!

2018 ಜನವರಿ 1:

2018 ಜನವರಿ 1:

2018 ಜನವರಿ 1 ನೇ ತಾರೀಖಿನಿಂದಲೇ ತಮ್ಮ ವೆಬ್‌ ಸೈಟ್‌ಗಳಲ್ಲಿ ಪ್ರತಿ ಪದಾರ್ಥಗಳ MRP ಮ್ಯಾಕ್ಸಿಮಮ್ ರಿಟೇಲ್ ಪ್ರೈಸ್ ಅನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸುವಂತೆ ಗ್ರಾಹಕ ವ್ಯವಹಾರಗಳ ಇಲಾಖೆ ಇ-ಕಾಮರ್ಸ್ ಸೈಟ್‌ಗಳಿಗೆ ನೋಟಿಸ್ ನೀಡಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಅಮೆಜಾನ್-ಫ್ಲಿಪ್‌ಕಾರ್ಟ್ ಗಳು ಆಕರ್ಷಕ ಆಫರ್ ಮೂಲಕ ಗ್ರಾಹಕರನ್ನು ಯಾಮಾರಿಸಲು ಸಾಧ್ಯವಿಲ್ಲ ಎನ್ನಲಾಗಿದೆ.

ಅಮೆಜಾನ್ ಶುರು ಮಾಡಿದೆ:

ಅಮೆಜಾನ್ ಶುರು ಮಾಡಿದೆ:

ಈಗಾಗಲೇ ಗ್ರಾಹಕ ವ್ಯವಹಾರಗಳ ಇಲಾಖೆ ನೀಡಿರುವ ನೋಟಿಸ್‌ ಸಲುವಾಗಿ ಅಮೆಜಾನ್ ತನ್ನ ವೆಬ್‌ ಸೈಟಿನಲ್ಲಿ ಪ್ರತಿ ಪದಾರ್ಥಗಳ MRP ಮ್ಯಾಕ್ಸಿಮಮ್ ರಿಟೇಲ್ ಪ್ರೈಸ್ ಅನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿದೆ. ಆದರೆ ಫ್ಲಿಪ್‌ಕಾರ್ಟ್, ಮಿಂತ್ರಾ, ಜಬಾಂಗ್ ಸೈಟ್‌ಗಳು ಇನ್ನು MRP ಮ್ಯಾಕ್ಸಿಮಮ್ ರಿಟೇಲ್ ಪ್ರೈಸ್ ಅನ್ನು ಪ್ರದರ್ಶಿಸುತ್ತಿಲ್ಲ ಎನ್ನಲಾಗಿದೆ.

ಪದಾರ್ಥಗಳ ಎಕ್ಸ್ ಪೈರಿ ಡೇಟ್:

ಪದಾರ್ಥಗಳ ಎಕ್ಸ್ ಪೈರಿ ಡೇಟ್:

ಇದಲ್ಲದೇ ಎಲ್ಲಾ ಇ-ಕಾರ್ಮಸ್ ಸೈಟ್‌ಗಳು ತಾವು ಮಾರಾಟಕ್ಕೆ ಇಟ್ಟಿರುವ ಪದಾರ್ಥಗಳ ಎಕ್ಸ್ ಪೈರಿ ಡೇಟ್ ಅನ್ನು ಪ್ರದರ್ಶಿಸುವುದನ್ನು ಕಡ್ಡಾಯ ಎಂದು ಗ್ರಾಹಕ ವ್ಯವಹಾರಗಳ ಇಲಾಖೆ ತಿಳಿಸಿದ್ದು, ಇದು ಸಹ ಜನವರಿ 1 ರಿಂದಲೇ ಜಾರಿಗೆ ಬರಲಿದೆ.

ಭಿನ್ನ ರೆಟ್‌ಗಳು ಇರುವಂತೆ ಇಲ್ಲ:

ಭಿನ್ನ ರೆಟ್‌ಗಳು ಇರುವಂತೆ ಇಲ್ಲ:

ಇದಲ್ಲದೇ ಒಂದೇ ಪದಾರ್ಥದ ಬೆಲೆ ಒಂದೇ ಸೈಟಿನಲ್ಲಿ ಬೇರೆ ಬೇರೆ ಇರುವುದನ್ನು ನಾವಿಂದು ಕಾಣಬಹುದಾಗಿದೆ. ಇದಕ್ಕೆ ಎಚ್ಚರಿಕೆ ನೀಡಿರುವ ಸರಕಾರ, ಇನ್ನು ಮುಂದೆ ಯಾವುದೇ ಪದಾರ್ಥಕ್ಕೆ ಎರಡು ಭಿನ್ನ ಬೆಲೆಗಳನ್ನು ನಿಗಧಿ ಮಾಡವ ಹಾಗಿಲ್ಲ ಎನ್ನಲಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಮೂರು ವಿಚಾರಗಳು:

ಮೂರು ವಿಚಾರಗಳು:

ಗ್ರಾಹಕ ವ್ಯವಹಾರಗಳ ಇಲಾಖೆ ನೀಡಿರುವ ನೋಟಿಸ್‌ನಲ್ಲಿ ಮೂರು ವಿಚಾರಗಳ ಬಗ್ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ.

  • ಇ-ಕಾಮರ್ಸ್ ಸೈಟ್ ಗಳು ಗ್ರಾಹಕರಿಗೆ ತಿಳಿಯುವಂತೆ MRP ಯನ್ನು ಪ್ರದರ್ಶಿಸಬೇಕು
  • ಮಾನವ ಬಳಕೆಗಾಗಿ ಉತ್ಪನ್ನಗಳ (ಆಹಾರ, ವೈದ್ಯಕೀಯ ಉತ್ಪನ್ನಗಳು, ಸೌಂದರ್ಯವರ್ಧಕಗಳು) ಎಕ್ಸ್ ಪೈರಿ ಡೇಟ್ ಅನ್ನು ಪ್ರದರ್ಶಿಸಬೇಕು
  • ಒಂದೇ ಉತ್ಪನ್ನದ ಭಿನ್ನ ಭಿನ್ನ ಪ್ಯಾಕೇಜ್‌ಗೆ ಎರಡು ವಿಭಿನ್ನ MRP ಗಳನ್ನು ನೀಡುವಂತೆ ಇಲ್ಲ

Best Mobiles in India

English summary
Flipkart, Amazon, others to display MRP, expiry date of products from today. to know more visit kannada.gibot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X