Home
ಸುದ್ದಿಜಾಲ

ಫಿಲಿಪ್ಸ್ ನ 50 ಇಂಚಿನ 4K ಸ್ಮಾರ್ಟ್‌ಟಿವಿಗೆ 55% ಡಿಸ್ಕೌಂಟ್‌! ಭರ್ಜರಿ ಆಫರ್‌!

ಸ್ಮಾರ್ಟ್‌ಡಿವೈಸ್‌ ವಿಭಾಗದಲ್ಲಿ ಫಿಲಿಪ್ಸ್ ಉತ್ತಮ ಶ್ರೇಣಿಯ ಡಿವೈಸ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತದೆ. ಇದರ ಬೆಲೆಗಳು ಸ್ವಲ್ಪ ಹೆಚ್ಚಾದರೂ ಡಿವೈಸ್‌ಗಳ ಕಾರ್ಯಕ್ಷಮತೆಗೆ ತಕ್ಕಂತೆ ಇರುತ್ತವೆ. ಹಾಗೆಯೇ ದೀರ್ಘ ಬಾಳಿಕೆ ಬರುತ್ತವೆ. ಅದಾಗ್ಯೂ ಫಿಲಿಪ್ಸ್ ನ ಈ ಬಹುಬೇಡಿಕೆಯ ಸ್ಮಾರ್ಟ್‌ಟಿವಿಗೆ 55% ರಿಯಾಯಿತಿ ಘೋಷಣೆ ಮಾಡಲಾಗಿದೆ.

ಹೌದು, ಫಿಲಿಪ್ಸ್ 7600 ಸರಣಿ ಅಲ್ಟ್ರಾ HD LED ಸ್ಮಾರ್ಟ್‌ಟಿವಿಗೆ (Philips 7600 Series Ultra HD LED Smart TV) ಭರ್ಜರಿ ಆಫರ್‌ ಘೋಷಣೆ ಮಾಡಲಾಗಿದ್ದು, ಈ ಸ್ಮಾರ್ಟ್‌ಟಿವಿ P5 ಎಂಜಿನ್ ನಲ್ಲಿ ಕೆಲಸ ಮಾಡಲಿದ್ದು, ಮಾಲಿ G51 ಪ್ರೊಸೆಸರ್‌ ಬಲ ಹೊಂದಿದೆ. ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್‌ ಹಾಗೂ ಆಫರ್‌ ಬೆಲೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಂತರ ನೀವು ಈ ಸ್ಮಾರ್ಟ್‌ಟಿವಿಯನ್ನು ಖರೀದಿಸಿ.

ಫಿಲಿಪ್ಸ್ ನ 50 ಇಂಚಿನ 4K ಸ್ಮಾರ್ಟ್‌ಟಿವಿಗೆ 55% ಡಿಸ್ಕೌಂಟ್‌! ಭರ್ಜರಿ ಆಫರ್‌!

ಫಿಲಿಪ್ಸ್ 7600 ಸರಣಿ ಸ್ಮಾರ್ಟ್‌ಟಿವಿಯ ಡಿಸ್‌ಪ್ಲೇ ವಿವರ: ಈ ಟಿವಿ 50 ಇಂಚಿನ HD LED ಡಿಸ್‌ಪ್ಲೇ ಹೊಂದಿದ್ದು, 3840 x 2160 ಪಿಕ್ಸೆಲ್‌ ರೆಸಲ್ಯೂಶನ್‌ ಬೆಂಬಲದೊಂದಿಗ 4K ವಿಡಿಯೋಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಹಾಗೆಯೇ 300nits ಗರಿಷ್ಠ ಬ್ರೈಟ್‌ನೆಸ್‌ ನೀಡಲಿದ್ದು, 60Hz ರಿಫ್ರೆಶ್‌ ರೇಟ್‌ ಹೊಂದಿದೆ. ಇಷ್ಟೆಲ್ಲಾ ಸೌಲಭ್ಯಗಳೊಂದಿಗೆ ನೀವು 178 ಡಿಗ್ರಿ ವೀಕ್ಷಣೆಯಲ್ಲೂ ಸ್ವಷ್ಟ ನೋಟವನ್ನು ಪಡೆದುಕೊಳ್ಳಬಹುದು.

ಫಿಲಿಪ್ಸ್ 7600 ಸರಣಿ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್‌: ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಮಾಲಿ G51 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, P5 ಪರ್ಫೆಕ್ಟ್ ಪಿಕ್ಚರ್ ಎಂಜಿನ್ ಗ್ರಾಫಿಕ್ ಪ್ರೊಸೆಸರ್ ಪಡೆದುಕೊಂಡಿದೆ. ಜೊತೆಗೆ 2GB RAM ಹಾಗೂ 4GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದ್ದು, ಈ ಮೂಲಕ ಸಾಕಷ್ಟು ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಈ ಸ್ಮಾರ್ಟ್‌ಟಿವಿ ನೆಟ್‌ಫ್ಲಿಕ್ಸ್, ಯೂಟ್ಯೂಬ್, ಡಿಸ್ನಿ+ಹಾಟ್‌ಸ್ಟಾರ್‌ ಸೇರಿದಂತೆ ವಿವಿಧ ಆಪ್‌ಗಳಿಗೆ ಈ ಸ್ಮಾರ್ಟ್‌ಟಿವಿ ಬೆಂಬಲ ನೀಡಲಿದ್ದು, ನಿಮ್ಮಿಷ್ಟದ ವಿಡಿಯೋಗಳನ್ನು ಸುಲಭವಾಗಿ ಹಾಗೂ ವೇಗವಾಗಿ ಸ್ಟ್ರೀಮಿಗ್‌ ಮಾಡಬಹುದಾಗಿದೆ. ಜೊತೆಗೆ ಸ್ಕ್ರೀನ್ ಮಿರರಿಂಗ್, ಫಿಲಿಪ್ಸ್ ಅಪ್ಲಿಕೇಶನ್ ಗ್ಯಾಲರಿ, ಮೊದಲೇ ಇನ್‌ಸ್ಟಾಲ್ ಆಗಿರುವ ಬ್ರೌಸರ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಫಿಲಿಪ್ಸ್ ನ 50 ಇಂಚಿನ 4K ಸ್ಮಾರ್ಟ್‌ಟಿವಿಗೆ 55% ಡಿಸ್ಕೌಂಟ್‌! ಭರ್ಜರಿ ಆಫರ್‌!

