ಪೇಟಿಎಂನಲ್ಲಿ ಜಾಬ್ ಆಫರ್!! 20,000 ಕ್ಕೂ ಹೆಚ್ಚು ಉದ್ಯೋಗ!
ಈಗಾಗಲೇ ಪೇಟಿಎಂ 1500 ಉದ್ಯೊಗಿಗಳ ನೇಮಕವಾಗಿದೆ. ಇನ್ನು ಹೆಚ್ಚಿನ ನೌಕರರು ಕಂಪೆನಿಗೆ ಬೇಕಾಗಿರುವುದರಿದ 20,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು
ಜನಸಾಮಾನ್ಯರಿಗೆ ನಗದು ರಹಿತ ಹಣ ವ್ಯವಹಾರ ಮಾಡಲು ಅನುಕೂಲವಾಗುವಂತೆ ದೇಶಾದ್ಯಂತ 20,000 ಕ್ಕೂ ಹೆಚ್ಚು ಯುವಕರಿಗೆ ಪೇಟಿಎಂನಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯಶೇಖರ್ ಶರ್ಮಾ ಬೆಂಗಳೂರಿನಲ್ಲಿಂದು ಹೇಳಿದರು.

ಈಗಾಗಲೇ ಪೇಟಿಎಂನಲ್ಲಿ 11,000 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದು, ಕೇವಲ ಒಂದು ತಿಂಗಳಿನಲ್ಲಿ 1500 ಉದ್ಯೊಗಿಗಳ ನೇಮಕವಾಗಿದೆ. ಇನ್ನು ಹೆಚ್ಚಿನ ನೌಕರರು ಕಂಪೆನಿಗೆ ಬೇಕಾಗಿರುವುದರಿದ ಕೆಲವೇ ದಿನಗಳಲ್ಲಿ ಪೇಟಿಎಂಗೆ 20,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದರು

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!? ಗೋವಾ ಇದಕ್ಕೆ ಟೆಸ್ಟ್ ಪ್ಲೇಸ್ ಅಷ್ಟೆ!!
ಭಾರತದಲ್ಲಿ ನಗದು ರಹಿತ ವ್ಯವಹಾರ ಮುಂದಿನ ದಿನಗಳಲ್ಲಿ ಇಮ್ಮಡಿಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು. ಪ್ರಧಾನಮಂತ್ರಿ ಮೋದಿ ಅವರು 500 ಮತ್ತು 1000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ್ದರಿಂದ ನಗದು ರಹಿತ ವ್ಯವಹಾರ ನಡೆಸಲು ಹೆಚ್ಚು ಅವಕಾಶ ಕಲ್ಪಿಸಿದಂತಾಗಿದೆ. ಪೇಟಿಎಂ ಮೂಲಕ ಉತ್ತಮ ಸೇವೆಯನ್ನು ನೀಡುವ ಮೂಲಕ ಕೆಂದ್ರ ಸರ್ಕಾರದ ಡಿಜಿಟಲ್ ಭಾರತದ ನಿರ್ಮಾಣಕ್ಕೆ ಕೈಜೋಡಿಸುವುದಾಗಿ ಅವರು ತಿಳಿಸಿದರು.

ಪೇಟಿಎಂ ಕೇವಲ ನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಗ್ರಾಮ ಮಟ್ಟದಲ್ಲಿಯೂ ನಗದು ರಹಿತ ವ್ಯವಹಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸವನ್ನು ಪೇಟಿಎಂ ಮಾಡುತ್ತಿದೆ, ಈಗಾಗಲೇ ಲಕ್ಷಾಂತರ ಗ್ರಾಮೀಣ ಪ್ರದೇಶದ ಜನರು ಪೇಟಿಎಂ ಸದುಪಯೋಗ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications