ಪಿಕ್ಸಲ್ 7a ಸ್ಮಾರ್ಟ್‌ಫೋನ್ ಅನಾವರಣ: ಬೊಂಬಾಟ್ ಫೀಚರ್ಸ್
ಪಿಕ್ಸಲ್ ಸ್ಮಾರ್ಟ್‌ಫೋನ್ ಬಗ್ಗೆ ಭಾರತದಲ್ಲಿ ಭಾರೀ ಕುತೂಹಲ ನಿರ್ಮಾಣ ಆಗಿತ್ತು. ಕೊನೆಗೂ ಪಿಕ್ಸಲ್ 7a ಸ್ಮಾರ್ಟ್‌ಫೋನ್ ಅನ್ನು ಅನಾವರಣ ಮಾಡಲಾಗಿದ್ದು, ಈ ಫೋನ್ ಪಿಕ್ಸಲ್ 6a ಗಿಂತ ದೊಡ್ಡ ಅಪ್‌ಗ್ರೇಡ್ ಹೊಂದಿದೆ. ಜೊತೆಗೆ ಪಿಕ್ಸಲ್ 6a ನ ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡಿದೆ.
ಹೌದು, ಭಾರತದಲ್ಲಿ ಪಿಕ್ಸಲ್ 7a (Pixel 7a) ಸ್ಮಾರ್ಟ್‌ಫೋನ್ ಅನಾವರಣ ಮಾಡಲಾಗಿದ್ದು, ಈ ಫೋನ್ ಅತ್ಯುತ್ತಮ 5G ಫೋನ್ ಆಗಿ ಗುರುತಿಸಿಕೊಂಡಿದೆ. ಅದರಲ್ಲೂ ಹಳೆಯ ಬೆಲೆಯಲ್ಲೇ ಹೊಸ ಆವೃತ್ತಿ ಲಭ್ಯವಾಗುತ್ತಿರುವುದರಿಂದ ಗ್ರಾಹಕರಿಗೆ ಸಾಕಷ್ಟು ಲಾಭ ಸಿಗಲಿದೆ. ಈ ಫೋನ್ ಗೂಗಲ್‌ನ ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ, ಬನ್ನಿ ಇದರ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇದರ ಬೆಲೆ ವಿವರವನ್ನು ಗಮನಿಸೋಣ.

ಪಿಕ್ಸಲ್ 7a ಡಿಸ್‌ಪ್ಲೇ ವಿವರ: ಈ ಫೋನ್ 6.1 ಇಂಚಿನOLED ಡಿಸ್‌ಪ್ಲೇ ಹೊಂದಿದ್ದು, ಫುಲ್ ಹೆಚ್‌ಡಿ+ ರೆಸಲ್ಯೂಶನ್‌ಗೆ ಬೆಂಬಲವನ್ನು ಪಡೆದುಕೊಂಡಿದೆ. ಜೊತೆಗೆ 90Hzರಿಫ್ರೆಶ್ ರೇಟ್ ಆಯ್ಕೆ ಪಡೆದುಕೊಂಡಿದ್ದು, ಈ ಮೂಲಕ ಪಿಕ್ಸಲ್ 6aನಲ್ಲಿ ಇದ್ದ 60Hz ರಿಫ್ರೆಶ್ ರೇಟ್‌ಗಿಂತ ಹೆಚ್ಚಿನ ಅಪ್‌ಗ್ರೇಡ್ ಹೊಂದಿದೆ. ಇದರೊಂದಿಗೆ ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಮುಂಭಾಗದಲ್ಲಿ ಸಾಮಾನ್ಯ ಪನ್-ಹೋಲ್ ವಿನ್ಯಾಸದ ಆಯ್ಕೆ ನೀಡಲಾಗಿದೆ. ಇನ್ನುಳಿದಂತೆ ಫೋನ್‌ನ ಹಿಂಭಾಗದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಹಳೆಯ ಆವೃತ್ತಿಯೇ ಮುಂದುವರೆದಿದೆ.
ಪಿಕ್ಸಲ್ 7a ಪ್ರೊಸೆಸರ್ ಸಾಮರ್ಥ್ಯ: ಈ ವಿಶೇಷ ಸ್ಮಾರ್ಟ್‌ಫೋನ್ 64 ಮೆಗಾಪಿಕ್ಸಲ್ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದೆ. ಇದು 13 ಮೆಗಾಪಿಕ್ಸಲ್ ಅಲ್ಟ್ರಾ ವೈಡ್ ಸೆನ್ಸರ್ ಆಯ್ಕೆ ನೀಡಲಾಗಿದ್ದು, ಸೆಲ್ಫಿಗಳಿಗಾಗಿ 13 ಮೆಗಾಪಿಕ್ಸಲ್ ಆಯ್ಕೆ ನೀಡಲಾಗಿದೆ. ಉಳಿದಂತೆ ಈ ಪಿಕ್ಸಲ್ 7a ಮ್ಯಾಜಿಕ್ ಎರೇಸರ್, ಅನ್ ಬ್ಲರ್, ಲಾಂಗ್ ಎಕ್ಸ್‌ಪೋಸರ್ ಮೋಡ್ ಸೇರಿದಂತೆ ಇನ್ನೂ ಹಲವು ಪ್ರಮುಖ ಫೀಚರ್ಸ್ ಆಯ್ಕೆಯನ್ನು ಈ ಫೋನ್ ಪಡೆದುಕೊಂಡಿದೆ.
ಪಿಕ್ಸಲ್ 7a ಕ್ಯಾಮೆರಾ ರಚನೆ: ಈ ಫೋನ್ ಹೋಮ್ ಬ್ರೂಡ್ ಟೆನ್ಸರ್ G2 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇತ್ತೀಚಿನ 5G ಫೋನ್ ಆಂಡ್ರಾಯ್ಡ್ 13 ಓಸ್‌ನೊಂದಿಗೆ ಪ್ಯಾಕ್ ಆಗಿದೆ. ಇದರೊಂದಿಗೆ ಈ ವರ್ಷ ಆಗಸ್ಟ್‌ನಲ್ಲಿ ಗೂಗಲ್ ಬಿಡುಗಡೆ ಮಾಡಲಿರುವ ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಅನ್ನು ಸ್ವೀಕರಿಸುವ ಮೊದಲ ಫೋನ್ ಆಗಿಯೂ ಇದು ಗುರುತಿಸಿಕೊಳ್ಳಲಿದೆ. ಇನ್ನುಳಿದಂತೆ 8GB RAM ಮತ್ತು 128GB ಸ್ಟೋರೇಜ್ ಸಾಮರ್ಥ್ಯದೊಂದಿಗೆ ಕಾಣಿಸಿಕೊಂಡಿದೆ.

