ಮಾರುಕಟ್ಟೆಗೆ ಬಂದಿದೆ ಮತ್ತೊಂದು ಸ್ಮಾರ್ಟ್‌ವಾಚ್.. ಅಂತಹದ್ದೇನಿದೆ ಇದರಲ್ಲಿ!
ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ಸ್ಮಾರ್ಟ್‌ವಾಚ್ ಎಂಟ್ರಿ ನೀಡುವುದು ಸಾಮಾನ್ಯವಾಗಿದೆ. ಟೆಕ್ ವಲಯದಲ್ಲಿ ಸ್ಮಾರ್ಟ್‌ವಾಚ್ ಬ್ರ್ಯಾಂಡ್‌ಗಳ ನಡುವೆ ತೀವ್ರವಾಗಿ ಪೈಪೋಟಿ ನಡೆಯುತ್ತಿದ್ದು, ವಿಭಿನ್ನ ಮಾದರಿಯ ವಾಚ್‌ಗಳ ಮೂಲಕ ಮೋಡಿ ಮಾಡುತ್ತಿವೆ. ಅದರಂತೆ ಇದೀಗ ಪೆಬಲ್ ಗೇಮ್ ಆಫ್ ಥ್ರೋನ್ಸ್ ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.
ಹೌದು, ಪೆಬಲ್ ಗೇಮ್ ಆಫ್ ಥ್ರೋನ್ಸ್ ಸ್ಮಾರ್ಟ್‌ವಾಚ್ ಭಾರತದಲ್ಲಿ ಲಾಂಚ್ ಆಗಿದೆ. ಈ ಸ್ಮಾರ್ಟ್‌ವಾಚ್ ಕೂಡ ತನ್ನ ವಿಭಿನ್ನ ಶೈಲಿಯ ಮೂಲಕ ಗ್ರಾಹಕರ ಗಮನಸೆಳೆಯುವ ಸೂಚನೆ ನೀಡಿದೆ. ಎಂದಿನಂತೆ ಈ ಸ್ಮಾರ್ಟ್‌ವಾಚ್ ಕೂಡ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಒಳಗೊಂಡಿದೆ. ಇದರಿಂದ ಫೋನ್ ಕರೆಗಳನ್ನು ನಿಯಂತ್ರಿಸುವುದಕ್ಕೆ ಅವಕಾಶ ಸಿಗಲಿದೆ. ಇನ್ನುಳಿದಂತೆ ಸ್ಮಾರ್ಟ್‌ವಾಚ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೆಬಲ್ ಗೇಮ್ ಆಫ್ ಥ್ರೋನ್ಸ್ ಸ್ಮಾರ್ಟ್‌ವಾಚ್ 1.43 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಲ್‌ವೇಸ್ ಆನ್ ಮೋಡ್ ಡಿಸ್‌ಪ್ಲೇ ಆಗಿದೆ. ಇನ್ನು ಸ್ಮಾರ್ಟ್‌ವಾಚ್ ಚರ್ಮದ ಪಟ್ಟಿಗಳು ಮತ್ತು ಕಿರೀಟ-ಆಕಾರದ ಬಟನ್‌ನೊಂದಿಗೆ ವೃತ್ತಾಕಾರದ ಡಯಲ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ವಾಚ್ ಬ್ಲೂಟೂತ್ ಕಾಲಿಂಗ್ ಫೀಚರ್ಸ್ ಅನ್ನು ಹೊಂದಿರುವುದರಿಂದ ಸ್ಮಾರ್ಟ್‌ಫೋನ್ ಕರೆಗಳನ್ನು ಸ್ವೀಕರಿಸಬಹುದಾಗಿದೆ. ಇದು iOS ಮತ್ತು Android ಸ್ಮಾರ್ಟ್‌ಫೋನ್‌ಗಳೆರಡನ್ನೂ ಕೂಡ ಬೆಂಬಲಿಸಲಿದೆ.
ಇನ್ನು ಸ್ಮಾರ್ಟ್‌ವಾಚ್ ಸೀಮಿತ ಆವೃತ್ತಿಯ ಸ್ಮಾರ್ಟ್ ವಾಚ್ ರಕ್ತದ ಆಮ್ಲಜನಕದ ಶುದ್ಧತ್ವ (SpO2) ಮಟ್ಟಗಳು, ಹೃದಯ ಬಡಿತ ಮತ್ತು ನಿದ್ರೆಯ ಮಾನಿಟರಿಂಗ್ ಅನ್ನು ಹೊಂದಿದೆ. ಜೊತೆಗೆ ಮಲ್ಟಿ ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಚಟುವಟಿಕೆಗಳಿಗಾಗಿ ಟ್ರ್ಯಾಕಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇದರೊಂದಿಗೆ ಸ್ಮಾರ್ಟ್‌ವಾಚ್ GoT-ಥೀಮಿನ ವಾಚ್ ಫೇಸ್‌ಗಳನ್ನು ನೀಡಲಿದೆ. ಇದು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP67 ರೇಟಿಂಗ್ ಅನ್ನು ಹೊಂದಿದೆ.
ಪೆಬಲ್ ಗೇಮ್ ಆಫ್ ಥ್ರೋನ್ಸ್ ಸ್ಮಾರ್ಟ್‌ವಾಚ್ 250mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ ಏಳು ದಿನಗಳ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್ ಮ್ಯಾಗ್ನೆಟಿಕ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಸ್ಮಾರ್ಟ್‌ವಾಚ್ ಕ್ಯಾಲ್ಕುಲೇಟರ್ ಅಪ್ಲಿಕೇಶನ್, ಅಲಾರಾಂ ಗಡಿಯಾರ, ವಾಚ್ ಡಿಸ್‌ಪ್ಲೇ ಬಳಸುವ ಟಾರ್ಚ್, ಸ್ಟಾಪ್‌ವಾಚ್ ಮತ್ತು ಮ್ಯೂಸಿಕ್ ಕಂಟ್ರೋಲ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.
ಭಾರತದಲ್ಲಿ ಪೆಬಲ್ ಗೇಮ್ ಆಫ್ ಥ್ರೋನ್ಸ್ ಸ್ಮಾರ್ಟ್ ವಾಚ್ ಬೆಲೆ, ಲಭ್ಯತೆ
ಭಾರತದಲ್ಲಿ ಪೆಬಲ್ ಗೇಮ್ ಆಫ್ ಥ್ರೋನ್ಸ್ ಸ್ಮಾರ್ಟ್ ವಾಚ್ 5,499ರೂ.ಬೆಲೆಯನ್ನು ಹೊಂದಿದೆ. ಇದು ಪೆಬಲ್‌ನ ವೆಬ್‌ಸೈಟ್ ಮತ್ತು ಅಮೆಜಾನ್ ಮೂಲಕ ಮಾರಾಟಕ್ಕೆ ಲಭ್ಯವಿದೆ. ಇನ್ನು ಸ್ಮಾರ್ಟ್‌ವಾಚ್ ಅನ್ನು ನೀವು ಕಪ್ಪು, ಬೂದು ಮತ್ತು ಚಿನ್ನದ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.
ಇನ್ನು ಪೆಬಲ್ ಕಂಪೆನಿ ಕಳೆದ ವರ್ಷ ಪೆಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ (Pebble Frost Smartwatch) ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ವಾಚ್ 1.87 ಇಂಚಿನ IPS 2.5D ಕರ್ವ್ಡ್ ಡಿಸ್‌ಪ್ಲೇ ಹೊಂದಿದೆ. ಅದರಂತೆ ಈ ವಾಚ್ 100 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಹೊಂದಿದ್ದು, ನಿಮಗೆ ಇಷ್ಟವಾಗುವ ವಾಚ್ ಫೇಸ್ ಆಯ್ಕೆ ಮಾಡಲು ಸಹಾಯಕವಾಗಲಿದೆ. ಬಲಭಾಗದ ಕ್ರೌನ್ ಬಟನ್ ಆಯ್ಕೆ ವಾಚ್‌ಗೆ ಇನ್ನಷ್ಟು ಹೆಚ್ಚಿನ ಆಕರ್ಷಣೆ ನೀಡಲಿದೆ.
ಪೆಬ್ಬಲ್ ಫ್ರಾಸ್ಟ್ ಸ್ಮಾರ್ಟ್‌ವಾಚ್ ಅನ್ನು ದುಬಾರಿ ಆಪಲ್ ವಾಚ್ ಜೊತೆಗೆ ಹೋಲಿಕೆ ಮಾಡಬಹುದಾಗಿದೆ. ಯಾಕೆಂದರೆ ಇದು ಆಪಲ್ ವಾಚ್ ಶೈಲಿಯನ್ನೇ ಹೋಲಲಿದ್ದು, SPO2, 24X7 ಹೃದಯ ಬಡಿತ ಮಾನಿಟರಿಂಗ್ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಸ್ಟೆಪ್ ಪೆಡೋಮೀಟರ್, ಸ್ಲೀಪ್ ಮಾನಿಟರ್, ಕ್ಯಾಲೋರಿ ಮಾನಿಟರ್, ಸ್ಟಾಪ್‌ವಾಚ್ ಮತ್ತು ಪಾಸ್‌ವರ್ಡ್ ಲಾಕ್ ಇದರ ಪ್ರಮುಖ ಫೀಚರ್ಸ್‌ಗಳಾಗಿವೆ.


Click it and Unblock the Notifications








