ಸುಲಭವಾಗಿ ಪ್ಲಾಟ್‌ಫಾರ್ಮ್ ಮತ್ತು ಕಾಯ್ದಿರಿಸದ ಟಿಕೆಟ್ ಪಡೆಯುವುದು ಹೇಗೆ?

|

ಪ್ರಸ್ತುತ ಡಿಜಿಟಲ್ ವ್ಯವಸ್ಥೆ ಎಲ್ಲೆಡೆ ಮುನ್ನೆಲೆಯಲ್ಲಿ ಕಾಣಿಸಿಕೊಂಡಿದೆ. ರೈಲು ಟಿಕೆಟ್ ಪಡೆಯುವಲ್ಲಿಯೂ ಇದೀಗ ಡಿಜಿಟಲ್ ವ್ಯವಸ್ಥೆ ಹೆಚ್ಚು ಬಳಕೆಯಲ್ಲಿದೆ. ಡಿಜಿಟಲ್ ಟಿಕೆಟಿಂಗ್ ಅನ್ನು ಸಕ್ರಿಯಗೊಳಿಸಲು ಪೇಟಿಎಮ್ (Paytm) IRCTC ಯೊಂದಿಗೆ ಪಾಲುದಾರಿಕೆ ಹೊಂದಿದೆ. ಹೊಸ ಸೌಲಭ್ಯವು ರೈಲ್ವೇ ನಿಲ್ದಾಣಗಳಲ್ಲಿನ ATVM ಗಳಲ್ಲಿ Paytm QR ಮೂಲಕ ಲಭ್ಯವಿರುತ್ತದೆ. ಈ ಹೊಸ ಪಾಲುದಾರಿಕೆಯು ರೈಲ್ವೇಯಲ್ಲಿನ ಪ್ರಯಾಣಿಕರಿಗೆ ಪೇಟಿಎಮ್ ಬಳಸಿಕೊಂಡು ಕೆಲವು ಟಿಕೆಟ್‌ಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.

ಪೇಟಿಎಮ್‌ ಮತ್ತು ಐಆರ್‌ಸಿಟಿಸಿ ಪಾಲುದಾರಿಕೆ ಹೇಗೆ ಕೆಲಸ ಮಾಡುತ್ತದೆ?

ಪೇಟಿಎಮ್‌ ಮತ್ತು ಐಆರ್‌ಸಿಟಿಸಿ ಪಾಲುದಾರಿಕೆ ಹೇಗೆ ಕೆಲಸ ಮಾಡುತ್ತದೆ?

ಪೇಟಿಎಮ್‌ ಮತ್ತು ಐಆರ್‌ಸಿಟಿಸಿ (Paytm-IRCTC) ಹೊಸ ಪಾಲುದಾರಿಕೆಯು ಪ್ರಯಾಣಿಕರಿಗೆ ಕಾಯ್ದಿರಿಸದ ರೈಲು ಪ್ರಯಾಣದ ಟಿಕೆಟ್‌ಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಖರೀದಿಸಲು, ಟಿಕೆಟ್‌ಗಳನ್ನು ನವೀಕರಿಸಲು ಮತ್ತು ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳಲ್ಲಿ (ATVMs) ಸ್ಮಾರ್ಟ್ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು ಅನುವು ಮಾಡಿಕೊಡುತ್ತದೆ.

ಪೇಟಿಎಮ್

ಹಾಗೆಯೇ ಪ್ರಯಾಣಿಕರು ಪೇಟಿಎಮ್‌ ವಿವಿಧ ಪಾವತಿ ಆಯ್ಕೆಗಳನ್ನು ಪಡೆಯುತ್ತಾರೆ. ಪ್ರಯಾಣಿಕರು ಪೇಟಿಎಮ್ UPI, ಪೇಟಿಎಮ್ ವಾಲೇಟ್, ಪೇಟಿಎಮ್ ಪೋಸ್ಟ್‌ಪೇಯ್ಡ್ (ಈಗ ಖರೀದಿಸಿ, ನಂತರ ಪಾವತಿಸಿ), ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಅನ್ನು ಬಳಸಲು ಸಾಧ್ಯವಾಗುತ್ತದೆ. ATVM ಗಳಲ್ಲಿ UPI ಮೂಲಕ ಟಿಕೆಟಿಂಗ್ ಸೇವೆಗಳಿಗೆ ಡಿಜಿಟಲ್ ಪಾವತಿ ಮಾಡುವ ಆಯ್ಕೆಯನ್ನು ಭಾರತೀಯ ರೈಲ್ವೇ ಮೊದಲ ಬಾರಿಗೆ ಒದಗಿಸುತ್ತಿದೆ ಎಂದು ಪೇಟಿಎಮ್ ಹೇಳಿಕೊಂಡಿದೆ.

ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ ATVM ಗಳು

ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರ ATVM ಗಳು

ರೈಲು ನಿಲ್ದಾಣಗಳಲ್ಲಿ ATVM ಗಳನ್ನು ಇರಿಸಲಾಗಿದೆ. ಅವು ಟಿಕೆಟಿಂಗ್ ಉದ್ದೇಶಗಳಿಗಾಗಿ ಟಚ್-ಸ್ಕ್ರೀನ್‌ಗಳನ್ನು ಬಳಸುವ ಕಿಯೋಸ್ಕ್‌ಗಳಾಗಿವೆ. ಈ ಕಿಯೋಸ್ಕ್‌ಗಳು ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್‌ಗಳ ಅಗತ್ಯವಿಲ್ಲದೆ ಡಿಜಿಟಲ್ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ. ಹೊಸ ಕ್ವಿಕ್ ರೆಸ್ಪಾನ್ಸ್ (QR) ಕೋಡ್ ಆಧಾರಿತ ಡಿಜಿಟಲ್ ಪಾವತಿ ಪರಿಹಾರವು ಈಗಾಗಲೇ ಭಾರತದ ರೈಲು ನಿಲ್ದಾಣಗಳಲ್ಲಿ ಎಲ್ಲಾ ATVM ಯಂತ್ರಗಳಲ್ಲಿ ಲೈವ್ ಆಗಿದೆ.

ATVM ಗಳಲ್ಲಿ ಹೊಸ ಡಿಜಿಟಲ್ ಪಾವತಿ ಫೀಚರ್ ಬಳಕೆ ಹೇಗೆ?

ATVM ಗಳಲ್ಲಿ ಹೊಸ ಡಿಜಿಟಲ್ ಪಾವತಿ ಫೀಚರ್ ಬಳಕೆ ಹೇಗೆ?

* ಹತ್ತಿರದ ರೈಲು ನಿಲ್ದಾಣದಲ್ಲಿರುವ ATVM ನಲ್ಲಿ, ಟಿಕೆಟ್ ಬುಕಿಂಗ್‌ಗಾಗಿ ಮಾರ್ಗವನ್ನು ಆಯ್ಕೆಮಾಡಿ ಅಥವಾ ರೀಚಾರ್ಜ್‌ಗಾಗಿ ಸ್ಮಾರ್ಟ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ
ಪಾವತಿ ಆಯ್ಕೆಯಾಗಿ ಪೇಟಿಎಮ್‌ ಅನ್ನು ಆರಿಸಿ.
* ವ್ಯವಹಾರವನ್ನು ಅನುಕೂಲಕರವಾಗಿ ಪೂರ್ಣಗೊಳಿಸಲು ಪ್ರದರ್ಶಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡಿ
* ಆಯ್ಕೆಯನ್ನು ಅವಲಂಬಿಸಿ, ಭೌತಿಕ ಟಿಕೆಟ್ ಅನ್ನು ರಚಿಸಲಾಗುತ್ತದೆ ಅಥವಾ ಸ್ಮಾರ್ಟ್ ಕಾರ್ಡ್ ಅನ್ನು ರೀಚಾರ್ಜ್ ಮಾಡಲಾಗುತ್ತದೆ

ಫೋನ್‌ ಮೂಲಕ ಟಿಕೆಟ್ ಬುಕ್ ಮಾಡಿ

ಫೋನ್‌ ಮೂಲಕ ಟಿಕೆಟ್ ಬುಕ್ ಮಾಡಿ

ಸದ್ಯ ಸ್ಮಾರ್ಟ್‌ಫೋನ್ ಮೂಲಕವೇ ತ್ವರಿತವಾಗಿ ಆನ್‌ಲೈನ್‌ನಲ್ಲಿ ಟ್ರೈನ್ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ. ಹಾಗೆಯೇ ಟಿಕೆಟ್ ಬುಕ್ ಮಾಡಲು ಹಲವು ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹಾಗೂ ಆಪಲ್‌ ಆಪ್‌ ಸ್ಟೋರ್ ಲಭ್ಯ ಇವೆ. ಪ್ರಯಾಣಿಕರು ಟ್ರೈನ್ ಟಿಕೆಟ್ ಬುಕ್ ಮಾಡಿದ ನಂತರ PNR ಸ್ಟೇಟಸ್‌ ಹಾಗೂ ಟ್ರೈನ್‌ ಸ್ಟೇಟಸ್‌ ಸಹ ಚೆಕ್ ಮಾಡಬಹುದಾದ ಆಯ್ಕೆಗಳು ಇವೆ. ಟಿಕೆಟ್ ಬುಕ್ ಮಾಡಲು ಲಭ್ಯವಿರುವ ಕೆಲವುಯ ಪ್ರಮುಖ ಆಪ್‌ಗಳ ಬಗ್ಗೆ ಮುಂದೆ ತಿಳಿಯೋಣ.

