ತಪ್ಪದೇ IPL ನೋಡ್ತೀರಾ?..ಹಾಗಿದ್ರೆ ನಿಮಗಿದೆ ಫೋನ್ ಹಾಗೂ ಫ್ರಿ ಟಿಕೆಟ್ ಗೆಲ್ಲುವ ಚಾನ್ಸ್!
ಭಾರತದ ಅಚ್ಚುಮೆಚ್ಚಿನ IPL ಟಿ20 (T20) ಕ್ರಿಕೆಟ್ ಪಂದ್ಯಾವಳಿಗಳು ಈಗಾಗಲೇ ಪ್ರಾರಂಭವಾಗಿದ್ದು, ಮನಮೋಹಕ ಕ್ಷಣಗಳನ್ನು ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ಅಭಿಮಾನಿಗಳು ಐಪಿಎಲ್‌ನ ಕೆಲವು ಸುಲಭ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಸ್ಮಾರ್ಟ್‌ಫೋನ್ ಹಾಗೂ ಫೈನಲ್ ಟಿಕೆಟ್ ಗೆಲ್ಲಬಹುದಾಗಿದೆ. ಇದಕ್ಕೆ ವಿ ಟೆಲಿಕಾಂ ವೇದಿಕೆ ಮಾಡಿಕೊಟ್ಟಿದೆ.
ಹೌದು, ದೇಶದ ಪ್ರಮುಖ ಟೆಲಿಕಾಂಗಳಲ್ಲಿ ಒಂದಾದ ಬ್ರಾಂಡ್ ವಿ ಟೆಲಿಕಾಂ ಫ್ಯಾನ್‌ಫೆಸ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ, ಫೋನ್ ಗೆಲ್ಲಬಹುದು ಹಾಗೂ ಬಂಫರ್ ಬಹುಮಾನವಾಗಿ IPL ಫೈನಲ್ ಮ್ಯಾಚ್ ನೇರವಾಗಿ ವೀಕ್ಷಿಸಲು 2 ಟಿಕೆಟ್ ಗೆಲ್ಲುವ ಅವಕಾಶಿದೆ. ವಿ ಗ್ರಾಹಕರು ತೀವ್ರ ಪೈಪೋಟಿಯಿಂದ ಕೂಡಿದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಬಹುಮಾನಗಳನ್ನು ಗೆಲ್ಲುವ ಕಾಲವೂ ಇದಾಗಿದೆ.

ಪ್ರತಿ ಪಂದ್ಯದ ದಿನ, ಒಂದು ಸ್ಮಾರ್ಟ್‌ಫೋನ್ ಗೆಲ್ಲುವ ಅವಕಾಶ ನೀಡುವ ವಿಐ20 ಫ್ಯಾನ್ ಫೆಸ್ಟ್‌ನಲ್ಲಿ (Vi20 FANfest) ಭಾಗವಹಿಸಲು ವಿ ಟೆಲಿಕಾಂ ತನ್ನ ಗ್ರಾಹಕರನ್ನು ಆಹ್ವಾನಿಸುತ್ತದೆ. ಎರಡು ತಿಂಗಳ ಈ ಸ್ಪರ್ಧೆಯಾದ್ಯಂತ ನಾವು ಪ್ರತಿ ದಿನದ ವಿಜೇತರನ್ನು ಸ್ಮಾರ್ಟ್‌ಫೋನ್ ಮೂಲಕ ಸನ್ಮಾನಿಸುತ್ತೇವೆ. ಅಲ್ಲದೆ, ಟಿ20 ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವನ್ನು ನೇರವಾಗಿ ಆಸ್ವಾದಿಸಲು ಮೆಗಾ ವಿಜೇತರು 2 ಟಿಕೆಟ್ ಗಳನ್ನು ಪಡೆಯುವ ಸುವರ್ಣಾವಕಾಶವೂ ಇದೆ.
ವಿ ಟೆಲಿಕಾಂ ಗ್ರಾಹಕರು ವಿಐ20ಫ್ಯಾನ್‌ಫೆಸ್ಟ್ ಸವಾಲನ್ನು ಪಂದ್ಯಗಳ ಅವಧಿಯಲ್ಲಿ ವಿಐ ಫೇಸ್‌ಬುಕ್ ಪೇಜ್ @ViOfficialFanWorld, ವಿಐ ಇನ್‌ಸ್ಟಾಗ್ರಾಂ ಪೇಜ್ viofficialfanworld, ಮತ್ತು ವಿಐ ಟ್ವಿಟರ್ ಪೇಜ್ @ViCustomerCare ಇಲ್ಲಿ ಆಡಬಹುದು. ಭಾಗವಹಿಸುವವರು '#Vi20FANfest' ಹ್ಯಾಶ್‌ಟ್ಯಾಗ್ ನೊಂದಿಗೆ ಪ್ರತಿದಿನ ಸರಳ ಪ್ರಶ್ನೆಗಳಿಗೆ ಉತ್ತರ ನೀಡಬೇಕು. ಪ್ರತಿ ಪಂದ್ಯಕ್ಕೆ ಒಟ್ಟು 20 ಪ್ರಶ್ನೆಗಳಿರುತ್ತವೆ.
ಭಾಗವಹಿಸಿದವರ ಪೈಕಿ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದವರನ್ನು ಕಂಪ್ಯೂಟರೀಕೃತ ಲೆಕ್ಕಾಚಾರದ ಆಧಾರದಲ್ಲಿ ವಿಜೇತರಾದ ಒಬ್ಬರಿಗೆ ಸ್ಮಾರ್ಟ್‌ಫೋನ್ ನೀಡಲಾಗುತ್ತದೆ ಹಾಗೂ ಸೀಸನ್‌ನಲ್ಲಿ ಅತಿ ಹೆಚ್ಚು ಸರಿ ಉತ್ತರ ಕೊಟ್ಟ ಭಾಗಿದಾರ ಫೈನಲ್‌ಗೆ ಟಿಕೆಟ್ ಗಳನ್ನು ಗೆಲ್ಲುತ್ತಾರೆ.

