ಟೆಲಿಕಾಂ ಕ್ಷೇತ್ರಕ್ಕೂ ಪತಂಜಲಿ ಲಗ್ಗೆ!.. 144 ರೂ.ಗೆ ಅನ್‌ಲಿಮಿಟೆಡ್ ಆಫರ್!!
ಭಾರತದ ಅತ್ಯಂತ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದ ಆದ ಕೆಲವೇ ದಿನಗಳಲ್ಲಿ ಪತಂಜಲಿ ಕಂಪೆನಿ ಭಾರತದ ಟೆಲಿಕಾಂ ವಲಯಕ್ಕೆ ಪ್ರವೇಶಿಸಿದೆ.
ಭಾರತದ ಅತ್ಯಂತ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದ ಆದ ಕೆಲವೇ ದಿನಗಳಲ್ಲಿ ಪತಂಜಲಿ ಕಂಪೆನಿ ಭಾರತದ ಟೆಲಿಕಾಂ ವಲಯಕ್ಕೆ ಪ್ರವೇಶಿಸಿದೆ. ಹೌದು, ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಭಾನುವಾರ ಟೆಲಿಕಾಂ ವಲಯಕ್ಕೆ ಪ್ರವೇಶಿಸಿ ತನ್ನದೇ ಸಿಮ್ ಅನ್ನು ಬಿಡುಗಡೆ ಮಾಡಿದೆ.!!
ಉತ್ತರಾಖಂಡ್‌ನ ಹರಿದ್ವಾರದಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ಯೋಗಗುರು ರಾಮ್‌ದೇವ್ ಅವರು 'ಸ್ವದೇಶಿ ಸಮೃದ್ಧಿ' ಸಿಮ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದ್ದಾರೆ. 144 ರೂಪಾಯಿ ರಿಚಾರ್ಜ್ ಮಾಡಿಸಿದರೆ ಪ್ರತಿತಿಂಗಳು ಅನ್‌ಲಿಮಿಟೆಡ್ ಕರೆಗಳನ್ನು ಹೊಂದಿರುವ ಆಫರ್ ಮೂಲಕ ಪತಂಜಲಿ 'ಸ್ವದೇಶಿ ಸಮೃದ್ಧಿ' ಸಿಮ್ ಜಿಯೋಗೆ ಟಾಂಗ್ ನೀಡಿದೆ.

ವಿಶೇಷವೆಂದರೆ ಆರೋಗ್ಯ ಮತ್ತು ಅಪಘಾತ ಹಾಗೂ ಜೀವ ವಿಮೆ ಸಹ 'ಸ್ವದೇಶಿ ಸಮೃದ್ಧಿ' ಸಿಮ್ ಗ್ರಾಹಕರಿಗೆ ದೊರೆಯಲಿದೆ. ಹಾಗಾದರೆ, ಪತಂಜಲಿ ಕಂಪೆನಿ ಭಾರತದ ಟೆಲಿಕಾಂ ವಲಯಕ್ಕೆ ಪ್ರವೇಶಿಸಿರುವುದು ಹೇಗೆ? ಪತಂಜಲಿ 'ಸ್ವದೇಶಿ ಸಮೃದ್ಧಿ' ಸಿಮ್ ಹೇಗಿದೆ? ಸಿಮ್ ಖರೀದಿಸಿದರೆ ಸಿಗುವ ಆಫರ್‌ಗಳು ಯಾವುವು ಎಂಬುದೆಲ್ಲವನ್ನು ಮುಂದೆ ತಿಳಿಯಿರಿ.

'ಸ್ವದೇಶಿ ಸಮೃದ್ಧಿ' ಸಿಮ್!!
ಸ್ವದೇಶಿ ಅಜೆಂಡಾವನ್ನು ಹಿಡಿದು ವ್ಯಾಪಾರವನ್ನು ಮಾಡುತ್ತಿರುವ ವಿಶ್ವಾಸಾರ್ಹ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್ ಬ್ರಾಂಡ್ ಪತಂಜಲಿ ಈಗ ದೇಶೀಯ ಮಾದರಿಯ 'ಸ್ವದೇಶಿ ಸಮೃದ್ಧಿ' ಸಿಮ್ ಅನ್ನು ಪರಿಚಯಿಸಿದೆ. ಪತಂಜಲಿ ಹೇಳಿರುವಂತೆ ಈ 'ಸ್ವದೇಶಿ ಸಮೃದ್ಧಿ' ಸಿಮ್ ಈ ದೇಶದ ಕಲ್ಯಾಣಕ್ಕಾಗಿ ಹೊರತಂದಿದೆಯಂತೆ.

ಸಿಮ್ ಜೊತೆ ಆರೋಗ್ಯ ವಿಮೆ!!
'ಸ್ವದೇಶಿ ಸಮೃದ್ಧಿ' ಸಿಮ್ ಗ್ರಾಹಕರಿಗೆ ಆರೋಗ್ಯ ಮತ್ತು ಅಪಘಾತ ಹಾಗೂ ಜೀವ ವಿಮೆಯನ್ನು ಪತಂಜಲಿ ಒದಗಿಸಲು ಮುಂದಾಗಿದೆ. 'ಸ್ವದೇಶಿ ಸಮೃದ್ಧಿ' ಸಿಮ್ ಖರೀದಿಸಿದ ಗ್ರಾಹಕರಿಗೆ 2.5ಲಕ್ಷ ಮತ್ತು 5 ಲಕ್ಷ ರೂಪಾಯಿಗಳ ವೈದ್ಯಕೀಯಮತ್ತು ಜೀವ ವಿಮೆಯನ್ನು ಹೊಂದಿದೆ ಎಂದು ಯೋಗಗುರು ರಾಮ್‌ದೇವ್ ಅವರು ವಿವರಿಸಿದ್ದಾರೆ.

