Home
ಸುದ್ದಿಜಾಲ

Paytm UPI Lite : ಪೇಟಿಎಮ್‌ ಬಳಕೆದಾರರು ಡಿಜಿಟಲ್‌ ಪಾವತಿ ಮಾಡಲು ಇನ್ಮುಂದೆ ಪಿನ್‌ ಎಂಟ್ರಿ ಮಾಡಬೇಕಿಲ್ಲ!

ಯಾವುದೇ ಸ್ಟೋರ್‌ನಲ್ಲಿ ಏನಾದರೂ ಖರೀದಿ ಮಾಡಬೇಕು ಎಂದರೆ ಈಗಂತೂ ಜೇಬಿನಿಂದ ಹಣ ತೆಗೆದುಕೊಡುವ ಬದಲಾಗಿ ಅಲ್ಲೆಲ್ಲೋ ಅಂಟಿಸಿರುವ ಸ್ಕ್ಯಾನ್‌ ಸ್ಟಿಕ್ಕರ್‌ ಮೇಲೆ ಮೊಬೈಲ್‌ ಇರಿಸಿ ಡಿಜಿಟಲ್‌ ಹಣ ಪಾವತಿ ಮಾಡುತ್ತೇವೆ. ಹಾಗೆಯೇ ಇದರಲ್ಲಿ ಪ್ರತಿ ಪಾವತಿಗೂ ಪಿನ್‌ ನಮೂದಿಸಲೇ ಬೇಕು. ಆದರೆ, ಇನ್ಮುಂದೆ ಬಳಕೆದಾರರಿಗೆ ಹೊಸ ಸೌಲಭ್ಯ ಲಭ್ಯವಾಗಲಿದ್ದು, ಈ ಮೂಲಕ ಸುಲಭ ಹಾಗೂ ವೇಗದ ಪಾವತಿ ಪ್ರಕ್ರಿಯೆ ನಡೆಸಬಹುದು.

Paytm ಬಳಕೆದಾರರು ಡಿಜಿಟಲ್‌ ಪಾವತಿ ಮಾಡಲು ಇನ್ಮುಂದೆ ಪಿನ್‌ ಎಂಟ್ರಿ ಮಾಡಬೇಕಿಲ್ಲ!

ಹೌದು, ಪ್ರಮುಖ ಯುಪಿಐ ಪೇಮೆಂಟ್‌ ಆಪ್‌ಗಳಲ್ಲಿ ಒಂದಾದ ಪೇಟಿಎಮ್‌ನಲ್ಲಿ ವಿಶೇಷ ಸೌಲಭ್ಯ ಲಭ್ಯವಾಗಲಿದ್ದು, ಇದಕ್ಕಾಗಿ ಪೇಟಿಎಮ್‌ ಆಪ್‌ ಪೇಟಿಎಮ್‌ ಯುಪಿಐ ಲೈಟ್‌ (Paytm UPI Lite) ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ. ಪಿನ್‌ ನಮೂದಿಸದೆ ಎಷ್ಟು ಹಣ ಪಾವತಿ ಮಾಡುವುದು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪೇಟಿಎಮ್‌ ಯುಪಿಐ ಲೈಟ್‌

ಕೆಲವು ದಿನಗಳಿಂದ ಬ್ಯಾಂಕಿಂಗ್‌ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ಜರುಗುತ್ತಿವೆ. ಇದರ ಭಾಗವಾಗಿಯೇ ಭಾರತದಲ್ಲಿ ಮೊದಲ ಬಾರಿಗೆ ಇಂಟರ್ನೆಟ್‌ ಇಲ್ಲದೆ ಹಣ ಪಾವತಿ ಮಾಡುವ ಫೀಚರ್ಸ್‌ ಅನ್ನು ಹೆಚ್‌ಡಿಎಫ್‌ಸಿ ಒದಗಿಸಿದೆ. ಇದರೊಂದಿಗೆ ಈಗ ಪೇಟಿಎಮ್‌ ಯುಪಿಐ ಲೈಟ್‌ ಬಳಕೆದಾರರಿಗೆ ಪಿನ್‌ ನಮೂದಿಸಿ ಎಂದು ಕೇಳದೆ ಹಣ ಪಾವತಿಗೆ ಅನುಕೂಲ ಮಾಡಿಕೊಡುತ್ತಿದೆ.

ಇನ್ನು ಈ ಯುಪಿಐ ಲೈಟ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ವಿನ್ಯಾಸಗೊಳಿಸಿದ್ದು, ಸೆಪ್ಟೆಂಬರ್ 2022 ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಲಾಂಚ್‌ ಮಾಡಲಾಗಿದೆ. ಅದರಂತೆ ಬ್ಯಾಂಕ್ ವಹಿವಾಟುಗಳ ಸಂಖ್ಯೆಯ ಬಗ್ಗೆ ಚಿಂತಿಸದೆ ಸಣ್ಣ ಮೌಲ್ಯದ ವಹಿವಾಟುಗಳನ್ನು ಇದು ಅನುಮತಿಸಲಿದ್ದು, ಈ ಫೀಚರ್ಸ್‌ ದೇಶಾದ್ಯಂತ ಡಿಜಿಟಲ್ ಪಾವತಿಗಳ ಇನ್ನಷ್ಟು ಬಳಕೆಗೆ ಅನುವು ಮಾಡಿಕೊಡಲಿದೆ ಎನ್ನಲಾಗಿದೆ.

ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಮಾಹಿತಿ ಲಭ್ಯ ಇರುವುದಿಲ್ಲ

ಇನ್ನು ಈ ಯುಪಿಐ ಲೈಟ್‌ನೊಂದಿಗೆ ಬಳಕೆದಾರರು ಹೆಚ್ಚಿನ ಸಂಖ್ಯೆಯ ಸಣ್ಣ ಮೌಲ್ಯದ ಯುಪಿಐ ಪಾವತಿಗಳನ್ನು ತ್ವರಿತ ಗತಿಯಲ್ಲಿ ಮಾಡಬಹುದಾಗಿದ್ದು, ಈ ವಹಿವಾಟುಗಳು ಪೇಟಿಎಮ್‌ ಬ್ಯಾಲೆನ್ಸ್ ಮತ್ತು ಇತಿಹಾಸ ವಿಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ. ಆದರೆ, ಬ್ಯಾಂಕ್ ಪಾಸ್‌ಬುಕ್‌ನಲ್ಲಿ ಈ ಮಾಹಿತಿ ಎಂಟ್ರಿ ಆಗುವುದಿಲ್ಲ ಎನ್ನುವುದು ನಿಮ್ಮ ಗಮನಕ್ಕೆ ಇರಲಿ.

Paytm ಬಳಕೆದಾರರು ಡಿಜಿಟಲ್‌ ಪಾವತಿ ಮಾಡಲು ಇನ್ಮುಂದೆ ಪಿನ್‌ ಎಂಟ್ರಿ ಮಾಡಬೇಕಿಲ್ಲ!

ಈ ಪೇಟಿಎಮ್‌ ಪೇಮೆಂಟ್ಸ್ ಯುಪಿಐ ವ್ಯವಸ್ಥೆಯಲ್ಲಿ ಅತಿ ದೊಡ್ಡ ಸೇವೆಯನ್ನು ನೀಡುತ್ತಿದ್ದು, ಸಾಕಷ್ಟು ಗ್ರಾಹಕರು ದಿನವೂ ಇದನ್ನು ಬಳಕೆ ಮಾಡುತ್ತಾರೆ. ಹಾಗೆಯೇ ಭದ್ರತಾ ವಿಚಾರದಲ್ಲಿ ಹೆಚ್ಚಿನ ಫೀಚರ್ಸ್‌ ಹೊಂದಿರುವ ಈ ಪೇಟಿಎಮ್‌ ನಾವೀನ್ಯತೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಯುಪಿಐ ಲೈಟ್ ಅನ್ನು ಪ್ರಾರಂಭಿಸುವ ಮೂಲಕ ಈ ರೀತಿಯ ವ್ಯವಸ್ಥೆ ಪರಿಚಯಿಸಿದ ಮೊದಲ ಪಾವತಿ ಬ್ಯಾಂಕ್ ಆಗಿ ಗುರುತಿಸಿಕೊಂಡಿದೆ.

ಎಷ್ಟು ಹಣ ಪಾವತಿ ಮಾಡಬಹುದು?

ಈ ಫೀಚರ್ಸ್‌ ಮೂಲಕ ಬಳಕೆದಾರರು ಒಂದು ದಿನದಲ್ಲಿ 200 ರೂ. ಗಳನ್ನು ಪಾವತಿ ಮಾಡಬಹುದಾಗಿದೆ ಎಂದು ಪೇಟಿಎಮ್‌ ಮಾಹಿತಿ ನೀಡಿದೆ. ಇನ್ನು ಈ ಪಾವತಿ ಪ್ರಕ್ರಿಯೆಯು ತ್ವರಿತ ಮತ್ತು ತಡೆರಹಿತ ವಹಿವಾಟಾಗಿದ್ದು, ಇದರೊಂದಿಗೆ ಬಳಕೆದಾರರು ತಮ್ಮ ಈ ಲೈಟ್ ವ್ಯಾಲೆಟ್‌ಗೆ ದಿನಕ್ಕೆ ಎರಡು ಬಾರಿ 2,000 ರೂ. ಗಳನ್ನು ಆಡ್‌ ಮಾಡಬಹುದಾಗಿದ್ದು, ಈ ಮೂಲಕ ದಿನವೂ 4,000 ರೂ. ಗಳ ವರೆಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.

Paytm ಬಳಕೆದಾರರು ಡಿಜಿಟಲ್‌ ಪಾವತಿ ಮಾಡಲು ಇನ್ಮುಂದೆ ಪಿನ್‌ ಎಂಟ್ರಿ ಮಾಡಬೇಕಿಲ್ಲ!

ಭಾರತೀಯರಿಗೆ ಖಂಡಿತಾ ಉಪಯೋಗ

ಪೇಟಿಎಮ್‌ನ ಈ ಹೊಸ ಪ್ರಯೋಗ ಖಂಡಿತವಾಗಿಯೂ ಭಾರತೀಯರಿಗೆ ಉಪಯೋಗಕ್ಕೆ ಬರಲಿದೆ. ಯಾಕೆಂದರೆ ಇಂದು ಟೀ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ ಮಾಲ್‌ಗಳ ವರೆಗೂ ಡಿಜಿಟಲ್‌ ಪಾವತಿ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ. ಈ ಮೂಲಕ ದಿನನಿತ್ಯವೂ ಡಿಜಿಟಲ್‌ ಪಾವತಿ ಮಾಡುವ ಬಳಕೆದಾರರು ಈ ಫೀಚರ್ಸ್‌ನಿಂದ ಸಾಕಷ್ಟು ಅನುಕೂಲ ಪಡೆಯಬಹುದು. ಅದರಲ್ಲೂ ಹೊಸಬರಿಗೆ ಈ ಆಪ್‌ ಬಳಕೆ ಮಾಡಲು ಇನ್ನಷ್ಟು ಸರಳ ಮಾರ್ಗವಾಗಿದೆ.

Best Mobiles in India

English summary
Popular digital payments platform Paytm in India has introduced a new feature called UPI Lite.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+