ಜನರಿಗೆ ಲೈಂಗಿಕತೆ, ಮದ್ಯಕ್ಕಿಂತ ಹೆಚ್ಚಾಗಿ ವೈಫೈ ಮುಖ್ಯವಂತೆ: ಕಂಪ್ಲೀಟ್ ಡೀಟೇಲ್..!

Written By:

ಜನರು ದಿನನಿತ್ಯ ಜೀವನದಲ್ಲಿ ಯಾವ ವಸ್ತುವಿಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ ಎಂದು ಕೇಳಿದರೆ ಯಾರ್ಯಾರು ಏನೇನು ಹೇಳುತ್ತಾರೋ ಗೊತ್ತಿಲ್ಲಾ? ಆದರೆ ಇತ್ತೀಚೆಗೆ ಕೈಗೊಂಡ ಅಧ್ಯಯನದ ಪ್ರಕಾರ ಹೆಚ್ಚಿನ ಜನರು ತಮ್ಮ ನಿತ್ಯ ಜೀವನದ ಅಗತ್ಯಾಂಶಗಳಲ್ಲಿ ವೈಫೈಗೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದಾರೆ. ಹೌದು 10 ಜನರಲ್ಲಿ 4 ರಷ್ಟು ಜನರು, ವ್ಯಕ್ತಿಯ ಇತರೆ ಲಕ್ಸುರಿ ಅಗತ್ಯಗಳಾದ ಲೈಂಗಿಕತೆ, ಚಾಕೋಲೇಟ್, ಮದ್ಯಗಳಿಗಿಂತ ಹೆಚ್ಚಿನ ಪ್ರಾಧಾನ್ಯತೆಯನ್ನು ವೈಫೈಗೆ ನೀಡಿದ್ದಾರೆ.

ಭಾರತದಲ್ಲಿ ಎಲ್ಲೇ ಇದ್ದರೂ ಉಚಿತ ವೈಫೈ ಕನೆಕ್ಟ್‌ಗಾಗಿ ಈ 4 ಸ್ಟೆಪ್‌ ಫಾಲೋ ಮಾಡಿ

ಜನರಿಗೆ ಲೈಂಗಿಕತೆ, ಮದ್ಯಕ್ಕಿಂತ ಹೆಚ್ಚಾಗಿ ವೈಫೈ ಮುಖ್ಯವಂತೆ: ಕಂಪ್ಲೀಟ್ ಡೀಟೇಲ್..ǃ

ವೈಫೈ ಸಂಪರ್ಕ ಸೇವೆ ನೀಡುವ 'ಐಪಾಸ್', ಯೂರೋಪ್‌ ಮತ್ತು ಅಮೆರಿಕದಲ್ಲಿನ 1,700 ವೃತ್ತಿಪರ ಉದ್ಯೋಗಿಗಳಲ್ಲಿ, ಅವರ ಸಂಪರ್ಕ ಹವ್ಯಾಸದ ಬಗ್ಗೆ ಸಮೀಕ್ಷೆ ಕೈಗೊಂಡಿತ್ತು. ಈ ಸಮೀಕ್ಷೆಯಲ್ಲಿ ಪಾಲ್ಗೊಂಡ ವರಿಗೆ 'ಮಾನವ ಐಷಾರಾಮಿ ಮತ್ತು ಅಗತ್ಯತೆಗಳ" ವಿರುದ್ಧ ವೈಫೈ ಪ್ರಾಧಾನ್ಯತೆಗೆ ಶ್ರೇಣಿ ನೀಡಲು ಹೇಳಲಾಗಿತ್ತು. 4 ಪ್ರಾಮುಖ್ಯತೆಗಳನ್ನು ನೀಡಿ ಒಂದನ್ನು ಆಯ್ಕೆ ಮಾಡಲು ಹೇಳಲಾಗಿತ್ತು.

ಈ ಸಮೀಕ್ಷೆಯಲ್ಲಿ ಶೇ.40.2 ರಷ್ಟು ಜನರು ವೈಫೈ ಅನ್ನು ಗುರುತಿಸಿ ಪ್ರತಿಕ್ರಿಯೆ ನೀಡಿದ್ದರು. ಇತರೆ ಪ್ರಾಧಾನ್ಯತೆಗಳಾದ ಲೈಂಗಿಕತೆ (ಶೇ.36.6), ಚಾಕೋಲೇಟ್ (ಶೇ.14.3), ಮದ್ಯಪಾನ ದಿನನಿತ್ಯದ ಅಂಗತ್ಯಾಂಶವಾಗಿ ಕೇವಲ ಶೇ.8.9 ರಷ್ಟು ಜನರು ಜನರು ಪ್ರತಿಕ್ರಿಯೆ ನೀಡಿದ್ದಾರೆ ಎಂದು ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್ ವರದಿ ಮಾಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನರಿಗೆ ಲೈಂಗಿಕತೆ, ಮದ್ಯಕ್ಕಿಂತ ಹೆಚ್ಚಾಗಿ ವೈಫೈ ಮುಖ್ಯವಂತೆ: ಕಂಪ್ಲೀಟ್ ಡೀಟೇಲ್..ǃ

"ವೈಫೈ, ಇಂಟರ್ನೆಟ್ ಸಂಪರ್ಕ ಪಡೆಯುವ ಪ್ರಖ್ಯಾತ ಮಾದರಿ ಏನು ಅಲ್ಲಾ. ಆದರೆ ಮಾನವನ ಇತರೆ ಐಷಾರಾಮ ಮತ್ತು ಅಗತ್ಯತೆಗಳನ್ನು ಮೀರಿಸಿದೆ," ಎಂದು 'ಐಪಾಸ್‌'ನ ಮುಖ್ಯ ವಾಣಿಜ್ಯ ಅಧಿಕಾರಿ 'ಪ್ಯಾಟ್‌ ಹ್ಯೂಮ್' ಹೇಳಿದ್ದಾರೆ.

ವೈಫೈ ಸಂಪರ್ಕ ಪರಿಕಲ್ಪನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇಂದು ವೈಫೈ ಸಂಪರ್ಕ ಎಂಬುದು ಮಾನವನ ಲೈಂಗಿಕತೆ, ಮದ್ಯ ಸೇವನೆ ಇತರೆ ಐಷಾರಾಮಿ ಪ್ರಾಧಾನ್ಯತೆಗಳಿಗಿಂತ ಹೆಚ್ಚಾಗಿದೆ. ವಿಶಾಲವಾಗಿ ಸಕಾರಾತ್ಮಕ ಪರಿಣಾಮವನ್ನು ವೈಫೈ ಇಂದಿನ ದಿನಗಳಲ್ಲಿ ಬೀರಿದೆ.

ಜನರಿಗೆ ಲೈಂಗಿಕತೆ, ಮದ್ಯಕ್ಕಿಂತ ಹೆಚ್ಚಾಗಿ ವೈಫೈ ಮುಖ್ಯವಂತೆ: ಕಂಪ್ಲೀಟ್ ಡೀಟೇಲ್..ǃ

ಅಧ್ಯಯನದ ಪ್ರಕಾರ, ಬಹುಸಂಖ್ಯಾತ ಜನರು ಇತ್ತೀಚಿನ ದಿನಗಳಲ್ಲಿ ತಾವು ಹೋಗುವ ಪ್ರವಾಸ ಸ್ಥಳಗಳ ಹೋಟೆಲ್ ಮತ್ತು ತಂಗುವ ಸ್ಥಳ ವೈಫೈ ಸಂಪರ್ಕ ಸೇವೆ ಹೊಂದಿದೆಯೇ ಎಂದು ತಿಳಿದು ನಿರ್ಧರಿಸುತ್ತಿದ್ದಾರೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Read more about:
English summary
People crave for WiFi more than other human luxuries and necessities. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot