Paytm: ಪೇಟಿಎಮ್ ಬ್ಯಾಂಕ್ ಕ್ಲೋಸ್ ಆಗಿದೆ ಅನ್ನೋ ಚಿಂತೆ ಬೇಡ, UPI ಸೇವೆ ಇನ್ಮುಂದೆಯೂ ಲಭ್ಯ! ಹೇಗೆ ಸಾಧ್ಯ?
ಪೇಟಿಎಮ್ (Paytm) ನಲ್ಲಿ ಸಾಕಷ್ಟು ತೀವ್ರಗತಿಯ ಬೆಳವಣಿಗೆಗಳನ್ನು ನೀವು ಕಂಡಿದ್ದೀರ. ಅದರಲ್ಲೂ ಕೆಲವೊಂದಷ್ಟು ಜನರು ಮುಂದೆ ಏನಾದರೂ ಸಮಸ್ಯೆ ಆಗಲಿದೆ ಎಂದುಕೊಂಡು ಆಪ್ ಅನ್ನೇ ಅನ್‌ಇನ್‌ಸ್ಟಾಲ್ ಮಾಡಿದ್ದಾರೆ. ಆದರೆ ಇನ್ಮುಂದೆಯೂ ಈ ಆಪ್ ಅನ್ನು ಎಂದಿನಂತೆ ಬಳಕೆ ಮಾಡಬಹುದಾಗಿದ್ದು, ಯುಪಿಐ ಪ್ರಯೋಜನ ಪಡೆಯಬಹುದಾಗಿದೆ.
ಹೌದು, ಪೇಟಿಎಮ್ ಇದೀಗ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಪರಿಸರ ವ್ಯವಸ್ಥೆಯಲ್ಲಿ ಥರ್ಡ್ ಪಾರ್ಟಿ ಆಪ್ ಪೂರೈಕೆದಾರರಾಗಿ (TPAP) ಕಾರ್ಯನಿರ್ವಹಿಸಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ದಿಂದ ಅನುಮೋದನೆಯನ್ನು ಪಡೆದುಕೊಂಡಿದೆ. ಈ ಕಾರಣಕ್ಕೆ ಇನ್ಮುಂದೆ ಯಾವುದೇ ಸಮಸ್ಯೆಗಳಿಲ್ಲದೆ ನೀವು ಎಂದಿನಂತೆ ಯುಪಿಐ ಪಾವತಿಗಳನ್ನು (UPI payment) ಮಾಡಬಹುದಾಗಿದೆ. ಆದರೆ, ಕೆಲವು ಬದಲಾವಣೆಗಳನ್ನು ಈ ವೇಳೆ ಗಮನಿಸಬಹುದು.

ಪೇಟಿಎಮ್ ಪೇಮೆಂಟ್ಸ್: ಈ ಮೊದಲು ನಿರಂತರ ಅನುಸರಣೆ ಸಮಸ್ಯೆಗಳಿಂದಾಗಿ ಪೇಟಿಎಮ್ ಪಾವತಿಗಳ ಬ್ಯಾಂಕ್‌ನ ಹೆಚ್ಚಿನ ಕಾರ್ಯಾಚರಣೆಗಳನ್ನು ನಿಲ್ಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಆದೇಶ ನೀಡಿದೆ. ಈ ಮೂಲಕ ಪ್ರಾಥಮಿಕ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಲಾಗಿದೆ. ಈ ದಿಢೀರ್ ಆದೇಶದಿಂದಾಗಿ ಪೇಟಿಎಮ್ ಮಾತ್ರವಲ್ಲದೆ ಬಳಕೆದಾರರಿಗೂ ದೊಡ್ಡ ಸಮಸ್ಯೆ ನಿರ್ಮಾಣ ಆಗಿತ್ತು. ಅದರಲ್ಲೂ ಪಾಸ್ಟ್‌ಟ್ಯಾಗ್ ಬಳಕೆದಾರರು ಭಾರೀ ಆತಂಕಕ್ಕೆ ಒಳಗಾಗಿದ್ದರು.
ಅಂತೆಯೇ ಮಾರ್ಚ್ 15, 2024 ರಿಂದ ಪೇಟಿಎಮ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ (Paytm Payments Bank) ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡಲು ಆಗುವುದಿಲ್ಲ. ಬಡ್ಡಿ, ಕ್ಯಾಶ್‌ಬ್ಯಾಕ್‌ಗಳು, ಪಾಲುದಾರ ಬ್ಯಾಂಕ್‌ಗಳಿಂದ ಸ್ವೀಪ್-ಇನ್ ಅಥವಾ ಮರುಪಾವತಿಗಳನ್ನು ಹೊರತುಪಡಿಸಿ ಯಾವುದೇ ಕ್ರೆಡಿಟ್‌ಗಳು ಅಥವಾ ಠೇವಣಿಗಳನ್ನು ಕ್ರೆಡಿಟ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ, ಇನ್ಮುಂದೆ ಯುಪಿಐ ಪ್ರಯೋಜನೆ ಪಡೆಯಬಹುದು.
ಥರ್ಡ್ ಪಾರ್ಟಿ ಆಪ್ ಪೂರೈಕೆದಾರರು: ಇಷ್ಟೆಲ್ಲಾ ಆದರೂ ಸಹ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳಲು ಇಚ್ಚೆಪಡದ ಪೇಟಿಎಮ್ ಬೇರೆ ರೀತಿಯಲ್ಲಿ ಬಳಕೆದಾರರಿಗೆ ಸೇವೆ ನೀಡಲು ಮುಂದಾಗಿದ್ದು, ಈ ಸೇವೆಗೆ ಥರ್ಡ್ ಪಾರ್ಟಿ ಆಪ್ ಪೂರೈಕೆದಾರರು (TPAP) ಎಂದು ಕರೆಯಲಾಗುತ್ತದೆ. ಇದು ಯುಪಿಐ ಅನ್ನು ಬಳಸಲು ಬ್ಯಾಂಕ್‌ಗಳೊಂದಿಗೆ ಕಾರ್ಯನಿರ್ವಹಿಸುವ ಸೇವೆಯಾಗಿದ್ದು, ತ್ವರಿತವಾಗಿ ಮತ್ತು ಸುಲಭವಾಗಿ ಹಣವನ್ನು ಕಳುಹಿಸುವ ವ್ಯವಸ್ಥೆಯಾಗಿದೆ.

