ಫೋನ್ ಪೇ ಆಪ್‌ನಲ್ಲಿ ಅಡಚಣೆ!..ಯಾಕೆ ಗೊತ್ತಾ?

|

ಪ್ರಸ್ತುತ ಬಹುತೇಕ ಬಳಕೆದಾರರು/ಗ್ರಾಹಕರು ಡಿಜಿಟಲ್ ಪೇಮೆಂಟ್‌ಗೆ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಸಣ್ಣ ಪುಟ್ಟ ವ್ಯವಹಾರಗಳಿಗೂ ಪೇಮೆಂಟ್/UPI ಆಪ್‌ಗಳ ಕ್ಯೂಆರ್ ಸ್ಕ್ಯಾನ್‌ ಮೂಲಕವೇ ಹಣ ವರ್ಗಾವಣೆ ನಡೆಸುತ್ತಾರೆ. ಮುಖ್ಯವಾಗಿ ಗೂಗಲ್ ಪೇ ಅಥವಾ ಫೋನ್‌ ಪೇ ಪೇಮೆಂಟ್ ಆಪ್‌ಗಳನ್ನೇ ಬಳಕೆ ಮಾಡುತ್ತಾರೆ. ಆದ್ರೆ ಸದ್ಯ ಫೋನ್ ಪೇ ಬಳಕೆಯಲ್ಲಿ ಅಡಚಣೆ ಕಾಣಿಸಿರುವ ಮಾತುಗಳು ಕೇಳಿ ಬಂದಿವೆ.

ಫೋನ್ ಪೇ ಆಪ್‌ನಲ್ಲಿ ಅಡಚಣೆ!..ಯಾಕೆ ಗೊತ್ತಾ?

ಹೌದು, ಫೋನ್ ಪೇ ಪೇಮೆಂಟ್‌ ಟ್ರಾನ್ಸಾಕ್ಶನ್‌ನಲ್ಲಿ ಅಡಚಣೆಗಳು ಕಾಣಿಸಿದ್ದು, ಯಸ್‌ ಬ್ಯಾಂಕ್‌ನ ತೊಂದರೆಯಿಂದ ಹೀಗಾಗಿರಬಹುದು ಎನ್ನಲಾಗಿದೆ. ಇದಕ್ಕೆ ಫೋನ್ ಪೇ ಸಂಸ್ಥೆಯು '' ನಾವು ತಾತ್ಕಾಲಿಕವಾಗಿ ಲಭ್ಯವಿಲ್ಲ. ಸದ್ಯ ನಾವು ಅನಿಗದಿತ ಕಾರ್ಯನಿರ್ವಹಣೆ ನಡೆಸುತ್ತಿದ್ದವೆ. ಸೇವೆಯಲ್ಲಿನ ಅಡಚಣೆ ಉಂಟಾಗಿರುವುದಕ್ಕೆ ನಾವು ಕ್ಷಮೆಯಾಚಿಸುತ್ತೆವೆ ಮತ್ತು ಸದ್ಯದಲ್ಲಿಯೇ ನಾವು ಮರಳಲಿದ್ದೆವೆ'' ಎಂದು ಟ್ವಿಟ್ಟರ್‌ನಲ್ಲಿ ಹೇಳಿದೆ.

ಫೋನ್ ಪೇ ಆಪ್‌ನಲ್ಲಿ ಅಡಚಣೆ!..ಯಾಕೆ ಗೊತ್ತಾ?

ಫೋನ್‌ ಪೇ ಆಪ್‌ ಯಸ್‌ಬ್ಯಾಂಕ್‌ನೊಂದಿಗೆ ಹೊಂದಾಣಿಗೆ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿತ್ತು. ಆದರೆ ಈಗ ಯಸ್‌ ಬ್ಯಾಂಕ್ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಕಾರಣ ಫೋನ್‌ ಪೇ ಸೇವೆಗಳಲ್ಲಿ ಅಡಚಣೆಗಳು ಕಾಣಿಸಿವೆ ಎಂದು ಹೇಳಲಾಗಿದೆ.

ಫೋನ್ ಪೇ ಆಪ್‌ನಲ್ಲಿ ಅಡಚಣೆ!..ಯಾಕೆ ಗೊತ್ತಾ?

