ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!

|

ಡೆಬಿಟ್ ಕಾರ್ಡ್‌ಗಿಂತ ಕ್ರೆಡಿಟ್‌ ಕಾರ್ಡ್‌ ಗ್ರಾಹಕರಿಗೆ ಹೆಚ್ಚಿನ ಅನುಕೂಲಕರ ಸೇವೆಗಳನ್ನು ನೀಡುತ್ತದೆ. ಕ್ರೆಡಿಟ್‌ ಕಾರ್ಡ್‌ನಲ್ಲಿ ನೋ ಕಾಸ್ಟ್‌ ಇಎಮ್‌ಐ ಸೇರಿದಂತೆ ಹಲವು ಹಣಕಾಸಿನ ಪ್ರಯೋಜನಗಳು ಲಭ್ಯವಿದ್ದು, ಹೀಗಾಗಿ ಹೆಚ್ಚಿನ ಉದ್ಯೋಗಸ್ಥರು ಕ್ರೆಡಿಟ್‌ ಕಾರ್ಡ್‌ ಪಡೆದುಕೊಳ್ಳುತ್ತಾರೆ. ಈ ಕಾನ್ಸೆಪ್ಟ್ ಆಧಾರದಲ್ಲಿ ಜನಪ್ರಿಯ ಇ-ವಾಲೆಟ್‌ 'ಪೇಟಿಎಮ್‌' ಆಪ್‌ ಈಗ ಹೊಸದೊಂದು ಸೇವೆಯನ್ನು ಗ್ರಾಹಕರಿಗೆ ನೀಡಲು ಸಜ್ಜಾಗಿದೆ.

ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!

ಹೌದು, ಪೇಟಿಎಮ್ ಆಪ್‌ ಹೊಸದಾಗಿ 'ಪೋಸ್ಟ್‌ಪೇಡ್'‌ ಸೇವೆಯನ್ನು ಆರಂಭಿಸಲಿದೆ. ಈ ಫೋಸ್ಟ್‌ಪೇಡ್‌ ಸೇವೆಯಲ್ಲಿ ಗ್ರಾಹಕರು ಕ್ರೆಡಿಟ್‌ ಕಾರ್ಡ್‌ನಂತೆ ಮೊದಲು ಖರೀದಿಸಿ ಮುಂದಿನ ತಿಂಗಳು ಬಿಲ್ ಪೇಮೆಂಟ್‌ ಮಾಡುವ ಅವಕಾಶ ನೀಡದ್ದು, ತಿಂಗಳಿಗೆ 500ರೂ.ಗಳಿಂದ 6,000ರೂ.ಗಳ ವರೆಗೆ ಕ್ರೆಡಿಟ್ ಲಿಮಿಟ್ ಅನ್ನು ಕಂಪನಿಯೇ ನಿರ್ಧರಿಸಲಿದೆ. ಹಾಗೆಯೇ ಮರಳಿ ಹಣ ಪಾವತಿಗೆ ಪ್ರತಿ ತಿಂಗಳು 7ನೇ ತಾರೀಖನ್ನು ಡ್ಯುವ್‌ ಡೇಟ್‌ ಮಾಡಿದೆ.

ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!

ಪ್ರತಿಯೊಬ್ಬ ಗ್ರಾಹಕರು ಸಹ ಪೇಟಿಎಮ್‌ ಪೋಸ್ಟ್‌ಪೇಡ್‌ ಸೇವೆಗೆ ಅಪ್ಲೈ ಮಾಡಬಹುದಾಗಿದ್ದು, ದಾಖಲಾತಿಗಳ ಪ್ರಕ್ರಿಯೆಯು ಸುಲಭವಾಗಿದೆ. ಆಪ್‌ನಲ್ಲಿ ಪೋಸ್ಟ್‌ಪೇಡ್‌ ಬ್ಯಾಲೆನ್ಸ್‌ ಬಗ್ಗೆ ಮಾಹಿತಿಯನ್ನು ನೋಡಬಹುದಾದ ಆಯ್ಕೆ ಇರಲಿದೆ. ಹಾಗಾದರೇ ಪೇಟಿಎಮ್ ಪೋಸ್ಟ್‌ಪೇಡ್‌ ಸೇವೆಯನ್ನು ಹೇಗೆ ಪಡೆಯುವುದು ಮತ್ತು ಇತರೆ ಯಾವೆಲ್ಲಾ ಅಂಶಗಳನ್ನು ಒಳಗೊಂಡಿದೆ ಎನ್ನುವುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : 48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!ಓದಿರಿ : 48 ಗಂಟೆಗಳ 'ಅಮೆಜಾನ್ ಪ್ರೈಮ್‌ ಡೇ' ಸೇಲ್ ಶುರು!..ಈ ಫೋನ್‌ಗಳಿಗೆ ಬೆಸ್ಟ್‌ ಆಫರ್‌!

