ಪ್ಯಾರೀಸ್ ದಾಳಿಗೆ ಪ್ಲೇಸ್ಟೇಶನ್ ಮೂಲಕ ಸಂಚು ರೂಪಿಸಿದ ಉಗ್ರರು

By Shwetha
|

ವಿಶ್ವದಲ್ಲಿ ಇತ್ತೀಚೆಗೆ ಭೀಕರ ಕ್ರಿಯೆಗಳು ನಡೆಯುತ್ತಿದ್ದು ಮಾನವ ಸಂಕುಲಕ್ಕೆ ವಿನಾಶದ ಮುನ್ಸೂಚನೆಯಾಗಿ ಇದು ಮಾರ್ಪಟ್ಟಿದೆ. ಉಗ್ರದ ದಾಳಿಗೆ ಸಿಲುಕಿ ನಲುಗುತ್ತಿರುವ ಜೀವಗಳ ಹೃದಯವಿದ್ರಾವಕ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿದೆ. ಫ್ರಾನ್ಸ್ ರಾಜಧಾನಿ ಪ್ಯಾರೀಸ್‌ನಲ್ಲಿ ನಡೆದ 129 ಜನರ ಮಾರಣ ಹೋಮ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಏನೂ ತಪ್ಪು ಮಾಡದ ಮುಗ್ಧ ಜನರು ಬಲಿಯಾಗಿದ್ದು ಮಾತ್ರವಲ್ಲದೆ ತಮ್ಮ ಆಪ್ತರನ್ನು ದುಃಖದ ಮಡುವಿಗೆ ನೂಕಿದ್ದಾರೆ.

ಓದಿರಿ: ಸೌರವ್ಯವಸ್ಥೆಯ ಹೊರಗೆ ಭೂಮಿಯನ್ನೇ ಹೋಲುವ ಬಿಸಿ ಗ್ರಹ

300 ಜನರು ಗಾಯಗೊಂಡು ಅದರಲ್ಲೂ 99 ಜನರು ಆಸ್ಪತ್ರೆಯಲ್ಲಿ ಚಿಂತಾಜನಕರಾಗಿದ್ದಾರೆ. ಈ ಕೃತ್ಯದ ಹಿಂದೆ ಐಎಸ್ಐಸ್ ಉಗ್ರರ ಕೈವಾಡವಿದ್ದು ಮಾರಣ ಹೋಮ ನಡೆಸಿದ ಉಗ್ರರು ಹತರಾಗಿದ್ದಾರೆ. ಇನ್ನು ಈ ಉಗ್ರರು ಈ ಕೃತ್ಯ ನಡೆಸುವ ಯೋಜನೆಯನ್ನು ಯಾವುದರ ಮೂಲಕ ಮಾಡಿದ್ದಾರೆ ಎಂಬ ಅಂಶವನ್ನು ನೀವು ಗಮನಿಸಿದರೆ ನಿಜಕ್ಕೂ ನೀವು ಹುಬ್ಬೇರಿಸುವುದು ಖಂಡಿತ. ಬನ್ನಿ ಇಂದಿನ ಲೇಖನದಲ್ಲಿ ಕೃತ್ಯಕ್ಕೆ ತಂತ್ರಜ್ಞಾನ ಹೇಗೆ ಸಹಾಯ ಮಾಡಿದೆ ಎಂಬ ಅಂಶವನ್ನು ತಿಳಿದುಕೊಳ್ಳೋಣ

ಸಂವಹನ ಪರಿಕರ

ಸಂವಹನ ಪರಿಕರ

ಉಗ್ರರು ಪ್ಲೇಸ್ಟೇಶನ್ 4 ಅನ್ನು ಬಳಸಿ ಸಂವಹನವನ್ನು ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಸುರಕ್ಷಿತ ಆಯ್ಕೆ

ಸುರಕ್ಷಿತ ಆಯ್ಕೆ

ಮೂಲಗಳ ಪ್ರಕಾರ ಪ್ಲೇಸ್ಟೇಶನ್ 4 ಹೆಚ್ಚು ಸುರಕ್ಷಿತ ಉಪಕರಣ ಎಂಬ ಕಾರಣಕ್ಕಾಗಿ ಉಗ್ರರು ಇದನ್ನು ಬಳಸಿದ್ದಾರೆ ಎಂದು ಹೇಳಲಾಗಿದೆ.

ಐಪಿ ಆಧಾರಿತ ಧ್ವನಿ ಸಂವಹನ

ಐಪಿ ಆಧಾರಿತ ಧ್ವನಿ ಸಂವಹನ

ಪ್ಲೇಸ್ಟೇಶನ್ 4 ನಲ್ಲಿ ಐಪಿ ಆಧಾರಿತ ಧ್ವನಿ ಸಂವಹನವನ್ನು ಒದಗಿಸಿರುವುದರಿಂದ ಇದನ್ನು ಉಗ್ರರು ತಮ್ಮ ಯೋಜನೆಗೆ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಸೀಜ್ ಮಾಡಲಾಗಿದೆ

ಸೀಜ್ ಮಾಡಲಾಗಿದೆ

ಉಗ್ರರು ಬಳಸಿದ್ದರು ಎನ್ನಲಾದ ಪ್ಲೇಸ್ಟೇಶನ್ 4 ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ನೆಟ್‌ವರ್ಕ್‌ಗಳ ಬಳಕೆಯಿಂದ ಉಗ್ರರು ತಮ್ಮ ಕೆಲಸವನ್ನು ಸುಲಭವಾಗಿ ನೆರವೇರಿಸಿಕೊಂಡಿದ್ದಾರೆ.

