'ಪೇಟಿಎಂ ಮಾಲ್ ಕ್ಯಾಶ್‌ಬ್ಯಾಕ್‌'ನಲ್ಲಿ 10 ಕೋಟಿ ರೂ. ವಂಚನೆ!!

|

ಕಳೆದ ವರ್ಷ ಕಂಪೆನಿ ಉದ್ಯೋಗಿಗಳಿಂದಲೇ ಬ್ಲಾಕ್‌ಮೇಲ್‌ಗೆ ಒಳಗಾಗಿದ್ದ ಪೇಟಿಎಂ ಸಂಸ್ಥೆಯಲ್ಲಿ ಮತ್ತೊಂದು ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಸಣ್ಣ ವ್ಯಾಪಾರಿಗಳು ಮತ್ತು ನೂರಾರು ಮಾರಾಟಗಾರರಿಂದ ಬಂದ ಕ್ಯಾಶ್ ಬ್ಯಾಕ್ ನ ಬಗ್ಗೆ ತನಿಖೆ ನಡೆಸಿದ ಪೇಟಿಎಂನಲ್ಲಿ, ಸುಮಾರು 10 ಕೋಟಿ ರೂಪಾಯಿಗಳವರೆಗೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆಯ ನಂತರ ಹಲವಾರು ಪೇಟಿಎಂ ನೌಕರರನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಹೌದು, ಕಳೆದ ದೀಪಾವಳಿ ಹಬ್ಬದ ನಂತರ ಕೆಲವು ಸಣ್ಣ ವ್ಯಾಪಾರಿಗಳು ಕ್ಯಾಶ್ ಬ್ಯಾಕ್ ನಿಂದ ಬಹುದೊಡ್ಡ ಮೊತ್ತದಲ್ಲಿ ಕಮಿಷನ್ ಪಡೆಯುವುದು ಪತ್ತೆಯಾಗಿದ್ದು, ಈ ಬಗ್ಗೆ ನಮ್ಮ ಲೆಕ್ಕಪರಿಶೋಧನೆ ತಂಡಕ್ಕೆ ತನಿಖೆ ನಡೆಸುವಂತೆ ಹೇಳಿದ್ದೇವೆ. ಈ ತನಿಖೆಯಲ್ಲಿ ಒಟ್ಟಾರೆ ವಂಚನೆಯ ಮೊತ್ತ 10 ಕೋಟಿಯಷ್ಟಾಗಬಹುದು ಎಂದು ಪೇಟಿಎಂ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವಿಜಯ್ ಶೇಖರ್ ಶರ್ಮಾ ಅವರು ಹೇಳಿದ್ದಾರೆ.

'ಪೇಟಿಎಂ ಮಾಲ್ ಕ್ಯಾಶ್‌ಬ್ಯಾಕ್‌'ನಲ್ಲಿ 10 ಕೋಟಿ ರೂ. ವಂಚನೆ!!

ಪೇಟಿಎಂ ಕಂಪೆನಿಯ ಲೆಕ್ಕಪರಿಶೋಧನೆ ನಡೆಸುವ ಸಮಾಲೋಚನಾ ಸಂಸ್ಥೆ ಇವೈ ಜೊತೆಗೆ ಮಾತುಕತೆಯಲ್ಲಿ ಕಂಪೆನಿ ನಿರತವಾಗಿದ್ದು ,ಕ್ಯಾಶ್ ಬ್ಯಾಕ್ ನ ಕಮಿಷನ್ ಪಡೆಯಲು ಕೆಲವು ಸಣ್ಣ ವ್ಯಾಪಾರಿಗಳು ಕಂಪೆನಿಯ ಜ್ಯೂನಿಯರ್ ನೌಕರರ ಜೊತೆ ರಹಸ್ಯ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕೆಲ ಉದ್ಯೋಗಿಗಳು ಮೂರನೇ ಪಕ್ಷದ ಮಾರಾಟಗಾರರೊಂದಿಗೆ ಕೆಲಸ ಮಾಡಿದ್ದಾರೆ ಮತ್ತು ಕ್ಯಾಶ್ಬ್ಯಾಕ್ ಕೊಡುಗೆಗಳನ್ನು ಪಡೆಯಲು ನಕಲಿ ಆದೇಶಗಳನ್ನು ರಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಬಗ್ಗೆ ಮಾಹಿತಿ ನಿಡಿರುವ ಜಯ್ ಶೇಖರ್ ಶರ್ಮಾ ಅವರು, ಒಟ್ಟಾರೆ ವಂಚನೆಯ ಮೊತ್ತ ದ್ವಿಗುಣ ಸಂಖ್ಯೆಯಲ್ಲಿದ್ದು ಅದು 10 ಕೋಟಿಯಷ್ಟಾಗಬಹುದು ಎಂದು ಹೇಳಿದ್ದರು. ಆದರೆ ನಿನ್ನೆ ಸಂಜೆ ಕಂಪೆನಿಯ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ವಂಚನೆಯ ಮೊತ್ತ ಕಡಿಮೆಯಾಗಿದೆ. ಅದು 5 ರಿಂದ 10 ಕೋಟಿಯಷ್ಟಾಗಬಹುದು ಎಂದು ವಕ್ತಾರರು ಹೇಳಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

'ಪೇಟಿಎಂ ಮಾಲ್ ಕ್ಯಾಶ್‌ಬ್ಯಾಕ್‌'ನಲ್ಲಿ 10 ಕೋಟಿ ರೂ. ವಂಚನೆ!!

ಇನ್ನು ಈ ಘಟನೆಯ ಬಳಿಕ ಕ್ಯಾಶ್ ಬ್ಯಾಕ್ ಮಾದರಿ ಸ್ಥಿರವಾಗಿರುತ್ತದೆ ಎಂದು ಶರ್ಮಾ ಅವರು ತಿಳಿಸಿದ್ದಾರೆ. ಪೇಟಮ್ ವಾಸ್ತವವಾಗಿ ಧನಾತ್ಮಕ, ಕ್ಯಾಶ್ಬ್ಯಾಕ್ ನಿವ್ವಳ, ಮಾರ್ಕೆಟಿಂಗ್ ಪ್ರಚಾರಗಳ ಕಾರ್ಯ ವೆಚ್ಚವನ್ನು ಹೊಂದಿದೆ. ಬಳಕೆದಾರರ ಬೇಸ್ 300 ದಶಲಕ್ಷದಿಂದ 500 ಮಿಲಿಯನ್‌ಗೆ ಹೆಚ್ಚುವತನಕ ಹಾಗೂ ವ್ಯಾಪಾರಿ ಬೇಸ್ ಪ್ರಸ್ತುತ 12 ಮಿಲಿಯನ್ ಸಂಖ್ಯೆಯಿಂದ 40 ಮಿಲಿಯನ್‌ಗೆ ತಲುಪುವ ತನಕ ಇದು ಲಾಭದಾಯಕವೆಂದು ಹೇಳುವ ಮೂಲಕ ಕ್ಯಾಶ್ ಬ್ಯಾಕ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಓದಿರಿ: ವಾಟ್ಸ್ಆಪ್ ಬಳಕೆದಾರರಿಗೆ ಬಿಗ್ ಶಾಕಿಂಗ್ ನ್ಯೂಸ್!..ಕೂಡಲೇ ಈ ಕೆಲಸ ಮಾಡಿ!!

Best Mobiles in India

English summary
Paytm Mall probe reveals Rs 10-crore cashback fraud: Vijay Shekhar Sharma.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X