ಏನಿದು ಪೇಟಿಎಮ್ ಪೋಸ್ಟ್‌ಪೇಡ್‌

ಏನಿದು ಪೇಟಿಎಮ್ ಪೋಸ್ಟ್‌ಪೇಡ್‌

ಪೇಟಿಎಮ್‌ ಪೋಸ್ಟ್‌ಪೇಡ್‌ ಕ್ರೆಡಿಟ್ ಕಾರ್ಡ್ ತರದವೇ ಆಗಿದ್ದು, ಬೇಕಾದ ಉತ್ಪನ್ನಗಳನ್ನು ಮೊದಲು ಖರೀದಿಸುವುದು ಮುಂದಿನ ತಿಂಗಳು ಬಿಲ್ ಪೇಮೆಂಟ್ ಮಾಡುವ ಸೌಲಭ್ಯ ಇರಲಿದೆ. ಪೋಸ್ಟ್‌ಪೇಡ್‌ನಲ್ಲಿ ಮೊದಲೇ ಕ್ರೆಡಿಟ್‌ ಮೊತ್ತವನ್ನು ನಿಗದಿಪಡಿಸಲಾಗಿರುತ್ತದೆ ಗ್ರಾಹಕರು ತಮಗೆ ಲಭ್ಯವಿರುವ ಕ್ರೆಡಿಟ್ ಲಿಮಿಟ್‌ನಲ್ಲಿಯೇ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ.

ಕ್ರೆಡಿಟ್ ಲಿಮಿಟ್‌ ನಿರ್ಧಾರ ಹೇಗೆ

ಕ್ರೆಡಿಟ್ ಲಿಮಿಟ್‌ ನಿರ್ಧಾರ ಹೇಗೆ

ಗ್ರಾಹಕರು ಪೇಟಿಎಮ್‌ ಆಪ್‌ ವಾಲೆಟ್‌ನ ಟ್ರಾನ್ಸಾಕ್ಶನ್, ಬ್ಯಾಲೆನ್ಸ್ ಮತ್ತು ಆಪ್‌ನಲ್ಲಿ ಎಷ್ಟು ಹಣ ವ್ಯಯಿಸಿದ್ದಾರೆ ಎನ್ನುವ ಅಂಶಗಳ ಆಧಾರದ ಮೇಲೆ ಗ್ರಾಹಕರ ಪೋಸ್ಟ್‌ಪೇಡ್ ಕ್ರೆಡಿಟ್ ಲಿಮಿಟ್‌ ಅನ್ನು ಕಂಪನಿ ನಿರ್ಧರಿಸುತ್ತದೆ. ಹಾಗೆಯೇ ಗ್ರಾಹಕರ ಪೋಸ್ಟ್‌ಪೇಡ್‌ ಬಳಕೆ ಉತ್ತಮವಾಗಿದ್ದು, ಹಣ ಮರುಪಾವತಿ ಟ್ರಾಕ್‌ ಸರಿಇದ್ದರೇ ಕಂಪನಿಯೇ ಕ್ರೆಡಿಟ್ ಲಿಮಿಟ್ ಅನ್ನು ಹೆಚ್ಚಿಸಲಿದೆ.

