Just In
- 1 hr ago
ರೈಲ್ವೆ 'ಗ್ರೂಪ್ ಡಿ' ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 'ವಿ ಟೆಲಿಕಾಂ'ನಿಂದ ಸಿಹಿಸುದ್ದಿ!
- 12 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- 16 hrs ago
ಭಾರತದಲ್ಲಿ ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಲಾಂಚ್ ಡೇಟ್ ಫಿಕ್ಸ್!
- 16 hrs ago
ಲಾಂಚ್ಗೆ ಸಜ್ಜಾಗಿದೆ 'ಮೊಟೊರೊಲಾ ರೇಜರ್'!..ಗ್ಯಾಲಕ್ಸಿ Z ಫೋಲ್ಡ್ 4ಗೆ ಟಾಂಗ್!
Don't Miss
- Finance
ವಿಐ App ಬಳಸಿ ರೈಲ್ವೆಯ ಗ್ರೂಪ್ ಡಿ ಪರೀಕ್ಷೆಗೆ ಸಿದ್ಧತೆ ಹೇಗೆ?
- Movies
ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ
- Lifestyle
ಉಪ್ಪಿನಕಾಯಿ ರುಚಿಗ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ!
- News
Breaking: ಭಯೋತ್ಪಾದಕ ದಾಳಿ: ಇಬ್ಬರು ಉಗ್ರರ ಹತ್ಯೆ, ಮೂವರು ಯೋಧರು ಹುತಾತ್ಮ
- Automobiles
ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ
- Sports
ಆ ಇಬ್ಬರು ಸ್ಟಾರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಜಯವರ್ಧನೆ ಕಳವಳ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಭಾರತದಲ್ಲಿ ನಿಜವಾದ ಭಾರತೀಯರು ಇನ್ಮುಂದೆ 'ಜಿಪಿಎಸ್' ಅನ್ನು ಬಳಸುವುದಿಲ್ಲ!!..ಏಕೆ ಗೊತ್ತಾ?
ಸ್ಮಾರ್ಟ್‌ಪೋನ್ ಮೂಲಕ ರಸ್ತೆ ರಸ್ತೆಗಳ ದಾರಿ ತೋರುತ್ತಿರುವ 'ಜಿಪಿಎಸ್' ಸೇವೆಯನ್ನು ಅನ್ನು ಪ್ರತಿಯೋರ್ವ ಇಂಟರ್‌ನೆಟ್ ಬಳಕೆದಾರನು ಬಳಸಿರುತ್ತಾನೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಕೈಯಲ್ಲಿರುವ ಮೊಬೈಲ್ ಎಂಬ ಪುಟ್ಟ ಸಾಧನದ ಮೂಲಕ ನಿಖರವಾಗಿ ದಾರಿ ತೋರುವ 'ಜಿಪಿಎಸ್' ಎಲ್ಲರಿಗೂ ಆಶ್ಚರ್ಯಕರವಾಗಿರಬಹುದು.!
ಹಾಗಾಗಿಯೇ, ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರಿಗೂ 'ಜಿಪಿಎಸ್' ಸೇವೆ ಎಂದರೆ ಅಚ್ಚುಮೆಚ್ಚು. ಅದರಲ್ಲಂತೂ ಭಾರತೀಯರಿಗೆ ಜಿಪಿಎಸ್' ಬಟ್ಟರೆ ಬೇರಾವ ಆಯ್ಕೆ ಇಲ್ಲವೇ ಇಲ್ಲ ಎನ್ನುವ ಅನುಭವ.! ಆದರೆ, ನಿಮಗೆ ಗೊತ್ತಾ? ಇನ್ನೇನು ಕೆಲವೇ ದಿವಸಗಳಲ್ಲಿ ಭಾರತದಲ್ಲಿ ಜಿಪಿಎಸ್ ಸೇವೆ ನಿಲ್ಲಲಿದೆ. ಏಕೆಂದರೆ, ನಿಜವಾದ ಭಾರತೀಯರಾರು ಜಿಪಿಎಸ್ ಅನ್ನು ಮತ್ತೆ ಬಳಸುವುದಿಲ್ಲ.!

