PhonePe ಬಳಕೆದಾರರಿಗೆ ಗುಡ್‌ನ್ಯೂಸ್‌!..ಗ್ರಾಹಕರಿಗೆ ಸಿಗುತ್ತೆ ಖಚಿತ ಕೊಡುಗೆ!

|

ದೇಶದ ಜನಪ್ರಿಯ ಯುಪಿಐ ಪೇಮೆಂಟ್‌ ಆಪ್‌ಗಳಲ್ಲಿ ಒಂದಾದ ಫೋನ್‌ಪೇ (PhonePe) ಬಳಕೆದಾರರ ಅನುಕೂಲಕ್ಕಾಗಿ ಹಲವು ಹೊಸ ಸೇವೆಗಳನ್ನು ಅಳವಡಿಸಿಕೊಂಡಿದೆ. ಬಿಲ್ ಪೇಮೆಂಟ್, ಮೊಬೈಲ್ ರೀಚಾರ್ಜ್, ಡಿಟಿಹೆಚ್ ರೀಚಾರ್ಜ್, ಮನಿ ಟ್ರಾನ್ಸ್ಫರ್, ಇನ್ಶೂರೆನ್ಸ್‍ ಪಾವತಿ ಸೇರಿದಂತೆ ಇತರೆ ಅಗತ್ಯ ಸೇವೆಗಳ ಆಯ್ಕೆ ಒಳಗೊಂಡಿದೆ. ಸದ್ಯ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿರುವ ಫೋನ್‌ಪೇ ಆಪ್‌ ಇದೀಗ ಬಳಕೆದಾರರಿಗೆ ಭರ್ಜರಿ ಗುಡ್‌ನ್ಯೂಸ್‌ ನೀಡಿದೆ.

ಪ್ರೀಪೇಯ್ಡ್‌

ಹೌದು, ಜನಪ್ರಿಯ ಫೋನ್‌ಪೇ ಆಪ್‌ ಪ್ರೀಪೇಯ್ಡ್‌ ಮೊಬೈಲ್‌ ರೀಚಾರ್ಜ್‌ಗಳ ಮೇಲೆ ಕ್ಯಾಶ್‌ಬ್ಯಾಕ್‌ ಅನ್ನು ಘೋಷಿಸಿದೆ. ಫೋನ್‌ಪೇ ಅಪ್ಲಿಕೇಶನ್ ಮೂಲಕ ಬಳಕೆದಾರರು 51 ರೂ.ಗಿಂತ ಅಧಿಕ ಮೊತ್ತದ ಮೂರು ಪ್ರೀಪೇಯ್ಡ್‌ ಮೊಬೈಲ್‌ ರೀಚಾರ್ಜ್ ಯಶ್ವಸಿಯಾಗಿ ಮಾಡಿದರೇ, ರೀಚಾರ್ಜ್ ನಂತರ ಬಳಕೆದಾರರಿಗೆ ಖಚಿತ ಕ್ಯಾಶ್‌ಬ್ಯಾಕ್‌ ಲಭ್ಯವಾಗಲಿದೆ ಎಂದು ಫೋನ್‌ಪೇ ಕಂಪನಿಯು ಹೇಳಿದೆ. ಹಾಗೆಯೇ 'ಈ ಕೊಡುಗೆ ಪ್ರಸ್ತುತ ಎಲ್ಲಾ ಫೋನ್‌ಪೇ ಬಳಕೆದಾರರಿಗೆ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯಲ್ಲಿ, ಎಲ್ಲಾ ಪಾವತಿ ಸಾಧನಗಳಲ್ಲಿ ಅನ್ವಯಿಸುತ್ತದೆ" ಎಂದು ಸಂಸ್ಥೆಯು ತಿಳಿಸಿದೆ.

ರೀಚಾರ್ಜ್‌

ಇನ್ನು ಫೋನ್‌ಪೇ ಆಪ್‌ನ ಈ ಕೊಡುಗೆಯನ್ನು ಪಡೆಯಲು, ಬಳಕೆದಾರರು ಫೋನ್‌ಪೇ ಆಪ್ ಅನ್ನು ತೆರೆಯ ಬೇಕು. ಮೊಬೈಲ್ ರೀಚಾರ್ಜ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ನಂತರ ಮೊಬೈಲ್ ಸಂಖ್ಯೆಯನ್ನು ಆಯ್ಕೆ ಮಾಡಿ / ನಮೂದಿಸಬಹುದು. ಬಳಿಕ ಅಗತ್ಯ ಯೋಜನೆಯನ್ನು ಆಯ್ದು ರೀಚಾರ್ಜ್ ಮಾಡಬೇಕು.

ಕ್ಯಾರೆಟ್

ಫೋನ್‌ಪೇ 2017 ರಲ್ಲಿ ಹಣಕಾಸಿನ ಸೇವೆಗಳಿಗೆ ಎಂಟ್ರಿ ನೀಡಿತು. ಹಾಗೆಯೇ ಫೋನ್‌ಪೇ ಪ್ಲಾಟ್‌ಫಾರ್ಮ್ ನಲ್ಲಿ 24 ಕ್ಯಾರೆಟ್ ಚಿನ್ನವನ್ನು ಸುರಕ್ಷಿತವಾಗಿ ಖರೀದಿಸಲು ಬಳಕೆದಾರರಿಗೆ ಸುರಕ್ಷಿತ ಮತ್ತು ಅನುಕೂಲಕರವಾದ ಆಯ್ಕೆಯನ್ನು ಒದಗಿಸುವ ಮೂಲಕ ಡಿಜಿಟಲ್ ಗೋಲ್ಡ್‌ ಖರೀದಿ ಗೆ ಹೊಸ ಆಯಾಮ ನೀಡಿತು. ಭಾರತದಾದ್ಯಂತ 22 ಮಿಲಿಯನ್‌ ಗಿಂತ ಅಧಿಕ ವ್ಯಾಪಾರಿ ಮಳಿಗೆ ಗಳಲ್ಲಿ ಫೋನ್‌ಪೇ ಪ್ಲಾಟ್‌ ಫಾರ್ಮ್ ಅನ್ನು ಸ್ವೀಕರಿಸಲಾಗಿದೆ.

ಮೊಬೈಲ್

ಪ್ರಸ್ತುತ ಫೋನ್‌ಪೇ ಆಪ್‌ 325 ದಶಲಕ್ಷಕ್ಕೂ ಅಧಿಕ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಫೋನ್‌ಪೇ ಆಪ್‌ನಲ್ಲಿ ಬಳಕೆದಾರರು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು, ಮೊಬೈಲ್, ಡಿಟಿಎಚ್, ಡೇಟಾ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಬಹುದು, ಸ್ಟೋರ್‌ಗಳಲ್ಲಿ QR ಕೋಡ್‌ ಸ್ಕ್ಯಾನ್ ಮಾಡಿ ಹಣ ಪಾವತಿಸಬಹುದು, ಉಪಯುಕ್ತತೆ ಪಾವತಿ ಮಾಡಬಹುದು, ಚಿನ್ನವನ್ನು ಖರೀದಿಸಬಹುದು, ಇಂತಹ ಹಲವು ಸೌಲಭ್ಯಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಹಾಗಾದರೇ ಫೋನ್‌ಪೇ ಮೂಲಕ ಮೊಬೈಲ್‌ ರೀಚಾರ್ಜ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ಪೇ ಅನುಕೂಲಕರ ಸೇವೆಗಳು

ಫೋನ್‌ಪೇ ಅನುಕೂಲಕರ ಸೇವೆಗಳು

ಫೋನ್‌ಪೇ ಭಾರತದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಯಾಗಿದೆ. ಫೋನ್‌ಪೀ ಬಳಸಿ, ಬಳಕೆದಾರರು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು, ಮೊಬೈಲ್, ಡಿಟಿಎಚ್, ಡೇಟಾ ಕಾರ್ಡ್‌ಗಳನ್ನು ರೀಚಾರ್ಜ್ ಮಾಡಬಹುದು, ಯುಟಿಲಿಟಿ ಪಾವತಿಗಳನ್ನು ಮಾಡಬಹುದು ಮತ್ತು ಚಿನ್ನವನ್ನು ಖರೀದಿಸಬಹುದು. ಮೊಬೈಲ್ ರೀಚಾರ್ಜ್ ಮಾಡಲು ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಕೆಲವೇ ಸೆಕೆಂಡುಗಳು ಸಾಕು.

ಸ್ಟೋರ್‌

ಗೂಗಲ್ ಸ್ಟೋರ್‌ ನಿಂದ ಫೋನ್‌ಪೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವುದು. ನಂತರ ಸುಲಭ ಹಂತಗಳ ಮೂಲಕ ಅಪ್ಲಿಕೇಶನ್‌ ನಲ್ಲಿ ನೋಂದಾಯಿಸುವುದು. ನೋಂದಾಯಿಸುವಾಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಒಟಿಪಿ ಮೂಲಕ ಪರಿಶೀಲಿಸುತ್ತದೆ. ಆ ನಂತರ ಮೊಬೈಲ್ ರೀಚಾರ್ಜ್ ಮಾಡುವ ಮುಂದಿನ ಹಂತಗಳನ್ನು ಅನುಸರಿಸಿ.

ಫೋನ್‌ಪೇ ಮೂಲಕ ಮೊಬೈಲ್‌ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಫೋನ್‌ಪೇ ಮೂಲಕ ಮೊಬೈಲ್‌ ರೀಚಾರ್ಜ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಫೋನಿನಲ್ಲಿ ಫೋನ್‌ಪೇ ಆಪ್ ತೆರೆಯಿರಿ. ರೀಚಾರ್ಜ್ ಆಯ್ಕೆಯಲ್ಲಿ ರೀಚಾರ್ಜ್ ಕ್ಲಿಕ್ ಮಾಡಿ ಮತ್ತು ಬಿಲ್ ಪಾವತಿಸಿ.
ಹಂತ 2: ನೀವು ರೀಚಾರ್ಜ್ ಮಾಡಲು ಬಯಸುವ ಸಂಖ್ಯೆಯನ್ನು ಆಯ್ಕೆ ಮಾಡಿ ಅಥವಾ ನಮೂದಿಸಿ.
ಹಂತ 3: ನಿಮ್ಮ ಫೋನ್ ಸಂಖ್ಯೆ, ವಲಯ ಮತ್ತು ಟೆಲಿಕಾಂ ಆಪರೇಟರ್ ವಿವರಗಳನ್ನು ಪರಿಶೀಲಿಸಿ.
ಹಂತ 4: ರೀಚಾರ್ಜ್ ಮೊತ್ತವನ್ನು ನಮೂದಿಸಿ ಅಥವಾ ವೀಕ್ಷಣೆ ಯೋಜನೆಗಳ ವಿಭಾಗದ ಅಡಿಯಲ್ಲಿ ಯೋಜನೆಗಳ ಪಟ್ಟಿಯಿಂದ ಆಯ್ಕೆಮಾಡಿ.
ಹಂತ 5: ಇದಕ್ಕಾಗಿ ಪಾವತಿ ಆಯ್ಕೆಯನ್ನು ಆರಿಸಿ.
ಹಂತ 6: ವಹಿವಾಟು ಪೂರ್ಣಗೊಳಿಸಲು ರೀಚಾರ್ಜ್ ಕ್ಲಿಕ್ ಮಾಡಿ.

Best Mobiles in India

English summary
PhonePe app will win assured cashback on completion of three prepaid mobile recharges, above Rs 51.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X