ಎಲ್‌ಇಡಿ ಬಲ್ಬ್‌ನಲ್ಲಿ 'ಲೈಫೈ' ಇಂಟರ್‌ನೆಟ್ ಸೇವೆ ಆರಂಭಿಸಿದ 'ಫಿಲಿಪ್ಸ್'!

|

ಬೆಳಕಿನ ತರಂಗಗಳ ಮೂಲಕ ಉನ್ನತ ಗುಣಮಟ್ಟದ ಇಂಟರ್‌ನೆಟ್‌ ಸೇವೆಯನ್ನು ಒದಗಿಸುವ ಸಲುವಾಗಿ 'ಲೈಫೈ' ಯೋಜನೆಗೆ ಫಿಲಿಫ್ಸ್ ಲೈಟಿಂಗ್ ಕಂಪನಿ ಚಾಲನೆ ನೀಡಿದೆ. ವೈಫೈ ಬದಲು ಬೆಳಕಿನ ಸಹಾಯದಿಂದ ಡಾಟಾ ವರ್ಗಾವಣೆ ಮಾಡಲು ಸಾಧ್ಯವಾಗುವಂತಹ ಹೊಸ ಬಗೆಯ ಸೇವೆ ಲೈಫೈ ಕನೆಕ್ಷನ್‌ಗೆ ಇದೀಗ ಚಾಲನೆ ನೀಡಲಾಗಿದೆ ಎಂದು ಫಿಲಿಫ್ಸ್ ತಿಳಿಸಿದೆ.

ಎಲ್‌ಇಡಿ ಬಲ್ಬ್‌ನಲ್ಲಿ 'ಲೈಫೈ' ಇಂಟರ್‌ನೆಟ್ ಸೇವೆ ಆರಂಭಿಸಿದ 'ಫಿಲಿಪ್ಸ್'!

ಇಂದಿನ ಡಿಜಿಟಲ್‌ ದಿನಗಳಲ್ಲಿ ಗ್ರಾಹಕರಿಗೆ ಹೊಸ ಬಗೆಯ ಸೇವೆಯನ್ನು ನೀಡುತ್ತಿದ್ದೇವೆ. ರೇಡಿಯೊ ತರಂಗಗಳಿಗಿಂತಲೂ ಉತ್ತಮ ಗುಣಮಟ್ಟದ ಇಂಟರ್‌ನೆಟ್‌ ಅನ್ನು ಲೈಫೈ ಮೂಲಕ ಒದಗಿಸಬಹುದು. ವೈಫೈ ಮಾದರಿಯಲ್ಲಿಯೇ ಲೈಫೈ ಕೂಡ ಕೆಲಸ ಮಾಡಲಿದೆ. ಆದರೆ, ರೇಡಿಯೊ ತರಂಗಗಳ ಬದಲು ಬೆಳಕಿನ ತರಂಗದ ಬಳಕೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಇತ್ತೀಚಿನ ಲೈಫೈ ತಂತ್ರಜ್ಞಾನವು ಇಂದಿನ ಡಿಜಿಟಲ್ ಯುಗಕ್ಕೆ ಅಗಾಧ ಸಾಮರ್ಥ್ಯವನ್ನು ಹೊಂದಿದೆ ಮತ್ತು ವಿಶ್ವದ ಪ್ರಮುಖ ಬೆಳಕಿನ ಕಂಪನಿಯಾಗಿ ನಮ್ಮ ಗ್ರಾಹಕರಿಗೆ ಹೊಸ ಹಾಗೂ ನವೀನ ಸೇವೆಗಳನ್ನು ನೀಡಲು ನಾವು ಹೆಮ್ಮೆಪಡುತ್ತೇವೆ ಎಂದು ಫಿಲಿಪ್ಸ್ ಲೈಟಿಂಗ್ ಮುಖ್ಯ ಇನ್ನೋವೇಶನ್ ಅಧಿಕಾರಿ ಒಲಿವಿಯಾ ಕಿಯು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಎಲ್‌ಇಡಿ ಬಲ್ಬ್‌ನಲ್ಲಿ 'ಲೈಫೈ' ಇಂಟರ್‌ನೆಟ್ ಸೇವೆ ಆರಂಭಿಸಿದ 'ಫಿಲಿಪ್ಸ್'!

ಲೈಫೈ ಸಂಪರ್ಕಕ್ಕೆ ಸಾಮಾನ್ಯ ಎಲ್‌ಇಡಿ ಬಲ್ಬ್‌ನಂತಿರುವ ಪ್ರಕಾಶದ ಮೂಲ(Source)ನಿಂದ ಒಂದು ಇಂಟರ್‌ನೆಟ್ ಕನೆಕ್ಷನ್ ಮತ್ತು ಒಂದು ಫೋಟೋ ಡಿಟೆಕ್ಟರ್ ಇವಿಷ್ಟೇ ಪರಿಕರಗಳು ಸಾಕಾಗುತ್ತವೆ. ಇದರಿಂದ ಒಂದೇ ಸಮಯದಲ್ಲಿ ಸ್ಪೀಡ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸಂಪರ್ಕ ಮತ್ತು ಗುಣಮಟ್ಟದ ಬೆಳಕನ್ನು ನೀಡುವಂತಹ ಹೊಸ ವ್ಯವಸ್ಥೆ ಇದರಿಂದ ಲಭ್ಯವಾಗಲಿದೆ.

ಲೈಫೈ ತಂತ್ರಜ್ಞಾನದೊಂದಿಗೆ ಸಕ್ರಿಯಗೊಳಿಸಲಾದ ಫಿಲಿಪ್ಸ್ ಲೈಟಿಂಗ್‌ನ ಆಫೀಸ್ ಲುಮಿನೈರ್‌ಗಳು ಬೆಳಕಿನ ಗುಣಮಟ್ಟಕ್ಕೆ ಧಕ್ಕೆಯಾಗದಂತೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಸೆಕೆಂಡಿಗೆ 30 Mb (Mb / s) ವೇಗದೊಂದಿಗೆ ಒದಗಿಸುತ್ತದೆ. 30Mb/s ನೊಂದಿಗೆ ಬಳಕೆದಾರರು ಏಕಕಾಲದಲ್ಲಿ ಹಲವಾರು HD ಗುಣಮಟ್ಟದ ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದು ಎನ್ನಲಾಗಿದೆ.

ಓದಿರಿ: ಬ್ರೇಕಿಂಗ್..ಇನ್ಮುಂದೆ ಮೊಬೈಲ್ ಕದ್ದರೆ ಕ್ಷಣಾರ್ಧದಲ್ಲಿ ಸಿಕ್ಕಿಬೀಳ್ತಾರೆ ಕಳ್ಳರು!

Best Mobiles in India

English summary
Philips Lighting is now offering Light Fidelity (LiFi), a technology in which high quality LED lighting provides a broadband internet connection through light waves. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X