ಬಿಲ್ಟ್ ಇನ್ ಆಯ್ಕೆಗಳು

ಬಿಲ್ಟ್ ಇನ್ ಆಯ್ಕೆಗಳು

ಗೇಮಿಂಗ್ ಕನ್ಸೋಲ್‌ಗಳಲ್ಲಿ ಈ ತಂತ್ರಗಾರಿಕೆಯನ್ನು ಬಳಸಿಕೊಳ್ಳಲಾಗುತ್ತಿದ್ದು ಎಲ್ಲದರಲ್ಲೂ ಇದನ್ನು ಪತ್ತೆಹಚ್ಚುವುದು ಅತಿ ಕಷ್ಟಸಾಧ್ಯವಾಗಿದೆ.

ವಾಯ್ಸ್ ಚಾಟ್

ವಾಯ್ಸ್ ಚಾಟ್

ವಾಯ್ಸ್ ಚಾಟ್, ಮೆಸೇಜ್ ರವಾನೆ ಮೊದಲಾದ ಕ್ರಿಯೆಗಳನ್ನು ಗೇಮಿಂಗ್ ಕನ್ಸೋಲ್‌ಗಳನ್ನು ಬಳಸಿ ನಡೆಸಬಹುದು ಎನ್ನಲಾಗಿದೆ.

ಸಾಮಾಜಿಕ ವಿಧಾನ

ಸಾಮಾಜಿಕ ವಿಧಾನ

ಮುಕ್ತವಾಗಿರುವ ಮತ್ತು ಸಾಮಾಜಿಕವಾಗಿ ಬಳಸಿಕೊಳ್ಳಬಹುದಾದ ವಿಧಾನಗಳನ್ನೇ ಅನುಸರಿಸಿ ಉಗ್ರರು ತಮ್ಮ ಯೋಜನೆಗಳನ್ನು ನಡೆಸುತ್ತಿದ್ದಾರೆ. ಯಾವುದೇ ಅಡೆತಡೆಗಳು ಉಂಟಾಗದ ಸರಳ ವಿಧಾನವನ್ನೇ ಇವರು ಬಳಸಿಕೊಳ್ಳುತ್ತಿದ್ದಾರೆ.

ಹೆಚ್ಚು ಸ್ವತಂತ್ರ

ಹೆಚ್ಚು ಸ್ವತಂತ್ರ

ವಿಶ್ವದಲ್ಲಿ ಹೆಚ್ಚು ಸ್ವತಂತ್ರ ಎಂದೆನಿಸಿರುವ ತಂತ್ರಜ್ಞಾನ ವಿಧಾನಗಳ ಮೇಲೆ ಕಣ್ಣಿಟ್ಟು ಅವುಗಳನ್ನು ಉಗ್ರರು ಹೆಚ್ಚು ಬಳಸದಂತೆ ನೋಡಿಕೊಳ್ಳುವುದೇ ಇದನ್ನು ತಡೆಯುವ ಉಪಾಯವಾಗಿದೆ.

ಉಗ್ರರ ಚಟುವಟಿಕೆ

ಉಗ್ರರ ಚಟುವಟಿಕೆ

ಜನರು ಹೆಚ್ಚು ಬಳಸುವ ತಂತ್ರಜ್ಞಾನ ಪರಿಕರಗಳನ್ನೇ ಉಗ್ರರು ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿರುವುದು ತನಿಖೆಯ ದಿಕ್ಕನ್ನು ಬದಲಾಯಿಸುವ ಹುನ್ನಾರವಾಗಿದೆ.

ಅಸಂಖ್ಯಾತ ಮುಗ್ಧರ ಮಾರಣ ಹೋಮ

ಅಸಂಖ್ಯಾತ ಮುಗ್ಧರ ಮಾರಣ ಹೋಮ

ನಾವು ಯೋಚಿಸದೇ ಇರುವ ವಿಧಾನಗಳನ್ನು ಬಳಸಿ ಉಗ್ರರು ಅಸಂಖ್ಯಾತ ಮುಗ್ಧರ ಮಾರಣ ಹೋಮ ನಡೆಸುತ್ತಿದ್ದು ತಂತ್ರಜ್ಞಾನದ ವಿಚಾರಗಳನ್ನು ವಿನಾಶಕಾರಿ ಕೃತ್ಯಗಳಿಗಾಗಿ ಉಪಯೋಗಿಸುತ್ತಿದ್ದಾರೆ.

Most Read Articles
Best Mobiles in India

English summary
The horrific terrorist attacks in Paris on Friday saw 129 people killed, well over 300 people injured, and 99 of those remain in a critical condition in hospital. It’s being suggested that the communication tool of choice was the PlayStation 4.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X