Home
ಸುದ್ದಿಜಾಲ

ಮೊಬೈಲ್ ಚೆನ್ನಾಗಿಲ್ಲ ಎಂದ ಈತನಿಗೆ 'ಗೂಗಲ್' ನೀಡಿದ್ದು 10 'ಪಿಕ್ಸೆಲ್' ಪೋನ್‌ಗಳು!

ಗೂಗಲ್​ ಪಿಕ್ಸೆಲ್ 3 ಮೊಬೈಲ್​ ಬಳಕೆದಾರನೊರ್ವ ತನ್ನ ದೋಷಯುಕ್ತ ಮೊಬೈಲ್​ಗೆ ನೀಡಿದ ಹಣವನ್ನು ವಾಪಸ್​ ನೀಡುವಂತೆ ಗೂಗಲ್‌ ಸಂಸ್ಥೆಗೆ ಮನವಿ ಮಾಡಿದಾಗ ನಡೆದ ಘಟನೆ ಆಶ್ಚರ್ಯ ಮೂಡಿಸಿದೆ. ದೋಷಯುಕ್ತ ಗೂಗಲ್ ಪಿಕ್ಸೆಲ್ 3 ಫೋನ್‌ಗೆ ನೀಡಿದ ಹಣ ವಾಪಸ್ ನೀಡುವಂತೆ ಗೂಗಲ್ ಕಂಪನಿಗೆ ಗ್ರಾಹಕ ಮಾಡಿದ್ದಾನೆ. ಆತನ ಮನವಿಗೆ ಸ್ಪಂದಿಸಿರುವ ಕಂಪೆನಿ, ದೋಷಯುಕ್ತ ಮೊಬೈಲ್ ಬದಲಿಗೆ ಹಣ ನೀಡುವ ಬದಲಾಗಿ ಗ್ರಾಹಕನಿಗೆ 10 ಪಿಕ್ಸೆಲ್ 3 ಫೋನ್‌ಗಳನ್ನು ನೀಡಿ ಅಚ್ಚರಿ ಮೂಡಿಸಿದೆ.

ಹೌದು, ಗ್ರಾಹಕ ತನ್ನ ದೋಷಯುಕ್ತ ಪಿಕ್ಸೆಲ್ 3 ಫೋನ್ ವಾಪಸ್ ನೀಡಿದ ನಂತರ ಗೂಗಲ್ ಕಂಪನಿ ಹಣ ವಾಪಸ್ ನೀಡಿಲ್ಲ. ಬದಲಾಗಿ ಆತನಿಗೆ 10 ಪಿಕ್ಸೆಲ್ ಫೋನ್ ಗಳನ್ನು ನೀಡಿದೆ ಎಂದು ಆಂಡ್ರಾಯ್ಡ್ ಪೋಲಿಸ್ ವೆಬ್‌ಸೈಟ್ ಗುರುವಾರ ವರದಿ ಮಾಡಿದೆ. ಹೆಚ್ಚಿನ ಕಂಪೆನಿಗಳು ಗ್ರಾಹಕರಿಗೆ ನ್ಯಾಯೋಚಿತವಾಗಿ ಪರಿಹಾರವನ್ನು ಒದಗಿಸುತ್ತದೆ. ಆದರೆ, ಗೂಗಲ್​ ಮಾತ್ರ ಗ್ರಾಹಕನಿಗೆ ಮನವಿಯನ್ನು ಗಮನಿಸಿ ಹಣ ಮರು ಪಾವತಿ ಮಾಡುವ ಬದಲು 56,898 ರೂ ಮೌಲ್ಯದ 10 ಮೊಬೈಲ್​ ಫೋನ್​ಗಳನ್ನು ಗ್ರಾಹಕನಿಗೆ ನೀಡಿದೆ.

ಮೊಬೈಲ್ ಚೆನ್ನಾಗಿಲ್ಲ ಎಂದ ಈತನಿಗೆ 'ಗೂಗಲ್' ನೀಡಿದ್ದು 10 'ಪಿಕ್ಸೆಲ್' ಪೋನ್‌ಗಳು!

ಪ್ರತಿ ದೊಡ್ಡ ಕಂಪೆನಿಯು ಗ್ರಾಹಕ ಸಮಸ್ಯೆಗಳನ್ನು ಹಣ ನೀಡಿ ನ್ಯಾಯೋಚಿತವಾಗಿ ಪರಿಹರಿಸುವುದು ಸಾಮಾನ್ಯ. ಆದರೆ, ಗೂಗಲ್ ಕಂಪೆನಿ ಹಣ ಮರುಪಾವತಿ ಮಾಡುವ ಬದಲು 9 ಸಾವಿರ ಡಾಲರ್ ಮೌಲ್ಯದ 10 ಪಿಕ್ಸೆಲ್ ಫೋನ್‌ಗಳನ್ನು ಗ್ರಾಹಕನಿಗೆ ನೀಡಿ ಟೆಕ್ ಲೋಕದ ಗಮನ ಸೆಳೆದಿದೆ. ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೆಕ್ ಕಂಪೆನಿಯೊಂದು ಈ ರೀತಿ ವಿಶಿಷ್ಟವಾಗಿ ಪರಿಹಾರವನ್ನು ಒದಗಿಸಿದೆ ಎಂದು ಹೇಳಲಾಗಿದೆ. ಹಾಗಾಗಿ, ಈ ಸುದ್ದಿ ಇದೀಗ ಭಾರೀ ವೈರಲ್ ಆಗಿ ಟೆಕ್ ಲೋಕವನ್ನು ಆಶ್ಚರ್ಯಗೊಳಿಸಿದೆ.