ಓದಿರಿ: ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಬಗ್ಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದ ಸತ್ಯ ಸಂಗತಿಗಳಿವು!!
ಹೌದು, ಜಿಪಿಎಸ್‌ಗೂ ಮತ್ತು ದೇಶಾಭಿಮಾನಕ್ಕೂ ಸಂಬಂಧವಿದೆ. ಜಿಪಿಎಸ್ ಮಾಹಿತಿ ಒದಗಿಸಲು ಖಡಾಖಂಡಿತವಾಗಿ ಭಾರತಕ್ಕೆ ನಿರಾಕರಿಸಲಾಗಿದ್ದ ಒಂದು ಕೋಪ ಸಹ ಭಾರತೀಯರಲ್ಲಿದೆ.! ಹಾಗಾದರೆ, ಏನಿದು ಸ್ಟೋರಿ? ಭಾರತದಲ್ಲಿ ಜಿಪಿಎಸ್ ಸೇವೆ ಏಕೆ ನಿಲ್ಲಲಿದೆ? ಜಿಪಿಎಸ್ ಸೇವೆ ಇಲ್ಲದಿದ್ದರೆ ಭಾರತೀಯರ ಪರಿಸ್ಥಿತಿ ಏನು ಎಂಬುದನ್ನು ಮುಂದೆ ತಿಳಿಯಿರಿ.

ಕಾರ್ಗಿಲ್ ವೇಳೆಯಲ್ಲಿ ಜಿಪಿಎಸ್!
ಅದು 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಗಡಿ ದಾಟಿ ದೇಶದೊಳಗೆ ಅಡಗಿದ್ದ ಪಾಕಿಸ್ತಾನ ಸೇನೆಯನ್ನು ಸದೆಬಡಿಯಲು ಜಿಪಿಎಸ್(ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್) ಮೂಲಕ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿತ್ತು. ಇಂಥ ಕಠಿಣ ಸಮಯದಲ್ಲಿ ಜಿಪಿಎಸ್ ಮಾಹಿತಿ ಒದಗಿಸಲು ಅಮೆರಿಕಾ ಖಡಾಖಂಡಿತವಾಗಿ ಭಾರತಕ್ಕೆ ನಿರಾಕರಿಸಿತು.!

ಸ್ವದೇಶಿ ಪಥದರ್ಶಕ ವ್ಯವಸ್ಥೆ!
ಯುದ್ದದಂತಹ ಕಠಿಣ ಸಂದರ್ಭದಲ್ಲಿ ಜಿಪಿಎಸ್ ಮಾಹಿತಿ ಒದಗಿಸಲು ಅಮೆರಿಕಾ ನಿರಾಕರಿಸಿದ ನಂತರ ಅಂದೇ ರಾಷ್ಟ್ರಕ್ಕೆ ಸ್ವದೇಶಿ ಪಥದರ್ಶಕ ವ್ಯವಸ್ಥೆಯ ಅಗತ್ಯ ಎಷ್ಟಿದೆ ಎಂಬುದರ ಅರಿವಾಯಿತು. ನಂತರ ಇಂಥ ವ್ಯವಸ್ಥೆಯನ್ನು ದೇಶೀಯವಾಗಿ ರೂಪಿಸಲು ಇಸ್ರೊ ಸಿದ್ಧಪಡಿಸಿದ ಯೋಜನೆಗೆ ಕೇಂದ್ರ ಸರ್ಕಾರ 2006ರ ಮೇನಲ್ಲಿ ಅನುಮೋದನೆ ನೀಡಿತ್ತು.