ಇನ್ನು ಈ ಸ್ಮಾರ್ಟ್‌ಟಿವಿಯ ಸ್ಪೀಕರ್ ವಿಷಯಕ್ಕೆ ಬರುವುದಾದರೆ, ಎರಡು ಸ್ಪೀಕರ್‌ಗಳನ್ನು ಹೊಂದಿರುವ ಈ ಟಿವಿ ಅತ್ಯುತ್ತಮ ಸೌಂಡ್‌ ನೀಡಲಿದೆ. ಡಾಲ್ಬಿ ಅಟ್ಮಾಸ್, ಸರೌಂಡ್‌ ಸೌಂಡ್‌, ವರ್ಚುವಲ್ ಸರೌಂಡ್ ಸೇರಿದಂತೆ ವಿವಿಧ ರೀತಿಯ ಸೌಂಡ್‌ ಇದರಿಂದ ಲಭ್ಯವಾಗಲಿದ್ದು, ಚಲನಚಿತ್ರ, ಸಂಗೀತ, ಗೇಮ್‌, ಸುದ್ದಿ ಸೇರಿದಂತೆ ಇನ್ನಿತರೆ ವಿಭಾಗಗಳಲ್ಲಿ ಮೋಡ್‌ ಅನ್ನು ಬದಲು ಮಾಡಿಕೊಳ್ಳಬಹುದಾಗಿದೆ. ಈ ಸ್ಪೀಕರ್‌ಗಳು 20W ಸೌಂಡ್‌ ನೀಡಲಿದ್ದು, AAC,MP3, WAV,WMA, WMA-PRO ಆಡಿಯೋ ಆವೃತ್ತಿಗೆ ಬೆಂಬಲ ನೀಡುತ್ತದೆ.

ಹಾಗೆಯೇ ಇದರ ಕನೆಕ್ಟಿವಿಟಿ ವಿಚಾರಕ್ಕೆ ಬರುವುದಾದರೆ ಬ್ಲೂಟೂತ್, ವೈ-ಫೈ ಸೇರಿದಂತೆ ಒಂದು ಎತರ್ನೆಟ್ (RJ45), ಮೂರು ಹೆಚ್‌ಡಿಎಂಐ ಪೋರ್ಟ್‌, ಎರಡು ಯುಎಸ್‌ಬಿ ಪೋರ್ಟ್‌ ಆಯ್ಕೆಯನ್ನು ಪಡೆದುಕೊಂಡಿದೆ. ಜೊತೆಗೆ ಮೊಬೈಲ್‌ ನೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಈ ಸ್ಮಾರ್ಟ್‌ಟಿವಿಯಲ್ಲಿ ಸ್ಕ್ರೀನ್‌ ಮಿರರಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಫಿಲಿಪ್ಸ್ 7600 ಸರಣಿ ಸ್ಮಾರ್ಟ್‌ಟಿವಿಯ ಬೆಲೆ ವಿವರ: ಪ್ರಮುಖ ವಿಚಾರಕ್ಕೆ ಬರುವುದಾದರೆ ಈ ಸ್ಮಾರ್ಟ್‌ಟಿವಿಯ ಸಾಮಾನ್ಯ ದರ 69,990ರೂ.ಗಳು ಆದರೆ ನೀವು ಈ ಟಿವಿಯನ್ನು ಅರ್ಧ ಬೆಲೆಗೆ ಅಂದರೆ 30,999ರೂ.ಗಳಿಗೆ ಖರೀದಿ ಮಾಡಬಹುದು. ಯಾಕೆಂದರೆ ಈ ಟಿವಿ ಮೇಲೆ 55% ರಿಯಾಯಿತಿ ಘೋಷಣೆ ಮಾಡಲಾಗಿದ್ದು, ಇದರಿಂದಾಗಿ ನೀವು ಭಾರೀ ಹಣ ಉಳಿತಾಯ ಮಾಡಬಹುದಾಗಿದೆ. ಜೊತೆಗೆ ವಿನಿಮಯ ಆಫರ್‌ನಲ್ಲಿ 11,000ರೂ.ಗೂ ಹೆಚ್ಚಿನ ರಿಯಾಯಿತಿ ಪಡೆದುಕೊಳ್ಳಬಹುದು. ಈ ಆಫರ್‌ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.

Best Mobiles in India

English summary
Philips 7600 Series Ultra HD LED Smart TV is in huge demand in the market and Flipkart has announced 55% discount on this TV. This way you can buy this TV for half of the original price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+