ಪೇಟಿಎಮ್‌ ಮಾಡಿ ಪಡೆಯಿರಿ 2100ರೂ. ಕ್ಯಾಶ್‌ಬ್ಯಾಕ್!

|

ದೇಶದಲ್ಲಿ ಪ್ರಸ್ತುತ ಡಿಜಿಟಲ್‌ ಪೇಮೆಂಟ್‌ ಸಿಸ್ಟಮ್ ವ್ಯಾಪಕವಾಗಿ ಬಳಕೆಯಾಗುತ್ತಿದ್ದು, ಅವುಗಳಲ್ಲಿ ಗೂಗಲ್ ಪೇ, ಫೋನ್‌ ಪೇ ಮತ್ತು ಪೇಟಿಎಮ್‌ ಮುಂಚೂಣಿಯ ಸ್ಥಾನದಲ್ಲಿವೆ. ಈ ಆಪ್ಸ್‌ಗಳು ಗ್ರಾಹಕರಿಗೆ ಡಿಜಿಟಲ್ ಪೇಮೆಂಟ್‌ ಮಾಡಲು ಉತ್ತೇಜನ ಮಾಡಲು ಕ್ಯಾಶ್‌ಬ್ಯಾಕ್‌, ಸ್ಕ್ರಾಚ್‌ ಕಾರ್ಡ್‌ ನಂತಹ ಆಫರ್‌ಗಳನ್ನು ಒದಗಿಸುತ್ತಿವೆ. ಈ ಪೈಕಿ ಪೇಟಿಎಮ್‌ ಈಗ ಗ್ರಾಹಕರಿಗೆ ಬಿಗ್ ಕ್ಯಾಶ್‌ಬ್ಯಾಕ್‌ ನೀಡುವುದಾಗಿ ತಿಳಿಸಿದೆ.

ಪೇಟಿಎಮ್‌ ಮಾಡಿ ಪಡೆಯಿರಿ 2100ರೂ. ಕ್ಯಾಶ್‌ಬ್ಯಾಕ್!

ಹೌದು, ಜನಪ್ರಿಯ ಡಿಜಿಟಲ್ ಪೇಮೆಂಟ್‌ ಆಪ್ 'ಪೇಟಿಎಮ್‌',ಕ್ಯಾಶ್‌ಬ್ಯಾಕ್‌ ಪ್ರೊಗ್ರಾಂ ಆರಂಭಿಸಿದ್ದು, ಈ ನಿಟ್ಟಿನಲ್ಲಿ ತನ್ನ ಗ್ರಾಹಕರಿಗೆ 2100ರೂ.ಗಳ ವರೆಗೂ ಕ್ಯಾಶ್‌ಬ್ಯಾಕ್‌ ನೀಡುವುದಾಗಿ ತಿಳಿಸಿದೆ. ಗ್ರಾಹಕರು ವಿವಿಧ ಡಿಜಿಟಲ್‌ ಪೇಮೆಂಟ್‌ಗಳನ್ನು ಮಾಡಲು ಪೇಟಿಎಮ್ ಆಪ್‌ ಅನ್ನು ಬಳಸಲು ಅವರನ್ನು ಆಕರ್ಷಿಸುವುದು ಕಂಪನಿಯ ಉದ್ದೇಶವಾಗಿದ್ದು, ಈ ಕ್ಯಾಶ್‌ಬ್ಯಾಕ್ ಪಡೆಯಲು ಗ್ರಾಹಕರು ಕಂಪನಿಯ ಷರತ್ತುಗಳನ್ನು ಅನುಸರಿಸಬೇಕು.

ಪೇಟಿಎಮ್‌ ಮಾಡಿ ಪಡೆಯಿರಿ 2100ರೂ. ಕ್ಯಾಶ್‌ಬ್ಯಾಕ್!

ಪೇಟಿಎಮ್‌ ಆಪ್‌ನಲ್ಲಿ ಡಿಜಿಟಲ್ ಪೇಮೆಂಟ್‌ ಮಾಡಿದಾಗ ಕ್ಯಾಶ್‌ಬ್ಯಾಕ್‌ ಪಡೆಯಲು ಗ್ರಾಹಕರು ಆಪ್‌ನಲ್ಲಿರುವ UPI-QR ಕೋಡ್‌ ಸ್ಕ್ಯಾನ್‌ರ ಆಯ್ಕೆ ಬಳಸಿ ಪೇಮೆಂಟ್‌ ಮಾಡಿದರೇ ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ ಎಂದು ತಿಳಿಸಿದೆ. ಪೇಟಿಎಮ್ ಆಪ್‌ನಲ್ಲಿ ಗ್ರಾಹಕರು QR ಕೋಡ್‌ ಸ್ಕ್ಯಾನ್‌ ಮಾಡಿ ಮಾಡಿರುವ, ಪೇಮೆಂಟ್‌ ಮೌಲ್ಯದ ಆಧಾರದ ಮೇಲೆ ಕ್ಯಾಶ್‌ಬ್ಯಾಕ್‌ ಸಿಗಲಿದೆ.

ಪೇಟಿಎಮ್‌ ಮಾಡಿ ಪಡೆಯಿರಿ 2100ರೂ. ಕ್ಯಾಶ್‌ಬ್ಯಾಕ್!

QR ಕೋಡ್‌ ಸ್ಕ್ಯಾನ್‌ ಮಾಡಿದರೇ, ಗ್ರಾಹಕರು ಮತ್ತೆ ಮ್ಯಾನುವಲಿಯಾಗಿ ಪೇಮೆಂಟ್‌ ಪಡೆಯುವರ ಅಕೌಂಟ್‌ನ ಮಾಹಿತಿ ಎಂಟ್ರಿ ಮಾಡುವ ಅಗತ್ಯ ಇರುವುದಿಲ್ಲ. QR ಕೋಡ್‌ ಸ್ಕ್ಯಾನ್‌ ಮೂಲಕ ಪೇಮೆಂಟ್‌ಗೆ ಟ್ರಾನ್ಸಾಕ್ಶನ್‌ಗೆ ಯಾವುದೇ ಮಿತಿ ನಿಗದಿ ಮಾಡಿಲ್ಲ. ಶಾಪಿಂಗ್ ಮಾಲ್, ಸಲೂನ್ ಶಾಪ್, ಅಪಾರ್ಟಮೆಂಟ್ ಸರ್ವೀಸ್, ಶಾಲೆಯ ಶುಲ್ಕ, ಸೇರಿದಂತೆ ಎಲ್ಲ ಕಡೆ QR ಕೋಡ್‌ ಸ್ಕ್ಯಾನ್‌ ಮಾಡಿ ಪೇಮೆಂಟ್ ಮಾಡಬಹುದು.

ಪೇಟಿಎಮ್‌ ಆಪ್‌ ಈಗಾಗಲೇ ಎಲ್ಲರೂ ತಿಳಿದಿದ್ದು, ಆದ್ರೆ ಕಂಪನಿಯು ಇತ್ತೀಚಿಗೆ QR ಕೋಡ್‌ ಸ್ಕ್ಯಾನ್‌ ಬದಲಾವಣೆ ಮಾಡಿದೆ. ಯಾವುದೇ ಡಿಜಿಟಲ್‌ ಪೇಮೆಂಟ್‌ ಆಪ್‌ಗಳ ಯುಪಿಐ QR ಕೋಡ್‌ ಸ್ಕ್ಯಾನ್‌ ಮಾಡಿಯೂ ಗ್ರಾಹಕರು ಪೇಮೆಂಟ್ ಮಾಡಬಹುದಾಗಿದೆ. ಈ ಮೊದಲು ಪೇಟಿಮ್ ಆಪ್‌ನಲ್ಲಿ ಕಂಪನಿಯ ಯುಪಿಐ QR ಕೋಡ್‌ ಸ್ಕ್ಯಾನ್‌ ಮಾತ್ರ ಸ್ವೀಕರಿಸುತ್ತಿತ್ತು. ಇತರೆ ಪೇಮೆಂಟ್‌ ಆಪ್‌ಗಳ ಬೆಂಬಲಿಸುತ್ತಿರಲಿಲ್ಲ.

ಪೇಟಿಎಮ್‌ನಲ್ಲಿ QR ಕೋಡ್‌ ಸ್ಕ್ಯಾನ್‌ ಮೂಲಕ ಗ್ರಾಹಕರು ನಡೆಸುವ ಪ್ರತಿ ಟ್ರಾನ್ಸಾಕ್ಶನ್ ಆಧಾರದ ಮೇಲೆ ಗ್ರಾಹಕರು ಕ್ಯಾಶ್‌ಬ್ಯಾಕ್ ದೊರೆಯಲಿದೆ. ಈ ಆಫರ್‌ನೊಂದಿಗೆ ಕಂಪನಿಯು ಮತ್ತೊಂದು ಅನುಕೂಕ ಮಾಡಿಕೊಟ್ಟಿದ್ದು, ಮೊಬೈಲ್ ನಂಬರ್ ನಮೂದಿಸುವ ಮೂಲಕ ಹಣ ವರ್ಗಾವಣೆ ಮಾಡುವ ಸೌಲಭ್ಯ ನೀಡಿದೆ. ಹಣ ನೇರವಾಗಿ ಅವರ ಅಕೌಂಟ್‌ಗೆ ಜಮಾ ಆಗುತ್ತದೆ.

Best Mobiles in India

English summary
The amount of cashback on each QR code-based transaction will depend on the amount of money spend and the algorithm. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X