ಫೇಸ್‌ಬುಕ್‌ ಹೆಚ್ಚು ಬಳಸುವಲ್ಲಿ ಪೋಷಕರೇ ಮೇಲುಗೈ

Written By:

ಫೇಸ್‌ಬುಕ್‌ ಅಂದ ತಕ್ಷಣ ನೆನಪಾಗೋದು ಯೂತ್ಸ್‌ಗಳು. ಟೀನೇಜ್‌ ಯುವಕರು ಮತ್ತು ಯುವತಿಯರು ಮಾತ್ರ ಹೆಚ್ಚು ಫೇಸ್‌ಬುಕ್‌ ಬಳಕೆಮಾಡುವುದು ಎಂದು ಬಹುಸಂಖ್ಯಾತರು ಅಂದುಕೊಂಡಿದ್ದಾರೆ. ಆದರೆ ಈಗ ಆ ಮಾತು ಸುಳ್ಳು. ಯಾಕೆ ಅಂತಿರಾ ? ಇಂದು ಟೆಕ್ನಾಲಜಿಗಳನ್ನು ಬಳಸಿಕೊಳ್ಳುವಲ್ಲಿ ಪೋಷಕರು ಸಹ ಯುವಜನತೆಯಷ್ಟೇ ಮುಂದಾಗುತ್ತಿದ್ದಾರೆ.

ಫೇಸ್‌ಬುಕ್‌ ಬಳಸುವಲ್ಲಿ ಹಾಗೂ ಫೇಸ್‌ಬುಕ್‌ನಲ್ಲಿ ಹೆಚ್ಚು ಸಮಯ ಕಳೆಯುವಲ್ಲಿ 1.3 ಪಟ್ಟು ಪ್ರಪಂಚದಾದ್ಯಂತ ಯುವಜನತೆ(non-parents)ಗಿಂತ ಪೋಷಕರು(parents) ಎಂದು ಫೇಸ್‌ಬುಕ್‌ IQ ಅಧ್ಯಯನ ಹೇಳಿದೆ. ಈ ಮಾಹಿತಿಯ ವಿಶೇಷ ಅಂಶಗಳನ್ನು ಲೇಖನ ಓದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಹೆಚ್ಚು ಬಳಸುವವರು ಯಾರು

ಫೇಸ್‌ಬುಕ್‌ ಹೆಚ್ಚು ಬಳಸುವವರು ಯಾರು

ಪ್ರಪಂಚದಾದ್ಯಂತ ಪೋಷಕರು 1.3 ಪಟ್ಟು, ಪೋಷಕರಲ್ಲದವರಿಗಿಂತ (ಯುವಜನತೆ) ಹೆಚ್ಚು ಸಮಯ ಫೇಸ್‌ಬುಕ್‌ನಲ್ಲಿ ನಿರತರಾಗಿರುತ್ತಾರೆ. ಹದಿಹರೆಯದವರ ಫೇಸ್‌ಬುಕ್‌ ಪೇಜ್‌ಗಳ ಟ್ಯಾಬ್‌ಗಳನ್ನು ಓಪನ್‌ ಮಾಡಿರುತ್ತಾರೆ. ಹಾಗೂ ತಮ್ಮ ಮಕ್ಕಳ ಪ್ರಮುಖ ಮೈಲಿಗಲ್ಲುಗಳನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡುತ್ತಿರುತ್ತಾರೆ ಎಂದು ಇತ್ತೀಚಿಗಿನ ಅಧ್ಯಯನ ಹೇಳಿದೆ.

 ಫೇಸ್‌ಬುಕ್‌ IQ

ಫೇಸ್‌ಬುಕ್‌ IQ

"ಫೇಸ್‌ಬುಕ್‌ IQ" ಸಾಮಾಜಿಕ ನೆಟ್‌ವರ್ಕ್‌ ಸೈಟ್‌ನ ಗ್ರಾಹಕ ಪ್ರಪಂಚದಾದ್ಯಂತ 25-65 ವರ್ಷ ವಯಸ್ಸಿನವರೆಗಿನ ಮಕ್ಕಳ ಪೋಷಕರು, ಹದಿಹರೆಯದವರನ್ನೊಳಗೊಂಡಂತೆ ಸಂಶೋಧನಾ ಕೈಗೊಂಡು ಈ ಮಾಹಿತಿ ನೀಡಲಾಗಿದೆ.