ಓದಿರಿ : ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ! ಓದಿರಿ : ಜೈಲು ಊಟ ಸವಿಯಬೇಕೆ?..ಹಾಗಿದ್ರೆ ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿ!

ಡ್ಯುವ್‌ ಡೇಟ್

ಡ್ಯುವ್‌ ಡೇಟ್

ಪೇಟಿಎಮ್‌ ಕಂಪನಿಯು ಬಿಲ್ ಪಾವತಿಯ ಡ್ಯುವ್‌ ಡೇಟ್‌ನ 15 ದಿನಗಳ ಮುಂಚೆಯೇ ಗ್ರಾಹಕರಿಗೆ ಅವರ ಕ್ರೆಡಿಟ್ ಬಿಲ್ ತಲುಪಿಸಲಿದೆ. ಕಂಪನಿಯು ಪೋಸ್ಟ್‌ಪೇಡ್‌ ಬಿಲ್ ಪಾವತಿಗೆ ಪ್ರತಿ ತಿಂಗಳು 7ನೇ ತಾರೀಖ ಕಡೆಯ ದಿನವಾಗಿ ನಿಗದಿಮಾಡಿದೆ. ಅಷ್ಟರೊಳಗಾಗಿ ಗ್ರಾಹಕರು ಅವರ ಪೋಸ್ಟ್‌ಪೇಡ್ ಬಾಕಿಯನ್ನು ಮರುಪಾವತಿ ಮಾಡಬೇಕಿರುತ್ತದೆ.

ಓದಿರಿ : ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌! ಓದಿರಿ : ಫೇಸ್‌ಬುಕ್‌ಗೆ ಆಘಾತ ನೀಡಿದ ಗೂಗಲ್‌ನ ಹೊಸ 'ಶೂಲೆಸ್'‌ ಆಪ್‌!

ಹಣ ಮರುಪಾವತಿ ಮಾಡದಿದ್ದರೇ?

ಹಣ ಮರುಪಾವತಿ ಮಾಡದಿದ್ದರೇ?

ಒಂದು ವೇಳೆ ಗ್ರಾಹಕರು ಪೋಸ್ಟ್‌ಪೇಡ್ ಕ್ರೆಡಿಟ್ ಬಾಕಿ ಹಣವನ್ನು ಮರುಪಾವತಿ ಮಾಡದಿದ್ದಲ್ಲಿ, ಕಂಪನಿಯು ಬಾಕಿ ಹಣದೊಂದಿಗೆ ಲೇಟ್‌ ಫೀ ಸಹ ಸೇರಿಸಲಿದೆ. ಹಾಗೂ ಗ್ರಾಹಕರ ಪೇಟಿಎಮ್ ಖಾತೆಯನ್ನು ಬ್ಲಾಕ್‌ ಮಾಡಲಿದೆ. ಡೆಬಿಟ್ ಕಾರ್ಡ್‌, ನೆಟ್‌ಬ್ಯಾಂಕಿಂಗ್ ಮತ್ತು (UPI) ಯುಪಿಐ ಮೂಲಕ ಗ್ರಾಹಕರು ಬಾಕಿ ಹಣ ಮರು ಪಾವತಿ ಮಾಡಬಹುದಾಗಿದೆ.

ಓದಿರಿ : BSNL ಬಿಗ್‌ ಆಫರ್‌!..ಬ್ರಾಡ್‌ಬ್ಯಾಂಡ್‌ ಜೊತೆ ಅಮೆಜಾನ್ ಪ್ರೈಮ್‌ ಸದಸ್ಯತ್ವ ಉಚಿತ!ಓದಿರಿ : BSNL ಬಿಗ್‌ ಆಫರ್‌!..ಬ್ರಾಡ್‌ಬ್ಯಾಂಡ್‌ ಜೊತೆ ಅಮೆಜಾನ್ ಪ್ರೈಮ್‌ ಸದಸ್ಯತ್ವ ಉಚಿತ!

Best Mobiles in India

English summary
Paytm recently introduced new ‘Postpaid’ service which works similar to a credit card. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X