Home
ಸುದ್ದಿಜಾಲ

Paytm ಬಳಕೆದಾರರಿಗೆ ಬಸ್‌, ರೈಲು, ವಿಮಾನ ಟಿಕೆಟ್‌ ಮೇಲೆ ದೊಡ್ಡ ಡಿಸ್ಕೌಂಟ್‌: ಮೂರೇ ದಿನ ಬಾಕಿ!

ಡಿಜಿಟಲ್‌ ಪಾವತಿ (Digital payment) ಮೂಲಕ ಗ್ರಾಹಕರು ವಿವಿಧ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಪೇಟಿಎಮ್‌ ಬಳಕೆದಾರರು (Paytm users) ಮಾತ್ರ ಇತರೆ ಯುಪಿಐ (UPI) ಆಧಾರಿತ ಆಪ್‌ಗಳಿಗಿಂತ ಹೆಚ್ಚಿನ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಯಾಕೆಂದರೆ ಇದು ಆಗಾಗ್ಗೆ ತನ್ನ ಗ್ರಾಹಕರಿಗೆ ದೊಡ್ಡ ಮಟ್ಟದಲ್ಲಿ ಆಫರ್‌ಗಳನ್ನು ಘೋಷಣೆ ಮಾಡಿಕೊಂಡು ಬರುತ್ತಿರುತ್ತದೆ.

ಹೌದು, ಪೇಟಿಎಮ್‌ನಲ್ಲಿ (Paytm) ಈಗಾಗಲೇ ಹಲವಾರು ಹೊಸ ಫೀಚರ್ಸ್‌ಗಳನ್ನು ಲಭ್ಯವಾಗಿಸಿದ್ದು, ಈ ಮೂಲಕ ಹೊಸ ಹೊಸ ಗ್ರಾಹಕರು ಈ ಕಡೆ ಮುಖ ಮಾಡುತ್ತಿದ್ದಾರೆ. ಇದರ ನಡುವೆಯೇ ಈಗ ವಿಮಾನಗಳು, ಬಸ್‌ಗಳು ಮತ್ತು ರೈಲು ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ. ಹಾಗಿದ್ರೆ, ಈ ಆಫರ್‌ ಅನ್ನು ಪಡೆದುಕೊಳ್ಳುವುದು ಹೇಗೆ?, ಈ ಆಫರ್‌ ಎಲ್ಲಿಯವರೆಗೆ ಇರಲಿದೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.

Paytm ಬಳಕೆದಾರರಿಗೆ ಬಸ್‌, ರೈಲು, ವಿಮಾನ ಟಿಕೆಟ್‌ ಮೇಲೆ ದೊಡ್ಡ ಡಿಸ್ಕೌಂಟ್‌...

ನೀವೇನಾದರೂ ರಜಾದಿನ ಅಥವಾ ತುರ್ತು ಪ್ರಯಾಣವನ್ನು ಯೋಜಿಸುತ್ತಿರುವಿರಾ? ನೀವು ಈಗ ಪೇಟಿಎಮ್‌ ಮೂಲಕ ನಿಮ್ಮ ವಿಮಾನ, ರೈಲು ಅಥವಾ ಬಸ್ ಪ್ರಯಾಣದ ಟಿಕೆಟ್‌ಗಳ ಮೇಲೆ ದೊಡ್ಡ ರಿಯಾಯಿತಿಗಳನ್ನು ಪಡೆಯಬಹುದು. ಇದಕ್ಕಾಗಿ ನಿಮ್ಮ ಫೋನ್‌ನಲ್ಲಿ ಪೇಟಿಎಮ್‌ ಆಪ್‌ ಇರಬೇಕು. ಯಾಕೆಂದರೆ ಆಗಸ್ಟ್ 1 ರಿಂದ 10 ರವರೆಗೆ ಫ್ರೀಡಂ ಟ್ರಾವೆಲ್ ಕಾರ್ನಿವಲ್ ಅನ್ನು ಘೋಷಿಸಿದೆ.

ಈ ಅವಧಿಯಲ್ಲಿ, ಪೇಟಿಎಮ್‌ ಬಳಕೆದಾರರು ವಿಮಾನ, ರೈಲು ಮತ್ತು ಬಸ್ ಟಿಕೆಟ್ ಬುಕಿಂಗ್‌ಗಳಲ್ಲಿ ರಿಯಾಯಿತಿಗಳನ್ನು ಪಡೆದುಕೊಳ್ಳಬಹುದಾಗಿದ್ದು, ಮುಂಬರುವ ಸ್ವಾತಂತ್ರ್ಯ ದಿನದ ದೀರ್ಘ ವಾರಾಂತ್ಯದ ತಮ್ಮ ಪ್ರವಾಸ ಯೋಜನೆಗಳಲ್ಲಿ ಹಣವನ್ನು ಉಳಿಸಬಹುದಾಗಿದೆ. ಹಾಗಿದ್ರೆ, ಬನ್ನಿ ಈ ಪೇಟಿಎಮ್‌ ಫ್ರೀಡಂ ಟ್ರಾವೆಲ್ ಕಾರ್ನಿವಲ್‌ನಲ್ಲಿ ಲಭ್ಯವಿರುವ ರಿಯಾಯಿತಿಗಳನ್ನು ಗಮನಿಸೋಣ.

ಫ್ಲೈಟ್ ಟಿಕೆಟ್‌ಗಳ ಮೇಲೆ ರಿಯಾಯಿತಿ: ವಿಮಾನ ಟಿಕೆಟ್ (Flight ticket) ವಿಷಯಕ್ಕೆ ಬಂದರೆ ಆರ್‌ಬಿಎಲ್‌ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್‌ನ ಬ್ಯಾಂಕ್ ಕೊಡುಗೆಗಳ ಮೂಲಕ ದೇಶೀಯ ವಿಮಾನ ಟಿಕೆಟ್‌ಗಳ ಮೇಲೆ 15 % ತ್ವರಿತ ರಿಯಾಯಿತಿ ಮತ್ತು ಅಂತರಾಷ್ಟ್ರೀಯ ವಿಮಾನ ಟಿಕೆಟ್‌ಗಳ ಮೇಲೆ 10 % ತ್ವರಿತ ರಿಯಾಯಿತಿಯನ್ನು ಲಭ್ಯ ಆಗುತ್ತಿದೆ. ಇದರೊಂದಿಗೆ ಪೇಟಿಎಮ್‌ ವಾಲೆಟ್‌ ಮತ್ತು ಪೇಟಿಎಮ್‌ ಪೋಸ್ಟ್‌ಪೇಯ್ಡ್ ಅನ್ನು ಬಳಕೆ ಮಾಡಿಕೊಂಡರೆ ದೇಶೀಯ ವಿಮಾನ ಬುಕಿಂಗ್‌ಗಳ ಮೇಲೆ 12 % ರಿಯಾಯಿತಿ ಲಭ್ಯ.

ಇದರೊಂದಿಗೆ ಇಂಡಿಗೋ, ವಿಸ್ತಾರಾ, ಸ್ಪೈಸ್‌ಜೆಟ್, ಏರ್‌ಏಷ್ಯಾ, ಅಕಾಸಾ ಏರ್ ಮತ್ತು ಏರ್ ಇಂಡಿಯಾ ಸೇರಿದಂತೆ ಪ್ರಮುಖ ಏರ್‌ಲೈನ್‌ಗಳೊಂದಿಗೆ ಸಹಯೋಗವನ್ನು ಹೊಂದಿರುವ ಪೇಟಿಎಮ್‌ ಬಳಕೆದಾರರಿಗೆ ತಮ್ಮ ಟಿಕೆಟ್ ಬುಕಿಂಗ್‌ನಲ್ಲಿ ಇನ್ನೂ ಹೆಚ್ಚಿನ ಉಳಿತಾಯ ನೀಡುತ್ತದೆ. ಅಷ್ಟು ಮಾತ್ರವಲ್ಲದೆ ಪೇಟಿಎಂ ಸ್ಟುಡೆಂಟ್ಸ್‌, ಹಿರಿಯ ನಾಗರಿಕರು ಮತ್ತು ಸಶಸ್ತ್ರ ಪಡೆ ಸಿಬ್ಬಂದಿಗೆ ವಿಶೇಷ ದರ ಸಹ ಇದೆ. ಹಾಗೂ ತಮ್ಮ ಫ್ಲೈಟ್ ಟಿಕೆಟ್‌ಗಳನ್ನು ಶೂನ್ಯ ಅನುಕೂಲಕರ ಶುಲ್ಕದೊಂದಿಗೆ ಕಾಯ್ದಿರಿಸಬಹುದು.

ಬಸ್ ಟಿಕೆಟ್‌ಗಳ ಮೇಲೆ ರಿಯಾಯಿತಿ: ಬಸ್‌ಗಳಲ್ಲೂ (Bus ticket) ಸಹ ದೊಡ್ಡ ಪ್ರಮಾಣದಲ್ಲಿ ರಿಯಾಯಿತಿ ಸಿಗಲಿದೆ ಅಂದರೆ 'CRAZYSALE' ಕೋಡ್‌ ಬಳಕೆ ಮಾಡುವ ಮೂಲಕ ಗ್ರಾಹಕರು 25 % ತ್ವರಿತ ರಿಯಾಯಿತಿ ಮತ್ತು ನಿರ್ದಿಷ್ಟ ಆಟಪರೇಟರ್‌ ಮೇಲೆ 20 % ಹೆಚ್ಚುವರಿ ರಿಯಾಯಿತಿ ಸಹ ಲಭ್ಯ. ಯಾಕೆಂದರೆ ಪೇಟಿಎಮ್‌ ತನ್ನ ಅತ್ಯುತ್ತಮ ಬೆಲೆ ಖಾತರಿ ಕಾರ್ಯಕ್ರಮದ ಅಡಿಯಲ್ಲಿ 2,500 ಕ್ಕೂ ಹೆಚ್ಚು ಬಸ್ ಆಟಪರೇಟರ್‌ಗಳಲ್ಲಿ ಕಡಿಮೆ ಬೆಲೆಯನ್ನು ಖಾತರಿಪಡಿಸುತ್ತದೆ.

ರೈಲು ಟಿಕೆಟ್‌ಗಳ ಮೇಲೆ ರಿಯಾಯಿತಿ: ರೈಲು ಪ್ರಯಾಣಿಕರಿಗೂ (train ticket) ಸಹ ಸಿಹಿ ಸುದ್ದಿ ನೀಡಲಾಗಿದೆ. ಅಂದರೆ ಶೂನ್ಯ ಶುಲ್ಕದೊಂದಿಗೆ ಯುಪಿಐ ಮೂಲಕ ಬುಕಿಂಗ್ ಆಯ್ಕೆಯನ್ನು ನೀಡಲಾಗಿದೆ. ಇದರಿಂದಾಗಿ ಬಳಕೆದಾರರು ತಮ್ಮ ಬುಕಿಂಗ್‌ನ PNR ಸ್ಟೇಟಸ್‌ ಅನ್ನು ಸುಲಭವಾಗಿ ಮೇಲ್ವಿಚಾರಣೆ ಮಾಡಬಹುದು ಹಾಗೂ ನೈಜ ಸಮಯದಲ್ಲಿ ತಮ್ಮ ರೈಲುಗಳನ್ನು ಟ್ರ್ಯಾಕ್ ಮಾಡಬಹುದು ಮತ್ತು ಆಪ್‌ ಮೂಲಕ ಯಾವುದೇ ರೈಲು ಪ್ರಯಾಣದ ವಿಚಾರಣೆಗಳಿಗೆ 24/7 ಗ್ರಾಹಕ ಬೆಂಬಲವನ್ನು ಪಡೆದುಕೊಳ್ಳಬಹುದಾಗಿದೆ.

ಉಚಿತ ಕ್ಯಾನ್ಸಲಿಂಕ್‌ ಆಯ್ಕೆ: ಈ ಮೇಲೆ ತಿಳಿಸಿದ ಆಫರ್‌ ಅಷ್ಟೇ ಅಲ್ಲದೆ ವಿಮಾನ, ಬಸ್ ಮತ್ತು ರೈಲು ಟಿಕೆಟ್‌ಗಳಿಗಾಗಿ 'ಉಚಿತ ಕ್ಯಾನ್ಸಲಿಂಗ್‌' ನೀತಿಯನ್ನು ಸಹ ನೀಡಲಾಗಿದೆ. ಅಲ್ಲಿ ಬಳಕೆದಾರರು ಟಿಕೆಟ್ ಕ್ಯಾನ್ಸಲಿಂಗ್‌ ನಂತರ ತಮ್ಮ ಮೂಲ ಖಾತೆಗೆ 100 % ಮರುಪಾವತಿಯನ್ನು ಪಡೆದುಕೊಳ್ಳಬಹುದು. ಈ ನೀತಿಯು ಯಾವುದೇ ಗುಪ್ತ ಶುಲ್ಕಗಳು ಅಥವಾ ರದ್ದತಿ ಶುಲ್ಕಗಳನ್ನು ಹೊಂದಿಲ್ಲ ಎಂಬುದು ನಿಮಗೆ ತಿಳಿದಿರಲಿ. ಇನ್ನು ಪೇಟಿಎಮ್‌ನಲ್ಲಿ ಟಿಕೆಟ್ ಬುಕ್ ಮಾಡುವುದು ಹೇಗೆ ಎಂದು ತಿಳಿಯೋಣ.

