Home
ಸುದ್ದಿಜಾಲ

boAt : ಅಬ್ಬಬ್ಬಾ... 7.5 ಮಿಲಿಯನ್ ಬೋಟ್ ಬಳಕೆದಾರರ ವೈಯಕ್ತಿಕ ಮಾಹಿತಿ ಲೀಕ್‌!

ಸ್ಮಾರ್ಟ್‌ಡಿವೈಸ್‌ಗಳು ಇಂದು ಎಷ್ಟು ಉಪಯುಕ್ತವೋ ಅಷ್ಟೇ ಆತಂಕ ಉಂಟು ಮಾಡುವ ಡಿವೈಸ್‌ಗಳಾಗುತ್ತಿವೆ. ಈ ಕಾರಣಕ್ಕೆ ಬಳಕೆದಾರರು ಎಚ್ಚರಿಕೆಯಿಂದ ಇವುಗಳನ್ನು ಬಳಕೆ ಮಾಡಬೇಕಾಗುತ್ತದೆ. ಅದರಂತೆ ಈಗ 7.5 ಮಿಲಿಯನ್ ಬೋಟ್ ಡಿವೈಸ್‌ ಬಳಕೆದಾರರ ವೈಯಕ್ತಿಕ ಮಾಹಿತಿ ಲೀಕ್ ಆಗಿದೆ.

ಹೌದು, ಈ ವಿಷಯ ಕೇಳಿ ನಿಮಗೆ ಖಂಡಿತಾ ಶಾಕ್‌ ಆಗಿರಬಹುದು. ಯಾಕೆಂದರೆ ಸಾಕಷ್ಟು ಜನರು ಬೋಟ್‌ ಸ್ಮಾರ್ಟ್‌ವಾಚ್‌ (boAt Smartwatch) ಅನ್ನು ಬಳಕೆ ಮಾಡುತ್ತಿರುತ್ತಾರೆ. ಅದರಂತೆ ಈಗ ಬೋಟ್‌ ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾದ 7.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರ ವೈಯಕ್ತಿಕ ಮಾಹಿತಿಯೊಂದಿಗೆ ಬೃಹತ್ ಡೇಟಾ ಉಲ್ಲಂಘನೆಯನ್ನು ಎದುರಿಸುವಂತೆ ಆಗಿದೆ. ಹಾಗಿದ್ರೆ ಏನಿದು ಡೇಟಾ ಉಲ್ಲಂಘನೆ? ಇದರಿಂದ ಏನೆಲ್ಲಾ ಸಮಸ್ಯೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅಬ್ಬಬ್ಬಾ... 7.5 ಮಿಲಿಯನ್ ಬೋಟ್ ಬಳಕೆದಾರರ ವೈಯಕ್ತಿಕ ಮಾಹಿತಿ ಲೀಕ್‌!..

7.5 ಮಿಲಿಯನ್ ಬೋಟ್ ಬಳಕೆದಾರರ ಮಾಹಿತಿ ಲೀಕ್: ಸೈಬರ್‌ಅಟ್ಯಾಕ್‌ನಲ್ಲಿ ಜನಪ್ರಿಯ ಆಡಿಯೊ ಉತ್ಪನ್ನ ಮತ್ತು ಸ್ಮಾರ್ಟ್‌ವಾಚ್ ತಯಾರಕ ಬೋಟ್‌ನ 7.5 ಮಿಲಿಯನ್‌ಗಿಂತಲೂ ಹೆಚ್ಚು ಗ್ರಾಹಕರ ವೈಯಕ್ತಿಕ ಮಾಹಿತಿ ಲೀಕ್ ಆಗಿದೆ. ಸೋರಿಕೆಯಾದ ಡೇಟಾದಲ್ಲಿ ಹೆಸರುಗಳು, ವಿಳಾಸಗಳು, ಸಂಪರ್ಕ ಸಂಖ್ಯೆಗಳು, ಇಮೇಲ್ ಐಡಿಗಳು ಮತ್ತು ಗ್ರಾಹಕ ಐಡಿಗಳಂತಹ ಸೂಕ್ಷ್ಮ ವಿವರಗಳು ಇವೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಬೋಟ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಈ ಸಂಬಂಧ ಫೋರ್ಬ್ಸ್‌ ವರದಿ ಮಾಡಿದೆ. ShopifyGUY ಎಂದು ಕರೆಯಲ್ಪಡುವ ಹ್ಯಾಕರ್‌ನಿಂದ ಈ ಉಲ್ಲಂಘನೆ ಆಗಿದೆ ಎಂದು ಉಲ್ಲೇಖ ಮಾಡಲಾಗಿದೆ. ಅವರು ಏಪ್ರಿಲ್ 5 ರಂದು ಬೋಟ್‌ ಲೈಫ್‌ಸ್ಟೈಲ್‌ನ ಡೇಟಾಬೇಸ್‌ಗೆ ಅನಧಿಕೃತ ಪ್ರವೇಶ ಪಡೆದಿದ್ದಾರಂತೆ. ಡಾರ್ಕ್ ವೆಬ್‌ನಲ್ಲಿನ ಫೋರಮ್‌ನಲ್ಲಿ 7,550,000 ಎಂಟ್ರಿಗಳನ್ನು ಹೊಂದಿರುವ ಡೇಟಾ ಇರುವ ಫೈಲ್‌ಗಳನ್ನು ಹ್ಯಾಕರ್ ಶೇರ್‌ ಮಾಡಿಕೊಂಡಿದ್ದಾರೆ. ಇದು ಗ್ರಾಹಕರಿಗೆ ಗಮನಾರ್ಹ ಅಪಾಯವನ್ನು ಉಂಟುಮಾಡಲಿದ್ದು, ಸಂಭಾವ್ಯ ಹಣಕಾಸಿನ ವಂಚನೆ, ಫಿಶಿಂಗ್ ಹಗರಣಗಳು ಮತ್ತು ಗುರುತಿನ ಕಳ್ಳತನಕ್ಕೆ ಕಾರಣವಾಗಲಿದೆ.

