20 ಸಾವಿರ ಕೋಟಿ ಹೂಡಿಕೆಗೆ ಮುಂದಾದ ಪೇಟಿಎಂ!!
ಹಣಕಾಸು ಸೇವೆ ಮತ್ತು ಇ–ಕಾಮರ್ಸ್ ವಹಿವಾಟು ವಿಸ್ತರಿಸಲು 20 ಸಾವಿರ ಕೋಟಿ ಹೂಡಿಕೆ ಮಾಡಲು ಮೊಬೈಲ್ ವಾಲೆಟ್ ಸಂಸ್ಥೆ ಪೇಟಿಎಂ ಉದ್ದೇಶಿಸಿದೆ.!!
ಹಣಕಾಸು ಮತ್ತು ಪೇಮೆಂಟ್ಸ್ ಸೇವೆಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ 5 ಸಾವಿರ ಕೋಟಿ ಸೇರಿದಂತೆ, ನಗದುರಹಿತ ಪಾವತಿ, ಹಣಕಾಸು ಸೇವೆ ಮತ್ತು ಇ-ಕಾಮರ್ಸ್ ವಹಿವಾಟು ವಿಸ್ತರಿಸಲು 20 ಸಾವಿರ ಕೋಟಿ ಹೂಡಿಕೆ ಮಾಡಲು ಮೊಬೈಲ್ ವಾಲೆಟ್ ಸಂಸ್ಥೆ ಪೇಟಿಎಂ ಉದ್ದೇಶಿಸಿದೆ.!!
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಉದ್ಘಾಟನಾ ಸಮಾರಂಭದಲ್ಲಿ ಈ ಬಗ್ಗೆ ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಮಾಹಿತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ 18 ಸಾವಿರ ಕೋಟಿಗಳಿಂದ 20 ಸಾವಿರ ಕೋಟಿಗಳಷ್ಟು ಬಂಡವಾಳ ತೊಡಗಿಸಲಾಗುವುದು ಎಂದು ತಿಳಿಸಿದ್ದಾರೆ.!!

ಪೇಟಿಎಂನಲ್ಲಿ ವಹಿವಾಟು ನಡೆಸುವ ವರ್ತಕರ ಸಂಖ್ಯೆ ಕೆಲವೇ ತಿಂಗಳಲ್ಲಿ 60 ಲಕ್ಷಕ್ಕೆ ಏರಿಕೆಯಾಗಲಿದೆ. ಪೇಟಿಎಂ ಬ್ಯಾಂಕ್‌ನಲ್ಲಿ ಇದುವರೆಗೆ 1,700 ಕೋಟಿ ಹೂಡಿಕೆ ಮಾಡಲಾಗಿದೆ. ಈ ವರ್ಷಾಂತ್ಯಕ್ಕೆ ಸಂಸ್ಥೆಯ ವಹಿವಾಟು 1 ಲಕ್ಷ ಕೋಟಿಗೆ ಏರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.!!

ಇನ್ನು ಸಂಸ್ಥೆಯು ಇನ್ನೂ ಹಣ ಹೂಡಿಕೆ ಮಾಡುವ ಹಂತದಲ್ಲಿಯೇ ಇರುವುದರಿಂದ ಲಾಭದ ಬಗ್ಗೆ ನಾನು ಮಾತನಾಡಲಾರೆ. ನೋಟು ರದ್ದತಿ ನಂತರ ಪೇಟಿಎಂನ ಮೊಬೈಲ್ ವಾಲೆಟ್, ರೀಚಾರ್ಜ್, ಬಿಲ್ ಪಾವತಿ ಸೇವೆ, ಇ-ಕಾಮರ್ಸ್ ಸೇವೆ ಗಣನೀಯ ಏರಿಕೆ ಕಂಡಿವೆ ಎಂದು ಪೇಟಿಎಂ ಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು ತಿಳಿಸಿದರು.
ಓದಿರಿ: ಇನ್ಮುಂದೆ ಬೆಂಗಳೂರಿನೆಲ್ಲೆಡೆ ಉಚಿತ ವೈ-ಫೈ, ಸಿಸಿಟಿವಿ ಮತ್ತು ಡ್ರೋಣ್ ರಕ್ಷಣೆ!!


Click it and Unblock the Notifications