ಇನ್ನು ಮತ್ತೊಂದು ವಿಶೇಷ ಸಂಗತಿ ಎಂದರೆ, ದೋಷಯುಕ್ತ ಮೊಬೈಲ್​ಗೆ ಬದಲಾಗಿ 10 ಪಿಕ್ಸೆಲ್ ಫೋನ್‌ಗಳನ್ನು ಪಡೆದಿರುವ ಗ್ರಾಹಕ ಅವುಗಳನ್ನು ಮರಳಿಸಲು ಯತ್ನಿಸುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. 10 ಪಿಕ್ಸೆಲ್ ಫೋನ್‌ಗಳನ್ನು ಪರಿಹಾರವಾಗಿ ನೀಡಿರುವ ಗೂಗಲ್ ಸಂಸ್ಥೆ ತಾನು ನೀಡಿರುವ ಪಿಕ್ಸೆಲ್ ಫೋನ್‌ಗಳನ್ನು ಮರಳಿಸುವಂತೆ ಗ್ರಾಹಕನಿಗೆ ಒತ್ತಡ ಹಾಕಿಲ್ಲ. ಆದರೆ, ಆತ ತಾನು ಪಡೆದಿರುವ 10 ಪಿಕ್ಸೆಲ್ ಫೋನ್‌ಗಳನನ್ನೂ ಸಹ ವಾಪಸ್ ನೀಡಲು ಮುಂದಾಗಿದ್ದಾನೆ ಎಂದು ಹೇಳಲಾಗಿದೆ.

ಮೊಬೈಲ್ ಚೆನ್ನಾಗಿಲ್ಲ ಎಂದ ಈತನಿಗೆ 'ಗೂಗಲ್' ನೀಡಿದ್ದು 10 'ಪಿಕ್ಸೆಲ್' ಪೋನ್‌ಗಳು!

10 ಪಿಕ್ಸೆಲ್ ಫೋನ್‌ಗಳನ್ನು ಪರಿಹಾರವಾಗಿ ಪಡೆದಿರುವ ಗ್ರಾಹಕನ ಪ್ರಕಾರ, ಗೂಗಲ್ ನೀಡಬೇಕಾದ ಪರಿಹಾರ $ 900 ಡಾಲರ್‌ಗಳಾಗಿದ್ದು, (ಇದು 128GB ಮಾದರಿ). ಮೂಲ ದೋಷಯುಕ್ತ ಸಾಧನದ ಮೇಲೆ ತೆರಿಗೆಗೆ 80 ಡಾಲರ್ ಮಾತ್ರ ಮರುಪಾವತಿಸಲಾಗಿದೆ. ದೋಷಯುಕ್ತ ಮೊಬೈಲ್‌ಗೆ ಬದಲಾಗಿ ಹೊಸ ಪಿಂಕ್ ಪಿಕ್ಸೆಲ್ ಅನ್ನು ಪ್ರತ್ಯೇಕ ವಹಿವಾಟು ನಡೆಸಲಾಗಿತ್ತು. ಈ ವೇಳೆ ಕಂಪೆನಿ 10 ಪಿಂಕ್ ಪಿಕ್ಸೆಲ್ ಫೋನ್‌ಗಳಿಗೆ ಆದೇಶ ನೀಡಿರಬಹುದು ಎಂದು ತಿಳಿದು ಫೋನ್‌ಗಳನ್ನು ಕಳುಹಿಸಿರಬಹುದು ಎಂದು ವರದಿಯಲ್ಲಿ ಸೇರಿಸಲಾಗಿದೆ.

ಓದಿರಿ: ದೇಶದಲ್ಲಿ ಧೂಳೆಬ್ಬಿಸಿದ 'ಥಾಮ್ಸನ್'!..7,499 ರೂ.ಗೆ 'ಸ್ಮಾರ್ಟ್‌ಟಿವಿ' ಆಫರ್!!

Best Mobiles in India

English summary
he received not one but 10 Pixel 3 phones for the replacement order of a single Pixel 3. Now, the Reddit user is looking to return the extra handsets but not before Google refunds the full amount for the original defective phone. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+