ಗ್ರಾಹಕರೇ ಆಗಿರುವ ಅಡಚಣೆಗೆ ನಾವು ವಿಷಾದಿಸುತ್ತೆವೆ. ನಮ್ಮ ಪಾರ್ಟನರ್ ಬ್ಯಾಂಕ್ (ಯಸ್‌ ಬ್ಯಾಂಕ್) ಆರ್‌ಬಿಐ ನಿ‍ಷೇಧ ಹೇರಿದೆ. ಆಗಿರುವ ಅಡಚಣೆ ಸರಿಪಡಿಸಲು ನಮ್ಮ ತಂಡ ನಿರಂತರ ಕಾರ್ಯ ಮಾಡುತ್ತಿದೆ. ಸದ್ಯದಲ್ಲಿಯೇ ಸೇವೆ ಮರಳಿ ಶುರುವಾಗುವ ಭರವಸೆ ಇದೆ. ಧನ್ಯವಾದ ಎಂದು ಫೋನ್ ಪೇ ಸಿಇಓ ಸಮೀರ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.

ಗೂಗಲ್ ಪೇ, ಫೋನ್ ಪೇ, ಪೇಟಿಎಂ ಗ್ರಾಹಕರು ಈ ಕೆಲಸ ಮಾಡಲೇಬೇಡಿ!

ಗೂಗಲ್ ಪೇ, ಫೋನ್ ಪೇ, ಪೇಟಿಎಂ ಗ್ರಾಹಕರು ಈ ಕೆಲಸ ಮಾಡಲೇಬೇಡಿ!

ಪ್ರಸ್ತುತ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಹೆಚ್ಚಾಗಿ ಬಳಕೆಯಲ್ಲಿದ್ದು, ಬಹುತೇಕರು ಗೂಗಲ್ ಪೇ, ಫೋನ್ ಪೇ, ಪೇಟಿಎಮ್‌ ಅಪ್ಲಿಕೇಶನ್‌ಗಳನ್ನೆ ಬಳಸುತ್ತಿದ್ದಾರೆ. ಡಿಜಿಟಲ್ ಪೇಮೆಂಟ್ ವ್ಯವಹಾರವು ಸುಲಭವಾಗಿದ್ದು, ತಕ್ಷಣಕ್ಕೆ ಹಣ ವರ್ಗಾವಣೆ ಮಾಡಬಹುದಾಗಿದೆ. ಆದರೆ ಸೈಬರ್ ವಂಚಕರು ಈ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ತಮ್ಮ ಬೆಳೆ ಬೆಯಿಸಿಕೊಳ್ಳುವ ದಾರಿಗಳನ್ನು ಕಂಡುಕೊಂಡಿದ್ದು, ಮೋಸದಿಂದ ಗ್ರಾಹಕರಿಗೆ ಹಣ ದೋಚುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ.

ಗೂಗಲ್ ಪೇ, ಫೋನ್ ಪೇ,

ಹೌದು, ಗೂಗಲ್ ಪೇ, ಫೋನ್ ಪೇ, ಪೇಟಿಎಮ್ ಹಾಗೂ ಇತರೆ ಡಿಜಿಟಲ್ ಪೇಮೆಂಟ್‌ ಆಪ್ಸ್‌ಗಳು ಕ್ಯಾಶ್‌ಲೇಸ್‌ ವ್ಯವಹಾರಕ್ಕೆ ಅತ್ಯುತ್ತಮ ತಾಣಗಳಾಗಿವೆ. ಆದರೆ ಸೈಬರ್ ವಂಚಕರು ಈ ಪೇಮೆಂಟ್ ತಾಣಗಳನ್ನು ವಂಚನೆಯ ರಹದಾರಿಯನ್ನಾಗಿಸಿಕೊಂಡಿದ್ದಾರೆ. ಗ್ರಾಹಕರಿಗೆ ಎಚ್ಚರ ವಹಿಸುವಂತೆ ಮಾಹಿತಿ ನೀಡಲಾಗುತ್ತಿದ್ದು, ಅದಾಗ್ಯೂ ವಂಚನೆಯ ಘಟನೆಗಳು ನಡೆಯುತ್ತವೆ. ಈ ಬಗ್ಗೆ ಇತ್ತೀಚಿಗೆ ದೆಹಲಿ ಪೋಲಿಸರು ಈ ಪೇಮೆಂಟ್ ಆಪ್‌ ಬಳಸುವಾಗ ಎಚ್ಚರವಹಿಸಿ ಎಂದಿದ್ದಾರೆ ಹಾಗೂ ಕೆಲವು ಸುರಕ್ಷತಾ ಸಲಹೆಗಳನ್ನು ನೀಡಿದ್ದಾರೆ. ಹೀಗಾಗಿ ಗೂಗಲ್ ಪೇ, ಫೋನ್ ಪೇ, ಪೇಟಿಎಂ ಗ್ರಾಹಕರು ಈ ಕೆಲಸಗಳನ್ನು ಮಾಡಲೇಬೇಡಿ. ಮುಂದೆ ಓದಿರಿ.

KYC-ಕೆವೈಸಿ ನೆಪ ಮಾಡಿ ಕರೆ

KYC-ಕೆವೈಸಿ ನೆಪ ಮಾಡಿ ಕರೆ

ಸೈಬರ್ ವಂಚಕರು KYC-ಕೆವೈಸಿ ಮಾಹಿತಿ ದೃಢೀಕರಣ ಮಾಡಬೇಕು ಎನ್ನುವ ನೆಪದಲ್ಲಿ ಬಳಕೆದಾರರಿಗೆ ಕರೆ ಮಾಡುವ ಸಾಧ್ಯತೆಗಳಿರುತ್ತವೆ. KYC-ಕೆವೈಸಿ ನೆಪ ಮಾಡಿಕೊಂಡು ಬರುವ ಕರೆಗಳಿಗೆ ಸ್ಪಂದಿಸಲೇಬೇಡಿ. ಅಸಲಿಗೆ ಯಾವುದೇ ಡಿಜಿಟಲ್ ಪೇಮೆಂಟ್ KYC-ಕೆವೈಸಿ ಮಾಹಿತಿ ಕೇಳಲು ಕರೆ ಮಾಡುವುದಿಲ್ಲ. ಹಾಗೆಯೇ KYC-ಕೆವೈಸಿ ಮಾಹಿತಿಯ ಎಸ್‌ಎಮ್ಎಸ್‌ಗಳಿಗೂ ಪ್ರತಿಕ್ರಿಯೆ ನೀಡಬೇಡಿ.

ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ

ಯಾವುದೇ ಲಿಂಕ್ ಕ್ಲಿಕ್ ಮಾಡಬೇಡಿ

ಸೈಬರ್ ವಂಚಕರು ಬಳಕೆದಾರರೊಂದಿಗೆ ನಾಜೂಕಾಗಿ ಮಾತನಾಡಿ ತಮ್ಮ ಚಾಲಾಕಿ ಬುದ್ಧಿಯನ್ನು ಪ್ರದರ್ಶಿಸುತ್ತಾರೆ. ನಿಮ್ಮ ಇ-ಮೇಲ್‌ಗೆ ಅಥವಾ ಎಸ್‌ಎಮ್‌ಎಸ್‌ಗೆ ಲಿಂಕ್ ಕಳುಹಿಸುತ್ತವೆ ಆ ಲಿಂಕ್ ಕ್ಲಿಕ್ ಮಾಡಿ ಎಂದು ಕೇಳುತ್ತಾರೆ. ಈ ರೀತಿಯ ನಿಮ್ಮ ಇ-ಮೇಲ್ ಮತ್ತು ಎಸ್‌ಎಮ್ಎಸ್‌ಗಳ ಲಿಂಕ್‌ಗಳಿಗೆ ಪ್ರತಿಕ್ರಿಯೆ ನೀಡಬೇಡಿ.

