ಲಾಕ್‌ಡೌನ್‌ ವೇಳೆ PF ಅಡ್ವಾನ್ಸ್ ವಿತ್‌ಡ್ರಾ ಆಗದಿರಲು ಈ ನಾಲ್ಕು ಸಂಗತಿಗಳು ಕಾರಣ!

|

ಆರ್ಥಿಕ ಸಂಕಷ್ಟದ ಸಮಯದಲ್ಲಿ ಉದ್ಯೋಗಸ್ಥರಿಗೆ ಆರ್ಥಿಕ ಭರವಸೆ ಅಂದರೇ ಅದು ನೌಕರರ ಭವಿಷ್ಯ ನಿಧಿ(ಇಪಿಎಫ್) ಅಂದರೇ ತಪ್ಪಾಗಲಾರದು. ಏಕೆಂದರೇ EPF ಸಂಸ್ಥೆಯು ನೌಕರರಿಗೆ ತಮ್ಮ ಪಿಎಫ್ ಹಣವನ್ನು ಕೆಲವು ಸಂದರ್ಭಗಳಲ್ಲಿ ವಿತ್‌ಡ್ರಾ ಮಾಡಿಕೊಳ್ಳುವ ಅವಕಾಶ ನೀಡಿದೆ. ಸದ್ಯ ಕೊರೊನಾ ಕಾರಣದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೌಕರರಿಗೆ ನೆರವಾಗಲೂ ಪಿಎಫ್‌ ಹಣವನ್ನು ಮುಂಗಡವಾಗಿ ಪಡೆಯುವ ದಾರಿಯನ್ನು EPF ಸುಗಮ ಮಾಡಿದೆ.

EPF ಸಂಸ್ಥೆ

EPF ಸಂಸ್ಥೆಯು ನೌಕರರಿಗೆ ಮುಂಗಡವಾಗಿ PF ಹಣ ಪಡೆಯುವ ವ್ಯವಸ್ಥೆ ಮಾಡಿದೆ. ಏಪ್ರಿಲ್ 28 ರಂದು ಇಪಿಎಫ್ ಸಂಸ್ಥೆ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, 740,000 ಅರ್ಜಿಗಳನ್ನು ಇತ್ಯರ್ಥಪಡಿಸಲಾಗಿದೆ. ಇನ್ನೂ ಅನೇಕರು PF ಹಣ ಪಡೆಯುವಲ್ಲಿ ವಿಳಂಬ ಆಗಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮುಂಗಡ ಪಿಎಫ್ ಹಣ ಪಡೆಯುವಾಗ ಮಾಹಿತಿ ಸರಿಯಾಗಿ ಭರ್ತಿ ಮಾಡುವುದು ಅಗತ್ಯ ಇರುತ್ತದೆ. ಇಲ್ಲದಿದ್ದರೇ ಅರ್ಜಿ ಅಪೂರ್ಣವಾಗುತ್ತದೆ. ಹಾಗಾದರೇ ಪಿಎಫ್‌ ಅಡ್ವಾನ್ಸ್‌ ಕ್ಲೈಮ್‌ ಪಡೆಯುವಾಗ ಯಾವೆಲ್ಲಾ ಕಾರಣಗಳಿಗೆ ಕ್ಲೈಮ್ ವಿಳಂಬ ಆಗುವುದು ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ಅಸ್ಪಷ್ಟ ದಾಖಲೆಗಳು

ಅಸ್ಪಷ್ಟ ದಾಖಲೆಗಳು

ನೌಕರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ ಅವರ ಚೆಕ್ ಪುಸ್ತಕದ ಸ್ಕ್ಯಾನ್ ಮಾಡಿದ ನಕಲು, ಪಾಸ್‌ಬುಕ್‌ನ ಮೊದಲ ಪುಟ ಅಪ್‌ಲೋಡ್ ಮಾಡಬೇಕು. ಮೊದಲ ಪುಟ ಅರ್ಜಿದಾರರ ಹೆಸರು, ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ ಕೋಡ್ ಅನ್ನು ಹೊಂದಿರಬೇಕು. ಕೆವೈಸಿಯಲ್ಲಿ ಅಪ್‌ಲೋಡ್ ಮಾಡಲಾದ ಬ್ಯಾಂಕ್ ಖಾತೆ ವಿವರಗಳು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಅಥವಾ ನೌಕರನ ಸಾರ್ವತ್ರಿಕ ಖಾತೆ ಸಂಖ್ಯೆಗೆ (UAN) ಲಿಂಕ್ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಇದನ್ನು ಮಾಡಲಾಗುತ್ತದೆ. ಇದರಿಂದ ಖಾಯೆಗೆ ನೇರವಾಗಿ ಹಣದ ವರ್ಗಾವಣೆ ಆಗಲು ಅನುಕೂಲವಾಗುತ್ತದೆ.

ಒಂದು ವೇಳೆ ಡಾಕ್ಯುಮೆಂಟ್‌ನ ಸ್ಕ್ಯಾನ್ ಸ್ಪಷ್ಟವಾಗಿಲ್ಲದಿದ್ದರೆ, ನೌಕರನ UANಗೆ ವಿರುದ್ಧವಾಗಿ ಒದಗಿಸಲಾದ ವಿವರಗಳೊಂದಿಗೆ ಹೊಂದಾಣಿಕೆ ಮಾಡುವುದು ಕಷ್ಟ. ಸ್ಕ್ಯಾನ್ ಮಾಡಿದ ನಕಲನ್ನು ಮತ್ತೆ ಅಪ್‌ಲೋಡ್ ಮಾಡಲು ಇಪಿಎಫ್‌ಒ ಕೇಳುವ ಕಾರಣ ಇದು ವಿಳಂಬಕ್ಕೆ ಕಾರಣವಾಗಬಹುದು. ಹೀಗಾಗಿ ಬ್ಯಾಂಕ್ ಖಾತೆ ವಿವರಗಳನ್ನು ತೋರಿಸುವ ಡಾಕ್ಯುಮೆಂಟ್‌ನ ಸ್ಪಷ್ಟ ಸ್ಕ್ಯಾನ್ ಅನ್ನು ಅಪ್‌ಲೋಡ್ ಮಾಡಿ.

ತಪ್ಪಾದ ಮಾಹಿತಿ

ತಪ್ಪಾದ ಮಾಹಿತಿ

ಕೆಲವೊಮ್ಮೆ, ಬ್ಯಾಂಕಿನ IFSC ಕೋಡ್ ಅಥವಾ ಕ್ಲೈಮ್ ಸಮಯದಲ್ಲಿ ಉಲ್ಲೇಖಿಸಲಾದ ಖಾತೆಯಂತಹ ವಿವರಗಳು UANನೊಂದಿಗೆ ಸರಿಯಾಗಿ ಹೊಂದಿಕೆಯಾಗುವುದಿಲ್ಲ. UANನೊಂದಿಗೆ ಖಾತೆ ತಪ್ಪು ವಿವರಗಳನ್ನು ನಮೂದಿಸಿರಬಹುದು ಅಥವಾ ನೌಕರರು ಮತ್ತೊಂದು ಬೇರೆ ಬ್ಯಾಂಕ್ ಖಾತೆಯಲ್ಲಿ ಪಿಎಫ್ ಅಡ್ವಾನ್ಸ್‌ ಹಣ ಜಮಾ ಮಾಡಬೇಕಾದ ಬಯಸುತ್ತಾರೆ, ಅದು UANನೊಂದಿಗೆ ಸಂಪರ್ಕ ಹೊಂದಿರುವುದಿಲ್ಲ. ಹೀಗಿದ್ದಾಗ ಪಿಎಫ್ ಕ್ಲೈಮ್‌ ಪ್ರಕ್ರಿಯೆಯಲ್ಲಿ ವಿಳಂಬ ಸಾಧ್ಯತೆಗಳಿರುತ್ತವೆ.

ಅಪೂರ್ಣ ಮಾನದಂಡಗಳ

ಅಪೂರ್ಣ ಮಾನದಂಡಗಳ

ಮರುಪಾವತಿಸಲಾಗದ ಮುಂಗಡವನ್ನು ತೆಗೆದುಕೊಳ್ಳಲು (non-refundable advance), ನೌಕರರು ಕನಿಷ್ಠ ಮೂರು ತಿಂಗಳವರೆಗೆ ಕೊಡುಗೆ ನೀಡಬೇಕು. ಒಂದು ವೇಳೆ ನೌಕರರು ಈ ಮೂಲಭೂತ ಮಾನದಂಡಗಳನ್ನು ಪೂರೈಸದಿದ್ದರೆ ಉದ್ಯೋಗಸ್ಥರು ಸಲ್ಲಿಸಿರುವ ಅರ್ಜಿ ತಿರಸ್ಕರಿಸಬಹುದಾದ ಸಾಧ್ಯತೆಗಳಿರುತ್ತವೆ.

ಬ್ಯಾಂಕುಗಳ ಕಾಲಾವಕಾಶ

ಬ್ಯಾಂಕುಗಳ ಕಾಲಾವಕಾಶ

EPFO ನೌಕರರ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಕ್ಲೈಮ್‌ನ ಪ್ರಕ್ರಿಯೆಯ ಮೂರು ದಿನಗಳಲ್ಲಿ ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡುತ್ತದೆ. ಇನ್ನು ಬ್ಯಾಂಕುಗಳು ಸಾಮಾನ್ಯವಾಗಿ ಹಣವನ್ನು ನೌಕರರ ಖಾತೆಗೆ ಜಮಾ ಮಾಡಲು ಮೂರು ದಿನಗಳನ್ನು ಕಾಲಾವಕಾಶವನ್ನು ತೆಗೆದುಕೊಳ್ಳುತ್ತವೆ. ಹೀಗಾಗಿ ಕೆಲವೊಮ್ಮೆ ಈ ಕಾರಣದಿಂದಾಗಿಯೂ ಪಿಎಫ್‌ ಕ್ಲೈಮ್‌ ವಿಳಂಬ ಆಗುವ ಸಾಧ್ಯತೆಗಳಿರುತ್ತವೆ.

Most Read Articles
Best Mobiles in India

English summary
Remember that after EPFO processes the application, banks may take some time to credit the money.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more