ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?

|

ಡಿಜಿಟಲ್‌ ಹಣಪಾವತಿ ಮಾಡಬೇಕಾಗಿ ಬಂದಾಗ ಸಾಮಾನ್ಯವಾಗಿ ಮೊದಲು ನೆನಪಿಗೆ ಬರುವುದೇ ಪೇಟಿಎಮ್‌. ಹೀಗೆ ಎಲ್ಲರಿಗೂ ಚಿರಪರಿಚಿತವಾಗಿರುವ ಪೇಟಿಎಮ್‌ ಆಪ್‌ ಇತ್ತೀಚಿಗೆ ಪೇಟಿಎಮ್‌ ಸಂಸ್ಥೆಯು ಪೇಟಿಎಮ್‌ ಮಾಲ್‌ ಹೆಸರಿನಲ್ಲಿ ಆನ್‌ಲೈನ್‌ ಶಾಪಿಂಗ್‌ ಪರಿಚಯಿಸಿದೆ. ಇದೀಗ ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿರುವ ಪೇಟಿಎಮ್‌ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.

ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?

ಹೌದು, ಸದ್ಯ ಟ್ರೆಂಡ್‌ನಲ್ಲಿದೆ ಫುಡ್‌ ಡೆಲಿವರಿ ವಲಯಕ್ಕೂ (B2B) ಪೇಟಿಎಮ್‌ ಕಾಲಿಡಲು ಮುಂದಾಗಿದ್ದು, ಈ ಮೂಲಕ ತನ್ನ ಸೇವೆಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ. ಅದಕ್ಕಾಗಿ ಹಂಗರ್‌ಬಾಕ್ಸ್‌ ಡೆಲಿವರಿ ಸ್ಟಾರ್ಟ್‌ಅಪ್‌ ಕಂಪನಿ ಮೂಲಕ ಈ ಸೇವೆಯನ್ನು ಯಶಸ್ವಿಗೊಳಿಸಲು ಯೋಜಿಸಿದೆ. ಈ ಹೊಸ ಪ್ರಯತ್ನಕ್ಕೆ ಸುಮಾರು 15 ಮಿಲಯನ್‌ ಬಂಡವಾಳ ಹಾಕಲು ಕಂಪಮನಿಯು ಸಿದ್ಧವಾಗಿದೆ ಎನ್ನುತ್ತಿವೆ ವರದಿಗಳು.

ಆರಂಭವಾಗಲಿದೆ ಪೇಟಿಎಮ್‌ 'ಫುಡ್‌ ಡೆಲಿವರಿ' ಸೇವೆ!..ವಿಶೇಷತೆ ಏನು?

ಪೇಟಿಎಮ್‌ನ ಆನ್‌ಲೈನ್‌ ಫುಡ್‌ ಡೆಲಿವರಿಯ ಹೊಸ ಸೇವೆಯು ಹಂಗರ್‌ಬಾಕ್ಸ ಆಪ್‌ ನೊಂದಿಗೆ ಅಥವಾ ಪೇಟಿಎಮ್‌ನಲ್ಲಿಯೇ ಒಂದು ಆಯ್ಕೆ ರೂಪದಲ್ಲಿ ಗ್ರಾಹಕರಿಗೆ ದೊರೆಯಲಿದೆ ಎನ್ನಲಾಗುತ್ತಿದೆ. ಹಾಗಾದರೇ ಪೇಟಿಎಮ್‌ ಹಂಗರ್‌ಬಾಕ್ಸ್‌ ಫುಡ್‌ ಡೆಲಿವರಿ ಸರ್ವೀಸ್‌ನ ವಿಶೇಷತೆಗಳೆನು ಮತ್ತು ಇತರೆ ಫುಡ್‌ ಡೆಲಿವರಿ ಕಂಪನಿಗಳಿಗೆ ಯಾವ ಪರಿಣಾಮ ಬೀರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಹಂಗರ್‌ ಬಾಕ್ಸ್‌

ಹಂಗರ್‌ ಬಾಕ್ಸ್‌

ಹಂಗರ್‌ ಬಾಕ್ಸ್ ಟೆಕ್‌ ಸಂಸ್ಥೆ ಎಂದೇ ಗುರುತಿಸಿಕೊಂಡಿರುವ ಫುಡ್‌ ಡೆಲಿವರಿ ಮತ್ತು ಸಲ್ಯೂಶನ್‌ ಸೇವೆ ಮಾಡುತ್ತದೆ. ಇದೀಗ ಪೇಟಿಎಮ್‌ ಕಂಪನಿಯು ಈ ಹಂಗರ್ ಬಾಕ್ಸ್‌‌ ಸ್ಟಾರ್ಟ್‌ಅಪ್‌ ಕಂಪನಿಯೊಂದಿಗೆ ಕೈ ಜೋಡಿಸಲು ಸಿದ್ಧಗೊಂಡಿದೆ. ಈ ಮೂಲಕ ಫುಡ್‌ ಡೆಲಿವರಿ ಬಿ2ಬಿ ಸೇವೆಯಲ್ಲಿ ತನ್ನನು ಜನಪ್ರಿಯಗೊಳಿಸಲು ಮುಂದಾಗಿದೆ.

