Subscribe to Gizbot

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!? ಗೋವಾ ಇದಕ್ಕೆ ಟೆಸ್ಟ್‌ ಪ್ಲೇಸ್ ಅಷ್ಟೆ!!

Written By:

ಭಾರತ ಜಾಗತಿಕ ಶಕ್ತಿಯಾಗಲು ಡಿಜಿಟಲ್ ಮೂಲಕ ಸಾಧ್ಯ ಎಂದಿರುವ ಪ್ರಧಾನಮಂತ್ರಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡಿಜಿಟಲ್ ಭಾರತದ ನಿರ್ಮಾಣದಲ್ಲಿ ತೊಡಗಿದೆ. ಇದಕ್ಕೆ ಪೂರಕವಾಗಿ ಗೋವಾ ರಾಜ್ಯ ತನ್ನ ಯುವಜನತೆಗೆ ಉಚಿತ ಇಂಟರ್‌ನೆಟ್ ಮತ್ತು ಕರೆ ಸೌಲಭ್ಯ ನೀಡಿ ಡಿಜಿಟಲ್ ಭಾರತದ ಮೊದಲನೆ ಹೆಜ್ಜೆ ಇಟ್ಟಿದೆ!

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!?

"ಗೋವಾ ಯುವ ಸಂಚಾರ್ ಯೊಜನಾ" ಕಾರ್ಯವನ್ನು ಸೊಮವಾರದಿಂದಲೇ ಜಾರಿಗೊಳಿಸಿರುವ ಗೋವಾ ಸರ್ಕಾರ ತನ್ನ ರಾಜ್ಯದ ಯುವಜನತೆಗೆ ಪ್ರತಿ ತಿಂಗಳು 100 ಕರೆಗಳು ಮತ್ತು 3GB ಇಂಟರ್‌ನೆಟ್ ಉಪಯೋಗಿಸುವ ಅವಕಾಶ ಕಲ್ಪಿಸಿದೆ. ಇನ್ನು 16 ರಿಂದ 30 ನೇ ವಯಸ್ಸಿನ ಗೋವಾ ರಾಜ್ಯದ 1.26 ಲಕ್ಷ ಯುವಕರು ಈ ಆಫರ್ ಪಡೆಯಲಿದ್ದಾರೆ! ಇದಿಷ್ಟೇ ಸುದ್ದಿಯಾಗಿದ್ದರೆ ನೀವು ಈಗಾಗಲೆ ಕೇಳಿ ತಿಳಿದಿರುತ್ತೀರಾ ಎನ್ನಬಹುದು. ಆದರೆ ಸುದ್ದಿ ಬೇರೆಯೇ ಇದೆ!!

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!?

ಮೋದಿ, ವಿರಾಟ್ ಕೊಹ್ಲಿ ಮತ್ತು ಕಿಚ್ಚ ಸುದೀಪ್ ಉಪಯೋಗಿಸುವ ಸ್ಮಾರ್ಟ್‌ಫೊನ್ ಯಾವುವು ಗೊತ್ತಾ?

ಗೋವಾದಲ್ಲಿ ಈಗ ಜಾರಿಯಾಗಿರುವ ಉಚಿತ ಕರೆ ಮತ್ತು ಡೇಟಾ ನೀಡುವ ಯೋಜನೆ ಗೋವಾ ರಾಜ್ಯದ್ದೆ ಆದರೂ, ಅದರ ಹಿಂದಿನ ಪ್ಲಾನ್ ಕೇಂದ್ರ ಸರ್ಕಾರದ್ದು ಎನ್ನಲಾಗಿದೆ!. ಹೌದು, ಕಡಿಮೆ ಜನಸಂಖ್ಯೆ ಇರುವ ಗೋವಾ ರಾಜ್ಯದಲ್ಲಿ ಮೊದಲು ಈ ಯೋಜನೆಯನ್ನು ಜಾರಿಗೊಳಿಸಿ, ಅಲ್ಲಿ ಈ ಯೋಜನೆ ಯಶಸ್ವಿಯಾದರೆ ನಂತರ ಇಡೀ ದೇಶದೆಲ್ಲೆಡೆ ಈ ಯೋಜನೆ ಜಾರಿ ಮಾಡುವ ಉದ್ದೇಶ ಕೇಂದ್ರ ಸರ್ಕಾರದ್ದು ಎನ್ನಲಾಗಿದೆ!!

ಮೋದಿ ಸರ್ಕಾರದಿಂದ ದೇಶದೆಲ್ಲೆಡೆ ಉಚಿತ ಇಂಟರ್‌ನೆಟ್!?

ದೇಶದ ಜನರೆಲ್ಲರಿಗೂ ಸರ್ಕಾರದಿಂದಲೇ ಉಚಿತ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಿ ಡಿಜಿಟಲ್ ವೇಗವನ್ನು ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಈ ಪ್ಲಾನ್ ಮಾಡಿದೆ ಎನ್ನಲಾಗಿದೆ. ದೇಶದೆಲ್ಲೆಡೆ ಈ ಯೋಜನೆಯನ್ನು ಜಾರಿಗೆ ತರುವ ಮುನ್ನ ಈ ಯೋಜನೆಯ ಸಾಧಕ ಬಾಧಕಗಳನ್ನು ತಿಳಿಯುವ ಮುಂದಾಲೋಚನೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ್ದು ಎನ್ನಲಾಗಿದೆ. ಹಾಗಾಗಿ ಗೋವಾ ರಾಜ್ಯದ ಸಾಧಕ ಬಾಧಕಗಳು ದೇಶದೆಲ್ಲೇಡೇ ಸರ್ಕಾರವೇ ಉಚಿತ ಇಂಟರ್‌ನೆಟ್ ನೀಡುವ ಯೋಜನೆಗೆ ಮಾರ್ಗದರ್ಶಿಯಾಗಬಹುದು!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
telecom wars between operators like Reliance Jio, Vodafone, Airtel and Idea, the Indian government is also trying to push the envelope of its flagship Digital India campaign by internet.To know more viit to kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot