ಈ ವಿಡಿಯೋ ನೋಡಿದರೆ ಇನ್ನೆಂದು ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ತೆಗೆಯುವುದಿಲ್ಲ..!
ನಿಮ್ಮ ಸ್ಮಾರ್ಟ್‌ಫೋನ್ ಫೋನ್ ಬ್ಯಾಟರಿಯನ್ನು ಯಾವುದೇ ಕಾರಣವಿಲ್ಲದೇ ಸುಮ್ಮನೆ ತೆಗೆಯಬೇಡಿ ಮತ್ತು ಬೇರೆ ಕಂಪನಿ ಬ್ಯಾಟರಿಯನ್ನು ನಿಮ್ಮ ಫೋನಿಗೆ ಹಾಕುವ ಮುನ್ನ ಎಚ್ಚರವಾಗಿರಿ. ಇಲ್ಲವೇ ಮೊಬೈಲ್ ರಿಪೇರಿ ಮಾಡುವವರ ಬಳಿ ಹೋಗಿ ಬ್ಯಾಟರಿಯನ್ನು ಬದಲಾಯಿಸಿಕೊಳ್ಳಿ. ಕಾರಣ ಮೊಬೈಲ್ ಬ್ಯಾಟರಿಯನ್ನು ಸರಿಯಾಗಿ ಬದಲಾಯಿಸದೆ ಹೋದರೆ ಅದು ಸ್ಫೋಟಗೊಳ್ಳುವ ಸಾಧ್ಯತೆ ಇದೆ.

ಇದೇ ಮಾದರಿಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನಿನ ಬ್ಯಾಟರಿಯನ್ನು ಬದಲಾಯಿಸಲು ಹೋದ ಸಂದರ್ಭದಲ್ಲಿ ಮೊಬೈಲ್ ಸ್ಫೋಟಗೊಂಡಿರುವ ಘಟನೆಯೂ ಚೀನಾದಲ್ಲಿ ಸಂಭವಿಸಿದ್ದು, ಈ ಘಟನೆದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಹಿನ್ನಲೆಯಲ್ಲಿ ಮೊಬೈಲ್ ಫೋನ್ ಬ್ಯಾಟರಿ ವಿಚಾರದಲ್ಲಿ ಎಚ್ಚರವಹಿಸುವುದು ಅಗತ್ಯ ಎನ್ನಲಾಗಿದೆ.
ಆನ್‌ಲೈನಿನಲ್ಲಿ ಹೊಸ ಬ್ಯಾಟರಿಯೊಂದನ್ನು ಖರೀದಿಸಿದ ವ್ಯಕ್ತಿಯೊಬ್ಬರು, ತಮ್ಮ ಮೊಬೈಲ್‌ನಲ್ಲಿರುವ ಹಳೇಯ ಬ್ಯಾಟರಿಯನ್ನು ತೆಗೆದು ಹೊಸ ಬ್ಯಾಟರಿಯನ್ನು ಅಳವಡಿಸುವ ಸಲುವಾಗಿ, ಮೊಬೈಲ್ ಅಂಗಡಿಗೆ ಹೋಗಿ ಸಲಕರಣೆಗಳನ್ನು ಪಡೆದು ಅಲ್ಲಿಯೇ ತಮ್ಮ ಮೊಬೈಲ್ ಫೋನ್‌ನ್ನು ತಾನೇ ಓಪನ್ ಮಾಡಿ ಹಳೇಯ ಬ್ಯಾಟರಿಯನ್ನು ತೆಗೆಯುವ ಸಂದರ್ಭದಲ್ಲಿ ಮೊಬೈಲ್ ಹತ್ತಿ ಉರಿದಿದೆ ಎಂದು ಡೈಲಿ ಮೈಲ್ ವರದಿ ಮಾಡಿದೆ.
ಓದಿರಿ: ಜಿಯೋ ಹಾದಿಯಲ್ಲಿ ಏರ್‌ಟೆಲ್: VoLTE ಬಳಕೆದಾರರಿಗೆ ಉಚಿತ ಡೇಟಾ..! ಪಡೆಯುವುದು ಹೇಗೆ..?
ಬ್ಯಾಟರಿಯನ್ನು ಬದಲಾಯಿಸುವ ವೇಳೆಯಲ್ಲಿ ಬ್ಯಾಟರಿಗೆ ಹಾನಿ ಮಾಡಿದ ಕಾರಣ ಮೊಬೈಲ್ ಫೋನ್ ಬ್ಲಾಸ್ಟ್ ಆಗಿದೆ ಎನ್ನಲಾಗಿದ್ದು, ಆಕಸ್ಮಿಕವಾಗಿ ಬ್ಯಾಟರಿಗೆ ತೂತು ಮಾಡಿದ್ದರಿಂದ ಅದು ಸ್ಫೋಟಗೊಂಡಿದೆ, ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ವರದಿಯಾಗಿದೆ. ಹಿನ್ನಲೆಯಲ್ಲಿ ನೀವು ಮೊಬೈಲ್ ಫೋನ್ ಬ್ಯಾಟರಿ ವಿಚಾರದಲ್ಲಿ ಎಚ್ಚರಿಕೆಯನ್ನುವಹಿಸುವುದು ಅಗತ್ಯ. ಈ ಘಟನೆಯ ವಿಡಿಯೋ ಮುಂದಿನಂತಿದೆ.


Click it and Unblock the Notifications