ವಾಟ್ಸ್ಆಪ್ ಬಳಕೆದಾರರಿಗೆ ಬಿಗ್ ಶಾಕಿಂಗ್ ನ್ಯೂಸ್!..ಕೂಡಲೇ ಈ ಕೆಲಸ ಮಾಡಿ!!
ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೇಂಜರ್ ಆಪ್ ವಾಟ್ಸ್ಆಪ್ ಸೇಫ್ ಆಗಿದೆ ಎಂದು ತಿಳಿದಿದ್ದವರಿಗೆ ಶಾಕಿಂಗ್ ನ್ಯೂಸ್ ಒಂದು ಎದುರಾಗಿದೆ. ವಾಟ್ಸ್ಆಪ್‌ನಲ್ಲಿ ಎಂಡ್ ಟು ಎಂಡ್ ಎನ್ಕ್ರಿಪ್ಷನ್ ಸೆಕ್ಯುರಿಟಿ ಇರುವುದರಿಂದ ಯಾವುದೇ ಮೂರನೇ ವ್ಯಕ್ತಿ ನಿಮ್ಮ ಮಾಹಿತಿಯನ್ನ ಹ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗಿತ್ತು. ಆದರೆ, ವಾಯ್ಸ್ ಕಾಲ್ ಮೂಲಕ ವಾಟ್ಸ್ಆಪ್‌ಗೆ ಸ್ಪೈವೇರ್ (spyware) ಹರಡಿದೆ ಎಂಬ ಆತಂಕಕಾರಿ ಸುದ್ದಿ ವರದಿಯಾಗಿದೆ.
ಹೌದು, ಪ್ರಪಂಚದಾದ್ಯಂತ ಕೋಟ್ಯಾಂತರ ಜನರು ಯಾವುದೇ ಆತಂಕವಿಲ್ಲದೆ ಬಳಸುತ್ತಿರುವ ವಾಟ್ಸ್ಆಪ್‌ಗೆ ವಾಯ್ಸ್ ಕಾಲ್ ಮೂಲಕ ಸ್ಪೈವೇರ್ (spyware) ಹರಡಿದೆ ಎಂಬ ಆತಂಕಕಾರಿ ಸುದ್ದಿ ಹೊರಬಿದ್ದಿದೆ. ಹಲವಾರು ಜನರ ಫೋನ್ಗಳಿಗೆ ವಾಟ್ಸ್ಆಪ್ ವಾಯ್ಸ್ ಕಾಲ್ ಮುಖಾಂತರ ಸ್ಪೈವೇರ್ (spyware) ಹರಡಿರುವುದಾಗಿ ವಾಟ್ಸ್ಆಪ್ ಸಂಸ್ಥೆ ಇಂದು ಒಪ್ಪಿಕೊಂಡಿದ್ದು, ಐಫೋನ್ ಹಾಗೂ ಆಂಡ್ರಾಯ್ಡ್ ಬಳಕೆದಾರರೀರ್ವರಿಗೂ ಈ ಸ್ಪೈವೆರ್ ಪರಿಣಾಮ ಬೀರಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಸ್ಪೈವೇರ್ಗೆ ಟಾರ್ಗೆಟ್ ಆದ ಬಳಕೆದಾರರಿಗೆ ಅಪರಿಚಿತ ನಂಬರ್ನಿಂದ ಫೋನ್ ಕಾಲ್ ಬರುತ್ತದೆ. ಆ ಕರೆಯನ್ನ ಸ್ವೀಕರಿಸಿದ್ರೂ, ಸ್ವೀಕರಿಸದೇ ಇದ್ರೂ ಸ್ಪೈವೇರ್ ಹರಡುತ್ತದೆ ಎಂದು ಹೇಳಲಾಗಿದ್ದು, ಈ ದೋಷವನ್ನ ಸರಿಪಡಿಸಲು ಎಂಜಿನಿಯರ್ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಜೊತೆಗೆ ಮುಂಜಾಗ್ರತೆ ಕ್ರಮವಾಗಿ ವಾಟ್ಸ್ಆಪ್ ಬಳಕೆದಾರರಿಗೆ ಸಂಸ್ಥೆ ಸೂಚನೆ ಒಂದನ್ನು ರವಾನಿಸಿದೆ. ಹಾಗಾದರೆ, ಏನಿದು ಸ್ಪೈವೇರ್ (spyware)?, ವಾಟ್ಸ್ಆಪ್ ಹೇಳಿರುವ ಮುಂಜಾಗ್ರತೆ ಕ್ರಮ ಯಾವುದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