ಇದರಲ್ಲಿ ಇನ್ಮುಂದೆ ಬಳಕೆದಾರರು ಬಿಲ್‌ಗಳನ್ನು ಪಾವತಿಸುವುದು, ವಸ್ತುಗಳನ್ನು ಖರೀದಿಸುವುದು ಅಥವಾ ಸ್ನೇಹಿತರಿಗೆ ಹಣವನ್ನು ಕಳುಹಿಸುವಂತಹ ಕೆಲಸಗಳನ್ನು ಮಾಡಬಹುದಾಗಿದೆ. ಈಗಾಗಲೇ ನೀವು ಬಳಕೆ ಮಾಡುತ್ತಿರುವ ಫೋನ್ ಪೇ ಹಾಗೂ ಗೂಗಲ್ ಪೇ (Phonepe, Google Pay) ನಂತಹ ಆಪ್‌ಗಳನ್ನು ಬಳಕೆ ಮಾಡುವಂತೆ ಇನ್ಮುಂದೆ ಪೇಟಿಎಮ್ ಅನ್ನೂ ಸಹ ಬಳಕೆ ಮಾಡಬಹುದಾಗಿದೆ. ಆದ್ದರಿಂದ ಈಗ ಪೇಟಿಎಮ್ ಬಳಕೆದಾರರಿಗೆ ಯುಪಿಐ ಕಂಪ್ಲೈಂಟ್ ಆಪ್‌ಗಳನ್ನು ಒದಗಿಸಲು ಸಾಧ್ಯವಾಗುತ್ತದೆ.
ಹಾಗಿದ್ರೆ ಈವರೆಗೆ ಪೇಟಿಎಮ್‌ನಲ್ಲಿ ಇದೇ ಕೆಲಸ ಮಾಡುತ್ತಿದ್ದೇವಲ್ಲ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಇದಕ್ಕೂ ಉತ್ತರ ಇಲ್ಲಿದೆ. ಇಲ್ಲಿಯವರೆಗೆ, ಪೇಟಿಎಮ್‌ನ ಯುಪಿಐ ವಹಿವಾಟುಗಳನ್ನು ಈ ಹಿಂದೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೂಲಕ ಮಾಡಲಾಗುತ್ತಿತ್ತು. ಅದನ್ನು ಈಗ ಸ್ಥಗಿತಗೊಳಿಸಲಾಗಿದ್ದು, ನಾಲ್ಕು ಪ್ರಮುಖ ಬ್ಯಾಂಕ್‌ಗಳಾದ ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಯೆಸ್ ಬ್ಯಾಂಕ್ ಅನ್ನು ಒಸಿಎಲ್‌ಗಾಗಿ ಪಾವತಿ ವ್ಯವಸ್ಥೆ ಪೂರೈಕೆದಾರ ಬ್ಯಾಂಕ್‌ಗಳಾಗಿ ಗೊತ್ತುಪಡಿಸಲಾಗಿದೆ.

ಪೇಟಿಎಮ್ ಯುಪಿಐ ಹ್ಯಾಂಡಲ್ ಕಥೆ ಏನು?: '@paytm' UPI ಹ್ಯಾಂಡಲ್ ಅನ್ನು ಈವರೆಗೂ ಪೇಟಿಎಮ್ ಪೇಮೆಂಟ್ಸ್ ಬ್ಯಾಂಕ್ ನಿರ್ವಹಿಸುತ್ತಿತ್ತು. ಆದರೆ ಈಗ ಹ್ಯಾಂಡಲ್ ಅನ್ನು ಇನ್ಮುಂದೆ ಯೆಸ್ ಬ್ಯಾಂಕ್‌ಗೆ ಮರುನಿರ್ದೇಶಿಸಲಾಗುತ್ತದೆ. ಇದರಿಂದಾಗಿ ಯಾವುದೇ ಸಮಸ್ಯೆಳಿಲ್ಲದೆ ಸರಳ ರೀತಿಯಲ್ಲಿ ಅಸ್ತಿತ್ವದಲ್ಲಿರುವ ಬಳಕೆದಾರರು ಮತ್ತು ವ್ಯಾಪಾರಿಗಳು ತಮ್ಮ ಯುಪಿಐ ವ್ಯವಹಾರಗಳನ್ನು ಸುಲಭವಾಗಿ ಮಾಡಬಹುದಾಗಿದೆ.


Click it and Unblock the Notifications