IRCTC ರೈಲ್ ಕನೆಕ್ಟ್ (IRCTC Rail Connect)

IRCTC ರೈಲ್ ಕನೆಕ್ಟ್ (IRCTC Rail Connect)

IRCTC ಆಪ್‌ ಇಲಾಖೆಯ ಅಧಿಕೃತ ರೈಲು ಬುಕಿಂಗ್ ಅಪ್ಲಿಕೇಶನ್ ಆಗಿದೆ. ಈ ಆಪ್‌ ಆಂಡ್ರಾಯ್ಡ್ ಮತ್ತು ಐಓಎಸ್‌ ಬಳಕೆದಾರರಿಬ್ಬರಿಗೂ ಲಭ್ಯವಿದೆ. ಅಪ್ಲಿಕೇಶನ್ ಸರಳ ವಿನ್ಯಾಸ ಮತ್ತು ಬಳಸಲು ಸುಲಭವಾದ ಇಂಟರ್ಫೇಸ್ ಅನ್ನು ಹೊಂದಿದೆ. ಸೀಟ್ ಲಭ್ಯತೆ, ತತ್ಕಾಲ್ ರೈಲು ಟಿಕೆಟ್, PNR ಸ್ಟೇಟಸ್‌ ಮತ್ತು ಆನ್‌ಲೈನ್‌ನಲ್ಲಿ ರೈಲು ಟಿಕೆಟ್ ಕಾಯ್ದಿರಿಸಲು ಈ ಅಪ್ಲಿಕೇಶನ್ ಉತ್ತಮ ಅನಿಸುತ್ತದೆ.

Ixigo ಟ್ರೈನ್ಸ್

Ixigo ಟ್ರೈನ್ಸ್

ಪ್ರಮುಖ ರೈಲು ಟಿಕೆಟ್ ಬುಕಿಂಗ್ ಆಪ್ಸ್‌ಗಳ ಪೈಕಿ Ixigo ಅಪ್ಲಿಕೇಶನ್‌ ಸಹ ಒಂದಾಗಿದೆ. ಈ ಆಪ್‌ನಲ್ಲಿ ಪ್ರಯಾಣಿಕರು ರೈಲು ಟಿಕೆಟ್ ಕಾಯ್ದಿರಿಸಬಹುದಾಗಿದೆ. ಟ್ರೈನ್ ಲೈವ್ ಸ್ಟೇಟಸ್‌ ಟ್ರಾಕಿಂಗ್ ಮಾಡಬಹುದಾಗಿದ್ದು, ಹಾಗೆಯೇ PNR ಸ್ಟೇಟಸ್‌ ಸಹ ಪರಿಶೀಲಿಸಬಹುದಾಗಿದೆ. ಇನ್ನು ಈ ಆಪ್‌ ಆಂಡ್ರಾಯ್ಡ್ ಮತ್ತು ಐಫೋನ್ ಎರಡೂ ಡಿವೈಸ್‌ಗಳಲ್ಲಿಯೂ ಲಭ್ಯವಿದೆ. ಹಾಗೆಯೇ ಈ ಆಪ್‌ನಲ್ಲಿ ವಿಮಾನಗಳು, ಬಸ್ಸುಗಳು, ಹೋಟೆಲ್‌ಗಳು ಮತ್ತು ಕ್ಯಾಬ್‌ಗಳನ್ನು ಸಹ ಕಾಯ್ದಿರಿಸಬಹುದು.

ರೈಲು ಯಾತ್ರಾ (RailYatra)

ರೈಲು ಯಾತ್ರಾ (RailYatra)

