ಗೂಗಲ್ ಪ್ಲೇ ಸ್ಟೋರ್‌ಗೆ ಟಕ್ಕರ್ ನೀಡಲು ಇಂಡಸ್ ಆಪ್ ಸ್ಟೋರ್ ಎಂಟ್ರಿ!
ಜನಪ್ರಿಯ ಡಿಜಿಟಲ್ ಪೇಮೆಂಟ್ ಆಪ್ ಫೋನ್‌ಪೇ ಸಂಸ್ಥೆಯು ಕಳೆದ ವರ್ಷ 'ಮೇಡ್ ಇನ್ ಇಂಡಿಯಾ' ಇಂಡಸ್ ಆಪ್‌ಸ್ಟೋರ್ ಅನ್ನು ಪರಿಚಯಿಸಿತ್ತು. ಇದೀಗ ವಾಲ್‌ಮಾರ್ಟ್ ಮಾಲೀಕತ್ವದ ಫೋನ್‌ಪೇ ಸಾಮಾನ್ಯ ಪ್ರೇಕ್ಷಕರಿಗೆ ಈ ನೂತನ ಆಪ್ ಸ್ಟೋರ್ ಅನ್ನು ಡೌನ್‌ಲೋಡ್‌ಗೆ ಮುಕ್ತ ಮಾಡಿದೆ. ಫೋನ್‌ಪೇಯ ಈ ನೂತನ ಇಂಡಸ್ (Indus) ಆಪ್ ಸ್ಟೋರ್ ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಲಭ್ಯವಿದೆ.
ಹೌದು, ಇಂಡಸ್ ಅಪ್ಲಿಕೇಶನ್ ಅನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಲಾಂಚ್ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾಗವಹಿಸಿದ್ದರು. ಈ ಆಪ್ 'ಮೇಡ್ ಇನ್ ಇಂಡಿಯಾ' ಉಪಕ್ರಮದ ಭಾಗವಾಗಿದ್ದು, ಇದು ಸದ್ಯ ಆಪ್ ಮಾರುಕಟ್ಟೆಯಲ್ಲಿ ಮುಂಚೂನಿಯಲ್ಲಿ ಇರುವ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ನೊಂದಿಗೆ ನೇರ ಪೈಪೋಟಿ ಮಾಡುವ ಗುರಿಯನ್ನು ಹೊಂದಿದೆ. ಈ ನೂತನ ಆಪ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಇಂಡಸ್ ಆಪ್ ಸ್ಟೋರ್ ಕೀ ಫೀಚರ್
ಇಂಡಸ್ ಆಪ್ ಸ್ಟೋರ್ ಪ್ರಮುಖ ಹೈಲೈಟ್ ಎಂದರೆ, ಇದು ಆಪ್‌ನಲ್ಲಿನ ಖರೀದಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸುವುದಿಲ್ಲ ಎಂದು ವರದಿಯಾಗಿದೆ. ಆಪಲ್ ಮತ್ತು ಗೂಗಲ್ ಈ ಎರಡೂ ತಾಣಗಳು ಖರೀದಿಗಳಿಗೆ 30% ವರೆಗೆ ಶುಲ್ಕ ವಿಧಿಸುತ್ತವೆ.

ಇನ್ನು ಈ 'ಮೇಡ್ ಇನ್ ಇಂಡಿಯಾ' ಆಪ್ ಸ್ಟೋರ್ 12 ಭಾರತೀಯ ಭಾಷೆಗಳಲ್ಲಿ ಮತ್ತು ಇಂಗ್ಲಿಷ್‌ನಲ್ಲಿಯೂ ಲಭ್ಯ ಇದೆ. ಈ ಆಪ್ ನ್ಯಾವಿಗೇಟ್ ಮಾಡಲು ಸುಲಭವಾಗುತ್ತದೆ ಅಲ್ಲದೇ ಆಪ್ ಸ್ಟೋರ್ AI ಆಧಾರಿತ ಕಸ್ಟಮೈಸ್ ಆಯ್ಕೆಗಳ ಅನ್ನು ಕೂಡಾ ಸಪೋರ್ಟ್ ಮಾಡುತ್ತದೆ. ಹಾಗೆಯೇ ವರ್ಧಿತ ಸಂಗ್ರಹ ನಿರ್ವಹಣೆಗಾಗಿ ಆಪ್ ಸ್ಟೋರ್ ಬಳಕೆಯಾಗದ ಮತ್ತು ಹೆಚ್ಚಾಗಿ ಬಳಸಿದ ಆಪ್‌ಗಳ ಅನ್ನು ಪ್ರತ್ಯೇಕಿಸಲಿದೆ.
