ಟಾಯ್ಲೆಟ್‌ ಶುಚಿತ್ವಕ್ಕಾಗಿ ಸಿಂಗಾಪೂರ್‌ದಲ್ಲಿ ಹೊಸ ಅಪ್ಲಿಕೇಶನ್‌

Posted By:

ಸಿಂಗಾಪೂರ್‌ಗೆ ಪ್ರವಾಸ ಹೋಗುವ ಮಂದಿಗೆ  ಒಂದು ಗುಡ್‌ನ್ಯೂಸ್‌. ಇನ್ನು ಮುಂದೆ ಸಿಂಗಾಪೂರ್‌ನಲ್ಲಿ ಸಾರ್ವಜನಿಕ ಟಾಯ್ಲೆಟ್‌ ಎಲ್ಲಿದೆ ಎಂದು ಹುಡುಕುವ ಅಗತ್ಯವಿಲ್ಲ. ನಿಮ್ಮಲ್ಲಿರುವ ಮೊಬೈಲ್‌ನಿಂದಲೇ ಸಾರ್ವಜನಿಕ ಟಾಯ್ಲೆಟ್‌ ಎಲ್ಲಿದೆ ಮತ್ತು ಸದ್ಯ ನೀವು ಇರುವ ಸ್ಥಳದಿಂದ ಆ ಟಾಯ್ಲೆಟ್‌ ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿಯಬಹುದು.

ವಿಶ್ವದಲ್ಲಿ ಕ್ಲೀನ್‌ ಸಿಟಿ ಎಂದೇ ಪ್ರಸಿದ್ದಿಯಾದ ಸಿಂಗಾಪೂರ್ ಜನತೆಗೆ ಮತ್ತು ಪ್ರವಾಸಿಗಾರಿಗಾಗಿಯೇ ಒಂದು ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್‌ ತಯಾರಾಗಿದೆ. ಸಿಂಗಪುರದ ರೆಸ್ಟ್ ರೂಂ ಅಸೋಸಿಯೇಷನ್‌ವರು ಹೊಸದಾಗಿ ಸಾರ್ವಜನಿಕ ಟಾಯ್ಲೆಟ್‌ ಬಗ್ಗೆ ಮಾಹಿತಿ ತಿಳಿಯುವುದಕ್ಕಾಗಿ ಹೊಸ ಅಪ್ಲಿಕೇಶನ್‌ ತಯಾರಿಸಿದೆ.

ಟಾಯ್ಲೆಟ್‌ ಶುಚಿತ್ವಕ್ಕಾಗಿ ಸಿಂಗಾಪೂರ್‌ದಲ್ಲಿ ಹೊಸ ಅಪ್ಲಿಕೇಶನ್‌

ಯಾಕೆ ಈ ಅಪ್ಲಿಕೇಶನ್‌ ?

ಶುಚಿತ್ವಕ್ಕಾಗೆ ಭಾರೀ ಪ್ರಾಶಸ್ತ್ಯ ನೀಡುವ ಸಿಂಗಾಪೂರ್‌ನಲ್ಲಿ ಸಿಂಗಪುರದ ರೆಸ್ಟ್ ರೂಂ ಅಸೋಸಿಯೇಷನ್‌ವರು ಇತ್ತೀಚಿಗೆ ಸಿಂಗಾಪೂರ್‌ನ ಟಾಯ್ಲೆಟ್‌ ಗುಣಮಟ್ಟದ ಬಗ್ಗೆ

ಅಪ್ಲಿಕೇಶನ್‌ ವಿಶೇಷತೆ ಏನು?
ಸಿಂಗಾಪೂರ್‌ನಲ್ಲಿ ಸುಮಾರು ಮೂವತ್ತು ಸಾವಿರ ಸಾರ್ವಜನಿಕ ಟಾಯ್ಲೆಟ್‌ಗಳಿವೆ. ಈ ಟಾಯ್ಲೆಟ್‌ನ್ನು ಜನರು ಬಳಸಿದ ಮೇಲೆ ತಮ್ಮ ಅಭಿಪ್ರಾಯ ಈ ಅಪ್ಲಿಕೇಶನ್‌ನ್‌ ಮೂಲಕ ತಿಳಿಸಬಹುದು. ಅಷ್ಟೇ ಅಲ್ಲದೇ ಉತ್ತಮ ಟಾಯ್ಲೆಟ್‌ ಫೋಟೋ ಅಪ್‌ಲೋಡ್‌ ಮಾಡಿ ಅದಕ್ಕೆ ತಮ್ಮ ಅಂಕಗಳನ್ನು ಸಹ ನೀಡಬಹುದು.

ಈ ಅಪ್ಲಿಕೇಶನ್‌ ಮುಂದಿನ ವಾರದಿಂದ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಾಗಲಿದೆ. ಐಫೋನ್‌ ಬಳಸುವ ಗ್ರಾಹಕರಿಗಾಗಿ ಜೂನ್‌ ತಿಂಗಳಲ್ಲಿ ಈ ಅಪ್ಲಿಕೇಶನ್‌ ಸಿದ್ದಪಡಿಸುವುದಾಗಿ ಈ ಅಪ್ಲಿಕೇಶನ್‌ ತಯಾರಿಸಿದ ರೆಸ್ಟ್ ರೂಂ ಅಸೋಸಿಯೇಷನ್‌ವರು ತಿಳಿಸಿದ್ದಾರೆ.

ಇದನ್ನು ಓದಿ : ಹೋಟೆಲ್‌ನಲ್ಲೊಂದು ಅಶ್ಲೀಲ ರೂಮ್‌

Please Wait while comments are loading...
Opinion Poll

Social Counting