ಕಸ್ಟಮರ್ ಕೇರ್ ಸರ್ವೀಸ್‌

ಕಸ್ಟಮರ್ ಕೇರ್ ಸರ್ವೀಸ್‌

ಆಪ್‌ನಲ್ಲಿ ಪೇಮೆಂಟ್ ಮಾಡುವಾಗ ಸಮಸ್ಯೆ ಕಾಣಿಸಿಕೊಂಡರೆ ಬಳಕೆದಾರರು ತಕ್ಷಣಕ್ಕೆ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡುತ್ತಾರೆ. ಆದರೆ ಸೈಬರ್‌ ವಂಚಕರು ಗೂಗಲ್‌ ಮಾಹಿತಿಯಲ್ಲಿ ನಕಲಿ ಕಸ್ಟಮರ್ ಕೇರ್ ನಂಬರ್ ನಮೂದಿಸಿರುವ ಸಾಧ್ಯತೆಗಳಿರುತ್ತವೆ. ಅಂತಹ ನಂಬರ್‌ಗೆ ಕರೆ ಮಾಡಿದರೆ ನಿಮ್ಮ ಹಣ ಮಾಯವಾಗೊದು ಗ್ಯಾರಂಟಿ. ಹೀಗಾಗಿ ಪೇಮೆಂಟ್ ಮಾಡುವಾಗ ಸಮಸ್ಯೆ ಕಾಣಿಸಿಕೊಂಡರೆ ಗೂಗಲ್‌ನಲ್ಲಿ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಬೇಡಿ. ಅಧಿಕೃತ ವೆಬ್‌ಸೈಟ್‌ನಿಂದ ನಂಬರ್ ಪಡೆಯಿರಿ ಇಲ್ಲವೇ ಬ್ಯಾಂಕ್‌ಗೆ ಭೇಟಿ ನೀಡಿ ಮಾಹಿತಿ ನೀಡಿ.

ಮಾಹಿತಿ ಶೇರ್ ಮಾಡಬೇಡಿ

ಮಾಹಿತಿ ಶೇರ್ ಮಾಡಬೇಡಿ

ನಾವು ಬ್ಯಾಂಕ್ ಸಿಬ್ಬಂದಿ ಅಥವಾ ಗೂಗಲ್ ಪೇ, ಫೋನ್ ಪೇ ಸಿಬ್ಬಂದಿ ಎಂದು ಬರುವ ಕರೆಗಳಿಗೆ ಸ್ಪಂದಿಸಬೇಡಿ. ಫೋನಿನಲ್ಲಿ ವಂಚಕರು ನಿಮ್ಮ ಬ್ಯಾಂಕ್ ಮಾಹಿತಿ, ಪಿನ್‌, ಪಾಸ್‌ವರ್ಡ್‌ ಅಥವಾ ಓಟಿಪಿ ಮಾಹಿತಿ ಕೇಳುವ ಪ್ರಯತ್ನಗಳನ್ನು ಮಾಡುತ್ತಾರೆ. ಯಾವುದಕ್ಕೂ ಮಾಹಿತಿ ಶೇರ್ ಮಾಡಲೇಬೇಡಿ.

1ರೂಪಾಯಿ ಸಹ ಟ್ರಾನ್ಸ್‌ಫರ್ ಮಾಡಬೇಡಿ

1ರೂಪಾಯಿ ಸಹ ಟ್ರಾನ್ಸ್‌ಫರ್ ಮಾಡಬೇಡಿ

ಆನ್‌ಲೈನ್‌ ಖರೀದಿ ಮತ್ತು ಆನ್‌ಲೈನ್ ಫುಡ್‌ ಆರ್ಡರ್ ಕಸ್ಟಮರ್ ಕೇರ್‌ಗಳಿಗೆ ಸೈಬರ್ ವಂಚಕರು ತಮ್ಮ ಕೈಚಳಕ ತೋರಿಸಿರುತ್ತಾರೆ. ಪೇಮೆಂಟ್ ಬಂದಿಲ್ಲ ಆಪ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಯಾವುದಕ್ಕೂ 1ರೂ. ಟ್ರಾನ್ಸ್‌ಫರ್ ಮಾಡಿ ಚೆಕ್ ಮಾಡೊಣ ಎನ್ನುತ್ತ ನಿಮ್ಮ ಖಾತೆಯ ಮಾಹಿತಿ ಪಡೆಯುವ ಯತ್ನ ನಡೆಸುತ್ತಾರೆ. ಹೀಗಾಗಿ ಈ ರೀತಿಯ ಸಂದರ್ಭಗಳಲ್ಲಿ 1ರೂ, ಸಹ ಟ್ರಾನ್ಸ್‌ಫರ್ ಮಾಡಬೇಡಿ.

Best Mobiles in India

Read more about:
English summary
We are going through an unscheduled maintenance activity. We apologize for any inconvenience this may cause.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X