ಫೋನ್ ಪೇ ನಲ್ಲಿ ಇನ್ಮುಂದೆ ಪಿನ್ ಎಂಟ್ರಿ ಮಾಡದೆ ಇಷ್ಟು ಮೊತ್ತದ ಹಣ ಕಳುಹಿಸಬಹುದು!
ಫೋನ್‌ಪೇಯನ್ನು ಬಹುಪಾಲು ಮಂದಿ ಬಳಕೆ ಮಾಡುತ್ತಿದ್ದು, ಈ ಮೂಲಕ ಎಲ್ಲಾ ರೀತಿಯ ಹಣ ಕಾಸಿನ ಸಂಬಂಧಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಈ ಆಪ್ ಆಗಾಗ್ಗೆ ಹೊಸ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಿದ್ದು, ಇದರಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ. ಈ ನಡುವೆ ಪೋನ್ ಪೇ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ.
ಹೌದು, ಭಾರತದಾದ್ಯಂತ ಬಳಕೆದಾರರಿಗೆ ಡಿಜಿಟಲ್ ಪಾವತಿಗಳ ಅಳವಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಫೋನ್‌ಪೇ ಪ್ರಮುಖ ಪಾತ್ರ ವಹಿಸಿದ್ದು, ಈ ಮೂಲಕ ನಗದು ರಹಿತ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದರ ನಡುವೆ ಪೇಟಿಎಮ್ ಈ ವರ್ಷದ ಮಾರ್ಚ್‌ನಲ್ಲಿ ತನ್ನ ಆಪ್‌ನಲ್ಲಿ ಯುಪಿಐ ಲೈಟ್ ಅನ್ನು ಆರಂಭ ಮಾಡಿತ್ತು. ಇದೀಗ ಫೋನ್‌ಪೇ ಸರದಿ ಬಂದಿದೆ. ಹಾಗಿದ್ರೆ, ಫೋನ್‌ಪೇನಲ್ಲಿ ಈ ಸೌಲಭ್ಯವನ್ನು ಹೇಗೆ ಬಳಕೆ ಮಾಡಿಕೊಳ್ಳುವುದು?, ಇದರಿಂದ ಪ್ರಯೋಜನ ಏನು? ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಏನಿದು ಯುಪಿಐ ಲೈಟ್?: ಯುಪಿಐ ಲೈಟ್ ಸೇವೆಯನ್ನು ಆರ್‌ಬಿಐ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಆರಂಭಿಸಿದ್ದು, ಬಳಕೆದಾರರು ತಮ್ಮ ಬ್ಯಾಂಕ್‌ನಿಂದ ನಡೆಸಿದ ಯುಪಿಐ ಲೈಟ್ ವಹಿವಾಟುಗಳ ಇತಿಹಾಸವನ್ನು ಒಳಗೊಂಡಿರುವ ದೈನಂದಿನ ಎಸ್‌ಎಮ್‌ಎಸ್‌ಅನ್ನು ಸ್ವೀಕರಿಸುತ್ತಾರೆ. ಸಣ್ಣ-ಮೌಲ್ಯದ ವಹಿವಾಟುಗಳೊಂದಿಗೆ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು/ಪಾಸ್‌ಬುಕ್‌ಗಳನ್ನು ಡಿಕ್ಲಟರ್ ಮಾಡಲು ಇದು ಸಹಾಯ ಮಾಡುತ್ತದೆ. ಜೊತೆಗೆ ಈ ವಹಿವಾಟುಗಳು ಲೈಟ್ ವಿಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ.
ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್ ಆಗಿರುವ ಫೋನ್ ಪೇ ಯುಪಿಐ ಲೈಟ್ ಫೀಚರ್ಸ್ ಅನ್ನು ಬಳಕೆಗೆ ಲಭ್ಯವಾಗಿಸಿದ್ದು, ಈ ಮೂಲಕ ಬಳಕೆದಾರರು ಪಿನ್ ಅನ್ನು ನಮೂದಿಸದೆಯೇ ತಮ್ಮ ಯುಪಿಐ ಲೈಟ್ ಖಾತೆಯಿಂದ 200ರೂ.ಗಿಂತ ಕಡಿಮೆ ಮೌಲ್ಯದ ಪಾವತಿಗಳನ್ನು ತ್ವರಿತವಾಗಿ ಮಾಡಬಹುದಾಗಿದೆ. ಇನ್ನು ಈ ಫೋನ್‌ಪೇ ನಲ್ಲಿನ ಯುಪಿಐ ಲೈಟ್ ಅನ್ನು ಎಲ್ಲಾ ಪ್ರಮುಖ ಬ್ಯಾಂಕ್‌ಗಳು ಬೆಂಬಲಿಸಲಿದ್ದು,ದೇಶಾದ್ಯಂತ ಎಲ್ಲಾ ಯುಪಿಐ ವ್ಯಾಪಾರಿಗಳು ಮತ್ತು ಕ್ಯೂಆರ್ ಕೋಡ್‌ಗಳಲ್ಲಿ ಸ್ವೀಕರಿಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಇನ್ನು ಕೆವೈಸಿ ದೃಢೀಕರಣವನ್ನು ಒಳಗೊಂಡಿರುವ ಸರಳ ಪ್ರಕ್ರಿಯೆಯ ಮೂಲಕ ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಬಹುದು ಮತ್ತು ಯುಪಿಐ ಲೈಟ್ ಖಾತೆಯನ್ನು ಕ್ರಿಯೇಟ್ ಮಾಡಿಕೊಳ್ಳಬಹುದಾಗಿದೆ. ಈ ಸಂಬಂಧ ಫೋನ್‌ಪೇನ ಸಹ-ಸಂಸ್ಥಾಪಕ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಹುಲ್ ಚಾರಿ ಮಾಹಿತಿ ನೀಡಿದ್ದು, ಭಾರತದಾದ್ಯಂತ ಬಳಕೆದಾರರಿಗೆ ಡಿಜಿಟಲ್ ಪಾವತಿಗಳ ಅಳವಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ. ನಗದು ರಹಿತ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದಿದ್ದಾರೆ.

ಇದು ಬಳಕೆದಾರರಿಗೆ ಹೇಗೆ ಅನುಕೂಲ?: ಯುಪಿಐ ಲೈಟ್ ಸಣ್ಣ-ಮೌಲ್ಯದ ಯುಪಿಐ ವಹಿವಾಟುಗಳನ್ನು ತ್ವರಿತವಾಗಿ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಹಾಗೆಯೇ ಈ ಮೂಲಕ ಉತ್ತಮ ಡಿಜಿಟಲ್ ಪಾವತಿಗಳ ಅನುಭವವನ್ನು ನೀಡುವ ಗುರಿಯನ್ನು ಇದು ಹೊಂದಿದೆ. ಬಳಕೆದಾರರು ತಮ್ಮ ಲೈಟ್ ಖಾತೆಯಲ್ಲಿ 2,000ರೂ. ವರೆಗೆ ಲೋಡ್ ಮಾಡಬಹುದು ಮತ್ತು ಅವರ ಪಿನ್ ಅನ್ನು ಎಂಟ್ರಿ ಮಾಡದೆಯೇ ಒಂದೇ ಬಾರಿಗೆ 200ರೂ. ವರೆಗಿನ ವಹಿವಾಟುಗಳನ್ನು ಮಾಡಬಹುದಾಗಿದೆ.
ಫೇನ್‌ಪೇನಲ್ಲಿ ಯುಪಿಐ ಲೈಟ್ ಅನ್ನು ಹೇಗೆ ಸಕ್ರಿಯಗೊಳಿಸುವುದು?: ನೀವು ನಿಮ್ಮ ಸ್ಮಾರ್ಟ್‌ಫೋನ್ ನಲ್ಲಿ ಮೊದಲು ಫೋನ್‌ಪೇ ಆಪ್ ಓಪನ್ ಮಾಡಿ. ಅಪ್ಲಿಕೇಶನ್‌ನ ಮುಖಪುಟದಲ್ಲೇ ಯುಪಿಐ ಲೈಟ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಈ ವಿಭಾಗದಲ್ಲಿ ಅದನ್ನ ಸಕ್ರಿಯಗೊಳಿಸುವ ಆಯ್ಕೆಯನ್ನು ನೀವು ಗಮನಿಸಬಹುದು. ಇದರಲ್ಲಿ ಮೊತ್ತವನ್ನು ನಮೂದಿಸಿಲು ಹಾಗೂ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡಲಾಗುತ್ತದೆ.


Click it and Unblock the Notifications








