ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

Posted By:

  ಮನುಷ್ಯ ಪ್ರಯತ್ನ ಪಟ್ಟರೆ ಶಬ್ಧದ ವೇಗಕ್ಕಿಂತಲೂ ವೇಗವಾಗಿ ಧುಮಕಬಹುದು ಎಂದು ಸಾಧಿಸಿ ತೋರಿಸಿದ ದಿನವಿದು. ಕಳೆದ ವರ್ಷ ಅಕ್ಟೋಬರ್‌ ಅಕ್ಟೋಬರ್‌ 14 ರಂದು ವಿಶ್ವದ ಬಾಹ್ಯಾಕಾಶ ಆಸಕ್ತರೆಲ್ಲ ಆಸ್ಟ್ರಿಯದ ಸಾಹಸಿಯ ಸಾಹಸಕ್ಕೆ ಬೆರಗಾಗಿದ್ದರು.

  ಹೌದು. ಕಳೆದ ವರ್ಷ 43 ವರ್ಷದ ಆಸ್ಟ್ರಿಯ ಸಾಹಸಿ ಸ್ಕೈ ಡೈವರ್‌ ಫೆಲಿಕ್ಸ್‌ ಬೌಮಾಗರ್ಟ್ನೆ (Felix Baumgartne) ನ್ಯೂ ಮೆಕ್ಸಿಕೊ ಮರುಭೂಮಿಯಲ್ಲಿ ಸುಮಾರು 39,045 ಮೀಟರ್‌(1,28,000 ಅಡಿ ) ಎತ್ತರದಿಂದ ಭೂಮಿಗೆ ಜಿಗಿಯುವ ಮೂಲಕ ಹೊಸ ದಾಖಲೆ ಸ್ಥಾಪನೆ ಮಾಡಿದ್ದರು. ಇಂಟರ್‌ನೆಟ್‌ ಮತ್ತು ಟೀವಿಯಲ್ಲಿ ನೇರಪ್ರಸಾರದಲ್ಲಿ ಈ ದೃಶ್ಯವನ್ನು ವೀಕ್ಷಿಸುತ್ತಿದ್ದ ಜನತೆ ಫೆಲಿಕ್ಸ್‌ ನೆಲ ಮುಟ್ಟುವಾಗ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದರು. ಫೆಲಿಕ್ಸ್‌‌ ನಿರ್ಮಿಸಿರುವ ವಿಶ್ವದಾಖಲೆಗೆಇಂದು ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ದಾಖಲೆ ಕುರಿತ ಮತ್ತಷ್ಟು ಮಾಹಿತಿಗಳು ಇಲ್ಲಿವೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

  ಇದನ್ನು ಓದಿ: ಅಂತರಿಕ್ಷ ಯಾನಿಗಳ ಆಹಾರವನ್ನು ನೋಡಿದ್ದೀರಾ ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ನ್ಯೂ ಮೆಕ್ಸಿಕೊ ಮರುಭೂಮಿಯಲ್ಲಿ ಫೆಲಿಕ್ಸ್‌ ಈ ಸಾಹಸವನ್ನು ಕೈಗೊಂಡಿದ್ದರು. ಸುಮಾರು 39,045 ಮೀಟರ್‌(1,28,000 ಅಡಿ ) ಎತ್ತರದಿಂದ ಭೂಮಿಯನ್ನು 9:09ನಿಮಿಷದಲ್ಲಿ ತಲುಪಿದ್ದರು.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  833.9 mph ವೇಗದಲ್ಲಿ ಅಂದರೆ ಗಂಟೆಗೆ 1,342.8 ಕಿ.ಮೀ ವೇಗದಲ್ಲಿ ಭೂಮಿಯತ್ತ ಫೆಲಿಕ್ಸ್‌ ಬಂದಿದ್ದರು.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ನ್ಯೂ ಮೆಕ್ಸಿಕೋ ಮರುಭೂಮಿಯಿಂದ 39,045 ಮೀಟರ್‌ ಎತ್ತರಕ್ಕೆ ಏರಲು ಹೀಲಿಯಂ ಅನಿಲ ತುಂಬಿದ್ದ ಬಲೂನನ್ನು ಫೆಲಿಕ್ಸ್‌ ಬಳಸಿದ್ದರು.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  39,045 ಮೀಟರ್‌ ಎತ್ತರದಿಂದ ಜಿಗಿದ ಫಿಲಿಕ್ಸ್‌ ದೇಹ ವೇಗದಲ್ಲಿಒಂದೇ ಸಮನೆ ಬೀಳುವುದನ್ನು ಇಂಟರ್‌ನೆಟ್‌ನಲ್ಲಿ ನೋಡುತ್ತಿದ್ದ ಜನ ಫೆಲಿಕ್ಸ್‌ಸಾವನ್ನಪ್ಪಿದ್ದಾರೆ ಎಂದೇ
  ಭಾವಿಸಿದ್ದರು. ಆದರೆ ನಂತರ ಪ್ಯಾರಚೂಟ್‌ ಓಪನ್‌ ಆದಾಗ ಜನ ನಿಟ್ಟಿಸಿರು ಬಿಟ್ಟಿದ್ದರು.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ಭೂಮಿಯನ್ನು ತಲುಪಿದ ತೆಗೆದುಕೊಂಡ 9:09ನಿಮಿಷದಲ್ಲಿ 4 ನಿಮಿಷ 20 ಸೆಕುಂಡುಗಳ ಕಾಲ ಭೂಮಿಗಿಂತ ಒಂದು ಮೈಲ್‌‌ ಎತ್ತರದಲ್ಲಿದ್ದರು. ಇನ್ನೂ ಪ್ಯಾರಚೂಟ್‌ ಮೂಲಕ ನೆಲವನ್ನು ಸ್ಪರ್ಶಿಸಲು ಉಳಿದ ಐದು ನಿಮಿಷ ತೆಗೆದುಕೊಂಡಿದ್ದರು