ಅಬ್ಬಬ್ಬಾ... 7.5 ಮಿಲಿಯನ್ ಬೋಟ್ ಬಳಕೆದಾರರ ವೈಯಕ್ತಿಕ ಮಾಹಿತಿ ಲೀಕ್‌!..

ಇನ್ನು ಈ ಬಗ್ಗೆ ಕಳವಳ ಹೊರಹಾಕಿರುವ ಬೆದರಿಕೆ ಗುಪ್ತಚರ ಸಂಶೋಧಕರಾದ ಸೌಮಯ್ ಶ್ರೀವಾಸ್ತವ ಅವರು, ಸೈಬರ್ ಅಪರಾಧಿಗಳು ಸೋರಿಕೆಯಾದ ವೈಯಕ್ತಿಕ ಮಾಹಿತಿಯನ್ನು ಅತ್ಯಾಧುನಿಕ ಸಾಮಾಜಿಕ ಎಂಜಿನಿಯರಿಂಗ್ ದಾಳಿಗಳನ್ನು ಸಂಘಟಿಸಲು, ಬ್ಯಾಂಕ್ ಖಾತೆಗಳಿಗೆ ಅನಧಿಕೃತ ಪ್ರವೇಶವನ್ನು ಪಡೆಯಲು, ಮೋಸದ ವ್ಯವಹಾರ ಮಾಡಲು ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ದುರುಪಯೋಗಪಡಿಸಿಕೊಳ್ಳಲು ಬಳಕೆ ಮಾಡಿಕೊಳ್ಳಬಹುದು ಎಂದು ಶಂಕಿಸಿದ್ದಾರೆ.

ಅಲ್ಲದೆ ಬೋಟ್‌ನ ಸಂಭಾವ್ಯ ಪರಿಣಾಮಗಳ ಬಗ್ಗೆ ತಜ್ಞರು ಆತಂಕ ವ್ಯಕ್ತಪಡಿದ್ದು, ಇದರಲ್ಲಿ ಗ್ರಾಹಕರ ನಂಬಿಕೆಯ ನಷ್ಟವಾಗಿದೆ. ಕಾನೂನು ವಿಚಾರದಲ್ಲಿ ಧಕ್ಕೆ ತರಲಾಗಿದೆ ಎಂದಿದ್ದಾರೆ. ಇನ್ನು ನೆಟ್‌ಎನ್ರಿಚ್‌ ನ ಹಿರಿಯ ಬೆದರಿಕೆ ವಿಶ್ಲೇಷಕರಾದ ರಾಕೇಶ್ ಕೃಷ್ಣನ್, ಹ್ಯಾಕಿಂಗ್ ಸಮುದಾಯದಲ್ಲಿ ತುಲನಾತ್ಮಕವಾಗಿ ಹೊಸದಾಗಿದ್ದರೂ, ಲೀಕ್‌ ಆದ ಡೇಟಾದ ದೃಢೀಕರಣವು ಸೈಬರ್ ಅಪರಾಧಿಗಳಲ್ಲಿ ಅವರ ಖ್ಯಾತಿಯನ್ನು ಹೆಚ್ಚಿಸಬಹುದು ಅಲ್ಲದೆ ಭವಿಷ್ಯದಲ್ಲಿ ಮತ್ತಷ್ಟು ಡೇಟಾ ಸೇಲ್‌ಗೆ ಕಾರಣವಾಗಬಹುದು ಎಂದು ಒತ್ತಿ ಹೇಳಿದ್ದಾರೆ.