ಸಿದ್ದವಾಗಿದೆ ಸ್ವದೇಶಿ ಪಥದರ್ಶಕ
2006ರ ಮೇನಲ್ಲಿ ಅನುಮೋದನೆ ಪಡೆದ ಸ್ವದೇಶಿ ಪಥದರ್ಶಕ ಯೋಜನೆ 12 ವರ್ಷಗಳಲ್ಲಿ ಪೂರ್ಣಗೊಂಡು ಬಳಕೆಗೆ ತೆರೆದುಕೊಳ್ಳುತ್ತಿದೆ. ಭಾರತೀಯ ಉಪಗ್ರಹಗಳ ಮೂಲಕ ಅಮೆರಿಕದ ಜಿಪಿಎಸ್‌ಗಿಂತ ಹೆಚ್ಚು ನಿಖರವಾಗಿ ಪಥದರ್ಶಕ ಇನ್ನು ಭಾರತೀಯರಿಗೆ ಸಿಗಲಿದೆ. ಈ ಮೂಲಕ ಜಿಪಿಎಸ್ ವ್ಯವಸ್ಥೆ ಹೊಂದಿರುವ ಅಮೆರಿಕಾಕ್ಕೆ ಭಾರತದ ಪಥದರ್ಶಕ ಟಾಂಗ್ ನೀಡಿದೆ.

ಭಾರತದ ನಾವಿಕ್!!
ಭಾರತೀಯ ವಿಜ್ಞಾನಿಗಳೇ ಅಭಿವೃದ್ಧಿಪಡಿಸಿರುವ ಇಂಡಿಯನ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಂ (ಐಆರ್ ಎನ್ಎಸ್ಎಸ್) ನಾವಿಕ್ ಅಂತಿಮ ಹಂತದ ಪರೀಕ್ಷೆ ಮುಗಿಸಿದೆ. ನಾವಿಕ್ ಕಾರ್ಯರಂಭಿಸಿದರೆ ಇಂತಹ ಸೌಲಭ್ಯ ಹೊಂದಿದ ಕೆಲವೇ ದೇಶಗಳ ಸಾಲಿಗೆ ಭಾರತ ಸೇರಲಿದೆ.! ಭಾರತೀಯರಿಗೆ ನಾವಿಕ್ ದಾರಿಹೋಕನಾಗಲಿದೆ.

ಜಿಪಿಎಸ್‌ಗಿಂತಲೂ ಬೆಸ್ಟ್ ನಾವಿಕ್!!
ಪ್ರಸ್ತುತ ಜಿಪಿಎಸ್ ಮೂಲಕ ದೇಶದಲ್ಲಿ ಸಂಚಾರಕ್ಕೆ ದೊರೆಯುತ್ತಿರುವ ಸೇವೆಗಿಂತ ಭಾರತದ ನಾವಿಕ್ ಸೇವೆ ನಿಖರವಾಗಿರಲಿದೆ. ನಾವಿಕ್ ಮ್ಯಾಪ್ ಹಾಕಿಕೊಂಡು ಹುಡುಕುವ ಸ್ಥಳಕ್ಕೆ ಬಹುಬೇಗ ಸೇರುತ್ತೇವೆ. ಯಾವುದೇ ಗೊಂದಲಗಳಲ್ಲಿದೆ ಕ್ಯಾಬ್, ಆಟೋ ನಮ್ಮದೇ ಮನೆ ಬಾಗಿಲಲ್ಲಿ ಬಂದು ನಿಲ್ಲಲಿವೆ.!
ಟ್ರಾಫಿಕ್ ಪೊಲೀಸರಿಗೆ ಶಾಕ್ ನೀಡಿದ ಸರ್ಕಾರ!..ಸಾರ್ವಜನಿಕರಿಗೆ ಸಿಹಿಸುದ್ದಿ!!

ಚಿಪ್‌ಗಳ ತಯಾರಿ ಆಗಬೇಕಿದೆ.
ಭಾರತೀಯ ರೈಲ್ವೆ, ಪರ್ವತಾರೋಹಣ, ಕ್ರೀಡೆ, ಸೇನೆ, ವಾಯುಯಾನ ಸೇರಿ ಹಲವು ಕಡೆ ಜಿಪಿಎಸ್ ಪಥದರ್ಶಕ ವ್ಯವಸ್ಥೆಯ ಬಳಕೆ ಹೆಚ್ಚಿದೆ. ಈ ಎಲ್ಲ ವಲಯಗಳಲ್ಲಿಯೂ ಇಸ್ರೊದ ‘ನಾವಿಕ್' ಮೂಲಕ ಮಾಹಿತಿ ಪಡೆಯಲು ಅಗತ್ಯವಾದ ಚಿಪ್‌ಗಳ ತಯಾರಿ ಹಾಗೂ ಸಾಧನಗಳಲ್ಲಿ ಅವುಗಳ ಅಳವಡಿಕೆ ತ್ವರಿತವಾಗಿ ಆಗಬೇಕಿದೆ.

1420 ಕೋಟಿ ರೂಪಾಯಿ ವೆಚ್ಚವಾಗಿದೆ.
ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ ಯೋಜನೆಗೆ ಇಲ್ಲಿಯವರೆಗೂ 1420 ಕೋಟಿ ರೂಪಾಯಿ ವೆಚ್ಚವಾಗಿದೆ. ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯಲ್ಲಿ ಎಂಟು ಸರಣಿ ಉಪಗ್ರಹಗಳು ಕಾರ್ಯನಿರ್ವಹಿಸುತ್ತಿವೆ. ಸದ್ಯ ಅಮೆರಿಕ (ಜಿಪಿಎಸ್), ರಷ್ಯಾ (ಗ್ಲೋನಾಸ್), ಐರೋಪ್ಯ ಒಕ್ಕೂಟ (ಗೆಲಿಲಿಯೋ) ಮಾತ್ರ ಸ್ವದೇಶಿ ಜಿಪಿಎಸ್ ವ್ಯವಸ್ಥೆ ಹೊಂದಿವೆ.!!

2019ಕ್ಕೆ ಸಾರ್ವಜನಿಕ ಬಳಕೆಗೆ!!
ಭಾರತೀಯ ವಿಜ್ಞಾನಿಗಳೇ ರೂಪಿಸಿರುವ ಸ್ವದೇಶಿ ಜಿಪಿಎಸ್ ವ್ಯವಸ್ಥೆ ನಾವಿಕ್ 2019 ರ ವರ್ಷಾರಂಭಕ್ಕೆ ಸಾರ್ವಜನಿಕ ಬಳಕೆಗೆ ಮುಕ್ತವಾಗಲಿದೆ ಎಂದು ಅಹಮದಾಬಾದ್ ಮೂಲದ ಸ್ಪೇಸ್ ಅಪ್ಲಿಕೇಷನ್ ಕೇಂದ್ರ (ಎಸ್ಎಸಿ) ಕೇಂದ್ರದ ನಿರ್ದೇಶಕ ತಪನ್ ಮಿಶ್ರ ಈಗಾಗಲೇ ಹೇಳಿದ್ದಾರೆ. ಹಾಗಾಗಿ, ಕಾರ್ಗಿಲ್ ಅಮಯ ನೆನೆದವರು ಜಿಪಿಎಸ್ ಬಿಟ್ಟು ನಾವಿಕ್ ಬಳಸಲಿದ್ದಾರೆ!

ನಾವಿಕ್ ಎಂದು ನಾಮಕರಣ ಮಾಡಿದ್ದು ಮೋದಿ!!
ಸ್ವದೇಶಿ ಜಿಪಿಎಸ್ ವ್ಯವಸ್ಥೆ ಕಾರ್ಯಾಚರಣೆಗೆ ಅಗತ್ಯವಿದ್ದ 7 ಉಪಗ್ರಹಗಳನ್ನು (ಐಆರ್ ಎನ್ಎಸ್ಎಸ್-1G) ಭಾರತ 2016 ರ ಏಪ್ರಿಲ್ 28 ರಂದು ಉಡಾವಣೆ ಮಾಡಿತ್ತು. ಮೊದಲು ಐಆರ್ಎನ್ಎಸ್ಎಸ್ ಎಂಬ ಹೆಸರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನಾವಿಕ್ ಎಂದು ನಾಮಕರಣ ಮಾಡಿದ್ದರು.
ಆನ್‌ಲೈನಿನಲ್ಲಿ 'ಡ್ರೈವಿಂಗ್ ಲೈಸೆನ್ಸ್' ಪಡೆಯುವ ಹೊಸ ವ್ಯವಸ್ಥೆಗೆ ಹೆದರಿದ ಬ್ರೋಕರ್‌ಗಳು!!
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086