ಫಿಲಿಪ್ಸ್‌ನಿಂದ ಹೊಸ ಸೆಕ್ಯುರಿಟಿ ಕ್ಯಾಮೆರಾ ಲಾಂಚ್!..SD ಕಾರ್ಡ್ ತೆಗೆದರೂ ವಿಡಿಯೋ ಉಳಿಯತ್ತೆ!
ಪ್ರಮುಖ ಡೊಮೆಸ್ಟಿಕ್ ಹೋಮ್ ಅಪ್ಲೈಯನ್ಸ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಫಿಲಿಪ್ಸ್ ಕಂಪನಿಯು ಇದೀಗ ಮೂರು ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾ ಬಿಡುಗಡೆ ಮಾಡಿದೆ. ಫಿಲಿಪ್ಸ್ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾ ಲಾಂಚ್ ಮಾಡುವ ಜೊತೆಗೆ ಬಳಕೆದಾರ ಸ್ನೇಹಿ ಹೋಮ್ ಸೇಫ್ಟಿ ಆಪ್ ಅನ್ನು ಸಹ ಘೋಷಿಸಿದೆ.
ಹೌದು, ಜನಪ್ರಿಯ ಫಿಲಿಪ್ಸ್ ಕಂಪನಿಯು ಹೊಸದಾಗಿ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳನ್ನು ಪರಿಚಯಿಸಿ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ನೂತನವಾಗಿ ಲಾಂಚ್ ಆಗಿರುವ ಫಿಲಿಪ್ಸ್ ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳು ಚಲನೆ, ಶಬ್ದ ಮತ್ತು ಜನರ ನಡುವೆ ಪರಿಣಾಮಕಾರಿಯಾಗಿ ವ್ಯತ್ಯಾಸವನ್ನು ಗುರುತು ಮಾಡಬಹುದಾಗಿದ್ದು, ಹೀಗಾಗಿ ನಿಖರವಾದ ಅಲರ್ಟ್‌ಗಳನ್ನು ನೀಡುತ್ತದೆ.

ಇನ್ನು ಸ್ಮಾರ್ಟ್ ಸೆಕ್ಯುರಿಟಿ ಕ್ಯಾಮೆರಾಗಳನ್ನು ಬಳಕೆದಾರರು ಯಾವ ಸ್ಥಳದಿಂದಾದರೂ ಸಹ 24/7 ನಿಯಂತ್ರಣ ಮಾಡಬಹುದಾಗಿದೆ. ಹಾಗೆಯೇ ವೀಕ್ಷಣೆ, ರೆಕಾರ್ಡಿಂಗ್ ಅಥವಾ ಸೆಕ್ಯುರಿಟಿ, ಘಟನೆಗಳಿಗೆ ಪ್ರತಿಕ್ರಿಯಿಸುತ್ತವೆ ಆಯ್ಕೆಗಳುನ್ನು ಒಳಗೊಂಡಿದೆ. ಈ ನೂತನ ಕ್ಯಾಮರಾಗಳು AES-128 ಗೂಢಲಿಪೀಕರಣ ಸಪೋರ್ಟ್ ಅನ್ನು ಸಹ ಪಡೆದಿದ್ದು, ಎಸ್‌ಡಿ ಕಾರ್ಡ್ ಅನ್ನು ತೆಗೆದುಹಾಕಿದರೂ ಸಹ ವೀಡಿಯೊಗಳನ್ನು ರಕ್ಷಿಸುತ್ತದೆ.
ಫಿಲಿಪ್ಸ್ ಸ್ಮಾರ್ಟ್ ಹೋಮ್ HSP 1000 ಕ್ಯಾಮೆರಾ : ಇದು 2ಎಂಪಿ ಇಮೇಜ್ ಸೆನ್ಸಾರ್ ಸಪೋರ್ಟ್ ಪಡೆದಿದ್ದು, ಆಪ್ ಮೂಲಕ 24/7 ನಿಯಂತ್ರಣವನ್ನು ಒದಗಿಸುತ್ತದೆ. ಇದರೊಂದಿಗೆ, ವರ್ಧಿತ ದಿನ ಮತ್ತು ರಾತ್ರಿ ದೃಷ್ಟಿ ಬೆಂಬಲ ಆಯ್ಕೆ ಪಡೆದಿದೆ. ಅಲ್ಲದೇ ಪೂರ್ಣ ಹೆಚ್‌ಡಿ ರೆಸಲ್ಯೂಶನ್, ಚಲನೆಯ ಪತ್ತೆ, ಲೈವ್ ವೀಕ್ಷಣೆ, ದ್ವಿಮುಖ ಸಂವಹನ ಬೆಂಬಲ ಮತ್ತು ಸುಲಭ DIY ಇನ್‌ಸ್ಟಾಲೇಶನ್ ಸ್ಮಾರ್ಟ್ ಅಲರ್ಟ್‌ಗಳನ್ನು ನೀಡುವ ಆಂಟಿ-ಥೆಫ್ಟ್ ಅಲಾರ್ಮ್ ಸಿಸ್ಟಮ್ ಸೌಲಭ್ಯ ಅನ್ನು ಸಹ ಪಡೆದಿವೆ.
ಈ ಕ್ಯಾಮೆರಾಗಳು 128GB ವರೆಗಿನ ಮೈಕ್ರೊ ಎಸ್‌ಡಿ ಕಾರ್ಡ್, ಅಂತರ್ನಿರ್ಮಿತ ಮೈಕ್ ಮತ್ತು ಸೈರನ್ ಆಯ್ಕೆಗಳನ್ನು ಸಹ ಪಡೆದಿವೆ. ಹಾಗೆಯೇ ನೂತನ ಮುರು ಕ್ಯಾಮೆರಾಗಳಿಗೂ ಹೊಂದಿಕೊಳ್ಳುವ ಫಿಲಿಪ್ಸ್ ಹೋಮ್ ಸೇಫ್ಟಿ ಆಪ್ ಅನ್ನು ಪರಿಚಯಿಸಿದ್ದು, ಇದು ಐಓಎಸ್ ಆವೃತ್ತಿ 15.0 ಮತ್ತು ಅದಕ್ಕಿಂತ ಹೆಚ್ಚಿನ ಹಾಗೂ ಆಂಡ್ರಾಯ್ಡ್ 8 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿ ಪಡೆದ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ಮಾಡಲಿದೆ.
ಫಿಲಿಪ್ ಸ್ಮಾರ್ಟ್ HSP 3500 ಕ್ಯಾಮೆರಾ : ಇದು 360-ಡಿಗ್ರಿ ವೈಫೈ ಒಳಾಂಗಣ ಸೆಕ್ಯುರಿಟಿ ಕ್ಯಾಮರಾ ಆಗಿದ್ದು, ಇದು 3ಎಂಪಿ ಇಮೇಜ್ ಸೆನ್ಸಾರ್, 360-ಡಿಗ್ರಿ ವೀಕ್ಷಣೆ ಮತ್ತು ವರ್ಧಿತ 2k ಗುಣಮಟ್ಟವನ್ನು ಪಡೆದುಕೊಂಡಿದೆ. ಇದಲ್ಲದೆ, ಇದು ಚಲನೆಯ ಪತ್ತೆ, ಲೈವ್-ವೀಕ್ಷಣೆ, ದ್ವಿಮುಖ ಸಂವಹನ ಫೀಚರ್ಸ್, ಕಳ್ಳತನ-ವಿರೋಧಿ ಅಲರ್ಟ್ ವ್ಯವಸ್ಥೆ ಮತ್ತು ಸ್ಮಾರ್ಟ್ ಅಲರ್ಟ್‌ಗಳನ್ನು ಸಹ ನೀಡುತ್ತದೆ. ಇನ್ನು ಇದು 128GB ವರೆಗಿನ ಮೈಕ್ರೊ ಎಸ್‌ಡಿ ಕಾರ್ಡ್ ಸಪೋರ್ಟ್ ಪಡೆದಿದ್ದು, ಬಿಲ್ಟ್‌ಇನ್ ಮೈಕ್ ಜೊತೆಗೆ ಸೈರನ್ ಸಹ ಪಡೆದಿದೆ.
ಫಿಲಿಪ್ಸ್ ಸ್ಮಾರ್ಟ್ HSP3800 ಕ್ಯಾಮೆರಾ : ಸಂಸ್ಥೆಯ ಈ ಕ್ಯಾಮೆರಾವು 360-ಡಿಗ್ರಿ ವೈಫೈ ಒಳಾಂಗಣ ಸೆಕ್ಯುರಿಟಿ ಕ್ಯಾಮೆರಾ ಆಗಿದ್ದು, 2ಎಂಪಿ ಇಮೇಜ್ ಸೆನ್ಸಾರ್, ಪೂರ್ಣ ಹೆಚ್‌ಡಿ+ 1920 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್, ಗುಣಮಟ್ಟಕ್ಕಾಗಿ ವರ್ಧಿತ ದಿನ ಮತ್ತು ಬಣ್ಣ ರಾತ್ರಿ ದೃಷ್ಟಿ, ಸ್ಪಾಟ್‌ಲೈಟ್‌ನೊಂದಿಗೆ ಚಲನೆಯ ಪತ್ತೆ ಮತ್ತು ಆಂಟಿ-ಥೆಫ್ಟ್ ಅಲಾರ್ಮ್ ಸಿಸ್ಟಮ್ ನಂತಹ ಸೌಲಭ್ಯಗಳನ್ನು ಒಳಗೊಂಡಿದೆ. ಜೊತೆಗೆ ಮಳೆಯ ಸಮಯದಲ್ಲಿಯೂ ಸಹ ಸ್ಪಷ್ಟ ಚಿತ್ರಣಕ್ಕಾಗಿ ಹವಾಮಾನ ನಿರೋಧಕ IP65 ರೇಟಿಂಗ್ ಪಡೆದುಕೊಂಡಿದೆ.
ಬೆಲೆ ಮತ್ತು ಲಭ್ಯತೆ : ಫಿಲಿಪ್ಸ್ ಸಂಸ್ಥೆಯು ಮೂರು ಸ್ಮಾರ್ಟ್ ಹೋಮ್ ಸೆಕ್ಯುರಿಟಿ ಕ್ಯಾಮೆರಾಗಳನ್ನು ಪರಿಚಯಿಸಿದ್ದು, ಅವುಗಳು ಕ್ರಮವಾಗಿ HSP 1000, HSP 3500 ಮತ್ತು HSP 3500 ಆಗಿವೆ. ಇನ್ನು ಇವುಗಳ ಬೆಲೆ ಕ್ರಮವಾಗಿ HSP 1000 ಬೆಲೆ 3,295ರೂ, HSP 3500 ಬೆಲೆ 5,295ರೂ ಮತ್ತು HSP 3500 ಬೆಲೆ 7,795ರೂ. ಆಗಿದೆ. ಇನ್ನು ಗ್ರಾಹಕರು ಈ ಕ್ಯಾಮೆರಾಗಳನ್ನು ಅಮೆಜಾನ್ ಮತ್ತು ಫಿಲಿಪ್ಸ್ ಡೊಮೆಸ್ಟಿಕ್ ಅಪ್ಲೈಯನ್ಸ್ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದಾಗಿದೆ.


Click it and Unblock the Notifications