ಇಷ್ಟು ಮಾತ್ರವಲ್ಲದೆ, ಪ್ರತಿ ದಿನದ ವಿಜೇತರ ಹೆಸರು ಮತ್ತು ಭಾವಚಿತ್ರವನ್ನು ವಿ ಟೆಲಿಕಾಂನ ಅಧಿಕೃತ ಸಾಮಾಜಿಕ ಮಾಧ್ಯಮ ಪೇಜ್‌ಗಳಲ್ಲಿ ಪ್ರಕಟಿಸಲಾಗುತ್ತದೆ. ಆದ್ದರಿಂದ ನೀವು ವಿಐ ಗ್ರಾಹಕರಾಗಿದ್ದರೆ ಈ ವಿಐ 20 ಫ್ಯಾನ್‌ಫೆಸ್ಟ್ (#Vi20FANfest) ನಿಮಗೊಂದು ಸೂಕ್ತವಾದ ತಾಣವಾಗಿದೆ.
ವಿಐ20ಫ್ಯಾನ್‌ಫೆಸ್ಟ್ ಸ್ಪರ್ಧೆಯ ಬಗ್ಗೆ ಹೆಚ್ಚು ವಿವರ ತಿಳಿಯಲು ವಿ ಟೆಲಿಕಾಂನ ಅಧಿಕೃತ ಫೇಸ್‌ಬುಕ್ ಪೇಜ್, ವಿ ಟೆಲಿಕಾಂನ ಅಧಿಕೃತ ಇನ್‌ಸ್ಟಾಗ್ರಾಂ ಪೇಜ್ ಅಥವಾ ಅಧಿಕೃತ ಟ್ವಿಟರ್‌ಗೆ ಈಗಲೇ ಲಾಗ್ ಆನ್ ಆಗಿರಿ. ಅಂದಹಾಗೆ ವಿಐ20ಫ್ಯಾನ್‌ಫೆಸ್ಟ್ ಸ್ಪರ್ಧೆ 2023 ಮೇ 28ರ ವರೆಗೆ ಮಾತ್ರ ಸಿಂಧುವಾಗಿರುತ್ತದೆ.
ವಿ ಟೆಲಿಕಾಂನ ಜನಪ್ರಿಯ ವಾರ್ಷಿಕ ಯೋಜನೆಯ ಮಾಹಿತಿ : ವಿ ಟೆಲಿಕಾಂನ 3099ರೂ. ಪ್ರೀಪೇಯ್ಡ್ ಪ್ಲಾನ್ ವಾರ್ಷಿಕ ಅವಧಿಯ ಯೋಜನೆ ಆಗಿದ್ದು, ಈ ಪ್ಲ್ಯಾನ್ 365 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ. ಹಾಗೆಯೇ ಪ್ರತಿದಿನ 2 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿವೆ.
ವಿ ಸೇರಿದಂತೆ ಇತರೆ ನೆಟವರ್ಕ್ ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹಾಗೆಯೇ ಪ್ರತಿದಿನ 100 ಎಸ್ಎಮ್ಎಸ್ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 730 GB ಡೇಟಾ ಪ್ರಯೋಜನ ಸಿಗಲಿದ್ದು, ಜೊತೆಗೆ ವಿಕೆಂಡ್ ಡೇಟಾ ರೋಲ್ ಓವರ್ ಸೌಲಭ್ಯ ಲಭ್ಯ.


Click it and Unblock the Notifications