ವಾಟ್ಸ್ಆಪ್‌ನಲ್ಲಿದೆ ಸ್ಪೈವೇರ್!
ಇದೇ ತಿಂಗಳ ಆರಂಭದಲ್ಲಿ ವಾಟ್ಸ್ಆಪ್ ವಾಯ್ಸ್ ಕಾಲ್ಗೆ ಹೆಚ್ಚುವರಿ ಸೆಕ್ಯೂರಿಟಿ ಎನ್ಹ್ಯಾನ್ಸ್ಮೆಂಟ್ಗಳನ್ನು ಸೇರಿಸುವಾಗ ವಾಟ್ಸ್ಆಪ್‌ನಲ್ಲಿ ಸ್ಪೈವೇರ್ ಇರುವ ಬಗ್ಗೆ ತಿಳಿದುಬಂದಿದೆ. ಇದರಲ್ಲಿ ಆ್ಪ್ ಬಳಕೆದಾರರ ಪಾತ್ರವೇನೂ ಇರುವುದಿಲ್ಲ. ಸ್ಪೈವೇರ್ಗೆ ಟಾರ್ಗೆಟ್ ಆದ ಬಳಕೆದಾರರಿಗೆ ಅಪರಿಚಿತ ನಂಬರ್ನಿಂದ ಫೋನ್ ಕಾಲ್ ಬರುತ್ತದೆ. ಆ ಕರೆಯನ್ನ ಸ್ವೀಕರಿಸಿದ್ರೂ, ಸ್ವೀಕರಿಸದೇ ಇದ್ರೂ ಸ್ಪೈವೇರ್ ಹರಡುತ್ತದೆ ಎಂದು ಹೇಳಲಾಗಿದೆ.

ಸ್ಪೈವೇರ್ ಅಂದ್ರೆ ಏನು?
ಸ್ಪೈವೇರ್ ಒಂದು ಸಾಫ್ಟ್‌ವೇರ್ ಆಗಿದ್ದು, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಮಾಹಿತಿಯನ್ನು ಸಂಗ್ರಹಿಸಲು ಬಳಸಲಾಗುವ ಸಾಫ್ಟ್‌ವೇರ್ ಎಂದು ಹೇಳಬಹುದು. ಆನ್‌ಲೈನ್ ಮೂಲಕ ಮೊಬೈಲ್ ಅಥವಾ ಯಾವುದೋ ಒಂದು ಆಪ್ ಸಹಾಯದಿಂದ ಬಳಕೆದಾರರಿಗೆ ಅವರಿಗೆ ತಿಳಿಯದಂತೆಯೇ ಹ್ಯಾಕ್ ಮಾಡುವ ತಂತ್ರಾಂಶವನ್ನೇ ಸ್ಪೈವೇರ್ ಎಂದು ಕರೆಯಲಾಗುತ್ತದೆ. ಇವುಗಳು ಮೊಬೈಲ್ ಅಥವಾ ಆಪ್‌ಗಳಿಂದ ಬಳಕೆದಾರರ ಸಮ್ಮತಿ ಇಲ್ಲದೆ ಅವರ ಮಾಹಿತಿ, ಕುಕ್ಕೀಸ್ ಅಥವಾ ಇಥರ ಎಲ್ಲಾ ಮಾಹಿತಿಗಳನ್ನು ಕದ್ದು ತನ್ನ ಮಾಲಿಕನಿಗೆ ಕಳುಹಿಸುತ್ತವೆ.

ಸ್ಪೈವೇರ್ ಟಾರ್ಗೆಟ್ ಯಾರಿಂದ?
ಈಗ ಕಂಡುಬಂದಿರುವ ಸ್ಪೈವೇರ್ ಟಾರ್ಗೆಟ್ ಮಾಡಿರುವವರು ಯಾರು ಎನ್ನುವ ಬಗ್ಗೆ ವಾಟ್ಸ್ಆಪ್ ಸಂಸ್ಥೆ ಸದ್ಯಕ್ಕೆ ಸ್ಪಷ್ಟಪಡಿಸಿಲ್ಲ. ಆದರೆ, ಇಸ್ರೇಲ್ನ ಸೈಬರ್ ಇಂಟೆಲಿಜೆನ್ಸ್ ಸಂಸ್ಥೆ ಎನ್ಎಸ್ಓ ಗ್ರೂಪ್ನಿಂದ ಈ ಸ್ಪೈವೆರ್ ಬಂದಿದೆ ಎಂದು ಶಂಕಿಸಲಾಗಿದೆ. ಈ ವಿಷಯ ಬೆಳಕಿಗೆ ಬಂದ ಬೆನ್ನಲ್ಲೇ, ಇಸ್ರೇಲ್ ಕಂಪನಿಯ ಶಕ್ತಿಶಾಲಿ ಸ್ಪೈವೇರ್ ಹರಡುವಿಕೆ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದಿವೆ. ಇದು ಕಳೆದ ಕೆಲ ತಿಂಗಳ ಹಿಂದೆಯೂ ಸುದ್ದಿಯಾಗಿದ್ದನ್ನು ನೀವು ನೋಡಬಹುದು.

ಸ್ಪೈವೇರ್ ಪರಿಣಾಮ ಏನು?
ಕಂಡುಬಂದಿರುವ ಸ್ಪೈವೇರ್‌ನಿಂದ ಎಷ್ಟು ಬಳಕೆದಾರರ ಮೇಲೆ ಪರಿಣಾಮ ಬೀರಿದೆ ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಆದರೆ, ಈ ಸ್ಪೈವೇರ್ ಮೂಲಕ ಸ್ಮಾರ್ಟ್ಫೋನ್ಗಳನ್ನು ಹ್ಯಾಕ್ ಮಾಡಿ, ಅವರ ಮೊಬೈಲ್ ಕ್ಯಾಮೆರಾಗಳನ್ನು ಕಂಟ್ರೋಲ್ಗೆ ತೆಗೆದುಕೊಳ್ಳಬಹುದು ಎಂದು ಹೇಳಲಾಗಿದೆ. ಈ ಸ್ಪೈವೇರ್ ವಾಟ್ಸ್ಆಪ್ ಅನ್ನು ಒಂದು ರೀತಿಯಲ್ಲಿ ಬಳಕೆದಾರರ ಕಣ್ಗಾವಲಿಗೆ ಬಳಸೋ ಪುಟಾಣಿ ಸಾಧನಗಳನ್ನಾಗಿ ಮಾಡಿಬಿಡಬಹುದು ಎಂದು ಹೇಳಲಾಗುತ್ತಿದೆ.

ನೀವು ಮುನ್ನೆಚ್ಚರಿಕೆ ವಹಿಸಿ!
ವಾಟ್ಸ್ಆಪ್‌ನಲ್ಲಿ ಸ್ಪೈವೇರ್ ಇರುವುದು ತಿಳಿದ ನಂತರ ಈ ದೋಷವನ್ನ ಸರಿಪಡಿಸಲು ವಾಟ್ಸ್ಆಪ್ ಎಂಜಿನಿಯರ್ಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ವಾಟ್ಸ್ಆಪ್ ಸಂಸ್ಥೆ ನೂತನ ಅಪ್‌ಡೇಟ್ ಬಿಡುಗಡೆ ಮಾಡಿದ್ದು, ಬಳಕೆದಾರರು ಸ್ಪೈವೇರ್‌ನಿಂದ ರಕ್ಷಣೆ ಪಡೆಯಲು ಕೂಡಲೇ ಲೇಟೆಸ್ಟ್ ವರ್ಷನ್ಗೆ ಆಪ್‌ಗೆ ಅಪ್‌ಡೇಟ್ ಮಾಡುವಂತೆ ಸಂಸ್ಥೆ ಹೇಳಿದೆ. ಹಾಗಾಗಿ, ನೀವು ಕೂಡ ಈ ಕೂಡಲೇ ವಾಟ್ಸ್ಆಪ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ.


Click it and Unblock the Notifications








