Paytm ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್; ಇನ್ಮುಂದೆ ಏರ್‌ಪೋರ್ಟ್‌ನಲ್ಲೂ...!
ಪೇಟಿಎಮ್(Paytm) ಭಾರತದಲ್ಲಿ ಜನಪ್ರಿಯ ಡಿಜಿಟಲ್ ಪಾವತಿಗಳು ಮತ್ತು ಹಣಕಾಸು ಸೇವೆಗಳನ್ನು ನೀಡುವ ಪ್ಲಾಟ್‌ಫಾರ್ಮ್ ಆಗಿದ್ದು, ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಂದರೆ ಮೊಬೈಲ್ ರೀಚಾರ್ಜ್, ಬಿಲ್ ಪಾವತಿಗಳು, ಆನ್‌ಲೈನ್ ಶಾಪಿಂಗ್, ಟಿಕೆಟ್ ಬುಕಿಂಗ್, ಹಣ ವರ್ಗಾವಣೆ ಸೇರಿದಂತೆ ಇನ್ನೂ ಹೆಚ್ಚಿನ ಸೇವೆಯನ್ನು ಇದರಲ್ಲಿ ಪಡೆದುಕೊಳ್ಳಬಹುದು. ಈ ನಡುವೆ ಮತ್ತೊಂದು ಹೊಸ ಸೇವೆ ಸೇರ್ಪಡೆಗೊಂಡಿದೆ.
ಹೌದು, ಪೇಟಿಎಮ್ ಬಳಕೆದಾರರು ಈಗ ಭಾರತದ ಆಯ್ದ ಏರ್‌ಪೋರ್ಟ್ ಪಾರ್ಕಿಂಗ್‌ಗೆ ಫಾಸ್ಟ್ಯಾಗ್ (FASTag) ಮೂಲಕ ಪಾವತಿಸಬಹುದಾಗಿದೆ. ಈ ಹಿಂದೆ ವಿಮಾನ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಲು ಕಾರು ಮಾಲೀಕರು ನಗದು ಪಾವತಿ ಮಾಡುವ ಅನಿವಾರ್ಯತೆ ಇತ್ತು. ಆದರೆ, ಇನ್ಮುಂದೆ PPBL ನಿಂದ ಸಕ್ರಿಯಗೊಳಿಸಲಾದ ಹೊಸ ಸೇವೆಯೊಂದಿಗೆ ಪ್ರಯಾಣಿಕರು ಉತ್ತಮ ಪಾರ್ಕಿಂಗ್ ಸೇವೆ ಪಡೆದುಕೊಳ್ಳಲು ಅನುವು ಮಾಡಿಕೊಡಲಾಗಿದೆ. ಹಾಗಿದ್ರೆ, ಈ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಓದಿರಿ.

ವಿಮಾನ ಇಲ್ದಾಣದಲ್ಲಿ ಪೇಟಿಎಮ್ ಬಳಕೆ: ಪ್ರಯಾಣಿಕರು ಈಗ ಆಯ್ದ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳಗಳಲ್ಲಿ ಪೇಟಿಎಮ್ ಫಾಸ್ಟ್ಯಾಗ್ (Paytm FASTag) ಸೌಲಭ್ಯದ ಮೂಲಕ ಪಾರ್ಕಿಂಗ್ ಶುಲ್ಕವನ್ನು ಪಾವತಿಸಬಹುದಾಗಿದೆ. ಈ ಮೊದಲು ಫಾಸ್ಟ್ಯಾಗ್ ಅನ್ನು ಹೆದ್ದಾರಿಗಳಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು ಮಾತ್ರ ಬಳಕೆ ಮಾಡಲಾಗುತ್ತಿತ್ತು. ಆದರೆ , ಇದೇ ಮಾದರಿಯಲ್ಲಿ ಇನ್ಮುಂದೆ ವಿಮಾನ ಸೇವೆ ಪಡೆದುಕೊಳ್ಳಲು ಸಹ ಪಾವತಿ ಪ್ರಕ್ರಿಯೆ ನಡೆಸಬಹುದಾಗಿದೆ.
ಅದರಲ್ಲೂ ಪೇಟಿಎಮ್ ಪಾವತಿ ಬ್ಯಾಂಕ್ ಪಾಟ್ನಾ ಏರ್‌ಪೋರ್ಟ್‌ನ ಕಾರ್ ಪಾರ್ಕಿಂಗ್‌ನಲ್ಲಿ ಸಕ್ರಿಯಗೊಳಿಸಲಾಗಿದೆ. ಈ ಬಗ್ಗೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಅಧಿಕೃತಗೊಳಿದ್ದು, ಈ ಸೇವೆಯನ್ನು ಕಾರ್ಯಗತಗೊಳಿಸಲು PPBL ಪಾರ್ಕಿಂಗ್ ನಿರ್ವಹಣಾ ಸೇವಾ ಪೂರೈಕೆದಾರರಾದ ASN ನೊಂದಿಗೆ ಪಾಲುದಾರಿಕೆ ಹೊಂದಿದೆ. ಈ ಮೂಲಕ ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳಗಳಲ್ಲಿ ಆಗಾಗ್ಗೆ ಉಂಟಾಗುತ್ತಿದ್ದ ವಾಹನ ದಟ್ಟಣೆ ಮತ್ತು ದೀರ್ಘ ಸರತಿಗಳ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ.

ಮೊದಲೇ ತಿಳಿಸಿದಂತೆ ಈ ಮೊದಲು ಪಾಟ್ನಾ ವಿಮಾನ ನಿಲ್ದಾಣದಲ್ಲಿ ವಾಹನಗಳನ್ನು ನಿಲ್ಲಿಸಲು ಕಾರು ಮಾಲೀಕರು ತಮ್ಮ ಜೊತೆಗೆ ನಗದು ತೆಗೆದುಕೊಂಡು ಹೋಗಲೇಬೇಕಿತ್ತು. ಈ ಪ್ರಕ್ರಿಯೆ ಯಾವಾಗಲೂ ಆಡಳಿತ ವರ್ಗ ಹಾಗೂ ಪ್ರಯಾಣಿಕರ ನಡುವೆ ಜಗಳ ಉಂಟಾಗುವಂತೆ ಮಾಡುತ್ತಿತ್ತು. ಆದರೆ, ಪ್ರಯಾಣಿಕರು ಇನ್ಮುಂದೆ ಫಾಸ್ಟ್ಯಾಗ್ ಬಳಸುವ ಮೂಲಕ ನಗದು ವಹಿವಾಟಿನ ಅಗತ್ಯವಿಲ್ಲದೆ ತಮ್ಮ ಪಾರ್ಕಿಂಗ್ ಶುಲ್ಕಕ್ಕಾಗಿ ತಡೆರಹಿತ ಪಾವತಿಗಳನ್ನು ಮಾಡಬಹುದಾಗಿದೆ.
ಇದು ಹೇಗೆ ಕೆಲಸ ಮಾಡುತ್ತದೆ?: ರಸ್ತೆಯಲ್ಲಿ ಸಂಚಾರ ಮಾಡುವ ವಾಹನಗಳು ಟೋಲ್ ಬಳಿ ಎಂಟ್ರಿ ಆಗುತ್ತಿದ್ದಂತೆ ಆಟೋಮ್ಯಾಟಿಕ್ ಆಗಿ ಹಣ ಹೇಗೆ ಕಡಿತವಾಗುತ್ತಿತ್ತೋ ಅದೇ ರೀತಿ ಇಲ್ಲೂ ಈ ಫಾಸ್ಟ್ಯಾಗ್ ಕೆಲಸ ಮಾಡಲಿದೆ. ಅಂದರೆ ವಾಹನಗಳು ಪ್ರವೇಶ ಅಥವಾ ನಿರ್ಗಮನ ಕೇಂದ್ರಗಳನ್ನು ಸಮೀಪಿಸುತ್ತಿದ್ದಂತೆ, ಸೆನ್ಸರ್ ವಾಹನಕ್ಕೆ ಲಗತ್ತಿಸಲಾದ RFID ಸ್ಟಿಕ್ಕರ್ ಅನ್ನು ರೀಡ್ ಮಾಡುತ್ತದೆ. ಇದಾದ ನಂತರ ಬಳಕೆದಾರರ ಫೇಟಿಎಮ್ ವ್ಯಾಲೆಟ್ ಅಥವಾ ಅವರ ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದ ಲಿಂಕ್ ಮಾಡಿದ ಖಾತೆಯಿಂದ ಅನ್ವಯವಾಗುವ ಪಾರ್ಕಿಂಗ್ ಶುಲ್ಕ ಆಟೋಮ್ಯಾಟಿಕ್ ಆಗಿ ಕಡಿತವಾಗುತ್ತದೆ.

ಈ ಸಂಬಂಧ ಪೇಟಿಎಮ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುರಿಂದರ್ ಚಾವ್ಲಾ ಅವರು ಪ್ರತಿಕ್ರಿಯೆ ನೀಡಿದ್ದು, PPBL ದೇಶದಲ್ಲಿ ಫಾಸ್ಟ್ಯಾಗ್‌ಗಳ ಅತಿದೊಡ್ಡ ವಿತರಕವಾಗಿದೆ. ಬಳಕೆದಾರರ ಪೇಟಿಎಮ್ ವ್ಯಾಲೆಟ್‌ಗಳಿಂದ ಆಟೋಮ್ಯಾಟಿಕ್ ಆಗಿ ಟೋಲ್ ಮತ್ತು ಪಾರ್ಕಿಂಗ್ ಕಡಿತಗಳನ್ನು ಸಕ್ರಿಯಗೊಳಿಸುವ ಮೂಲಕ ತಡೆರಹಿತ ಪ್ರಯಾಣದ ಅನುಭವಗಳನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.


Click it and Unblock the Notifications