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ಶಬ್ಧದ ವೇಗಕ್ಕಿಂತಲೂ ವೇಗವಾಗಿ ಧುಮಕಿದ ವ್ಯಕ್ತಿ ಎನ್ನುವ ವಿಶ್ವ ದಾಖಲೆ ಫೆಲಿಕ್ಸ್‌ ಹೆಸರಲ್ಲಿದ್ದರೂ ಇನ್ನೊಂದು ದಾಖಲೆ ನಿರ್ಮಿಸುವಲ್ಲಿ ವಿಫಲರಾಗಿದ್ದಾರೆ. ಅತಿ ಹೆಚ್ಚು ಸಮಯಗಳ ಕಾಲ ಆಕಾಶದಲ್ಲಿ ಆಧಾರವಿಲ್ಲದೆ ಕಳೆದ ದಾಖಲೆ ಫೆಲಿಕ್ಸ್‌ ಅವರಿಗೆ ಮಾರ್ಗದರ್ಶಕರಾಗಿದ್ದ ಜೋ ಕಿಟ್ಟಿಂಗರ್‌ ಹೆಸರಿನಲ್ಲಿದೆ.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ಜೋ ಕಿಟ್ಟಿಂಗರ್‌ 5 ನಿಮಿಷ 35 ಸೆಕುಂಡುಗಳನ್ನು ಆಕಾಶದಲ್ಲಿ ಆಧಾರವಿಲ್ಲದೆ ಕಳೆದಿದ್ದಾರೆ. 1960ರಲ್ಲಿ ಕಿಟ್ಟಿಂಗರ್‌ ಈ ವಿಶೇಷ ಸಾಹಸವನ್ನು ಮಾಡಿದ್ದರು.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ನಾಸಾದ ಗಗನಯಾನಿಗಳಿಗೆ ನೆರವಾಗುವ ವಿಚಾರಗಳು ಫೆಲಿಕ್ಸ್‌ ಸಾಹಸದಲ್ಲಿ ಇದ್ದ ಕಾರಣ ನಾಸಾ ಸಹ ಫೆಲಿಕ್ಸ್‌ಗೆ ಸಾಹಸಕ್ಕೆ ಬೆಂಬಲವನ್ನು ನೀಡಿತ್ತು.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ಹೀಲಿಯಂ ಅನಿಲ ತುಂಬಿದ್ದ ಬಲೂನ್‌ ಮತ್ತು 1,682 ಕೆ.ಜಿ. ಭಾರದ ಕೋಶವನ್ನು ಫೆಲಿಕ್ಸ್‌ ಈ ಸಾಹಸಕ್ಕೆ ಬಳಸಿದ್ದರು. ರೆಡ್ ಬುಲ್‌ ಸಂಸ್ಥೆ ಈ ಸಾಹಸಕ್ಕೆ ಪ್ರಾಯೋಜಕರಾಗಿದ್ದರು.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ಕೋಶ ಮತ್ತು ಬಲೂನ್‌ಗೆ ಅಳಡಿಸಲಾಗಿದ್ದ ಕ್ಯಾಮೆರಾಗಳ ಮೂಲಕ ಫೆಲಿಕ್ಸ್‌ ಸಾಹಸವನ್ನು ಸಂಪೂರ್ಣ‌ವಾಗಿ ರೆಕಾರ್ಡ್‌ ಮಾಡಲಾಗಿತ್ತು.

  ಶಬ್ದದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ಫೆಲಿಕ್ಸ್‌ ಈ ಸಾಧನೆಗೆ ಐದು ವರ್ಷಗಳಿಂದ ಪ್ರಯತ್ನವನ್ನು ನಡೆಸಿದ್ದರು. ಈ ಪ್ರಯತ್ನಕ್ಕೆ ವೈದ್ಯ,ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ 70 ಸದಸ್ಯರ ತಂಡವನ್ನು ರೆಡ್ ಬುಲ್‌ ಸಂಸ್ಥೆ ನಿಯೋಜಿಸಿತ್ತು.

  ಶಬ್ಧದ ವೇಗವನ್ನು ಮೀರಿಸಿದ ಸಾಧನೆಗೆ ಒಂದು ವರ್ಷ

  ಫೆಲಿಕ್ಸ್‌ ಸಾಹಸ

  ಮಾಹಿತಿ:www.redbullstratos.com

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more