ಬಂಡವಾಳ ಹೂಡಿಕೆ

ಬಂಡವಾಳ ಹೂಡಿಕೆ

ಪೇಟಿಎಮ್‌ B2B ಫುಡ್‌ ಸೇವೆಯನ್ನು ನೀಡುವ ಉದ್ದೇಶಕ್ಕಾಗಿ ಹಂಗರ್‌ ಬಾಕ್ಸ್‌ ಕಂಪನಿಯಲ್ಲಿ ಸುಮಾರು 15 ಮಿಲಿಯನ್‌ ಹಣವನ್ನು ಹೂಡಿಕೆ ಮಾಡಲು ತಯಾರಾಗಿದೆ. ಹಾಗೆಯೇ ಈ ಕಂಪನಿಗೆ ಈಗಾಗಲೇ ಸಿಂಗಪೂರ್‌ ಲಯನ್‌ರಾಕ್‌ ಕ್ಯಾಪಿಟಲ್‌, ದಕ್ಷಣ ಕೋರಿಯಾದ ಮತ್ತು ಇತರೆ ಕಂಪನಿಗಳು ಬಂಡವಾಳ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ಪೈಪೋಟಿ ನೀಡಲಿದೆ

ಪೈಪೋಟಿ ನೀಡಲಿದೆ

ಭಾರತೀಯ ಫುಡ್‌ ಡೆಲಿವರಿ ವಲಯದಲ್ಲಿ ಈಗಾಗಲೇ ಜೊಮೊಟೊ ಮತ್ತು ಸ್ವಿಗ್ಗಿ ಕಂಪನಿಗಳು ತಮ್ಮ ಸೇವೆಯಿಂದ ಜನಪ್ರಿಯ ಗಳಿಸಿವೆ. ಈ ಕ್ಷೇತ್ರಕ್ಕಿಗ ಪೇಟಿಎಮ್‌ ಹಂಗರ್‌ ಬಾಕ್ಸ್‌ ಸಹಯೋಗದೊಂದಿಗೆ ಎಂಟ್ರಿ ಕೊಡಲಿದ್ದು, ಕಾರ್ಪೊರೇಟ್‌ ವಲಯವನ್ನು ಆಕರ್ಷಿಸಲಿದೆ ಎನ್ನಲಾಗಿದೆ. ಒಟ್ಟಾರೇ ಮಾರುಕಟ್ಟೆಯಲ್ಲಿ ಜೊಮೊಟೊ ಮತ್ತು ಸ್ವಿಗ್ಗಿಗಳೊಂದಿಗೆ ತೀವ್ರ ಸ್ಪರ್ಧೆ ಏರ್ಪಡಲಿದೆ.

ಕಾರ್ಪೊರೇಟ್‌ ವಲಯ

ಕಾರ್ಪೊರೇಟ್‌ ವಲಯ

ಪೇಟಿಎಮ್‌ ಫುಡ್‌ ಡೆಲಿವರಿ ಸೇವೆ ಕ್ಲಿಕ್ಕ್‌ ಆಗಲು ಕಾರ್ಪೊರೇಟ್‌ ವಲಯದತ್ತ ಕಣ್ಣು ನೆಟ್ಟಿದ್ದು, ಕಾರ್ಪೊರೇಟ್‌ ಉದ್ಯೋಗಿಗಳನ್ನು ತನ್ನತ್ತ ಸೆಳೆಯಲು ಯೋಜನೆಯನ್ನು ಹೊಂದಿದೆ. ಹಂಗರ್‌ ಬಾಕ್ಸ್‌ ಆಪ್‌ ಮೈಕ್ರೋಸಾಫ್ಟ್‌, ಕ್ವಾಲ್ಕಮ್‌, ಅಕಸ್ಸೆಂಚರ್‌ ಮತ್ತು ಮ್ಯಾಕ್‌ಕಿನೆಸ್‌ ನಂತಹ ದೊಡ್ಡ ಕಂಪನಿಗಳ ಉದ್ಯೋಗಿಗಳನ್ನು ಗ್ರಾಹಕರನ್ನಾಗಿ ಹೊಂದಲಿದೆ.

ಆರ್ಡರ್‌ ಹೇಗೆ

ಆರ್ಡರ್‌ ಹೇಗೆ

ಪ್ರತ್ಯೇಕ ಹಂಗರ್‌ ಬಾಕ್ಸ್ ಆಪ್‌ ಸೇವೆ ಆರಂಭವಾಗಬಹುದು ಅಥವಾ ಹಂಗರ್‌ ಬಾಕ್ಸ್ ಆಪ್‌ ಪೇಟಿಎಮ್‌ ಆಪ್‌ನೊಂದಿಗೆ ಸಂಯೋಜಿತವಾಗಬಹುದು. ಗ್ರಾಹಕರು ಹಂಗರ್‌ ವಾಕ್ಸ್ ಆಪ್‌ನಲ್ಲಿ ಲಾಗ್‌ ಇನ್‌ ಆಗಿ ಫುಡ್‌ ಆರ್ಡರ್‌ ಮಾಡಬಹುದಾಗಿದ್ದು, ಲಭ್ಯವಿರುವ ಪ್ರಮುಖ ರೆಸ್ಟೋರೆಂಟ್‌ಗಳು ಈ ಆಪ್‌ನಲ್ಲಿ ಸೇರಿರಲಿವೆ ಎನ್ನಲಾಗಿದೆ.

Best Mobiles in India

English summary
Paytm is planning to gain entry into the segment by making an investment in Hungerbox. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X