ಬಿಎಸ್‌ಎನ್‌ಎಲ್ ಜೊತೆಗೆ ಒಪ್ಪಂದ!!
ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯು ಭಾರತೀಯ ಸರ್ಕಾರಿ ನಿಯಮಿತ ಟೆಲಿಕಾಂ ಸಂಸ್ಥೆ ಬಿಎಸ್‌ಎನ್‌ಎಲ್ ಜೊತೆಗೆ ಒಪ್ಪಂದ ಮಾಡಿಕೊಂಡು ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದೆ. ಬಿಎಸ್‌ಎನ್‌ಎಲ್ ಸ್ವದೇಶಿ ನೆಟ್‌ವರ್ಕ್ ಆಗಿದ್ದು, ಬಿಎಸ್‌ಎನ್‌ಎಲ್ ಮತ್ತು ಪತಂಜಲಿ ಎರಡೂ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿವೆ ಎಂದು ರಾಮ್‌ದೇವ್ ಹೇಳಿದ್ದಾರೆ.

144 ರೂ.ಗೆ ಅನ್‌ಲಿಮಿಟೆಡ್ ಆಫರ್!!
ಯೋಗಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಹಾಗೂ ಬಿಎಸ್‌ಎನ್‌ಎಲ್ ಸಂಸ್ಥೆಗಳು ಸೇರಿ 'ಸ್ವದೇಶಿ ಸಮೃದ್ಧಿ' ಸಿಮ್ ಬಳಕೆದಾರರಿಗೆ ಉತ್ತಮ ರೀಚಾರ್ಜ್ ಪ್ಲಾನ್ ಅನ್ನು ನೀಡಿವೆ. ಕೇವಲ 144 ರೂಪಾಯಿ ರಿಚಾರ್ಜ್ ಮಾಡಿಸಿದರೆ ಪ್ರತಿ ತಿಂಗಳು ದೇಶಾದ್ಯಂತ ಅನ್‌ಲಿಮಿಟೆಡ್ ಉಚಿತ ಕರೆಗಳು, 100 ಎಸ್‌ಎಮ್‌ಎಸ್‌ಗಳು ಮತ್ತು 2 ಜಿಬಿ ಡೇಟಾ ಪಡೆಯಬಹುದು.

'ಸ್ವದೇಶಿ ಸಮೃದ್ಧಿ' ಸಿಮ್ ಖರೀದಿ ಹೇಗೆ?
'ಸ್ವದೇಶಿ ಸಮೃದ್ಧಿ' ಸದ್ಯ ಈ ಸಿಮ್ ಕಾರ್ಡ್‌ಗಳು ನೌಕರರು ಮತ್ತು ಕಚೇರಿ ಪದಾಧಿಕಾರಿಗಳಿಗೆ ಮಾತ್ರ ಲಭ್ಯವಾಗಲಿದೆ. ಶೀಘ್ರದಲ್ಲಿಯೇ ಬಿಎಸ್‌ಎನ್‌ಎಲ್‌ನ ಐದು ಲಕ್ಷ ಕೌಂಟರ್‌ಗಳಲ್ಲಿ 'ಸ್ವದೇಶಿ ಸಮೃದ್ಧಿ' ಸಿಮ್ ಅನ್ನು ಜನತೆ ಪಡೆಯಹುದು ಎಂದು ಬಿಎಸ್‌ಎನ್‌ಎಲ್ ಸಂಸ್ಥೆಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದೇಶದ ಕಲ್ಯಾಣಕ್ಕಾಗಿ!
ಬಿಎಸ್‌ಎನ್‌ಎಲ್ ಸ್ವದೇಶಿ ನೆಟ್‌ವರ್ಕ್ ಆಗಿದ್ದು, ಬಿಎಸ್‌ಎನ್‌ಎಲ್ ಮತ್ತು ಪತಂಜಲಿ ಎರಡೂ ದೇಶದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿವೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ. ಮುಂದೆ ಪೂರ್ಣದಲ್ಲಿ ಸಿಮ್ ಕಾರ್ಡ್‌ಗಳ ಲಾಂಚ್ ಆದಲ್ಲಿ ಗ್ರಾಹಕರು ಪತಂಜಲಿ ಉತ್ಪನ್ನಗಳ ಮೇಲೆ ಶೇ.10ರಷ್ಟು ವಿನಾಯಿತಿ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಹೆಚ್ಚು ಓದಿದ ಲೇಖನ: ಭಾರತದಲ್ಲಿ ನಿಜವಾದ ಭಾರತೀಯರು ಇನ್ಮುಂದೆ 'ಜಿಪಿಎಸ್' ಅನ್ನು ಬಳಸುವುದಿಲ್ಲ!!..ಏಕೆ ಗೊತ್ತಾ?


Click it and Unblock the Notifications