ಪಿಕ್ಸಲ್ 7a ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಇದು 4,410mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 18W ವೇಗದ ಚಾರ್ಜಿಂಗ್ ತಂತ್ರಜ್ಞಾನಕ್ಕೆ ಬೆಂಬಲವನ್ನು ನೀಡಲಿದೆ. ಜೊತೆಗೆ ವಾಯರ್‌ಲೆಸ್ ಚಾರ್ಜಿಂಗ್ ಮತ್ತು ಸ್ಟಿರಿಯೊ ಸ್ಪೀಕರ್ ಆಯ್ಕೆ ಸಹ ಇದ್ದು, ಇದಿಷ್ಟೇ ಅಲ್ಲದೆ IP67 ರೇಟಿಂಗ್ ಹೊಂದಿದ್ದು, ಈ ಮೂಲಕ ನೀರಿನಿಂದ ಹಾಳಾಗುತ್ತದೆ ಎನ್ನುವ ಭಯ ನಿಮಗೆ ಇರುವುದಿಲ್ಲ.

ಪಿಕ್ಸಲ್ 7a ಬ್ಯಾಟರಿ ಬೆಲೆ ಹಾಗೂ ಲಭ್ಯತೆ: ಭಾರತದಲ್ಲಿ ಇದಕ್ಕೆ 43,999ರೂ. ಗಳನ್ನು ನಿಗದಿ ಮಾಡಲಾಗಿದ್ದು, ಈ ಫೋನ್ ಖರೀದಿಗೆ ಆರಂಭದಲ್ಲೇ ವಿಶೇಷ ಆಫರ್ ಅನ್ನು ಸಹ ನೀಡಲಾಗಿದೆ. ಅದರಂತೆ ಹೆಚ್‌ಡಿಎಫ್‌ಸಿ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಹೆಚ್ಚುವರಿ 4,000ರೂಪಾಯಿಗಳ ರಿಯಾಯಿತಿ ಸಹ ಸಿಗಲಿದೆ. ಈ ಮೂಲಕ ಫ್ಲಿಪ್‌ಕಾರ್ಟ್ ನಲ್ಲಿ ಈ ಫೋನ್ ಅನ್ನು 39,999ರೂ.ಗೆ ಖರೀದಿ ಮಾಡಬಹುದಾಗಿದೆ. ಇದನ್ನು ನೀವು ಮೇ 11 ರಿಂದ ಖರೀದಿ ಮಾಡಬಹುದಾಗಿದೆ.


Click it and Unblock the Notifications








