ವಿಶ್ವಭೂಮಿ ದಿನಕ್ಕಾಗಿ ಫಿಲಿಪ್ಸ್‌ನಿಂದ ಹೊಸ ಕೊಡುಗೆ
ವಿಶ್ವಭೂಮಿ ದಿನಕ್ಕಾಗಿ ಫಿಲಿಪ್ಸ್ ಕಂಪೆನಿ 60 ವ್ಯಾಟ್‌ನ ಎಲ್‌ಇಡಿ ಬಲ್ಬ್ ಅನ್ನು ಪ್ರಸ್ತುತಪಡಿಸುತ್ತಿದ್ದು ಇದು ಬರೇ 8.5 ವ್ಯಾಟ್ ವಿದ್ಯುತ್ ಅನ್ನು ಬಳಸಲಿದೆ.
ಓದಿರಿ: ಅದ್ಭುತ ಎಂದೆನಿಸುವ ವಿಶುವಲ್ ಕೈಚಳಕ

ಮೇ ಮೊದಲ ವಾರದಲ್ಲೇ ಈ ಬಲ್ಬ್ ಅನ್ನು ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು ಬಜೆಟ್ ದರದಲ್ಲಿ ಉತ್ಪನ್ನ ನಿಮಗೆ ಲಭ್ಯವಾಗಲಿದೆ ಎಂದು ಕಂಪೆನಿ ತಿಳಿಸಿದೆ.
ಬಿಡುಗಡೆಯಾದ 90 ದಿನಗಳವರೆಗೆ ಇದು ಸೀಮಿತ ಕೊಡುಗೆಯನ್ನು ಹೊಂದಿದ್ದು ಗ್ರಾಹಕರು ತ್ವರಿತವಾಗಿ ಇದನ್ನು ಖರೀದಿ ಮಾಡಬೇಕೆಂದು ಕಂಪೆನಿ ತಿಳಿಸಿದೆ.
ಓದಿರಿ: ವಿಶ್ವಭೂಮಿ ದಿನ: ಪ್ರಕೃತಿಯಲ್ಲಿ ಚಿಗುರೊಡೆದ ಗ್ಯಾಜೆಟ್‌ಗಳು

ನಮ್ಮ ಗಮನವನ್ನು ನಾವು ಸಣ್ಣ ಬಲ್ಬ್ ಮೇಲೆ ಹೆಚ್ಚು ಕೇಂದ್ರೀಕರಿಸಿದ್ದು, ಕಡಿಮೆ ದರಪಟ್ಟಿಯಲ್ಲಿ ಬಳಕೆದಾರರಿಗೆ ಈ ಬಲ್ಬ್‌ಗಳು ದೊರೆಯುವಂತಾಗುವುದು ನಮ್ಮ ಉದ್ದೇಶವಾಗಿದೆ. 10 ವರ್ಷಗಳ ದೀರ್ಘತೆಯನ್ನು ಈ ಬಲ್ಬ್‌ಗಳು ಹೊಂದಿದೆ ಎಂದು ಕಂಪೆನಿ ತಿಳಿಸಿದೆ.


Click it and Unblock the Notifications