 ಅಧ್ಯಯನ

ಅಧ್ಯಯನ

ಅಧ್ಯಯನದ ಮಾಹಿತಿಯು ಫೇಸ್‌ಬುಕ್‌ ಮತ್ತು ಇನ್ಸ್ಟಾಗ್ರಾಂ ಡೇಟಾವನ್ನು 8 ವೇದಿಕೆಗಳಿಂದ 8,300 ಪೋಷಕರು ಮತ್ತು 5 ಪೋಷಕ ತಜ್ಞರಿಂದ ಪ್ರತಿಕ್ರಿಯೆ ಪಡೆಯಲಾಗಿದೆ.

ಫೇಸ್‌ಬುಕ್‌ IQ

ಫೇಸ್‌ಬುಕ್‌ IQ

ಮಕ್ಕಳನ್ನು ಪಡೆದ ಪೋಷಕರು ಎಲ್ಲಾ ರೀತಿಯಲ್ಲಿಯೂ ಬದಲಾಗುತ್ತಾರೆ. ಮೊಬೈಲ್‌ನೊಂದಿಗಿನ ಸಂಬಂಧ, ಪೋಷಕರೊಂದಿಗಿನ ಸಂಬಂಧ ಹಾಗೂ ಜೀವನದ ಚಟುವಟಿಕೆಗಳನ್ನು ಹೊಸದಾಗಿ ಪಟ್ಟಿಮಾಡುವ ಮತ್ತು ತಮ್ಮ ಮಕ್ಕಳ ಪ್ರಮುಖ ಮೈಲಿಗಲ್ಲುಗಳನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡುವ ಇತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂದು ಅಧ್ಯಯನದ ಮಾಹಿತಿಯನ್ನು ಫೇಸ್‌ಬುಕ್‌ IQ ಬ್ಲಾಗ್‌ ಒಂದರಲ್ಲಿ ಪೋಸ್ಟ್ ಮಾಡಿದೆ.

ಫೇಸ್‌ಬುಕ್‌ ನಡವಳಿಕೆ

ಫೇಸ್‌ಬುಕ್‌ ನಡವಳಿಕೆ

ಫೇಸ್‌ಬುಕ್‌ನಲ್ಲಿ ನಡವಳಿಕೆಯನ್ನು ಗಮನಿಸಿದ ನಂತರ ಮಕ್ಕಳ ಪೋಷಕರು ಮೊಬೈಲ್‌ ಮೂಲಕ ಹೆಚ್ಚು ಫೇಸ್‌ಬುಕ್‌ ಬಳಸುವ ಬಗ್ಗೆ ಅಧಿಕ ಇಂಡೆಕ್ಸ್‌ ನೋಡಬಹುದು. ಪ್ರಪಂಚದಾದ್ಯಂತ ಪೋಷಕರು 1.3 ಪಟ್ಟು ಯುವಜನತೆಗಿಂತ ಅಧಿಕವಾಗಿ ಫೇಸ್‌ಬುಕ್‌ ಬಳಸುತ್ತಾರೆ ಎಂದು ಅಧ್ಯಯನ ಹೇಳಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ
2016ರಲ್ಲಿ ಫೇಸ್‌ಬುಕ್‌ ಬದಲಾಯಿಸಿದ ಪ್ರಮುಖ ಅಂಶಗಳು
ನಿಮ್ಮ ಫೇಸ್‌ಬುಕ್ ಖಾತೆಯಿಂದ ನಿಮ್ಮ ರಹಸ್ಯ ಬಯಲು
ಅಪಾಯದಿಂದ ನಿಮ್ಮನ್ನು ದೂರವಿಡುವ ಫೇಸ್‌ಬುಕ್ ಟಿಪ್ಸ್

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ನಿರಂತರ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಫೇಜ್‌ ಹಾಗೂ ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Parents spend more time on Facebook than non-parents. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot