Paytm: ಅಯೋಧ್ಯೆ ರಾಮ ಮಂದಿರದ ಪ್ರಯಾಣಿಕರಿಗೆ ಪೇಟಿಎಮ್‌ನಿಂದ ಗುಡ್ ನ್ಯೂಸ್! 5 ಸಾವಿರದ ವರೆಗೆ ಕ್ಯಾಶ್‌ಬ್ಯಾಕ್
ಪೇಟಿಎಮ್ (Paytm) ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳಲ್ಲಿ ತನ್ನದೇ ಆದ ಭಿನ್ನ ಸೌಲಭ್ಯಗಳನ್ನು ಗ್ರಾಹಕರಿಗೆ ಕಲ್ಪಿಸಿಕೊಡುತ್ತಿದ್ದು, ಈ ಮೂಲಕ ಭಾರತದ ಅತಿದೊಡ್ಡ ಮೊಬೈಲ್ ಪಾವತಿಗಳು ಮತ್ತು ವಾಣಿಜ್ಯ ಪ್ಲಾಟ್‌ಫಾರ್ಮ್ ಆಗಿ ಗುರುತಿಸಿಕೊಂಡಿದೆ.
ಹೌದು, ಪೇಟಿಎಮ್ ಹೊಸ ಹೊಸ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ವಿವಿಧ ರೀತಿಯ ಕೊಡುಗೆಗಳನ್ನು ಘೋಷಣೆ ಮಾಡಿಕೊಂಡು ಬರುತ್ತಿದೆ. ಅಷ್ಟೇ ಅಲ್ಲದೆ ಇತರೆ ಪ್ಲಾಟ್‌ಫಾರ್ಮ್‌ಗಳ ಜೊತೆಗೆ ಪಾಲುದಾರಿಕೆ ಪಡೆಯುವ ಮೂಲಕ ಜನರಿಗೆ ಬೇಕಾದ ಸೌಲಭ್ಯಗಳು ಸುಲಭವಾಗಿ ಸಿಗುವಂತೆ ಮಾಡಿದೆ. ಈ ಬೆಳವಣಿಗೆ ನಡುವೆ ಅಯೋಧ್ಯೆ ರಾಮ ಮಂದಿರದ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹಾಗಿದ್ರೆ, ಈ ಕ್ಯಾಶ್‌ಬ್ಯಾಕ್ ಪಡೆಯುವುದು ಹೇಗೆ?, ಯಾವೆಲ್ಲಾ ವಾಹನಗಳನ್ನು ಬುಕ್ ಮಾಡಿದ್ರೆ ಈ ಆಫರ್ ಲಭ್ಯ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಪೇಟಿಎಮ್‌ನಿಂದ ಗುಡ್ ನ್ಯೂಸ್: ಪೇಟಿಎಮ್ ಇದೀಗ ರಾಮಮಂದಿರ ಪ್ರಯಾಣಿಕರಿಗೆ (Ram Mandir travellers) ಮೆಗಾ ಕೊಡುಗೆಗಳನ್ನು ಘೋಷಣೆ ಮಾಡಿದ್ದು, ಫ್ಲೈಟ್ ಬುಕಿಂಗ್ ಮೇಲೆ 5,000 ರೂ.ಗಳ ವರೆಗೆ ಕ್ಯಾಶ್‌ಬ್ಯಾಕ್ ಹಾಗೂ ಬಸ್ ಬುಕ್ ಮಾಡಿದವರಿಗೆ 1,000 ರೂ. ವರೆಗೆ ಕ್ಯಾಶ್‌ಬ್ಯಾಕ್ ಅನ್ನು ನೀಡಲು ಮುಂದಾಗಿದೆ. ಈ ಮೂಲಕ ರಾಮ ಮಂದಿರ ಪ್ರಯಾಣಿಕರಿಗೆ ಸಂತಸ ನೀಡಿದೆ.
ಇನ್ನು ಪ್ರಯಾಣಿಕರು ಬಸ್ ಮತ್ತು ಫ್ಲೈಟ್ ಬುಕಿಂಗ್‌ನಲ್ಲಿ ಶೇಕಡಾ 100 ರಷ್ಟು ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದು ತಿಳಿಸಲಾಗಿದ್ದು, ಬಳಕೆದಾರರು ಯಾವ ಮಾರ್ಗದ ಮೂಲಕ ಸಂಚಾರ ಮಾಡುತ್ತಾರೋ ಅದನ್ನು ಆಧಾರವಾಗಿಸಿಕೊಂಡು ಬುಕಿಂಗ್ ಮಾಡುವ ಟೈಮ್‌ನಲ್ಲಿ 'BUSAYODHYA' ಹಾಗೂ 'FLYAYODHYA' ಎಂಬ ಪ್ರೋಮೋ ಕೋಡ್‌ಗಳನ್ನು ಎಂಟ್ರಿ ಮಾಡಬೇಕಿದೆ. ಇದರಿಂದ ಅವರ ಖಾತೆಗೆ ಕ್ಯಾಶ್‌ಬ್ಯಾಕ್ ಹಣ ಜಮೆ ಆಗಲಿದೆ.

ಇದಿಷ್ಟೇ ಅಲ್ಲದೆ ಪ್ರತಿ ಹತ್ತನೇ ಬಳಕೆದಾರರರು ಬಸ್ ಅನ್ನು ಬುಕ್ ಮಾಡುವಾಗ 1,000 ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ ಮತ್ತು ಫ್ಲೈಟ್ ಬುಕ್ ಮಾಡುವವರು 5,000 ವರೆಗೆ ಈ ಕ್ಯಾಶ್ ಬ್ಯಾಕ್ ಪ್ರಯೋಜನ ಪಡೆಯುತ್ತಾರೆ ಎಂದು ಕಂಪನಿಯು ಮಾಹಿತಿ ನೀಡಿದೆ. ಇದರೊಂದಿಗೆ ಯಾವುದೇ ಕಾರಣವನ್ನು ನೀಡದೆ ಫ್ರೀ ಕ್ಯಾನ್ಸಲೇಶನ್ ಅನ್ನೂ ಸಹ ಮಾಡಬಹುದು ಎಂದು ಬಿಸಿನೆಸ್ ಟುಡೇ ನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಸಂಬಂಧ ಪೇಟಿಎಮ್ ಪ್ರತಿನಿಧಿಯೋರ್ವರು ಬಿಸಿನೆಸ್ ಟುಡೆಗೆ ಪ್ರತಿಕ್ರಿಯಿಸಿ, ಮೊಬೈಲ್ ಪಾವತಿಗಳು ಮತ್ತು ಕ್ಯೂಆರ್ ತಂತ್ರಜ್ಞಾನದಲ್ಲಿ ಲೀಡರ್ ಆಗಿರುವ ನಾವು, ಅಯೋಧ್ಯೆಗೆ ಭೇಟಿ ನೀಡುವ ಯಾತ್ರಾರ್ಥಿಗಳಿಗಾಗಿ ಈ ವಿಶೇಷ ಕೊಡುಗೆಯನ್ನು ಪ್ರಸ್ತುತಪಡಿಸಲು ಸಂತೋಷಪಡುತ್ತೇವೆ. ನಮ್ಮ ವಿಶೇಷ ಕೊಡುಗೆಗಳೊಂದಿಗೆ ಅಯೋಧ್ಯೆಗೆ ಸುಗಮ ಪ್ರಯಾಣದ ಅನುಭವದೊಂದಿಗೆ ಜನರಿಗೆ ಸಹಾಯ ಮಾಡುವುದೇ ನಮ್ಮ ಗುರಿಯಾಗಿದೆ. ಬಸ್ ಮತ್ತು ವಿಮಾನದಲ್ಲಿ 100% ಕ್ಯಾಶ್‌ಬ್ಯಾಕ್ ಕೊಡುಗೆ ಇದೆ ಎಂದಿದ್ದಾರೆ.

ದೇಣಿಗೆ ನೀಡಿ: ಇನ್ನು ಮತ್ತೊಂದು ಖುಷಿಯ ವಿಚಾರ ಏನೆಂದರೆ ನೀವು ಪೇಟಿಎಮ್ ಮೂಲಕವೇ ರಾಮ ಮಂದಿರಕ್ಕೆ ದೇಣಿಗೆ ನೀಡಬಹುದಾಗಿದೆ. ಇದರಿಂದ ನೀವು ರಾಮನ ಕೃಪೆಗೆ ನೀವು ಇರುವಲ್ಲಿಯೇ ಪಾತ್ರರಾಗಬಹುದಾಗಿದೆ. ಹಾಗಿದ್ರೆ, ನಿಮ್ಮ ಮೊಬೈಲ್‌ನಲ್ಲಿ ಇರುವ ಪೇಟಿಎಮ್ ಆಪ್ ಬಳಕೆ ಮಾಡಿಕೊಂಡು ದೇಣಿಗೆ ನೀಡುವುದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಹಂತ 1: ಮೊದಲು ಪೇಟಿಎಮ್ ಆಪ್ ಓಪನ್ ಮಾಡಿ ನಂತರ ಬಿಲ್ ಪಾವತಿ ವಿಭಾಗಕ್ಕೆ ಹೋಗಿ ಅಲ್ಲಿ ವ್ಯೂ ಆಲ್ (View all) ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಇದೆಲ್ಲಾ ಆದ ಮೇಲೆ ಡಿವೋಶನ್ (ಭಕ್ತಿ) ಎಂಬ ಆಯ್ಕೆ ತೆರೆದುಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 2: ಇದೆಲ್ಲಾ ಆದ ಮೇಲೆ ವಿವಿಧ ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಅಲ್ಲಿ 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ' ವನ್ನು ಆಯ್ಕೆ ಮಾಡಿ. ನಂತರ ಅಲ್ಲಿ ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ನೀವು ದೇಣಿಗೆ ನೀಡಲು ಬಯಸುವ ಮೊತ್ತವನ್ನು ಆಡ್ ಮಾಡಿ ಬಳಿಕ ಪಾವತಿಸಲು ಮುಂದುವರಿಯಿರಿ ಎಂಬ ಆಯ್ಕೆ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇಷ್ಟು ಮಾಡಿದ್ರೆ ನಿಮ್ಮ ದೇಣಿಗೆ ನೇರವಾಗಿ ರಾಮ ಮಂದಿರಕ್ಕೆ ತಲುಪಿದಂತೆ.


Click it and Unblock the Notifications








