Paytm ನಿಂದ ಬಸ್,ರೈಲು,ವಿಮಾನ ಟಿಕೆಟ್ ಬುಕಿಂಗ್‌ನಲ್ಲಿ ಭಾರೀ ರಿಯಾಯಿತಿ: ಆಫರ್ ಇನ್ನೆರಡು ದಿನವಷ್ಟೇ!
ನೀವೇನಾದರೂ ಯಾವುದೇ ಪೂರ್ವಸಿದ್ಧತೆಯಿಲ್ಲದ ಪ್ರಯಾಣಕ್ಕೆ ಮುಂದಾಗಿದ್ದರೆ ಈ ವೇಳೆ ಪೇಟಿಎಮ್(Paytm) ಅನ್ನು ಮರೆಯಬೇಡಿ. ಯಾಕೆಂದರೆ ಬಳಕೆದಾರರಿಗೆ ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡುವ ಪಾವತಿ ಆಪ್ ಪೇಟಿಎಮ್ ಟ್ರಾವೆಲ್ ಕಾರ್ನಿವಲ್ ಅನ್ನು ಪ್ರಾರಂಭಿಸಿದ್ದು, ಈ ಮೂಲಕ ನೀವು ನಿರೀಕ್ಷೆ ಮಾಡಿರದ ಆಕರ್ಷಕ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದೆ.
ಹೌದು, ಮೇ 1 ರಿಂದ 5 ರವರೆಗೆ ನಡೆಯಲಿರುವ ಈ ಟ್ರಾವೆಲ್ ಕಾರ್ನಿವಲ್ ಸೇಲ್‌ನಲ್ಲಿ ಬಳಕೆದಾರರು ವಿಮಾನ, ರೈಲು ಮತ್ತು ಬಸ್ ಟಿಕೆಟ್‌ಗಳನ್ನು ಪೇಟಿಎಮ್ ಆಪ್ ಬಳಕೆ ಮಾಡಿಕೊಂಡು ಬುಕ್ ಮಾಡಿದರೆ ಈ ಆಕರ್ಷಕ ರಿಯಾಯಿತಿ ಸಿಗಲಿದೆ. ಹಾಗಿದ್ರೆ, ಯಾವೆಲ್ಲಾ ವಿಮಾನಗಳನ್ನು ಈ ಮೂಲಕ ಬುಕಿಂಗ್ ಮಾಡಬಹುದು, ಬಸ್‌ಗಳಲ್ಲಿ ಹಾಗೂ ಟ್ರೈನ್‌ಗಳಲ್ಲಿ ಸಿಗುವ ರಿಯಾಯಿತಿ ಎಷ್ಟು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಪೇಟಿಎಮ್ ಟ್ರಾವೆಲ್ ಕಾರ್ನಿವಲ್: ಈ ವಿಶೇಷ ಆಫರ್‌ನಲ್ಲಿ ಬಳಕೆದಾರರು ಇಂಡಿಗೋ, ಸ್ಪೈಸ್‌ಜೆಟ್, ಗೋಫಸ್ಟ್, ವಿಸ್ತಾರಾ, ಆಕಾಶ ಏರ್, ಏರ್‌ಏಷ್ಯಾ ಮತ್ತು ಏರ್ ಇಂಡಿಯಾ ಸೇರಿದಂತೆ ವಿವಿಧ ವಿಮಾನಗಳ ಮೇಲೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಪೇಟಿಎಮ್ RBL ಬ್ಯಾಂಕ್, ಯೆಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು HSBC ಇಂಡಿಯಾ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಂಐ ಮೂಲಕ ಈ ವ್ಯವಹಾರ ನಡೆಸಿದರೆ ಶೇ 15 ರಷ್ಟು ತ್ವರಿತ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ.
ಇವರಿಗೆ ವಿಶೇಷ ರಿಯಾಯಿತಿ: ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಸಶಸ್ತ್ರ ಪಡೆ ಸಿಬ್ಬಂದಿಗೆ ವಿಶೇಷ ರಿಯಾಯಿತಿ ಲಭ್ಯವಾಗುತ್ತಿದ್ದು, ಹೆಚ್ಚಿನ ಅನುಕೂಲಕ್ಕಾಗಿ ಬಳಕೆದಾರರು ಶೂನ್ಯ ಅನುಕೂಲಕರ ಶುಲ್ಕವನ್ನು ಆರಿಸಿಕೊಳ್ಳಬಹುದು. ಇದರೊಂದಿಗೆ ಬಸ್ ಬುಕಿಂಗ್‌ನಲ್ಲಿ 25 % ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಈ ಆಫರ್ 2,500 ಕ್ಕೂ ಹೆಚ್ಚಿನ ಬಸ್ ಸೇವೆಯಲ್ಲಿ ಲಭ್ಯ ಇರಲಿದೆ.
ರೈಲು ಟಿಕೆಟ್ ಬುಕಿಂಗ್‌ನಲ್ಲಿರುವ ಸೌಲಭ್ಯ: ಇನ್ನು ರೈಲು ಟಿಕೆಟ್ ವಿಚಾರಕ್ಕೆ ಬರುವುದಾದರೆ ಯುಪಿಐ ಮೂಲಕ ಪಾವತಿಗಳ ಮೇಲೆ ಪೇಟಿಎಮ್ ಶೂನ್ಯ ಪಾವತಿ ಗೇಟ್‌ವೇ ಶುಲ್ಕವನ್ನು ನೀಡುತ್ತಿದೆ. ಪೇಟಿಎಮ್ ಆಪ್ ಬಳಕೆದಾರರಿಗೆ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು, ಅವರ ಬುಕಿಂಗ್‌ಗಳ PNR ಸ್ಥಿತಿಯನ್ನು ಪರಿಶೀಲಿಸಲು, ರೈಲುಗಳನ್ನು ಲೈವ್ ಆಗಿ ಟ್ರ್ಯಾಕ್ ಮಾಡಲು ಮತ್ತು ಎಲ್ಲಾ ರೈಲು ಪ್ರಯಾಣದ ಪ್ರಶ್ನೆಗಳಿಗೆ 24X7 ಗ್ರಾಹಕ ಬೆಂಬಲವನ್ನು ಪಡೆಯಲು ಇದು ಸೌಲಭ್ಯ ಕಲ್ಪಿಸಿಕೊಡುತ್ತದೆ.

ಟಿಕೆಟ್ ರದ್ದು ಮಾಡಿದರೆ 100% ಮರುಪಾವತಿ: ನೀವೇನಾದರೂ ಬುಕಿಂಗ್ ವೇಳೆ ಆ ಸ್ಥಳಕ್ಕೆ ಪ್ರಯಾಣಿಸುತ್ತಿದ್ದೀರೋ ಇಲ್ಲವೋ ಎಂದು ನಿಮಗೆ ಖಚಿತವಿಲ್ಲದಿದ್ದರೆ, 'ಕ್ಯಾನ್ಸಲ್ ಪ್ರೊಟೆಕ್ಟ್ ಕವರ್ ' ಮೂಲಕ ಬುಕಿಂಗ್ ಮಾಡಬಹುದು. ಇದರಿಂದಾಗಿ ವಿಮಾನ, ರೈಲು ಮತ್ತು ಬಸ್ ಟಿಕೆಟ್‌ಗಳನ್ನು ರದ್ದುಗೊಳಿಸಿದರೆ 100 % ಮರುಪಾವತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಯಾವುದೇ ಗುಪ್ತ ಶುಲ್ಕಗಳು ಅಥವಾ ರದ್ದತಿ ಶುಲ್ಕ ಇರುವುದಿಲ್ಲ.
ಪಾವತಿಗೆ ಹರಸಾಹಸ ಪಡಬೇಕಿಲ್ಲ: ಪೇಟಿಎಮ್ ಪಾವತಿ ವಿಧಾನಗಳ ನಮ್ಯತೆಯನ್ನು ಒದಗಿಸಿದ್ದು, ಬಳಕೆದಾರರು ತಮ್ಮ ಟಿಕೆಟ್‌ಗಳಿಗೆ ಪೇಟಿಎಮ್ ಯುಪಿಐ, ಪೇಟಿಎಮ್ ವಾಲೆಟ್, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿ ಮಾಡಬಹುದಾಗಿದೆ. ಪೇಟಿಎಮ್ ಟ್ರಾವೆಲ್ ಕಾರ್ನಿವಲ್ ಮೂಲಕ ನೀವು ಪ್ರಯಾಣದ ಟಿಕೆಟ್‌ಗಳನ್ನು ರಿಯಾಯಿತಿ ದರದಲ್ಲಿ ಕಾಯ್ದಿರಿಸಲು ಮತ್ತು ತೊಂದರೆ-ಮುಕ್ತ ಪ್ರಯಾಣದ ಅನುಭವವನ್ನು ಪಡೆದುಕೊಳ್ಳಲು ಉತ್ತಮ ಅವಕಾಶ ಇದಾಗಿದೆ.

ಇನ್ನು ಪೇಟಿಎಮ್ ವಿಶಿಷ್ಠ ಕಾರ್ಯವೊಂದನ್ನು ಮಾಡಿದ್ದು, ಅದರಂತೆ 2018 ರಲ್ಲಿ ಬಿಕೆಟಿಸಿ ಮತ್ತು ಪೇಟಿಎಮ್ ನಡುವೆ ಮಾಡಿಕೊಂಡ ಔಪಚಾರಿಕ ಒಪ್ಪಂದದ ಭಾಗವಾಗಿ ದೇಣಿಗೆಗಾಗಿ ಕೇದಾರನಾಥ ಮತ್ತು ಬದರಿನಾಥದ ಗೇಟ್‌ಗಳ ಹೊರಗೆ ಪೇಟಿಎಮ್ ನಿಂದ ಕ್ಯೂರ್ ಕೋಡ್‌ನ ಸಣ್ಣ ಬೋರ್ಡ್‌ಗಳನ್ನು ಹಾಕಲಾಗಿದೆ. ಇದನ್ನು ಹಾಕಿ ಕೆಲವು ದಿನಗಳಷ್ಟೇ ಆಗಿದ್ದು, ಈ ಕ್ಯೂಆರ್ ಕೋಡ್‌ಗಳ ಮೂಲಕ ಬಿಕೆಟಿಸಿಗೆ 67 ಲಕ್ಷ ದೇಣಿಗೆಯ ಮೂಲಕ ಬಂದಿದೆ.


Click it and Unblock the Notifications








