Home
ಸುದ್ದಿಜಾಲ

Paytm ಬಳಕೆದಾರರಿಗೆ ಗುಡ್‌ ನ್ಯೂಸ್‌; ಇನ್ಮುಂದೆ ಪಾವತಿ ಮಾಡುವುದು ಇನ್ನಷ್ಟು ಸರಳ!

ಫೋನ್‌ ಪೇ, ಗೂಗಲ್ ಪೇ ಹಾಗೂ ಪೇಟಿಎಮ್‌ ಭಾರತದಲ್ಲಿ ತಮ್ಮದೇ ಆದ ಬಳಕೆದಾರರನ್ನು ಪಡೆದುಕೊಂಡಿವೆ. ಅದರಲ್ಲೂ ಎಲ್ಲಾ ಡಿಜಿಟಲ್‌ ಪಾವತಿ ಆಪ್‌ಗಳು ವಿಭಿನ್ನ ಫೀಚರ್ಸ್‌ ಹೊಂದುವ ಹೊಸ ಹೊಸ ಬಳಕೆದಾರರನ್ನು ತಮ್ಮತ್ತ ಸೆಳೆಯುತ್ತಿರುತ್ತವೆ. ಅದರಂತೆ ಈಗ ಪೇಟಿಎಮ್‌ ಆಕರ್ಷಕ ಫೀಚರ್ಸ್‌ ಅನ್ನು ಪಡೆದುಕೊಂಡಿದೆ.

ಹೌದು, ಪೇಟಿಎಮ್‌ (Paytm) ಬಳಕೆದಾರರು ಇನ್ಮುಂದೆ ಹೊಸ ಫೀಚರ್ಸ್‌ ಅನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದ್ದು, ಇದು ಆಗಾಗ್ಗೆ ಬಳಸಿದ ಸಂಪರ್ಕಗಳನ್ನು ವೇಗವಾಗಿ ಪಾವತಿ ಮಾಡಲು ಅನುವಾಗುವಂತೆ ಪಿನ್ ಆಯ್ಕೆ ನೀಡುತ್ತದೆ. ಹಾಗಿದ್ರೆ, ಈ ಪೇಟಿಎಮ್‌ ನ ಹೊಸ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸುತ್ತದೆ?, ಇದರಿಂದ ಯಾರಿಗೆಲ್ಲಾ ಲಾಭ ಎಂಬ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

Paytm ಬಳಕೆದಾರರಿಗೆ ಗುಡ್‌ ನ್ಯೂಸ್‌; ಇನ್ಮುಂದೆ ಪಾವತಿ ಮಾಡುವುದು ಇನ್ನಷ್ಟು ಸರಳ!

ಪೇಟಿಎಮ್‌ನಲ್ಲಿ ಹೊಸ ಫೀಚರ್ಸ್‌: ಪೇಟಿಎಮ್‌ನಲ್ಲಿ ಇದೀಗ ಇತ್ತೀಚಿನ ಪಾವತಿಗಳನ್ನು ಪಿನ್ ಮಾಡುವ ಫೀಚರ್ಸ್‌ (Gets pin recent payments feature) ಕಾಣಿಸಿಕೊಂಡಿದೆ. ಈ ಮೂಲಕ ಬಳಕೆದಾರರು ಮೊಬೈಲ್ ಪಾವತಿಗಳನ್ನು ಸುಲಭವಾಗಲಿದೆ. ಅಂದರೆ ಬಳಕೆದಾರರು ಆಗಾಗ್ಗೆ ಬಳಸುವ ಸಂಪರ್ಕಗಳನ್ನು ವೇಗವಾಗಿ ಪ್ರವೇಶಿಸಲು ಮತ್ತು ಪಾವತಿಗಳನ್ನು ಮಾಡಲು ಇದು ಅನುಕೂಲ ಆಗಲಿದೆ. ಅದರಲ್ಲೂ ಐದು ಸಂಪರ್ಕಗಳನ್ನು ಪಿನ್ ಮಾಡಿಕೊಳ್ಳಬಹುದು.

ಇನ್ನು ನೀವು ಒಮ್ಮೆ ಅಗತ್ಯ ಸಂಪರ್ಕಗಳನ್ನು ಆಪ್‌ನಲ್ಲಿ ಪಿನ್ ಮಾಡಿದರೆ ಹಣ ವರ್ಗಾವಣೆ ಮಾಡುವಾಗ ಆ ನಂಬರ್‌ ಯಾವಾಗಲೂ ಮೇಲ್ಭಾಗದಲ್ಲಿಯೇ ಕಾಣಿಸಿಕೊಳ್ಳುತ್ತದೆ. ಇದರಿಂದಾಗಿ ಪಿನ್‌ ಮಾಡಲಾದ ನಂಬರ್‌ಗಳ ಯುಪಿಐ ಹಣ ವರ್ಗಾವಣೆ ಇನ್ನಷ್ಟು ವೇಗವಾಗಲಿದೆ. ಇದರಲ್ಲಿ ಪೇಟಿಎಮ್ ಯುಪಿಐ, ಪೇಟಿಎಮ್ ಯುಪಿಐ ಲೈಟ್‌, ಪೇಟಿಎಮ್ ವಾಲೆಟ್‌, ಪೇಟಿಎಮ್ ಪೋಸ್ಟ್‌ಪೇಯ್ಡ್ ಸೇರಿದಂತೆ ಎಲ್ಲಾ ಪಾವತಿ ವಿಧಾನಗಳಿಗೆ ಇದು ಲಭ್ಯ ಇರಲಿದೆ.