ಅದೇ ರೀತಿ ಇದರ ಇನ್ನೊಂದು ಆಸಕ್ತಿದಾಯಕ ಅಂಶವೆಂದರೆ, ಬಳಕೆದಾರರು ವೀಡಿಯೊಗಳ ಮೂಲಕ ಆಪ್‌ಗಳನ್ನು ಮತ್ತು ಗೇಮ್‌ಗಳನ್ನು ಸರ್ಚ್ ಮಾಡಬಹುದು. ಇದು ಬಳಕೆದಾರರಿಗೆ ಬೇಕಾದ ಆಪ್ ಅನ್ನು ನಿರ್ಧರಿಸಲು ಸರಳ ಎನಿಸುತ್ತದೆ ಅಲ್ಲದೇ ಲಾಗಿನ್ ವಿಧಾನವೂ ಸುಲಭವಾಗುತ್ತದೆ. ಬಳಕೆದಾರರು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು, OTP ಅನ್ನು ನಮೂದಿಸಬೇಕಿರುತ್ತದೆ.
ಬಳಕೆದಾರರು ಈ ಆಪ್ ಅನ್ನು indusappstore.com ಮೂಲಕ ಡೌನ್‌ಲೋಡ್ ಮಾಡಬಹುದಾಗಿದೆ. ಸದ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ. ಇನ್ನು ಆಪಲ್ ಥರ್ಡ್ ಪಾರ್ಟಿ ಆಪ್‌ಗಳನ್ನು ಹಾಗೂ ಆಪ್ ಸ್ಟೋರ್‌ಗಳನ್ನು ಅನುಮತಿಸುವುದಿಲ್ಲ ಎಂದು ಪರಿಗಣಿಸಿ ಐಓಎಸ್ (iOS) ಲಭ್ಯತೆ ಅಸಂಭವವಾಗಿದೆ.
ಇದರಲ್ಲಿ ಡೆವಲಪರ್‌ಗಳಿಗೆ ಸಂಬಂಧಿಸಿದಂತೆ, ಅಧಿಕ ಪ್ರಯೋಜನಗಳಿವೆ. ಪ್ರಮುಖವಾಗಿ, ಮೊದಲ ವರ್ಷಕ್ಕೆ ತಮ್ಮ ಆಪ್‌ಗಳನ್ನು ಪಟ್ಟಿ ಮಾಡಲು ತಯಾರಕರಿಗೆ ಯಾವುದೇ ಶುಲ್ಕ ಇರುವುದಿಲ್ಲ. ಅಲ್ಲದೇ ಫೋನ್‌ಪೇ ಡೆವಲಪರ್‌ಗಳಿಗೆ ಅಪ್ಲಿಕೇಶನ್‌ನಲ್ಲಿನ ಖರೀದಿಗಳಿಗಾಗಿ ಅವರ ಪಾವತಿ ವಿಧಾನವನ್ನು ಹೊಂದಲು ಅನುಮತಿಸುತ್ತದೆ. ಡೆವಲಪರ್‌ಗಳು ಇಂಡಸ್ ಆಪ್‌ಸ್ಟೋರ್‌ನತ್ತ ಒಲವು ತೋರಲು ಇದು ಸಹ ಒಂದು ಕಾರಣ ಎನಿಸುತ್ತದೆ.
ಮಾರುಕಟ್ಟೆಯಲ್ಲಿ ಗೂಗಲ್ ಮತ್ತು ಆಪಲ್ ಮಾತ್ರ ಪ್ರತಿಸ್ಪರ್ಧಿ ಆಗಿಲ್ಲ. ಬದಲಿಗೆ ಪೇಟಿಎಮ್ ಸಹ ಮಿನಿ ಆಪ್ ಸ್ಟೋರ್ ಅನ್ನು ಪರಿಚಯಿಸಿದೆ. ಹಾಗೆಯೇ ಶಿಯೋಮಿ, ಸ್ಯಾಮ್ಸಂಗ್ ಮತ್ತು ಹೆಚ್ಚಿನ OEM ಗಳನ್ನು ಹೊಂದಿದೆ. ಇದರೊಂದಿಗೆ APKMirror, Aptoide ಮತ್ತು ಇಂತಹ ಇನ್ನಷ್ಟು ಪ್ರತಿಸ್ಪರ್ಧಿಗಳಿ ಇವೆ. ಹೀಗಾಗಿ, ನೂತನ ಇಂಡಸ್ ಆಪ್‌ಸ್ಟೋರ್ ಬಳಕೆದಾರರನ್ನು ಸೆಳೆಯುವಲ್ಲಿ ಯಸಶ್ವಿ ಆಗಲಿದೆಯಾ ಕಾದು ನೋಡಬೇಕಿದೆ.


Click it and Unblock the Notifications