ರೈಲು ಯಾತ್ರಾ ಆಪ್‌ ರೈಲು ಟಿಕೆಟ್ ಕಾಯ್ದಿರಿಸಲು ಭಾರತೀಯ ರೈಲ್ವೆಯ ಮತ್ತೊಂದು ಅತ್ಯುತ್ತಮ ಅಪ್ಲಿಕೇಶನ್ ಆಗಿದೆ. ಈ ರೈಲು ಯಾತ್ರಾ ಆಪ್‌ ಅಪ್ಲಿಕೇಶನ್ ಐಫೋನ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ನಲ್ಲಿ ಲಭ್ಯವಿದೆ. ಸೀಟ್ ಲಭ್ಯತೆ, ಟಿಕೆಟ್ ಶುಲ್ಕ ಮತ್ತು ಟ್ರೈನ್ ಲೈವ್ ಸ್ಟೇಟಸ್‌ ಜೊತೆಗೆ ಟ್ರೈನ್ ಆಗಮನ / ನಿರ್ಗಮನವನ್ನು ಪರಿಶೀಲಿಸಲು ಈ ಅಪ್ಲಿಕೇಶನ್ ಅನ್ನು ಬಳಸಬಹುದು. ಇನ್ನು ಈ ಆಪ್‌ನಲ್ಲಿ ಸ್ಟೇಷನ್ ಹತ್ತಿರದ ಆಸ್ಪತ್ರೆಯ ಬಗ್ಗೆ ಮಾಹಿತಿ ಪಡೆಯಲು, ಮೆಡಿಕಲ್ ಎಮರ್ಜೆನ್ಸಿ ಎಂಬ ವಿಶೇಷ ಆಯ್ಕೆ ಇದೆ.

ಕನ್ಫರ್ಮ್ ಟಿಕೆಟ್ (ConfirmTkt)

ಕನ್ಫರ್ಮ್ ಟಿಕೆಟ್ (ConfirmTkt)

ಕನ್ಫರ್ಮ್ ಟಿಕೆಟ್ ರೈಲ್ವೆಯ ಇಲಾಖೆಯ ಅಧಿಕೃತ IRCTCಯ ಪಾಲುದಾರ ರೈಲು ಅಪ್ಲಿಕೇಶನ್ ಆಗಿದೆ. ಈ ಆಪ್‌ ಸಹ ಎಲ್ಲಾ ಅಗತ್ಯ ಫೀಚರ್ಸ್‌/ಸೇವೆಗಳ ಆಯ್ಕೆ ಹೊಂದಿದೆ. ಈ ಆಪ್‌ನಲ್ಲಿ ಸುಲಭವಾಗಿ IRCTC ಟಿಕೆಟ್‌ ಹಾಗೂ ತತ್ಕಾಲ್ ಟಿಕೆಟ್‌ಗಳ ಸರ್ಚ್ ಮಾಡಬಹುದು. ರನ್ನಿಂಗ್ ಟ್ರೈನಿನ ಲೈವ್ ಸ್ಟೇಟಸ್‌ ಚೆಕ್ ಮಾಡಬಹುದಾಗಿದೆ. ಹಾಗೆಯೇ ರೈಲು ವೇಳಾಪಟ್ಟಿಯನ್ನು ತೋರಿಸುವ ಆಯ್ಕೆಯನ್ನು ಇದು ಒಳಗೊಂಡಿದೆ.

ಮೇಕ್ ಮೈ ಟ್ರಿಪ್- (MakeMyTrip)

ಮೇಕ್ ಮೈ ಟ್ರಿಪ್- (MakeMyTrip)

ಒಂದೇ ಆಪ್‌ನಲ್ಲಿ ರೈಲು, ಹೋಟೆಲ್, ಫ್ಲೈಟ್, ಬಸ್, ಕ್ಯಾಬ್ ಮತ್ತು ಇನ್ನೂ ಹೆಚ್ಚಿನ ಸೇವೆಗಳನ್ನು ಕಾಯ್ದಿರಿಸುವುದಕ್ಕೆ ಮೇಕ್‌ ಮೈ ಟ್ರಿಪ್ ಆಪ್‌ ಒಂದು ಉತ್ತಮ ನಿಲುಗಡೆ. ಈ ಆಪ್‌ನಲ್ಲಿ ರೈಲು ಟಿಕೆಟ್ ಬುಕ್ ಮಾಡಲು ಆಯ್ಕೆ ಜೊತೆಗೆ ಟ್ರೈನ್ ವೇಳಾಪಟ್ಟಿಗಳನ್ನು ಸಹ ಪರಿಶೀಲಿಸಬಹುದು. ಹಾಗೆಯೇ ಟ್ರೈನ್‌ ಲೈವ್ ರನ್ನಿಂಗ್ ಸ್ಟೇಟಸ್‌ ಅನ್ನು ತಿಳಿಯಬಹುದಾಗಿದೆ. PNR ಸ್ಟೇಟಸ್‌ ಸಹ ಚೆಕ್ ಮಾಡಬಹುದಾಗಿದೆ.

Best Mobiles in India

English summary
Paytm Partners with IRCTC for Platform and Unreserved tickets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X