ಉದ್ಯೋಗಿಗಳಿಗೆ ಗುಡ್‌ನ್ಯೂಸ್‌: ಪಿಎಫ್‌ ನಿಯಮದಲ್ಲಿ ಭಾರಿ ಬದಲಾವಣೆ!

|

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (EPFO) ಉದ್ಯೋಗಿಗಳಿಗೆ ಅವರ ಪಿಎಫ್‌ ಹಣವನ್ನು ವರ್ಗಾಹಿಸಲು ಮತ್ತು ವಿತ್‌ಡ್ರಾ ಮಾಡುವ ನಿಯಮಗಳಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಪಿಎಫ್‌ ಪೋರ್ಟಲ್‌ನಲ್ಲಿ ವಿತ್‌ಡ್ರಾ ಪ್ರಕ್ರಿಯೇ ಹಂತಗಳನ್ನು ಸಹ ಸುಲಭವಾಗಿಸಿದೆ. ಇದೀಗ EPFO ಸಂಸ್ಥೆಯು ಉದ್ಯೋಗಿಗಳಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ತಿಳಿಸಿದ್ದು, ಕೆಲಸ ಬಿಟ್ಟ ದಿನಾಂಕವನ್ನು ಉದ್ಯೋಗಿಗಳೆ ನಮೂದಿಸಬಹುದಾಗಿದೆ.

ಇಪಿಎಫ್‌ಓ

ಹೌದು, ಇಪಿಎಫ್‌ಓ-EPFO ಇದೀಗ ಹೊಸ ನಿಯಮ ಜಾರಿ ಮಾಡಿದ್ದು, ಉದ್ಯೋಗಿಯು ಕೆಲಸ ಬಿಟ್ಟ ದಿನಾಂಕವನ್ನು ಇಪಿಎಫ್‌ಓ ಪೋರ್ಟಲ್‌ನಲ್ಲಿ ನಮೂದಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಈ ಮೊದಲು ಉದ್ಯೋಗಿಯು ಕೆಲಸ ಬಿಟ್ಟರೇ, ಆ ಉದ್ಯೋಗಿಯು ಕೆಲಸ ಮಾಡುತ್ತಿದ್ದ ಸಂಸ್ಥೆಯವರೇ ಆತ ಕೆಲಸ ಬಿಟ್ಟ ದಿನಾಂಕವನ್ನು ಪೋರ್ಟಲ್‌ನಲ್ಲಿ ನಮೂದಿಸಬೇಕಿತ್ತು. ಆದ್ರೆ ಇನ್ಮುಂದೆ ಉದ್ಯೋಗಿಯೇ ನಮೂದಿಸಬಹುದಾದ ಆಯ್ಕೆ ಸೇರಿದೆ.

ಏನಿದು ಹೊಸ ನಿಯಮ

ಏನಿದು ಹೊಸ ನಿಯಮ

ಉದ್ಯೋಗಿಯು ಕೆಲಸ ಬದಲಿಸಿದಾಗ ಅಥವಾ ಕೆಲಸ ಬಿಟ್ಟಾಗ, ಕೆಲಸ ಮಾಡುತ್ತಿದ್ದ ಸಂಸ್ಥೆಯನ್ನು ಬಿಟ್ಟ ದಿನಾಂಕವನ್ನು ಪಿಎಫ್‌ ಪೋರ್ಟಲ್‌ನಲ್ಲಿ ಎಂಟ್ರಿ ಮಾಡಬೇಕಿರುತ್ತದೆ. ಈ ಕೆಲಸವನ್ನು ಹಿಂದಿನ ಸಂಸ್ಥೆಯೇ ಮಾಡಬೇಕಿತ್ತು. ಅವರ ಕೆಲಸ ಬಿಟ್ಟ ದಿನಾಂಕವನ್ನು ಪೋರ್ಟಲ್‌ನಲ್ಲಿ ನಮೂದಿಸುವವರೆಗೂ ಉದ್ಯೋಗಿಯು ಕಾಯಬೇಕಿತ್ತು. ಆದ್ರೆ EPFO ಈ ನಿಯಮದಲ್ಲಿ ಬದಲಾವಣೆ ಮಾಡಿದ್ದು, ಉದ್ಯೋಗಿಯೇ ನೇರವಾಗಿ ಫೋರ್ಟಲ್‌ನಲ್ಲಿ ಕೆಲಸ ಬಿಟ್ಟ ದಿನಾಂಕವನ್ನು ಎಂಟ್ರಿ ಮಾಡಬಹುದಾಗಿದೆ.

ಅಧಿಕೃತ PF ಪೋರ್ಟಲ್

ಅಧಿಕೃತ PF ಪೋರ್ಟಲ್

ಭವಿಷ್ಯ ನಿಧಿ ಖಾತೆ-ಉದ್ಯೋಗಿಗಳ ಅನುಕೂಲಕ್ಕಾಗಿ ಸಂಸ್ಥೆಯು ಪೋರ್ಟಲ್ ವ್ಯವಸ್ಥೆ ಮಾಡಿದೆ. https://unifiedportal-mem.epfindia.gov.in/memberinterface ಈ ವೆಬ್‌ಸೈಟ್‌ನಲ್ಲಿ ಉದ್ಯೋಗಿಗಳು ಲಾಗ್‌ ಇನ್ ಆಗುವ ಮೂಲಕ ಅವರ ಪಿಎಫ್ ಖಾತೆಯ ಹಣದ ಬಗ್ಗೆ, ಪಾಸ್‌ಬುಕ್ ಬಗ್ಗೆ ಹಾಗೂ ಇತರೆ ಅಗತ್ಯ ಮಾಹಿತಿ ಪಡೆಯಬಹುದು.

ವಿತ್‌ಡ್ರಾ ಮಾಡಲು ಅಗತ್ಯ

ವಿತ್‌ಡ್ರಾ ಮಾಡಲು ಅಗತ್ಯ

ಉದ್ಯೋಗಿಯು ಕೆಲಸ ಮಾಡುತಿದ್ದ ಸಂಸ್ಥೆ ತೊರೆದು, ಬೇರೆ ಸಂಸ್ಥೆ ಸೇರಿಕೊಂಡಾಗ EPFO ಪೋರ್ಟಲ್‌ನಲ್ಲಿ ಕೆಲಸ ಬಿಟ್ಟ ದಿನಾಂಕವನ್ನು ನಮೂದಿಸಿ. ಕೆಲಸ ಬಿಟ್ಟ ದಿನಾಂಕ ನಮೂದಿಸದೇ ಇದ್ದರೇ, ಹಿಂದಿನ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ಜಮಾ ಆಗಿರುವ ನಿಮ್ಮ ಪಿಎಫ್ ಹಣ ವಿತ್‌ಡ್ರಾ ಮಾಡಲು ಆಗುವುದಿಲ್ಲ. ಮತ್ತು ಅಗತ್ಯ ಪ್ರಯೋಜನಗಳನ್ನು ಪಡೆಯಲು ನೆರವಾಗಲಿದೆ.

ಪೋರ್ಟಲ್‌ನಲ್ಲಿ ಎಂಟ್ರಿ ಮಾಡಲು ಹೀಗೆ ಮಾಡಿ

ಪೋರ್ಟಲ್‌ನಲ್ಲಿ ಎಂಟ್ರಿ ಮಾಡಲು ಹೀಗೆ ಮಾಡಿ

ಉದ್ಯೋಗಿಯು ತನ್ನ ತನ್ನ UNA ನಂಬರ್ (Universal Account Number) ಮತ್ತು ಪಾಸ್‌ವರ್ಡ್ ಬಳಸಿ EPFO ಪೋರ್ಟಲ್‌ನಲ್ಲಿ ಲಾಗಿನ್ ಆಗಬೇಕು. ನಂತರ ಮ್ಯಾನೇಜ್ ವಿಭಾಗದ ಆಯ್ಕೆಯಲ್ಲಿ ಎಕ್ಸಿಟ್ ಆಯ್ಕೆ ಮಾರ್ಕ ಮಾಡಬೇಕು. ನಂತರ ಮುಂದಿನ ಹಂತಗಳನ್ನು ಪೂರ್ಣಗೊಳಿಸುವ ಮೂಲಕ ಕೆಲಸ ಬಿಟ್ಟ ದಿನಾಂಕವನ್ನು ಪೋರ್ಟಲ್‌ನಲ್ಲಿ ಸೇರಿಸಬಹುದಾಗಿದೆ.

ಯಾವಾಗ ಅಪ್‌ಡೇಟ್ ಮಾಡುವುದು

ಯಾವಾಗ ಅಪ್‌ಡೇಟ್ ಮಾಡುವುದು

ಉದ್ಯೋಗಿಯು ಕೆಲಸ ಬಿಟ್ಟ ಎರಡು ತಿಂಗಳ ನಂತರವಷ್ಟೆ, ಕೆಲಸ ಬಿಟ್ಟ ದಿನಾಂಕವನ್ನು ನಮೂದಿಸಬಹುದಾಗಿದೆ. ಕೆಲಸ ಬಿಟ್ಟ ನಂತರ ಎಚ್‌ಆರ್‌ ವಿಭಾಗದಲ್ಲಿ ಕೆಲವು ಪ್ರೊಸೆಸಸಿಂಗ್ ಕೆಲಸಗಳಿರುತ್ತವೆ ಹಾಗೂ ಕೊನೆಯ ತಿಂಗಳ ಪಿಎಫ್‌ ಮೊತ್ತವು ಉದ್ಯೋಗಿಯ ಪಿಎಫ್ ಖಾತೆಗೆ ಜಮಾ ಆಗಬೇಕಿರುತ್ತದೆ.

ಪಿಎಫ್

ಇದೀಗ ಪಿಎಫ್ ಚಂದಾದಾರರು ಅಡ್ವಾನ್ಸ್ ನ್ನು ವಿತ್ ಡ್ರಾ ಮಾಡಿಕೊಳ್ಳುವುದಕ್ಕಾಗಿ ಇಪಿಎಫ್ಓ ಯುನಿಫೈಡ್ ಪೋರ್ಟಲ್ ಆಗಿರುವ mem.epfindia.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ನಂತರ ನೀವು ಸಲ್ಲಿಸಿದ ಅರ್ಜಿಯ ಅನುಮೋದನೆಗಾಗಿ ನಿಮ್ಮ ಉದ್ಯೋಗದಾತರಿಗೆ ಅದನ್ನು ಕಳುಹಿಸಿಕೊಡಲಾಗುತ್ತದೆ. ಒಮ್ಮೆ ಅನುಮೋದನೆ ದೊರೆತ ನಂತರ ನಿಮ್ಮ ಪಿಎಫ್ ಹಣವು ನಿಮ್ಮ ಖಾತೆಗೆ ಜಮಾಗೊಳ್ಳುತ್ತದೆ. ಅದಕ್ಕಾಗಿ ನೀವು ಹೆಚ್ಚು ದಿನ ಕಾಯಬೇಕಾಗೂ ಇಲ್ಲ. ಕೇವಲ 10 ದಿನದಲ್ಲಿ ನಿಮ್ಮ ಹಣ ನಿಮ್ಮ ಕೈ ಸೇರುತ್ತದೆ.

ಪಿಎಫ್ ಡ್ರಾ ಮಾಡುವುದಕ್ಕೆ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ಪಿಎಫ್ ಡ್ರಾ ಮಾಡುವುದಕ್ಕೆ ಆನ್ ಲೈನ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?

ನೌಕರರ ಭವಿಷ್ಯ ನಿಧಿ ಸಂಸ್ಥೆ ಅಥಾ ಇಪಿಎಫ್ಓ, ನೊಡಲ್ ಸಂಸ್ಥೆಯಾಗಿದ್ದು ನೌಕರರ ಭವಿಷ್ಯ ನಿಧಿ ಕೊಡುಗೆಗಳನ್ನು ಮೇಲ್ವಿಚಾರಣೆ ಮಾಡಿಕೊಳ್ಳುತ್ತದೆ. ಇದರ ವೆಬ್ ಸೈಟ್ epfindia.gov.in ನೀಡಿರುವ ಮಾಹಿತಿಯ ಪ್ರಕಾರ ಇದೀಗ ಕೆಲವು ಷರತ್ತುಗಳ ಅಡಿಯಲ್ಲಿ ಪಿಎಫ್ ಕಾರ್ಪಸ್ ನಿಂದ ಭಾಗಶಃ ಹಣವನ್ನು ಪಡೆಯುವುದಕ್ಕೆ ಅಥವಾ ಸಂಪೂರ್ಣ ಹಣವನ್ನು ಪಡೆಯುವುದಕ್ಕೆ 20 ಅಥವಾ ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳ ಸಂಸ್ಥೆಗಳ ಉದ್ಯೋಗಿಗಳಿಗೆ ಅವಕಾಶ ಮಾಡಿಕೊಡುತ್ತದೆ.

ಇಪಿಎಫ್ ವಿತ್ ಡ್ರಾ ಮಾಡಿಕೊಳ್ಳುವುದಕ್ಕಾಗಿ ನೀವು ತಿಳಿದುಕೊಳ್ಳಬೇಕಾಗಿರುವ 10 ಅಂಶಗಳು

ಇಪಿಎಫ್ ವಿತ್ ಡ್ರಾ ಮಾಡಿಕೊಳ್ಳುವುದಕ್ಕಾಗಿ ನೀವು ತಿಳಿದುಕೊಳ್ಳಬೇಕಾಗಿರುವ 10 ಅಂಶಗಳು

1. ಇಪಿಎಫ್ ಖಾತೆಯಿಂದ ಹಣವನ್ನು ಭಾಗಶಃ ಹಿಂಪಡೆಯಬೇಕು ಎಂದಾದರೆ ಮನೆ ಖರೀದಿ/ನಿರ್ಮಾಣ, ಸಾಲ ಮರುಪಾವತಿ, ಎರಡು ತಿಂಗಳವರೆಗೆ ವೇತನ ಪಡೆಯದಿರುವುದು, ಸ್ವಯಂ / ಮಗಳು / ಮಗ / ಸಹೋದರನ ಮದುವೆ, ಕುಟುಂಬ ಸದಸ್ಯರ ವೈದ್ಯಕೀಯ ಚಿಕಿತ್ಸೆಗಾಗಿ ಇತ್ಯಾದಿ ಪ್ರಮುಖ ಕಾರಣಗಳಿಗೆ ಸಾಧ್ಯವಾಗುತ್ತದೆ ಎಂದು ಇಪಿಪಿಎಫ್ಓ ತಿಳಿಸುತ್ತದೆ.

2. ಆನ್ ಲೈನ್ ನಲ್ಲಿ ಇಪಿಎಫ್ ಗೆ ಅರ್ಜಿ ಸಲ್ಲಿಸಬೇಕಾದಲ್ಲಿ ಚಂದಾದಾದರು ಸಕ್ರಿಯ ಯುನಿವರ್ಸಲ್ ಖಾತೆ ಸಂಖ್ಯೆ ಅಥವಾ ಯುಎಎನ್ ನ್ನು ಹೊಂದಿರಬೇಕಾಗುತ್ತದೆ. ಇದನ್ನು ನೌಕರರ ಮಾಸಿಕ ಸಂಬಳದ ಸ್ಲಿಪ್ ನಲ್ಲಿ ನಮೂದಿಸಲಾಗಿರುತ್ತದೆ.

3. ಯುಎಎನ್ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಆಗಿರಬೇಕು- ಆಧಾರ್, ಶಾಶ್ವತ ಖಾತೆ ಸಂಖ್ಯೆ(ಪಾನ್) ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವ ಮೂಲಕ ಪರಿಶೀಲನೆಯಾಗಿರಬೇಕು ಎಂದು ಇಪಿಎಫ್ಓ ವೆಬ್ ಸೈಟ್ ತಿಳಿಸುತ್ತದೆ.

ಯುಎಎನ್

4. ಯುಎಎನ್ ನಂಬರ್ ನ್ನು ಆಕ್ಟಿವೇಟ್ ಮಾಡುವುದಕ್ಕಾಗಿ ಬಳಸಲಾಗಿರುವ ಮೊಬೈಲ್ ನಂಬರ್ ಕೂಡ ಆಕ್ಟಿವ್ ಆಗಿರಬೇಕು.

5. ಇಪಿಎಫ್ ವಿತ್ ಡ್ರಾವಲ್ ಕ್ಲೈಮ್ ನ್ನು ಮಾಡುವುದಕ್ಕಾಗಿ ಚಂದಾದಾರರು ಇಪಿಎಫ್ಓ ಯುನಿಫೈಡ್ ಪೋರ್ಟಲ್ ಗೆ ಯುಎಎನ್ ಮತ್ತು ಪಾಸ್ ವರ್ಡ್ ಬಳಸಿ ಲಾಗ್ ಇನ್ ಆಗಬೇಕು.

6. ಆನ್ ಲೈನ್ ಸರ್ವೀಸ್ ಸೆಕ್ಷನ್ ನ ಅಯಲ್ಲಿ ಕ್ಲೈಮ್ ನ್ನು ಬಳಕೆದಾರರು ಸೆಲೆಕ್ಟ್ ಮಾಡಬೇಕು

7. ಕ್ಲೈಮ್ ಅರ್ಜಿಯಲ್ಲಿ ಚಂದಾದಾರರು ಬ್ಯಾಂಕ್ ಖಾತೆಯ ಕೊನೆಯ ನಾಲ್ಕು ಸಂಖ್ಯೆಯನ್ನು ಎಂಟರ್ ಮಾಡಬೇಕು ಮತ್ತು ಪ್ರೊಸೀಡ್ ಫಾರ್ ಆನ್ ಲೈನ್ ಕ್ಲೈಮ್ ನ್ನು ಕ್ಲಿಕ್ಕಿಸಬೇಕು.

 ಹೊಸ ಟ್ಯಾಬ್

8. ಹೊಸ ಟ್ಯಾಬ್ ನಲ್ಲಿ ಚಂದಾದಾರರು ಇಪಿಎಫ್ ಕ್ಲೈಮ್ ವಿವರಗಳನ್ನು ಭರ್ತಿ ಮಾಡಬೇಕು ಅದರಲ್ಲಿ ವಿಳಾಸ, ಹಣವನ್ನು ಡ್ರಾ ಮಾಡುತ್ತಿರುವುದಕ್ಕೆ ಕಾರಣ ಇತ್ಯಾದಿ ವಿವರಗಳನ್ನು ನೀಡಬೇಕು. ಪಾಸ್ ಬುಕ್ ಮತ್ತುಚೆಕ್ ಬುಕ್ಕಿನ ಸ್ಕ್ಯಾನ್ ಕಾಪಿಯನ್ನು ಅಪ್ ಲೋಡ್ ಮಾಡಬೇಕು.

9. ಬಳಕೆದಾರರು ಈ ವಿವರಗಳನ್ನು ಭರ್ತಿ ಮಾಡಿದ ನಂತರ ಒಟಿಪಿ ಅಥವಾ ಒನ್ ಟೈಮ್ ಪಾಸ್ ವರ್ಡ್ ನಿಮ್ಮ ಆಧಾರ್ ಕಾರ್ಡ್ ನಲ್ಲಿ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಗೆ ಬರುತ್ತದೆ.

10. ಒಮ್ಮೆ ಕ್ಲೈಮ್ ಅರ್ಜಿ ಸಲ್ಲಿಕೆಯಾದ ನಂತರ ಇದನ್ನು ಉದ್ಯೋಗದಾತರರ ಅನುಮೋದನೆಗಾಗಿ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿಸುತ್ತದೆ ಇಪಿಎಫ್ಓ ವೆಬ್ ಸೈಟ್.ಚಂದಾದಾರರು ಕ್ಲೈಮ್ ಸ್ಟೇಟಸ್ ನ್ನು ಆನ್ ಲೈನ್ ಸರ್ವೀಸ್ ಸೆಕ್ಷನ್ ನ ಅಡಿಯಲ್ಲಿರುವ ಆಯ್ಕೆಯಲ್ಲಿ ಪರಿಶೀಲನೆ ಮಾಡಿಕೊಳ್ಳಬಹುದು.

Best Mobiles in India

Read more about:
English summary
You are no longer dependent on your ex-employer to update the exit date on the EPFO portal. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X