ಈ ಸಂಬಂಧ ಪೇಟಿಎಮ್ ವಕ್ತಾರರು ಮಾಹಿತಿ ನೀಡಿದ್ದು, ಮೊಬೈಲ್ ಪಾವತಿಗಳಲ್ಲಿ ಮುಂಚೂಣಿಯಲ್ಲಿರುವ ಪೇಟಿಎಮ್‌ ಸೂಪರ್ ಆಪ್‌ನಲ್ಲಿ ಬಳಕೆದಾರರ ಅನುಭವವನ್ನು ಹೆಚ್ಚಿಸಲು ನಾವು ನಿರಂತರವಾಗಿ ನವೀನ ಮತ್ತು ಹೊಸ ಫೀಚರ್ಸ್‌ಗಳನ್ನು ತರುತ್ತಲೇ ಇರುತ್ತೇವೆ. ನಮ್ಮ 'ಪಿನ್ ಸಂಪರ್ಕ' ಫೀಚರ್ಸ್‌ ಇನ್ನಷ್ಟು ವೇಗವಾದ ಯುಪಿಐ ಪಾವತಿಗಳನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ. ಇದರಿಂದಾಗಿ ಬಳಕೆದಾರರ ಸಮಯ ಮತ್ತು ಪ್ರಯತ್ನಗಳು ಉಳಿತಾಯ ಆಗುತ್ತದೆ ಎಂದಿದ್ದಾರೆ. ಹಾಗಿದ್ರೆ ಸಂಪರ್ಕಗಳನ್ನು ಪಿನ್‌ ಮಾಡೋದು ಹೇಗೆ ಎಂದು ತಿಳಿದುಕೊಳ್ಳಿ.

ಹಂತ 1 : ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪೇಟಿಎಮ್‌ ಆಪ್‌ ಓಪನ್‌ ಮಾಡಿ ಬಳಿಕ ಅದನ್ನು ಅಪ್‌ಡೇಟ್ ಮಾಡಿ. ನಂತರದಲ್ಲಿ ಯುಪಿಐ ಮನಿ ಟ್ರಾನ್ಫರ್‌ ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿದರೆ ಅದರಲ್ಲಿ ಟು ಮೊಬೈಲ್‌ ಅಥವಾ ಕಾಂಟಾಕ್ಟ್‌ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಬಳಿಕ ಅಲ್ಲಿ ಕಾಣಿಸಿಕೊಳ್ಳುವ ಐಕಾನ್‌ ಮೇಲೆ ಅಥವಾ ಹುಡುಕಾಟ ಫಲಿತಾಂಶಗಳ ಮೇಲೆ ದೀರ್ಘವಾಗಿ ಒತ್ತಿದರೆ 'ಪಿನ್' ಆಯ್ಕೆ ಕಂಡುಬರುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದರೆ ಸಾಕು.

Paytm ಬಳಕೆದಾರರಿಗೆ ಗುಡ್‌ ನ್ಯೂಸ್‌; ಇನ್ಮುಂದೆ ಪಾವತಿ ಮಾಡುವುದು ಇನ್ನಷ್ಟು ಸರಳ!

ಒಪ್ಪೋದ ಅಮಿತ್ ಮಿಧಾ ಅವರು ಈಗ ಪೇಟಿಎಮ್‌ ಮಾರ್ಕೆಟಿಂಗ್‌ನ AVP: ಪೇಟಿಎಮ್‌ ನಲ್ಲಿ ಹೊಸ ಹೊಸ ಬೆಳವಣಿಗೆ ಜರುಗುತ್ತಿದ್ದು, ಅದರಂತೆ ಪೇಟಿಎಮ್‌ ಮಾರ್ಕೆಟಿಂಗ್‌ನ ಅಸೋಸಿಯೇಟ್ ಉಪಾಧ್ಯಕ್ಷರಾಗಿ ಅಮಿತ್ ಮಿಧಾ ಸೇರ್ಪಡೆಗೊಂಡಿದ್ದಾರೆ. ಇವರು ಈ ಮೊದಲು ಸುಮಾರು ನಾಲ್ಕು ವರ್ಷಗಳ ಕಾಲ ಸ್ಮಾರ್ಟ್‌ಫೋನ್ ಬ್ರಾಂಡ್ ಆದ ಒಪ್ಪೋ ನಲ್ಲಿ ಕೆಲಸ ಮಾಡಿದ್ದಾರೆ.

15 ವರ್ಷಗಳ ಕೆಲಸದ ಅನುಭವ ಇರುವ ಮಿಧಾ ಈ ಹಿಂದೆ, ಮೆಕ್‌ಕಾನ್ ವರ್ಲ್ಡ್‌ಗ್ರೂಪ್, ಡೈಕೊ ಎಫ್‌ಎಚ್‌ಒ, ವುಂಡರ್‌ಮ್ಯಾನ್ ಮತ್ತು ಹವಾಸ್ ವರ್ಲ್ಡ್‌ವೈಡ್ ಮುಂತಾದ ಕಂಪನಿಗಳಲ್ಲಿ ಕೆಲಸ ಮಾಡಿ ತಮ್ಮದೇ ಆದ ವರ್ಚಸ್ಸನ್ನು ಪಡೆದುಕೊಂಡಿದ್ದಾರೆ. ಇದೀಗ ಪೇಟಿಎಮ್‌ನಲ್ಲಿ ಉದ್ಯೋಗ ಪಡೆದುಕೊಂಡಿದ್ದು, ಯಾವ ಬದಲಾವಣೆ ಆಗಲಿದೆ ಎಂಬುದನ್ನು ನಿರೀಕ್ಷಿಸಲಾಗಿದೆ.

Best Mobiles in India

English summary
Paytm users can now take advantage of a new feature that offers a PIN option for faster payment of frequently used contacts.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+