ಹಂತ 1: ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪೇಟಿಎಮ್‌ ಆಪ್ ಓಪನ್‌ ಮಾಡಿ. ಬಳಿಕ ಟ್ರಾವೆಲ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ನಂತರದಲ್ಲಿ
ನೀವು ಬುಕ್ ಮಾಡಲು ಬಯಸುವ ಪ್ರಯಾಣದ ಟಿಕೆಟ್ ಪ್ರಕಾರವನ್ನು ಆಯ್ಕೆಮಾಡಿ. ಅಂದರೆ ಈ ವೇಳೆ ನೀವು ವಿಮಾನ ಟಿಕೆಟ್‌ಗಳು, ಬಸ್ ಟಿಕೆಟ್‌ಗಳು, ರೈಲು ಟಿಕೆಟ್‌ಗಳು, ಹೋಟೆಲ್ ಬುಕಿಂಗ್ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಹಂತ 2: ಇದಾದ ನಂತರದಲ್ಲಿ ನಿಮ್ಮ ಪ್ರಯಾಣದ ವಿವರಗಳನ್ನು ನಮೂದಿಸಿ. ಇದು ಮೂಲ ಮತ್ತು ಗಮ್ಯಸ್ಥಾನದ ನಗರಗಳು, ಪ್ರಯಾಣದ ದಿನಾಂಕ, ಪ್ರಯಾಣಿಕರ ಸಂಖ್ಯೆ ಮತ್ತು ಪ್ರಯಾಣದ ವರ್ಗವನ್ನು ಹೊಂದಿರುತ್ತದೆ. ಈ ವೇಳೆ ನೀವು ವಿವಿಧ ಪ್ರಯಾಣ ಆಯ್ಕೆಗಳನ್ನು ಹೋಲಿಸಬಹುದು ಮತ್ತು ನಿಮ್ಮ ಅಗತ್ಯಗಳಿಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.

Paytm ಬಳಕೆದಾರರಿಗೆ ಬಸ್‌, ರೈಲು, ವಿಮಾನ ಟಿಕೆಟ್‌ ಮೇಲೆ ದೊಡ್ಡ ಡಿಸ್ಕೌಂಟ್‌...

ಹಂತ 3: ಈ ಮೇಲೆ ತಿಳಿಸಿದ ಕೆಲಸ ಮಾಡಿದ ನಂತರ ನಿಮ್ಮ ಪ್ರಯಾಣದ ಟಿಕೆಟ್‌ಗಳಿಗೆ ಪಾವತಿ ಮಾಡಬೇಕಿದೆ. ಇದಕ್ಕಾಗಿ ನೀವು ಯುಪಿಐ, ಪೇಟಿಎಮ್‌ ವಾಲೆಟ್, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳಂತಹ ವಿವಿಧ ಮೋಡ್‌ಗಳ ಆಯ್ಕೆ ಸಹ ನೀಡಲಾಗಿದೆ. ಇದರಲ್ಲಿ ನಿಮಗೆ ಅನುಕೂಲವಾದದ್ದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಟಿಕೆಟ್‌ಗಳನ್ನು ಬುಕ್ ಮಾಡಿದ ನಂತರ ನೀವು ದೃಢೀಕರಣ ಇಮೇಲ್ ಅನ್ನು ಪಡೆಯಬಹುದು.

Best Mobiles in India

English summary
Many new features have already been made available in Paytm, through which many new customers are facing this direction. Meanwhile, it has now announced huge discounts on flights, buses and train tickets. You can avail this offer through Paytm Freedom Travel Carnival.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+