ಇದರೊಂದಿಗೆ ಭದ್ರತಾ ದಳದ ಸಂಸ್ಥಾಪಕ ಯಶ್ ಕಡಕಿಯಾ ಅವರು ಮಾಹಿತಿ ನೀಡಿ, ಉಲ್ಲಂಘನೆಗೆ ಪ್ರತಿಕ್ರಿಯೆಯಾಗಿ ಬೋಟ್ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ತುರ್ತು ಅಗತ್ಯ ಇದೆ. ಈ ಬಗ್ಗೆ ಕಂಪನಿಯು ಎಲ್ಲಾ ಪೀಡಿತ ಬಳಕೆದಾರರಿಗೆ ತಿಳಿಸಬೇಕು. ಉಲ್ಲಂಘನೆಯ ಬಗ್ಗೆ ಸಂಪೂರ್ಣ ತನಿಖೆ ನಡೆಸಬೇಕು ಮತ್ತು ಭವಿಷ್ಯದಲ್ಲಿ ಇದೇ ರೀತಿಯ ಘಟನೆಗಳನ್ನು ತಡೆಯಲು ಅದರ ಭದ್ರತಾ ಪ್ರೋಟೋಕಾಲ್‌ಗಳನ್ನು ಹೆಚ್ಚು ಮಾಡಬೇಕು ಎಂದು ಸಲಹೆ ನೀಡಲಾಗಿದೆ.

ಅಬ್ಬಬ್ಬಾ... 7.5 ಮಿಲಿಯನ್ ಬೋಟ್ ಬಳಕೆದಾರರ ವೈಯಕ್ತಿಕ ಮಾಹಿತಿ ಲೀಕ್‌!..

ಬೋಟ್‌ ಬಗ್ಗೆ ಒಂದಿಷ್ಟು ಮಾಹಿತಿ: ಅಮನ್ ಗುಪ್ತಾ ಮತ್ತು ಸಮೀರ್ ಮೆಹ್ತಾ ಅವರು 2016 ರಲ್ಲಿ ಬೋಟ್‌ ಸಂಸ್ಥೆಯನ್ನು ಆರಂಭ ಮಾಡಿದ್ದರು. ಕೈಗೆಟುಕುವ ಆಡಿಯೊ ಉತ್ಪನ್ನಗಳು ಮತ್ತು ಧರಿಸಬಹುದಾದ ಡಿವೈಸ್‌ಗಳಿಗೆ ಈ ಕಂಪೆನಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಈ ಮೂಲಕ ಭಾರತದಲ್ಲಿ ಎರಡನೇ ಅತ್ಯಂತ ಜನಪ್ರಿಯ ಧರಿಸಬಹುದಾದ ಬ್ರಾಂಡ್ ಆಗಿ ಗುರುತಿಸಿಕೊಂಡಿದೆ. ಇನ್ನು ಈ ಉಲ್ಲಂಘನೆಯ ಹೊರತಾಗಿಯೂ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ, ಇದರ ಮಾರಾಟವು ಮಾರ್ಚ್ 2023 ರಲ್ಲಿ Rs3,000 ಕೋಟಿ ದಾಟಿದೆ.

2022-2023 ರ ಹಣಕಾಸು ವರ್ಷದಲ್ಲಿ Rs129.4 ಕೋಟಿ ನಿವ್ವಳ ನಷ್ಟ ಸೇರಿದಂತೆ ಕಂಪನಿಯು ಈ ಹಿಂದೆ ಕೆಲವು ಆರ್ಥಿಕ ಸವಾಲುಗಳನ್ನು ಸಹ ಎದುರಿಸಿದೆ. ಈ ಹಿನ್ನಡೆಗಳ ಹೊರತಾಗಿಯೂ, ಬೋಟ್‌ ಗ್ರಾಹಕ ಎಲೆಕ್ಟ್ರಾನಿಕ್ಸ್ ಮಾರುಕಟ್ಟೆಯಲ್ಲಿ ಪ್ರಮುಖ ಗೇಮರ್‌ ಆಗಿ ಉಳಿದುಕೊಂಡಿದೆ. ಈ ಕಂಪೆನಿಯು ಮಾರುಕಟ್ಟೆಯಲ್ಲಿ ಫೈರ್‌ ಬೋಲ್ಟ್‌ ನಾಯ್ಸ್‌, ಶಿಯೋಮಿ ಹಾಗೂ ಸ್ಯಾಮ್‌ಸಂಗ್‌ನಂತಹ ಬ್ರ್ಯಾಂಡ್‌ಗಳ ವಿರುದ್ಧ ಸ್ಪರ್ಧಿಸುತ್ತದೆ.

Best Mobiles in India

English summary
The boAt has now going to face a massive data breach with the personal information of more than 7.5 million consumers leaked onto the dark web.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+